Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
Ganesh Chaturthi 2025: ಗಣೇಶ ಚತುರ್ಥಿಗೆ ಶೇರ್ ಮಾಡಲು ಇಲ್ಲವೆ ಅದ್ಭುತ ಫೋಟೋಗಳು..!
ಗಣೇಶ ಚತುರ್ಥಿಯು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ದೇವರು ಎಂದು ಪರಿಗಣಿಸಲಾದ ಗಣೇಶನ ಕುರಿತ ಹಬ್ಬವಾಗಿದೆ. ಈ ಹಬ್ಬವು ಹಿಂದೂ ಚಾಂದ್ರಮಾನ ಮಾಸವಾದ ಭಾದ್ರಪದದ ನಾಲ್ಕನೇ ದಿನದಂದು ಪ್ರಾರಂಭವಾಗಿ ಹತ್ತು ದಿನಗಳವರೆಗೆ ನೆರವೆರಲಿದೆ. ಇದು ಅಪಾರ ಭಕ್ತಿ, ವರ್ಣರಂಜಿತ ಮೆರವಣಿಗೆಗಳು ಸೇರಿದಂತೆ ಸಾಂಸ್ಕೃತಿಕ ಹಬ್ಬವಾಗಿ ಪರಿಗಣಿಸಲಾಗಿದೆ.
ಪಾರ್ವತಿ ದೇವಿಯ ಸೃಷ್ಟಿಯಿಂದ ಜನಿಸಿದ ಗಣೇಶನು ತಂದೆ ಶಿವನಿಂದ ಆನೆಯ ಮುಖವನ್ನು ಪಡೆಯುತ್ತಾನೆ. ಶಿವ-ಪಾರ್ವತಿಯ ಪ್ರಿಯ ಪುತ್ರ ಹಾಗೂ ಜನರ ಕಷ್ಟಗಳ ನಿವಾರಣೆಗೆ ನಿಲ್ಲುವ ಶಕ್ತಿಶಾಲಿ ದೇವ ಗಣೇಶ. ಇವನ ಹುಟ್ಟಿದ ಹಬ್ಬದ ಸಂಭ್ರದ ಆಚರಣೆಯೇ ಗಣೇಶ ಚತುರ್ಥಿ. ಭಗವಾನ್ ಗಣೇಶನು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿದ್ದಾನೆ.

ವಿಘ್ನಗಳ ನಿವಾರಕ ಗಣೇಶನ ಹಬ್ಬವನ್ನು ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಚೌತಿಯ ದಿನದಂದು ಆಚರಿಸಲಾಗುವುದು. ಈ ವರ್ಷ ಅಂದರೆ ಆಗಸ್ಟ್ 26 ಹಾಗೂ 27ರಂದು ಆಚರಿಸಲಾಗುವುದು. ಗಣೇಶನ ಹಬ್ಬವನ್ನು ಮೂರು ದಿನ, ಏಳು ದಿನ ಹಾಗೂ ಹನ್ನೊಂದು ದಿನಗಳ ಕಾಲ ಆಚರಿಸಲಾಗುವುದು.

ದೊಡ್ಡ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಯ ದಿನ ಬಂಧು-ಬಾಂಧವರಿಗೆ, ಸ್ನೇಹಿತರಿಗೆ ಹಾಗೂ ನೆರೆಹೊರೆಯವರಿಗೆ ಮನೆಗೆ ಕರೆಯುವುದು ಹಾಗೂ ಶುಭಾಶಯ ಕೋರುವುದು ಒಂದು ಪದ್ಧತಿ.
ಗಣೇಶನು ಎಲ್ಲರಿಗೂ ಉತ್ತಮ ಮಾರ್ಗದರ್ಶಕ ಹಾಗೂ ರಕ್ಷಕ. ಅವನು ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಆರಂಭವನ್ನು ನೀಡಲಿ. ನಿಮ್ಮ ಮುಂದಿನ ಜೀವನದಲ್ಲಿ ಯಾವುದೇ ಅಡೆತಡೆ ಬರದಂತೆ ಕಾಯುವುದರ ಮೂಲಕ ಉತ್ಕೃಷ್ಟ ಜೀವನವನ್ನು ದಯ ಪಾಲಿಸಲಿ. ಗಣೇಶ ಹಬ್ಬದ ಶುಭಾಶಯಗಳು.
ಗಣೇಶನ ಹಬ್ಬ ಆರಂಭಗೊಂಡು 10ನೇ ದಿನವಾದ ಅನಂತ ಚತುರ್ದಶಿಯಂದು ಹಬ್ಬಗಳು ಮುಕ್ತಾಯಗೊಳ್ಳುತ್ತವೆ, ವಿಗ್ರಹಗಳನ್ನು ನದಿ, ಕೆರೆ ಸಮುದ್ರದಂತಹ ನೀರಿನ ಮೂಲಕ್ಕೆ ಭವ್ಯ ಮೆರವಣಿಗೆಗಳಲ್ಲಿ ಕೊಂಡೊಯ್ಯಲಾಗುತ್ತದೆ. ನಂತರ ನಿಮಜ್ಜನ ನಡೆಸಲಾಗುತ್ತದೆ.
ಗಣೇಶನಿಗೆ ಹಲವು ಉಪನಾಮಗಳಿರುವುದು ನಿಮಗೆಲ್ಲಾ ತಿಳಿದಿದೆ. ಹಾಗೆ ಗಣೇಶನ ನಾಮಸ್ಮರಣೆಯ ಸಮಯದಲ್ಲಿ ಗಣಪತಿ ಬಪ್ಪಾ ಮೋರಯಾ ಎಂಬ ಘೋಷಣೆಗಳ ಕೂಗುವುದು ನೀವು ಕೇಳಿರಬಹುದು.

