Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಾರಾಷ್ಟ್ರದ ಗಣೇಶೋತ್ಸವ ಇಡೀ ದೇಶಕ್ಕೆ ಹರಡಿದ್ದು ಹೇಗೆ? ರಾಜ್ಯದಲ್ಲೂ ಪಸರಿಸಿದ್ದು ಹೇಗೆ ಗೊತ್ತಾ?
ಗಣೇಶ ಚತುರ್ಥಿ ಅಂದ್ರೆ ಸಾರ್ವಜನಿಕವಾಗಿಯೂ ಹಾಗೆ ಮನೆ ಮನೆಯಲ್ಲೂ ಆಚರಿಸುವಂತಹ ಹಬ್ಬವಾಗಿದೆ. ಗಣೇಶನ ಹಬ್ಬವನ್ನು ದೇಶದಾದ್ಯಂತ ವಾರಗಳಿಂದ ಹಿಡಿದು ತಿಂಗಳ ಕಾಲ ನಡೆಯುವುದು ನೋಡಬಹುದು. ಹಾಗೆ ಈ ಸಂಭ್ರಮದ ಹಬ್ಬದಲ್ಲಿ ಇಡೀ ಊರು ಒಂದು ಕಡೆ ಸೇರುವುದು ನೋಡಬಹುದು. ಹಾಗೆ ಗಣೇಶನ ಹಬ್ಬದಲ್ಲಿ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಅಲ್ಲಿನ ಜನರು ಸಂಭ್ರಮದಿಂದ ಆಚರಿಸುವುದು ನೋಡಬಹುದು.
ಹಾಗೆ ಗಣೇಶ ಚತುರ್ಥಿಯನ್ನು ಮನೆಯಲ್ಲೂ ಆಚರಿಸುತ್ತಾರೆ ಒಂದು ದಿನ ಸಣ್ಣ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಅಂದೇ ನಿಮಜ್ಜನ ಕ್ರಿಯೆ ಮಾಡುವುದು ನೋಡಬಹುದು. ಆದರೆ ಈ ಹಬ್ಬ ಆರಂಭಗೊಂಡಿದ್ದು ಹೇಗೆ ಎಂಬ ಕುರಿತ ಸ್ವಾರಸ್ಯಕರ ಮಾಹಿತಿ ನಿಮಗೆ ಗೊತ್ತಾ? ಹೌದು ಈ ಗಣೇಶನ ಉತ್ಸವ ಸಾರ್ವಜನಿಕ ಹಬ್ಬವಾಗಿ ಮಾರ್ಪಟ್ಟ ಹಿಂದೆ ಕಥನವಿದೆ. ಹೋರಾಟಕ್ಕೆ ಇದೊಂದು ಸ್ಪೂರ್ತಿಯಾದ ಕಥೆ ಇದೆ.

ಮೊದಲು ಈ ಸಾರ್ವಜನಿಕ ಗಣೇಶೋತ್ಸವ ಆರಂಭಗೊಂಡಿದ್ದು ಏಕೆ? ಆರಂಭಿಸಿದ್ದು ಯಾರು? ಇದು ಭಾರತದಾದ್ಯಂತ ಹರಡಿಕೊಂಡಿದ್ದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಅದ್ರಲ್ಲೂ ಈ ಹಬ್ಬದ ಇತಿಹಾಸ ಹುಡುಕುತ್ತಾ ಹೋದರೆ ಅದು ಸ್ವಾತಂತ್ರ್ಯ ಪೂರ್ವಕ್ಕೆ ನಮ್ಮನ್ನು ಕರೆದೊಯ್ಯಲಿದೆ. ಅಂದರೆ ಸ್ವಾತಂತ್ರ್ಯಕ್ಕೂ ಮುನ್ನ ಈ ಹಬ್ಬ ಸಾರ್ವಜನಿಕ ಹಬ್ಬವಾಗಿ ಆಚರಿಸಲ್ಪಡುತ್ತಿದೆ.
ಮಹಾರಾಷ್ಟ್ರದಲ್ಲಿ ರಾಜ್ಯ ಹಬ್ಬ
ಗಣೇಶೋತ್ಸವ ಆರಂಭಗೊಂಡಿದ್ದೇ ಮಹಾರಾಷ್ಟ್ರದಲ್ಲಿ ಎಂಬುದನ್ನು ನೀವು ತಿಳಿದಿರಬಹುದು. ಕೆಲ ವರ್ಷದ ಹಿಂದೆ ಗಣೇಶೋತ್ಸವವನ್ನು ಮಹಾರಾಷ್ಟ್ರದ ರಾಜ್ಯ ಹಬ್ಬವನ್ನಾಗಿಯೂ ಘೋಷಿಸಲಾಗಿದೆ. ಆದ್ರೆ ಮೊದಲ ಬಾರಿಗೆ ಉತಾಹ್ ಸೇಂಟ್ ಜಾರ್ಜ್ ಎಂಬ ಸಣ್ಣ ಪಟ್ಟಣದಲ್ಲಿ ಬರೀ 75 ಜನರಿದ್ದ ಒಂದು ಸಭೆ ಇಡೀ ದೇಶದಲ್ಲಿ ಹಬ್ಬ ಆಚರಿಸುವ ಈ ದಿನಕ್ಕೆ ಸಾಕ್ಷಿಯಾಗಿತ್ತು. ನಿಮಗೆ ಅಚ್ಚರಿ ತರಿಸಬಹುದು. ಈ 75 ಜನರಲ್ಲಿ ಬಹುತೇಕರು ಅಪರಿಚಿತರು, ವ ಅವರೆಲ್ಲ ಸೇರಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅಂದು ನಿರ್ಧಾರ ಮಾಡಿದ್ದರು.
