Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
ಗಣೇಶನ ಆಗಮನದ ರಹಸ್ಯಗಳಿವು! ಈ 8 ಕುತೂಹಲಕರ ವಿಷಯಗಳು ನಿಮಗೆ ಗೊತ್ತಾ?
ಬಪ್ಪನ ಆಗಮನದ ಶುಭ ಮುಹೂರ್ತ ಯಾವಾಗ? ಈ ಪ್ರಶ್ನೆಗಳಿಗೆ ನಿಮಗೆ ಉತ್ತರ ಗೊತ್ತಾ? ಹೌದು, ಗಣೇಶ ಚತುರ್ಥಿಯ ಮಹತ್ವ ಮತ್ತು ಶುಭ ಸಮಯದ ಬಗ್ಗೆ ಮಾಹಿತಿ ಇಲ್ಲಿದೆ ಮಾಹಿತಿ. ನಿಮಗೆ ಈ ಮಾಹಿತಿ ಇಲ್ಲವಾದರೆ, ಈ ಲೇಖನದಲ್ಲಿ ನಾವು ತಿಳಿಸಿದ್ದೇವೆ. ಗಣೇಶ ಚತುರ್ಥಿಗೆ (Ganesh Chaturthi 2025) ಕ್ಷಣಗಣನೆ ಶುರುವಾಗಿದೆ. ದೇಶಾದ್ಯಂತ ಸಂಭ್ರಮ ಮತ್ತು ಸಡಗರದ ವಾತಾವರಣ ಮನೆಮಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಆಗಮನಕ್ಕೆ ಸಿದ್ಧತೆಗಳು ನಡೆದಿವೆ. ಆದರೆ, ಗಣೇಶ ಚತುರ್ಥಿಯನ್ನು ಏಕೆ ಆಚರಿಸಲಾಗುತ್ತದೆ? ಇದರ ಮಹತ್ವವೇನು? ಬಪ್ಪನ ಆಗಮನದ ಶುಭ ಸಮಯ ಯಾವುದು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಬುದ್ಧಿ ಮತ್ತು ವಿಘ್ನಹರ್ತ ಎಂದು ಕರೆಯಲ್ಪಡುವ ಗಣೇಶನನ್ನು ಗಜಾನನ ಮತ್ತು ಲಂಬೋದರ ಎಂದೂ ಕರೆಯಲಾಗುತ್ತದೆ. ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗಣೇಶನ ಪೂಜೆ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ವರ್ಷ (2025) ಆಗಸ್ಟ್ 27 ರಂದು ಬುಧವಾರ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಪ್ರಾರಂಭವಾಗುವ ಈ ಹಬ್ಬ 10 ದಿನಗಳವರೆಗೆ ನಡೆಯುತ್ತದೆ. ಅನಂತ ಚತುರ್ದಶಿಯಂದು ಗಣೇಶ ವಿಸರ್ಜನೆಯೊಂದಿಗೆ ಕೊನೆಗೊಳ್ಳುತ್ತದೆ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭಕ್ತರು ಸಂಭ್ರಮದಿಂದ ಮೆರವಣಿಗೆ ನಡೆಸಿ ಪವಿತ್ರ ನದಿಗಳು ಮತ್ತು ಕೆರೆಗಳಲ್ಲಿ ಗಣೇಶನ ಮೂರ್ತಿಗಳನ್ನು ವಿಸರ್ಜಿಸುತ್ತಾರೆ.

ಗಣೇಶ ಚತುರ್ಥಿ ಶುಭ ಮುಹೂರ್ತಗಳು ಹೀಗಿವೆ
• ಆಗಸ್ಟ್ 26, 2025, ಮಂಗಳವಾರ - ಮಧ್ಯಾಹ್ನ 1.54 ಗಂಟೆಗೆ ಚತುರ್ಥಿ ತಿಥಿ ಪ್ರಾರಂಭ.
• ಆಗಸ್ಟ್ 27, 2025, ಬುಧವಾರ - ಗಣೇಶ ಚತುರ್ಥಿ ಪೂರ್ಣ ದಿನ.
ಪೂಜೆಯ ಸಮಯ
• ಬೆಳಗ್ಗೆ 11.05 ರಿಂದ ಮಧ್ಯಾಹ್ನ 1.40 ಗಂಟೆಯವರೆಗೆ.
