Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಟೀ ಅಂಗಡಿಯಿಂದ ಸಾವಿರ ಕೋಟಿ ದುಡಿದು ಜೈಲು ಸೇರಿದ್ದ ಉದ್ಯಮಿ: ಶರವಣ ಭವನ ಪತನದ ಕಥೆ ಗೊತ್ತಾ?
ಉದ್ಯಮ ಕಟ್ಟಿ ಬೆಳಸಬೇಕು ಅನ್ನೋದು ಪ್ರತಿಯೊಬ್ಬ ಸಣ್ಣ ಪುಟ್ಟ ಉದ್ಯಮಿಯ ಕನಸಾಗಿರುತ್ತೆ. ವಾರ್ಷಿಕವಾಗಿ ಕೋಟಿಗೂ ಅಧಿಕ ಹಣ ಮಾಡುವಂತಹ ಉದ್ಯಮ ಕಟ್ಟಿ ಭವಿಷ್ಯದ ಜೀವನದಲ್ಲಿ ಹಣ, ಹೆಸರು ಮಾಡಬೇಕು ಅನ್ನೋದು ಹಲವರ ಕನಸಾಗಿರುತ್ತೆ. ಅದ್ರಲ್ಲೂ ಹೋಟೆಲ್ ಉದ್ಯಮ ಅಂದ್ರೆ ಅದೊಂದು ದೊಡ್ಡ ಸಾಗರ ಇದ್ದಂತೆ ಇಲ್ಲಿ ಸಣ್ಣ ಪುಟ್ಟ ಮೀನುಗಳಿಂದ ಹಿಡಿದು ದೊಡ್ಡ ದೊಡ್ಡ ತಿಮಿಂಗಿಲಗಳು ಕೂಡ ಇವೆ. ಆದ್ರೆ ನಾವಿಲ್ಲಿ ಈ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದಾತ ಬಳಿಕ ಜೈಲು ಸೇರಿದ ಕಥೆ ಇದು.
ಅದ್ರಲ್ಲೂ ಆತ ಚಿಲ್ಲರೆ ಅಂಗಡಿಯಿಂದ ಬೆಳೆದು ದೊಡ್ಡ ಹೋಟೆಲ್ ಉದ್ಯಮ ಕಟ್ಟಿದ ಬುದ್ದಿವಂತ. ಹೌದು ನೀವು ಶರವಣ ಭವನ ಹೋಟೆಲ್ ಸಮೂಹದ ಮಾಲೀಕ ಪುನ್ನೈಯಾಡಿ (ಪಿ) ರಾಜಗೋಪಾಲ್ ಹೆಸರು ಕೇಳಿರಬಹುದು. ಮಾಲಿಕರ ಹೆಸರು ಕೇಳದೆ ಇದ್ದರೂ ಈ ಹೋಟೆಲ್ ಹೆಸರಂತು ನೀವು ಕೇಳಿರುತ್ತೀರಿ. ಬಹುದೊಡ್ಡ ಹೋಟೆಲ್ ಸಮೂಹ ಹೊಂದಿತ್ತ. ವಿದೇಶದಲ್ಲೂ ಇದರ ಬ್ರಾಚ್ ಕೂಡ ಇತ್ತು.

ಶರವಣ ಭವನ ಅಂದ್ರೆ ಇಡ್ಲಿ, ದೋಸೆ, ವಡೆ ಸೇರಿ ಹಲವು ಖಾದ್ಯಗಳಿಗೆ ಬಹಳ ಫೇಮಸ್. ದೇಶದಲ್ಲಿ ಮಾತ್ರವಲ್ಲದೆ ವಿದೇಶಿ ನೆಲದಲ್ಲೂ ಈ ಸಂಸ್ಥೆ ದೊಡ್ಡ ಹೆಸರು ಮಾಡಿತ್ತು, ಆದ್ರೆ ಈಗ ಮಾಲಿಕ ರಾಜಗೋಪಾಲ್ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲು ಸೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಹಾಗಾದ್ರೆ ಅವರ ಜೀವನದ ಕಥೆ ಏನು? ಇಷ್ಟೆಲ್ಲಾ ದೊಡ್ಡ ಸಾಮ್ರಾಜ್ಯ ಕಟ್ಟಿದ್ದ ವ್ಯಕ್ತಿ ಜೈಲು ಸೇರಿದ್ದು ಹೇಗೆ ಎಂಬುದು ನಿಮಗೆ ಗೊತ್ತಾ?