1893ರ ಮೊದಲು ಗಣೇಶನ ಹಬ್ಬ
ಸಾರ್ವಜನಿಕ ಗಣೇಶೋತ್ಸವ 1893ರಿಂದ ಆರಂಭಗೊಂಡಿತ್ತು. ಇದಕ್ಕೂ ಮೊದಲು ಕೇವಲ ಒಂದು ದಿನದ ಆಚರಣೆಯಾಗಿತ್ತು, ಅವರವರ ಮನೆಯಲ್ಲಿ ಮಾತ್ರವೇ ಗಣೇಶನ ಹಬ್ಬವಾಗಿ ಮಾತ್ರ ಆಚರಿಸಲ್ಪಟ್ಟಿತ್ತು. ಆದ್ರೆ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಇದನ್ನು ಸಾರ್ವಜನಿಕ ಹಬ್ಬವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಸಮಯದಲ್ಲಿ ಇದೊಂದು ಬ್ರಾಹ್ಮಣರ ಹಬ್ಬವೆಂದು ಪರಿಗಣಿಸಲಾಗಿತ್ತು. ಹೀಗಾಗಿ ತಿಲಕ್ ಅವರು ಇದನ್ನು ಸಾರ್ವಜನಿಕ ಹಬ್ಬವಾಗಿ ಮಾಡಲು ಮುಂದಾದರು.
ಮೊದಲ ಸಾರ್ವಜನಿಕ ಗಣೇಶೋತ್ಸವ ನಡೆದಿದ್ದೆಲ್ಲಿ?
ಮುಂಬೈನ ಕೇಶವ್ಜಿ ನಾಯಕ್ ಚಾಲ್‌ನಲ್ಲಿ ಮೊಟ್ಟ ಮೊದಲ ಸಾರ್ವಜನಿಕ ಗಣೇಶೋತ್ಸವ ನಡೆದಿತ್ತು. 1893ರಲ್ಲಿ ಬೃಹತ್ ಸಮಾರಂಭ ನಡೆದಿತ್ತು. ಸದ್ಯ ಈಗ ಲಾಲ್‌ಚೌನ್‌ನ ಗಣೇಶ ಇಡೀ ದೇಶದ ಗಮನ ಸೆಳೆಯುವುದು ನೋಡಬಹುದು. ತಿಲಕ್ ಅವರು ಸ್ವಾತಂತ್ರ್ಯೋತ್ಸವದ ಕಿಡಿ ಹೊತ್ತಿಸಲು ಸಾರ್ವಜನಿಕ ಗಣೇಶೋತ್ಸವ ಸಂಪರ್ಕ ಸೇತುವೆಯನ್ನಾಗಿ ಬಳಸಲು ಮುಂದಾದರು.
ಹಬ್ಬದ ಆಚರಣೆಯನ್ನು ಸಮಾಜದ ವಿವಿಧ ಭಾಗಗಳನ್ನು ಒಂದುಗೂಡಿಸುವ ಮತ್ತು ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಜನರನ್ನು ಸಜ್ಜುಗೊಳಿಸುವ ಸಾರ್ವಜನಿಕವಾಗಿ ಒಟ್ಟುಗೂಡಿಸಲು ಇದೊಂದು ಮಾಧ್ಯಮ ಆಗಲಿದೆ ಎಂದು ಅರಿತರು. ಬಾಲಗಂಗಾಧರ ತಿಲಕ್ ಅವರ ದೃಷ್ಟಿಕೋನವು ಗಣೇಶ ಚತುರ್ಥಿಯನ್ನು ಭವ್ಯ ಸಮುದಾಯ ಉತ್ಸವವಾಗಿ ಪರಿವರ್ತಿಸುವುದನ್ನು ಒಳಗೊಂಡಿತ್ತು. ಹಾಗೆ ಇದೇ ಸಮಯದಲ್ಲಿ ದೊಡ್ಡ ದೊಡ್ಡ ಪೆಂಡಾಲ್ ಬಳಕೆ ಆರಂಭಗೊಂಡಿತು, ಹಾಗೆ ಒಂದೇ ದಿನ ಹಬ್ಬ ಆಚರಿಸಿದರೆ ಜನರು ಬರುವುದಿಲ್ಲ ಎಂಬುದನ್ನು ಅರಿತ ಅರು ಬರೋಬ್ಬರಿ 10 ದಿನಗಳ ಕಾಲ ಈ ಹಬ್ಬ ಆಚರಿಸಲು ಅಂದೇ ನಿರ್ಧರಿಸಿದರು. ಪ್ರತಿ ದಿನವು ಸ್ವಾತಂತ್ರ್ಯ ಕುರಿತಾಗಿ ಜನರಲ್ಲಿ ಅರಿವು ಮೂಡಿಸಲು ಮುಂದಾದರು.
