Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮಲೆನಾಡಿಗೆ ಆಗಮಿಸಿದ್ದ ಗಾಂಧಿ ದಂಪತಿ ತೆಂಗಿನ ಮರ ನೆಟ್ಟರು..! ಈಗ ಮುಗಿಲೆತ್ತರ ಬೆಳೆದಿವೆ.
ಭಾರತ ಸ್ವಾತಂತ್ರ್ಯ ಲಭಿಸಿ 78 ವರ್ಷ ಕಳೆದಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರ ಪಟ್ಟಿ ಕೋಟಿ ಕೋಟಿ ದಾಟಲಿದೆ. ಅದೆಷ್ಟೋ ಮಂದಿ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇದೆಲ್ಲದರ ಶ್ರಮವಾಗಿ ನಾವಿಂದು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ಕ್ರಾಂತಿಕಾರಿಗಳಿಂದ ಹಿಡಿದು ಬ್ರಿ ಟೀಷರ ವಿರುದ್ಧ ಶಾಂತಿಯುತವಾಗಿಯೂ ಪ್ರತಿಭಟನೆ ನಡೆಸಿದವರ ಸಂಖ್ಯೆ ಕೋಟಿ ಕೋಟಿ ಇದೆ.
ಅದ್ರಲ್ಲಿ ಶಾಂತಿಯುತ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಮಹಾತ್ಮ ಗಾಂಧೀಜಿ ಬ್ರಿಟೀಷರಿಗೆ ಸಿಂಹಸ್ವಪ್ನರಾಗಿದ್ದರು. ಗಾಂಧೀಜಿ ಬ್ರಿಟೀಷರಿಗೆ ಎಷ್ಟು ಸಮಸ್ಯೆಯಾಗಿ ಕಾಡಿದ್ದರು ಎಂದರೆ ಕೊನೆಗೂ ಸ್ವಾತಂತ್ರ್ಯ ನೀಡಬೇಕಾದ ಅನಿವಾರ್ಯತೆ ಅವರಿಗೆ ಬಂದೊದಗಿತ್ತು. ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಬಂದವರೇ ಬ್ರಿಟೀಷರ ವಿರುದ್ಧ ಹೋರಾಟಕ್ಕಿಳಿದಿದ್ದರು.

ಅವರು ಬ್ರಿಟೀಷರ ವಿರುದ್ಧ ಜನರನ್ನು ಒಟ್ಟುಗೂಡಿಸಿದರು. ಭಾರತದ ಮೂಲೆ ಮೂಲೆಗೂ ಸಂಚರಿಸಿ ಪ್ರತಿಯೊಬ್ಬರಲ್ಲೂ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದರು. ಭಾರತೀಯರನ್ನು ಎಚ್ಚರಿಸಿದ ಅವರು ಬ್ರಿಟೀಷರ ವಿರುದ್ಧ ಸಾಲು ಸಾಲು ಹೋರಾಟ ನಡೆಸಿದ್ದರು. ಆದರೆ ಶಾಂತಿ ಮತ್ತು ಸತ್ಯ ಮಾರ್ಗದಿಂದಲೇ ಸ್ವಾತಂತ್ರ್ಯ ಪಡೆದೇ ಪಡೆಯುತ್ತೇನೆ ಎಂದು ಸತ್ಯಾಗ್ರಹಗಳ ಆರಂಭಿಸಿದ್ದರು .
ಇನ್ನು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಗಾಂಧೀಜಿ ಇಡೀ ದೇಶ ಸುತ್ತು ಬರುವಾಗ ಕರ್ನಾಟಕಕ್ಕೆ ಹತ್ತು ಹಲವು ಭಾರಿ ಭೇಟಿ ನೀಡಿದ್ದರು. ಅವರು ಭೇಟಿ ನೀಡಿದ್ದಕ್ಕೆ ಇಂದಿಗೂ ಹತ್ತು ಹಲವು ಕುರುಹುಗಳು ಇವೆ. ಅವರು ರಾಜ್ಯಕ್ಕೆ ಭೇಟಿ ನೀಡಿ ಇಲ್ಲಿಯೂ ಸ್ವಾತಂತ್ರ್ಯದ ಕಹಳೆ ಊದಿದ್ದರು. ಗಾಂಧೀಜಿ ನೀಡಿದ್ದ ಕರೆಗೆ ಶಿವಮೊಗ್ಗದ ಈಸೂರಿನಲ್ಲಿ ನಡೆದಿದ್ದ ದಂಗೆ ಕುರಿತು ನಿಮಗೆಲ್ಲಾ ತಿಳಿದಿದೆ.