ತಮಿಳುನಾಡಿನ ಟ್ಯುಟಿಕೋರಿನ್ ಜಿಲ್ಲೆಯ ಪುನ್ನೈಯಾಡಿ ಗ್ರಾಮದ ಸಣ್ಣ ಹಳ್ಳಿಯ ಹುಡುಗನಾಗಿದ್ದ ರಾಜಗೋಪಾಲ್ ಓದಿನಲ್ಲಿ ಮುಂದಿರಲಿಲ್ಲ. ಮನೆಯ ಬಡತನ ಹಿನ್ನೆಲೆ ಓದಲು ಶಾಲೆಗೆ ತೆರೆಳದೆ 7ನೇ ತರಗತಿಯರೆಗೂ ಓದಿದ್ದರಂತೆ. ಆದ್ರೆ ಹಳ್ಳಿಯಲ್ಲಿ ಇದ್ದು ವ್ಯವಸಾಯ ಮಾಡಲು ಒಪ್ಪದ ಹುಡುಗ ನೇರವಾಗಿ ಚೆನ್ನೈ ನಗರಕ್ಕೆ ಬಂದಿಳಿದಿದ್ದ.
ಚೆನ್ನೈ ಸೇರಿದ ಅವರು ಹುಡುಕಿದ್ದು ಹೋಟೆಲ್ ಕೆಲಸವನ್ನು ಏಕೆಂದರೆ ಹೋಟೆಲ್ ಊಟ ತಿಂಡಿ ಖರ್ಚು ಸೇರಿ ಮಲಗಲು ಜಾಗವೂ ಇತ್ತು, ಹೀಗಾಗಿ ಹೋಟೆಲ್ ಒಂದರಲ್ಲಿ ಟೇಬಲ್ ಒರೆಸಿಕೊಂಡು, ಕ್ಲೀನಿಂಗ್ ಮಾಡಿಕೊಂಡು ಉಳಿದರು. ಅಲ್ಲಿಯೇ ಮಲಗುತ್ತಿದ್ದರು. ಆಗಾಗ ಅಡುಗೆ ಮನೆ ಕೆಲಸಗಳ ಮಾಡಲು ಮುಂದಾದ ಅವರು ಟೀ-ಕಾಫಿ ಮಾಡುವುದು, ಅಡುಗೆಗೆ ಬೇಕಾದ ವಸ್ತುಗಳನ್ನು ನೀಡುವುದು ಮಸಾಲೆಗಳ ರುಬ್ಬುವುದು ಇಂತಹ ಕೆಲಸ ಮಾಡುತ್ತಿದ್ದರು.
ಆದ್ರೆ ಒಂದು ದಿನ ರಾಜಗೋಪಾಲ್ ತಮ್ಮದೇ ಟೀ ಅಂಗಡಿ ಮಾಡಬೇಕು ಎಂದು ಹೋಟೆಲ್ ಕೆಲಸ ಬಿಟ್ಟು ಹೊರಬಂದರು. ಹಾಗೆ ಸಣ್ಣ ಟೀ ಅಂಗಡಿ ಇಟ್ಟು ದುಡಿಮೆ ಆರಂಭಿಸಿದರು. ಅವರ ಸಂಬಂಧಿಕರೊಬ್ಬರು ಚೆನ್ನೈನ ಕೆ.ಕೆ ನಗರದಲ್ಲಿ ಟೀ ಅಂಗಡಿ ಹಾಕಲು ಸಹಾಯ ಮಾಡಿದ್ದರಂತೆ. ಸಣ್ಣ ಟೀ ಅಂಗಡಿ ದೊಡ್ಡದಾಗಿಸಿದರು. ಆದ್ರೆ ಇಲ್ಲಿ ಹಲವು ರೀತಿ ಸಮಸ್ಯೆಯೂ ಉಂಟಾಯಿತು. ಬಾಡಿಗೆ ಹೆಚ್ಚಾಗಿ ವ್ಯಾಪಾರ ಕಡಿಮೆಯಾಗಿತ್ತು.
ಈ ಸಮಯದಲ್ಲಿ ಅವರಿಗೆ ಹೋಟೆಲ್ ತೆರೆಯುವ ಐಡಿಯಾ ಸಹ ಬಂದಿತ್ತು. ಅವರ ಟೀ ಅಂಗಡಿಯ ಆಸುಪಾಸಿನಲ್ಲಿ ಯಾವುದೇ ಹೋಟೆಲ್‌ಗಳು ಕೂಡ ಇರಲಿಲ್ಲ. ಹೀಗಾಗಿ ಹತ್ತಿರದಲ್ಲಿ ನಷ್ಟದಿಂದ ಕೂಡಿದ್ದ ಹೋಟೆಲ್ ಕಾಮಾಕ್ಷಿ ಭವನ್ ಅನ್ನು ಖರೀದಿಸಿದರು. ನಂತರ ಈ ಹೋಟೆಲ್ ಅನ್ನು ಅವರು ಶರವಣ ಭವನ ಎಂದು ಮರುನಾಮಕರಣ ಮಾಡಿದರು. ಇದೇ ಸಮಯದಲ್ಲಿ ಅವರಿಗೆ ಸ್ನೇಹಿತ ಗಣಪತಿ ಅಯ್ಯರ್ ಎಂಬಾತ ಸಹಾಯಕ್ಕೆ ನಿಂತಿದ್ದ. ನೋಡ ನೋಡುತ್ತಲೇ ಶಾಖೆಗಳನ್ನು ತೆರೆಯುವಷ್ಟು ದೊಡ್ಡದಾಗಿ ಹೋಟೆಲ್ ಉದ್ಯಮ ಬೆಳೆಸಿದರು.