ಬ್ರಿಟಿಷ್ ಅಧಿಕಾರಿಗಳು ಸಾರ್ವಜನಿಕ ಸಭೆಗಳನ್ನು ನಿರ್ಬಂಧಿಸಿದ್ದ ಸಮಯದಲ್ಲಿ ತಿಲಕರು ಈ ಹಬ್ಬವನ್ನು ಜನರನ್ನು ಒಗ್ಗೂಡಿಸಲು ಬಹಳ ಸುಲಭದ ಮಾಧ್ಯಮ ಎಂದು ಅರತಿದ್ದರು. ಈ ಹಬ್ಬದಲ್ಲಿ ಜಾತಿ, ಧರ್ಮದ ಬೇಧ ಭಾವವಿಲ್ಲದೆ ಭಾಗಿಯಾಗಲು ಅವರು ಕರೆ ನೀಡಿದ್ದರು. ಹೀಗಾಗಿ ಬಹುಬೇಗ ಸಮಾಜದಲ್ಲಿ ಬೇರೂರಿತು.
ಕರ್ನಾಟಕಕ್ಕೆ ಬಂತು ಗಣೇಶನ ಹಬ್ಬ
ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವ ತಡವಾಗಿ ಆಗಮಿಸಿತ್ತು, ಸ್ವಾತಂತ್ರ್ಯದ ಕಿಡಿ ದೊಡ್ಡದಾಗಿ ಹಬ್ಬಿದ್ದ ಸಮಯದಲ್ಲಿ ರಾಜ್ಯದಲ್ಲಿ ಗಣೇಶೋತ್ಸವ ಆಚರಣೆಯು ಸಾರ್ವಜನಿಕವಾಗಿ ಆಚರಿಸುವುದು ಆರಂಭಗೊಂಡಿತ್ತು. ರಾಜ್ಯದಲ್ಲಿ ಮಹಾರಾಷ್ಟ್ರಕ್ಕಿಂತ ಭಿನ್ನ ರೀತಿಯಲ್ಲಿ ಆರಂಭಗೊಂಡಿತ್ತು. ಹಾಗೆ ಈ ಹಬ್ಬವು ಮಹಾರಾಷ್ಟ್ರದಲ್ಲಿನ ಆಚರಣೆಗಿಂತಲೂ ಬಹಳ ತೀವ್ರ ಸ್ವರೂಪ ಅಥವಾ ಯಶಸ್ವಿಯಾಗಿ ನಡೆಯಿತು.
ಕರ್ನಾಟಕದ ಕೊನೆಯ ಹಳ್ಳಿಗೂ ಈ ಹಬ್ಬ ತಲುಪಿತು. 1919ರಲ್ಲಿ ಲೋಕಮಾನ್ಯ ತಿಲಕ್ ಹುಬ್ಬಳ್ಳಿಗೆ ಬೇಟಿ ನೀಡಿದ್ದರು, ಈ ಸಮಯದಲ್ಲಿ ಅದ್ದೂರಿ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದರು. ಇದಾದ ಬಳಿಕ ರಾಜ್ಯದ ಮೂಲೆ ಮೂಲೆಗೂ ಗಣೇಶೋತ್ಸವ ಹರಡಿತು. ಈಗ ಹಳ್ಳಿ ಹಳ್ಳಿಯಲ್ಲೂ ಗಣೇಶೋತ್ಸವ ಅದ್ದೂರಿಯಾಗಿ ನಡೆಯಲಿದೆ.
ಹುಬ್ಬಳ್ಳಿಯ ಗಣೇಶೋತ್ಸವಕ್ಕೆ ನೂರು ವರ್ಷಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಹಾಗೆ ಈಗ ರಾಜ್ಯದ ಹಲವು ಭಾಗದಲ್ಲಿ 100 ವರ್ಷಕ್ಕಿಂತ ಹೆಚ್ಚಿನ ವರ್ಷದ ಗಣೇಶೋತ್ಸವ ಆಯೋಜನೆ ಮಾಡುವುದು ಕೂಡ ನಾವು ನೋಡಬಹುದು. ಹುಬ್ಬಳ್ಳಿಯ ಗಣೇಶನ ಮೂರ್ತಿ ಇಡೀ ಕರ್ನಾಟಕದಲ್ಲೇ ದೊಡ್ಡದು ಎಂಬ ಕೀರ್ತಿ ಪಡೆಯುತ್ತದೆ. ಹುಬ್ಬಳ್ಳಿ ಕಾ ಮಹರಾಜ್ ಎಂದೇ ಹೆಸರು ಪಡೆದಿರುವ ಈ ಗಣೇಶನ ನಿಮಜ್ಜನ ವೇಳೆ ಲಕ್ಷಾಂತರ ಮಂದಿ ಸೇರುವುದು ವಿಶೇಷವಾಗಿದೆ.



Click it and Unblock the Notifications
