ಆದ್ರೆ ಗಾಂಧೀಜಿ ಶಿವಮೊಗ್ಗ ಆಗಮಿಸಿದ್ದ ವೇಳೆ ನೆಟ್ಟಿರುವ ತೆಂಗಿನ ಮರವೊಂದು ಈಗ ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ. ಶಿವಮೊಗ್ಗದಲ್ಲಿ ಗಾಂಧೀ ಹೆಸರಿನಲ್ಲಿ ಹಲವು ಸ್ಥಳಗಳ ಗುರುತಿಸಲಾಗಿದೆ. ಗಾಂಧಿ ಪಾರ್ಕ್, ಗಾಂಧಿ ಬಜಾರ್, ಗಾಂಧಿ ಭವನ ಸೇರಿ ಹಲವು ನೆನೆಪುಗಳಿವೆ.
ಗಾಂಧಿ ಜೊತೆ ಬಂದಿದ್ದರು ಕಸ್ತೂರ್ ಬಾ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಲು ಶಿವಮೊಗ್ಗದ ಈಗಿನ ಗಾಂಧಿ ಪಾರ್ಕ್‌ನಲ್ಲಿ ಸಾರ್ವಜನಿಕ ಸಭೆ ನಡೆಸಿದ್ದರು, ಈ ವೇಳೆ ಸಾವಿರಾರು ಮಂದಿ ಸೇರಿದ್ದರು. ನಂತರ ಇಲ್ಲಿರುವ ಸ್ಥಳಕ್ಕೆ ಗಾಂಧಿ ಬಜಾರ್ ಎಂಬ ಹೆಸರು ಸಹ ಬಂದಿದೆ ಎಂಬ ಮಾತಿದೆ. ಇನ್ನು ಗಾಂಧೀಜಿ ಶಿವಮೊಗ್ಗಕ್ಕೆ ಬಂದಿದ್ದಾಗ ಅವರ ಜೊತೆಗೆ ಕಸ್ತೂರ್ ಬಾ ಸಹ ಆಗಮಿಸಿದ್ದರು.
1927ರಲ್ಲಿ ವಕೀಲ ದಿ.ವೆಂಕಟಸುಬ್ಬ ಶಾಸ್ತ್ರೀ ಅವರು ಗಾಂಧೀಜಿ ಅವರನ್ನು ಶಿವಮೊಗ್ಗಕ್ಕೆ ಕರೆತಂದಿದ್ದರು. ಈ ವೇಳೆ ಅವರು ಅಂಚೇ ಕಚೇರಿ ಬಳಿ ನೆಟ್ಟಿದ್ದ ತೆಂಗಿನ ಮರ ಇಂದಿಗೂ ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ. ಹೌದು ಅಂದು ಆ ಜಾಗದಲ್ಲಿ ಹೋಟೆಲ್ ಇತ್ತು, ಗಾಂಧೀಜಿ ಅವರ ಆಗಮನದ ಸವಿನೆನಪನ್ನು ಚಿರಕಾಲ ಉಳಿಯುವಂತೆ ಮಾಡಲು ಹೋಟೆಲ್ ಮಾಲೀಕರು ಗಾಂಧೀಜಿ ಹಾಗೂ ಅವರ ಪತ್ನಿ ಕಸ್ತೂರ್ ಬಾ ಅವರ ಕೈಯಿಂದಲೇ ಒಂದು ತೆಂಗನ ಮರ ನೆಟ್ಟಿಸಿದ್ದರು. ಇದಾದ ಬಳಿಕ ಹೋಟೆಲ್ ಹಳೆಯದಾಗಿದ್ದರಿಂದ ಕಟ್ಟಡ ಕೆಡವಲಾಗಿತ್ತು. ಆದ್ರೆ ಈಗ ಅಂಚೆ ಕಚೇರಿ ಆವರಣದ ಎದುರಿನ ಖಾಲಿ ಜಾಗದಲ್ಲಿ ಎರಡು ತೆಂಗಿನ ಮರಗಳಿದ್ದು, ಈ ಎರಡು ಮರಗಳನ್ನು ಗಾಂಧಿ ದಂಪತಿ ನೆಟ್ಟಿದ್ದರು.
ಈ ಮರಗಳಿಗೆ ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳ ಮರುಕಳಿಸುವಂತೆ ಮಾಡುತ್ತವೆ. ಈ ಸ್ವಾತಂತ್ರ್ಯೋತ್ಸವದ ಸವಿ ನೆನಪಿನಲ್ಲಿ ಶಿವಮೊಗ್ಗದ ಹಲವು ಕಡೆಗಳಲ್ಲಿ ಬಾಪೂಜಿ ಬಿಟ್ಟು ಹೋದ ನೆನಪುಗಳಿವೆ. ಹೀಗಾಗಿಯೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಶಿವಮೊಗ್ಗ ಜಿಲ್ಲೆ ಹಲವು ನಾಯಕರ ನೀಡಿದೆ. ಹಲವರ ಹೆಸರು ಇಂದು ಇತಿಹಾಸದ ಪುಟಗಳಲ್ಲಿ ಸೇರಿಕೊಂಡಿದೆ.



Click it and Unblock the Notifications