ಆರಂಭದಲ್ಲಿ ಕೇವಲ 5 ರೂಪಾಯಿಗೆ ಇಲ್ಲಿ ಹೊಟ್ಟೆ ತುಂಬ ಊಟ ತಿಂಡಿ ಸಿಗುತ್ತಿತ್ತು. ಹೀಗಾಗಿ ಇವರ ಹೋಟೆಲ್ ಉದ್ಯಮ ದೊಡ್ಡದಾಗಿ ಬೆಳೆದಿತ್ತು. ಅವರ ಪತ್ನಿ ವಲ್ಲಿ ಸಹ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು. ಹಾಗೆ ಚೆನ್ನೈನಲ್ಲಿ 20ಕ್ಕೂ ಹೆಚ್ಚು ಶಾಖೆಗಳು ಆರಂಭವಾಗುವ ಹೊತ್ತಿಗೆ ಅವರ ಸಾಮ್ರಾಜ್ಯ ದೊಡ್ಡದಾಗಿತ್ತು. ಎಲ್ಲಾ ಶಾಖೆಗಳು ಸಹ ಲಾಭ ಮಾಡುತ್ತಿದ್ದವು. ಅವರ ಹೆಸರು ಸಹ ಅಚ್ಚಳಿಯಂತೆ ಎಲ್ಲರ ಮನದಲ್ಲಿ ನೆಲೆಸಿತು. ಇದಾದ ಬಳಿಕ ಒಂದೊಂದೆ ವಿದೇಶಿ ಶಾಖೆಗಳು ಸಹ ಆರಂಭಗೊಂಡವು. ಒಟ್ಟು 23 ವಿದೇಶಿ ಶಾಖೆಗಳನ್ನು ತೆರೆದರು. ದಿನವೊಂದಕ್ಕೆ 1 ಕೋಟಿಗೂ ಅಧಿಕ ವ್ಯವಹಾರ ನಡೆಸುವ ದೊಡ್ಡ ಸಾಮ್ರಾಜ್ಯ ಹುಟ್ಟಿಕೊಂಡಿತ್ತು.
ಕೇಡುಗಾಲ ಆರಂಭ ಕರಗಿತು ಸಾಮ್ರಾಜ್ಯ
ಎಲ್ಲವು ಚೆನ್ನಾಗಿ ನಡೆಯುತ್ತಿದ್ದ ಸಮಯದಲ್ಲಿ ಇಡೀ ಜೀವನ ಏರುಪೇರಾಗುವ ಘಟನೆ ನಡೆದಿತ್ತು. ರಾಜ್‌ಗೋಪಾಲ್ ಯಶಸ್ಸಿನ ನಡುವೆ ಎರಡನೆ ಮದುವೆಯಾಗಿದ್ರು. ಅದ್ರಲ್ಲೂ ತನ್ನದೇ ಸಮೂಹ ಸಂಸ್ಥೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದ ಉದ್ಯೋಗಿಯೊಬ್ಬರ ಹೆಂಡತಿ ಕೃತಿಕಾ ಎಂಬಾಕೆಯನ್ನು ವಿವಾಹವಾದರು. ಇಷ್ಟೇ ಅಲ್ಲ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ರಾಮಸ್ವಾಮಿ ಎಂಬಾತನ ಮಗಳ ಮೇಲೂ ಕಣ್ಣು ಹಾಕಿದ್ದ. ಮೂರು ಮದುವೆಯಾದರೆ ಸಂಪತ್ತು ಮತ್ತಷ್ಟು ಹೆಚ್ಚಾಗುತ್ತೆ ಎಂಬ ಜ್ಯೋತಿಷಿಯ ಮಾತು ನಂಬಿ ರಾಜಗೋಪಾಲ್ ಇಂತಹ ಕೆಲಸದಕ್ಕೆ ಮುಂದಾಗಿದ್ದ.