• ಆಗಸ್ಟ್ 27, 2025, ಬುಧವಾರ - ಮಧ್ಯಾಹ್ನ 1.40 ಗಂಟೆಗೆ ಚತುರ್ಥಿ ತಿಥಿ ಮುಕ್ತಾಯ.
• ಸೆಪ್ಟೆಂಬರ್ 6, 2025, ಶನಿವಾರ - ಗಣೇಶ ವಿಸರ್ಜನೆ ಪೂರ್ಣ ದಿನ.
ಗಣೇಶ ಚತುರ್ಥಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಇಲ್ಲಿವೆ
1. ಗಣೇಶ ಸ್ಥಾಪನೆ ಯಾವಾಗ?
ಹಿಂದೂ ಪಂಚಾಂಗದ ಪ್ರಕಾರ, 2025 ರಲ್ಲಿ ಗಣೇಶ ಚತುರ್ಥಿ ಹಬ್ಬ ಆಗಸ್ಟ್ 27, 2025 ರಂದು ಪ್ರಾರಂಭವಾಗಿ, ಸೆಪ್ಟೆಂಬರ್ 6 ರಂದು ಗಣೇಶ ವಿಸರ್ಜನೆಯೊಂದಿಗೆ ಮುಕ್ತಾಯವಾಗುತ್ತದೆ.
2. ಗಣಪತಿಯನ್ನು ಮೂರು ದಿನ ಇಡಬಹುದೇ?
ಕೌಟುಂಬಿಕ ಸಂಪ್ರದಾಯದ ಪ್ರಕಾರ, ಗಣಪತಿಯನ್ನು 1.5 ದಿನ, 3 ದಿನ, 7 ದಿನ, 10 ದಿನ ಅಥವಾ ಶಾಶ್ವತವಾಗಿ ಇಡಬಹುದು.
3. ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಿದರೆ ಏನಾಗುತ್ತದೆ?
ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡುವುದು ನಿಷಿದ್ಧ ಎಂದು ಪರಿಗಣಿಸಲಾಗಿದೆ.
4. ಗಣೇಶ ಆಗಮನಕ್ಕೆ ಉತ್ತಮ ಸಮಯ ಯಾವುದು?
ಬೆಳಗ್ಗೆ 11.05 ರಿಂದ ಮಧ್ಯಾಹ್ನ 1.40 ರವರೆಗಿನ ಸಮಯವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಇದೇ ಸಮಯದಲ್ಲಿ ಗಣೇಶನು ಜನಿಸಿದನು ಎಂದು ನಂಬಲಾಗಿದೆ. ಆದರೂ, ಮಧ್ಯಾಹ್ನದ ಸಮಯದಲ್ಲಿ ಗಣಪತಿ ಪ್ರತಿಷ್ಠಾಪಿಸಿ ಪೂಜೆ ಮಾಡುವುದು ಶುಭ ಎಂದು ಪರಿಗಣಿಸಲಾಗಿದೆ.
5. ಗಣೇಶನ ಪೂಜೆ ಮಾಡುವಾಗ ಯಾವ ಮಂತ್ರವನ್ನು ಜಪಿಸಬೇಕು?
ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್
6. ಗಣೇಶನಿಗೆ ಯಾವ ಹಣ್ಣು ಅರ್ಪಿಸಬೇಕು?
ಗಣೇಶನಿಗೆ ಸೀತಾಫಲ ಇಷ್ಟ. ಆದ್ದರಿಂದ ಅದನ್ನು ಪೂಜೆಯಲ್ಲಿ ಅರ್ಪಿಸಬಹುದು.
7. ಗಣೇಶನ ಮುಖ ಯಾವ ದಿಕ್ಕಿನಲ್ಲಿರಬೇಕು?
ಗಣೇಶನ ಮೂರ್ತಿಯನ್ನು ಮನೆಯ ಪ್ರವೇಶದ್ವಾರಕ್ಕೆ ಮುಖ ಮಾಡಿ ಇಡುವುದು ಉತ್ತಮ. ವಾಸ್ತು ಪ್ರಕಾರ, ಇದು ಮನೆಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ ಮತ್ತು ಸಮೃದ್ಧಿಯನ್ನು ತರುತ್ತದೆ.
8. ಗಣೇಶನ ಸೊಂಡಿಲು ಯಾವ ದಿಕ್ಕಿನಲ್ಲಿರಬೇಕು?
ಗಣೇಶನ ಸೊಂಡಿಲು ಎಡಭಾಗದಲ್ಲಿರಬೇಕು.



Click it and Unblock the Notifications