ಆದ್ರೆ ಈ ರೀತಿ ಘೋಷಣೆಗಳ ಕೂಗುವುದು ಏಕೆ ಎಂಬ ಕಥೆ ನಿಮಗೆ ಗೊತ್ತಾ?, ಇದರ ಹಿಂದೆ ಒಂದು ಪುರಾತನ ಕಥೆ ಇದೆ. ಮೊರಯಾದ ಮೂಲ ಕಥೆ 15ನೇ ಶತಮಾನದಲ್ಲಿ ನಡೆದಿರುವುದು ಎಂಬುದಾಗಿ ನಂಬಲಾಗಿದೆ.

ಇಮ್ಮೆ ಮೊರಯಾ ಗೋಸವಿ ಎಂಬ ಸಾಧು ಮಹಾನ್ ಗಣೇಶನ ಭಕ್ತರು. ಅವರು ನಿತ್ಯ ಗಣಪತಿಯ ಪೂಜೆ ನಡೆದು ಹೋಗುತ್ತಿದ್ದರು. ಒಂದು ದಿನ ಮೊರಯಾ ಮಲಗಿದ್ದಾಗ ಕನಸಿನಲ್ಲಿ ಗಣೇಶ ಪ್ರತ್ಯಕ್ಷನಾದನಂತೆ.

ಈ ವೇಳೆ ಗಣಪ ನದಿಯಲ್ಲಿ ನನ್ನ ಮೂರ್ತಿ ಇದೆ ಅನ್ನು ಮೇಲೆತ್ತಿ ಪ್ರತಿಷ್ಠಾಪನೆ ಮಾಡುವಂತೆ ಹೇಳಿದನಂತೆ. ಹಾಗೆ ನದಿಯಲ್ಲಿ ಮೊರಯಾ ಹುಡುಕಾಡಿದಾಗ ದೊಡ್ಡ ಗಣಪನ ಮೂರ್ತಿ ಪತ್ತೆಯಾಗಿತ್ತಂತೆ.
ಈ ಸುದ್ದಿ ತಿಳಿದು ಊರಿನವರೆಲ್ಲಾ ಒಂದು ಕಡೆ ಸೇರಿದರಂತೆ. ಹಾಗೆ ಗಣೇಶ ಕನಸಿನಲ್ಲಿ ಬಂದ ವಿಷಯ ತಿಳಿಸಿದಾಗ ಜನರು ಮೊರಯಾನನ್ನೇ ದೇವರ ಸ್ವರೂಪಿ ಎಂದು ನಂಬಿದರಂತೆ.
ಮುಂದೆ ಮೊರಯಾ ಆ ಊರಿನಲ್ಲಿ ಪವಾಡ ಪುರುಷರಂತೆ ಬದುಕಿದರಂತೆ. ಬರು ಬರುತ್ತಾ ಜನರು ಮೋರಯ ಗೋಸಾನಿಯ ಜ್ಞಾಪಕಾರ್ತವಾಗಿ, ಗಣಪತಿ ಬಪ್ಪಾ ಮೋರಯಾ ಎಂಬ ಘೋಷಣೆ ಕೂಗಲಾಗುತ್ತಿದೆ.



Click it and Unblock the Notifications