ಜೀವಜ್ಯೋತಿಯ ಮೇಲೆ ಕಣ್ಣು ಹಾಕಿದ್ದ ರಾಜಗೋಪಾಲ್, ಆಕೆಯ ಮದುವೆಯಾಗುವಂತೆ ಒತ್ತಡ ಹಾಕಿದ್ದ. ಆದ್ರೆ ಜೀವಜ್ಯೋತಿ ಶರವಣ ಸಮೂಹ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನೇ ಪ್ರೀತಿಸುತ್ತಿದ್ದಳು. ಈ ವಿಚಾರ ರಾಜಗೋಪಾಲ್ ಗೂ ತಿಳಿದಿತ್ತು. ಜೀವಜ್ಯೋತಿ ಎಲ್ಲಾ ಬೇಡಿಕೆಯನ್ನು ನಿರಾಕರಿಸಿ ತನ್ನ ಪ್ರಿಯಕರನನ್ನು ಮದುವೆಯಾದಳು.
ಕ್ರೂರಿಯಾದ ರಾಜಗೋಪಾಲ್
ಅಕೆಯ ಮದುವೆಯಾದ ಬಳಿಕ ಎಲ್ಲವೂ ಸರಿಯಾಗಿತ್ತು. ಜೀವಜ್ಯೋತಿಯ ಮೇಲಿನ ಆಸೆ ಕಡಿಮೆಯಾಗಿತ್ತು. ಆದ್ರೆ ಜೀವಜ್ಯೋತಿಯ ಪತಿ ಶರವಣ ಭವನ್‌ನ ಕೆಲಸ ಬಿಟ್ಟು ಸ್ವಂತ ಉದ್ಯಮ ಕಟ್ಟಲು ಮುಂದಾಗಿದ್ದ. ಟ್ರಾವಲ್ಸ್ ಸಂಸ್ಥೆ ಮಾಡಲು ಬ್ಯಾಂಕ್ ಸಾಲ ಪಡೆಯಲು ಮುಂದಾಗಿದ್ದ. ಇದಕ್ಕಾಗಿ ತನ್ನ ತಾಯಿಯನ್ನು ರಾಜಗೋಪಾಲ್ ಬಳಿ ಕಳುಹಿಸಿ ಬ್ಯಾಂಕ್ ಜಾಮೀನು ಸಹಿ ಹಾಕುವಂತೆ ಕೇಳಿಕೊಂಡಳು. ಇದು ರಾಜಗೋಪಾಲ್ ಅಲ್ಲಿ ಮತ್ತೆ ಜೀವಜ್ಯೋತಿ ಕುರಿತ ಆಸೆ ಜೀವಂತವಾಗಿಸಿತು.
ಮತ್ತೆ ರಾಜಗೋಪಾಲ್ ಜೀವಜ್ಯೋತಿ ಹಿಂದೆ ಬಿದ್ದಿದ್ದ. ತನ್ನ ಪತಿಗೆ ವಿಚ್ಛೇದನ ನೀಡುವಂತೆ ಕಾಡತೊಡಗಿದ್ದ. ಅಲ್ಲದೆ ಲಕ್ಷ ಲಕ್ಷ ರೂಪಾಯಿ ಹಣ, ಒಡವೆ ನೀಡುವುದಾಗಿ ಆಕೆಗೆ ಬೇಡಿಕೆ ಇಟ್ಟಿದ್ದ ಆದ್ರೆ ಆಕೆ ಇದ್ಯಾವುದಕ್ಕೂ ಬಗ್ಗಲಿಲ್ಲ. ಹೀಗಾಗಿ ಆಕೆಯ ಪತಿಯನ್ನು ಮುಗಿಸುವ ಪ್ಲಾನ್ ಮಾಡಿದ್ದ. ಜೀವಜ್ಯೋತಿಯ ಗಂಡ ಶಾಂತಕುಮಾರನನ್ನು 2001ರಲ್ಲಿ ಅಪಹರಿಸಿ ಕೊ.ಲೆ ಮಾಡಿಸಿದ್ದ. 2003ರಲ್ಲಿ ಈ ಕೃತ್ಯ ಎಸಗಿದ್ದವರು ಪೊಲೀಸರಿಗೆ ಶರಣಾದರು. ಈ ಸಮಯದಲ್ಲಿ ರಾಜಗೋಪಾಲ್ ಬಂಧಿಸಲಾಗಿತ್ತು. ಹಾಗೆ ಜಾಮೀನು ಪಡೆದು ಹೊರಬಂದ ರಾಜಗೋಪಾಲ್ ಮತ್ತೆ ಜೀವಜ್ಯೋತಿಗೆ ಬೆದರಿಕೆ ಹಾಕಿದ ಕೇಸ್‌ನಲ್ಲಿ ಜೈಲುಪಾಲಾದರು. ಏಪ್ರಿಲ್ 2004ರಲ್ಲಿ ಪೂನಮಲ್ಲೀ ಸೆಷನ್ಸ್ ನ್ಯಾಯಾಲಯವು ರಾಜಗೋಪಾಲ್‌ಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತು. ಹಾಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರು 2019ರಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟರು.



Click it and Unblock the Notifications














