Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಗಣೇಶ ಚತುರ್ಥಿ: ನಿಮ್ಮ ರಾಶಿ ಪ್ರಕಾರ ಈ ರೀತಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ
ಗಣೇಶನ ಭಕ್ತಿಯಿಂದ ಆರಾಧಿಸಿದರೆ ಗಣೇಶ ಎಂದಿಗೂ ಕೈ ಬಿಡುವುದಿಲ್ಲ ಎಂಬುವುದು ಅವನ ಆರಾಧನೆ ಮಾಡುತ್ತಿರುವ ಭಕ್ತರ ಬಲವಾದ ನಂಬಿಕೆ. ನಾವು ಯಾವುದೇ ಪೂಜೆ ಕಾರ್ಯ ಮಾಡುವ ಮೊದಲು ನಾವು ವಿಘ್ನ ನಿವಾರಕನ ಆರಾಧನೆ ಮಾಡುತ್ತೇವೆ. ಚೌತಿ ಸಮಯದಲ್ಲಿ ಶ್ರೀ ಗಣೇಶನನ್ನು ತುಂಬಾನೇ ಸಡಗರ-ಸಂಭ್ರಮದಿಂದ ಆರಾಧಿಸುತ್ತೇವೆ. ಈ ವರ್ಷ ಸೆಪ್ಟೆಂಬರ್ 18-19ರಂದು ಗೌರಿ-ಗಣೇಶ ಹಬ್ಬವನ್ನು ಆಚರಿಸಲಾಗುವುದು. ಸೆಪ್ಟೆಂಬರ್ 19ರಂದು ಶ್ರೀ ಗಣೇಶನ ಪ್ರತಿಷ್ಠಾಪನೆ ಮಾಡಲಾಗುವುದು.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗಣೇಶನ ಆರಾಧನೆ ಮಾಡುವಾಗ ನಮ್ಮ ರಾಶಿ ಪ್ರಕಾರ ಆರಾಧನೆ ಮಾಡಿದರೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುವುದು. ಜೀವನದಲ್ಲಿರುವ ವಿಘ್ನಗಳು ದೂರಾಗಲು ನೀವು ಗಣೇಶನಿಗೆ ನಿಮ್ಮ ರಾಶಿ ಪ್ರಕಾರ ಗಣೇಶನ ಪ್ರತಿಷ್ಠಾಪನೆ ಮಾಡಿ, ನಿಮ್ಮ ಇಚ್ಚೆಗಳು ನೆರವೇರುವುದು.

ಮೇಷ ರಾಶಿ:
ಮೇಷ ರಾಶಿಯವರು ಗುಲಾಬಿ ಅಥವಾ ಕೆಂಪು ಬಣ್ಣದ ವಸ್ತ್ರದಿಂದ ಅಲಂಕರಿಸಿದ ಗಣೇಶನ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಿ. ಲಂಬೋದರನಿಗೆ ಲಡ್ಡು ಅರ್ಪಿಸಿ ಪೂಜೆ ಮಾಡಿ, ಹೀಗೆ ಆರಾಧನೆ ಮಾಡಿದರೆ ಮೇಷ ರಾಶಿಯವರಿಗೆ ತುಂಬಾನೇ ಒಳ್ಳೆಯದು. ನಿಮ್ಮ ದುಃಖ, ಕಷ್ಟಗಳು ದೂರಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯವರು ತಿಳಿ ಹಳದಿ ಬಣ್ಣದ ವಸ್ತ್ರ ಧರಿಸಿದ ಗಣೇಶನನ್ನು ಮನೆಗೆ ತಂದು ಪ್ರತಿಷ್ಠಾಪಿಸಿ, ನೀವು ಗಣೇಶನಿಗೆ ತಂದು ಮೋದಕವನ್ನು ಅರ್ಪಿಸಬೇಕು. ಇದು ಮನೆಯಲ್ಲಿ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.
ಮಿಥುನ ರಾಶಿ
ಮಿಥುನ ರಾಶಿಯವರು ತಿಳಿ ಹಸಿರು ಬಣ್ಣದ ವಸ್ತ್ರ ಧರಿಸಿದ ಗಣೇಶ ಮೂರ್ತಿಯನ್ನು ತಂದು ಮೋದಕವನ್ನು ಅರ್ಪಿಸಿ. ಈ ರೀತಿ ಆರಾಧನೆ ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕತೆ ದೂರಾಗುವುದು, ಬದುಕಿನಲ್ಲಿರುವ ಅಡೆತಡೆಗಳು ಗಣೇಶನ ಕೃಪೆಯಿಂದ ದೂರಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರು ಬಿಳಿ ಬಣ್ಣದ ವಸ್ತ್ರದಿಂದ ಅಲಂಕರಿಸಿದ ಗಣೇಶನ ವಿಗ್ರಹವನ್ನು ತಂದು ಪ್ರತಿಷ್ಠಾಪನೆ ಮಾಡಿ ಗಣೇಶನಿಗೆ ಮೋತಿಚೂರು ಲಡ್ಡುಗಳನ್ನು ಅರ್ಪಿಸಿ. ಈ ರೀತಿ ಮಾಡುವುದರಿಂದ ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ.
ಸಿಂಹ ರಾಶಿ
ಸಿಂಹ ರಾಶಿಯವರು ಸಿಂಧೂರ ಬಣ್ಣದ ಗಣೇಶನನ್ನು ತಂದು ಪ್ರತಿಷ್ಠಾಪಿಸಿ . ಗಣೇಶನಿಗೆ ಹಳದಿ ಬೂಂದಿ, ಲಡ್ಡುಗಳನ್ನು ಅರ್ಪಿಸಬೇಕು. ಇದರಿಂದ ನಿಮ್ಮ ಕೆಲಸದಲ್ಲಿ ಯಶಸ್ವಿಯಾಗಲಿದೆ.
ಕನ್ಯಾರಾಶಿ
ಕನ್ಯಾ ರಾಶಿಯವರು ಕಡು ಹಸಿರು ಬಣ್ಣದ ವಸ್ತ್ರದಿಂದ ಅಲಂಕರಿಸಿದ ಗಣೇಶ ಮೂರ್ತಿಯನ್ನು ತಂದು ಆರಾಧಿಸಿ. ಗಣೇಶನಿಗೆ ಲಡ್ಡುಗಳನ್ನು ಅರ್ಪಿಸಿ. ಇದರಿಂದ ನೀವು ವ್ಯಾಪಾರದಲ್ಲಿ ಪ್ರಗತಿಯನ್ನು ಕಾಣುವಿರಿ.
ತುಲಾ ರಾಶಿ
ಗಣೇಶನಿಗೆ ಚಿನ್ನದ ಬಣ್ಣದ ವಸ್ತ್ರದಿಂದ ಅಲಂಕರಿಸಿ ವಿಗ್ರಹವನ್ನು ಮನೆಗೆ ತನ್ನಿ. ಗಣೇಶನನ್ನು ತುಂಬಾ ಸುಂದರವಾಗಿ ಅಲಂಕರಿಸಿ. ಗಣೇಶನಿಗೆ ಮೋದಕಗಳನ್ನು ಅರ್ಪಿಸಿ. ಹೀಗೆ ಮಾಡಿದರೆ ನಿಮ್ಮ ಮಕ್ಕಳು ಅವರ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ.
ವೃಶ್ಚಿಕ ರಾಶಿ
ಗಣೇಶನ ವಿಗ್ರಹವನ್ನು ಕೆಂಪು ಮತ್ತು ಬಿಳಿ ಧೋತಿಯನ್ನು ಧರಿಸಿ ಮನೆಗೆ ತಂದು ಪ್ರತಿಷ್ಠಾಪಿಸಿ. ನೀವು ಗಣೇಶನನ್ನು ಗುಲಾಬಿ ಹಾಗೂ ಕಮಲದ ಹೂಗಳಿಂದ ಅಲಂಕರಿಸಿ. ಇದರಿಂದ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ ಕಾಣುವಿರಿ, ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ.
ಧನು ರಾಶಿ
ಹಳದಿ ಅಥವಾ ಕಿತ್ತಳೆ ಬಣ್ಣದ ವಸ್ತ್ರದಿಂದ ಅಲಂಕರಿಸಿದ ಗಣೇಶನನ್ನು ಪ್ರತಿಷ್ಠಾಪಿಸಿ. ಗಣೇಶನ ಕೈಗಳಲ್ಲಿ ಲಡ್ಡುಗಳನ್ನಿಡಿ. ಗಣೇಶನಿಗೆ ಕೇಸರಿ ಹಾಕಿದ ಪಾಯಸ ಅರ್ಪಿಸಿ.
ಮಕರ ಸಂಕ್ರಾಂತಿ
ಗಾಢ ಬಣ್ಣದ ಗಣೇಶ ಮೂರ್ತಿಯನ್ನು ತನ್ನಿ. ಇದರಿಂದ ಮನೆಯಲ್ಲಿನ ಅಡೆತಡೆಗಳು ತುಂಬಾನೇ ದೂರವಾಗುತ್ತವೆ, ಇದರಿಂದ, ಹಣದಲ್ಲಿನ ಅಡೆತಡೆಗಳು ಸಹ ನಿವಾರಣೆಯಾಗುವುದು.
ಕುಂಭ ರಾಶಿ
ಕುಂಭ ರಾಶಿಯವರು ನಿಂತಿರುವ ಗಣೇಶನ ಮೂರ್ತಿಯನ್ನು ಮನೆಗೆ ತನ್ನಿ. ಗಣೇಶನಿಗೆ ಲಡ್ಡುಗಳನ್ನು ಅರ್ಪಿಸಿ ಆರಾಧಿಸಿ. ಹೀಗೆ ಆರಾಧಿಸುವುದರಿಂದ ಜ್ಞಾನ, ಸಂಪತ್ತು ಚೆನ್ನಾಗಿರಲಿದೆ.
ಮೀನ ರಾಶಿ
ಮೀನ ರಾಶಿಯವರು ಗಣೇಶನಿಗೆ ಗರಿಕೆಯಿಂದ ಅಲಂಕರಿಸಿ. ಗಣೇಶನಿಗೆ ಹಳದಿ ಬಣ್ಣದ ಸಿಹಿತಿಂಡಿಗಳು, ಹೂವುಗಳನ್ನು ಅರ್ಪಿಸಿ. ಇದರಿಂದ ನಿಮ್ಮ ಮನೆ ಕಟ್ಟು ಆಸೆ ಈಡೇರಲಿದೆ.
ಶ್ರೀ ಗಣೇಶನನ್ನು ಭಕ್ತಿಯಿಂದ ಆರಾಧಿಸಿ, ಆ ಗಣೇಶ ನಿಮ್ಮ ಕಷ್ಟಗಳನ್ನು ದೂರಮಾಡಿ ಸಂತೋಷ, ಸಮೃದ್ಧಿ ಹೆಚ್ಚಿಸಲಿ.



Click it and Unblock the Notifications
