Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಶುಕ್ರವಾರ ಈ ತಪ್ಪು ಮಾಡಬೇಡಿ..! ಲಕ್ಷ್ಮಿ ದೇವಿಯ ಈ ಮಂತ್ರ ಪಠಿಸಿ..!
ಶುಕ್ರವಾರದಂದು ಉಪವಾಸವನ್ನು ಆಚರಿಸುವುದು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ, ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಲಿದೆ ಎಂದು ನಂಬಲಾಗಿದೆ. ಜೊತೆಗೆ ಈ ದಿನ ಲಕ್ಷ್ಮಿಯ ಪೂಜೆಯಿಂದ ಆರ್ಥಿಕ ಲಾಭವನ್ನು ಪಡೆಯುತ್ತಾನೆ ಎನ್ನಲಾಗಿದೆ.
ಸನಾತನ ಧರ್ಮದಲ್ಲಿ ಶುಕ್ರವಾರವನ್ನು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಈ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸಿ ಮತ್ತು ಉಪವಾಸ ಮಾಡುವುದರಿಂದ, ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ಆದರೆ ನಂಬಿಕೆಯ ಪ್ರಕಾರ, ಶುಕ್ರವಾರದಂದು ಕೆಲವು ಕಾರ್ಯಗಳನ್ನು ಮಾಡುವುದರಿಂದ ನಿಮಗೆ ಅಶುಭ ತರಲಿದೆಯಂತೆ.
ಈ ಕಾರ್ಯ ಮಾಡುವುದರಿಂದ ಲಕ್ಷ್ಮಿ ದೇವಿಯು ಮುನಿಸಿಕೊಳ್ಳಬಹುದು ಎಂದು ನಂಬಲಾಗಿದೆ. ಲಕ್ಷ್ಮಿ ದೇವಿ ಮುನಿಸಿಕೊಂಡರೆ ಸಂಪತ್ತಿನ ವೃದ್ಧಿ ಹೊಡೆತ ಬೀಳಲಿದೆ. ಹಾಗಾದರೆ ಶುಕ್ರವಾರ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡೋಣ

ಶುಕ್ರವಾರದಂದು ಈ ತಪ್ಪುಗಳನ್ನು ಮಾಡಬೇಡಿ
ಶುಕ್ರವಾರದಂದು ಮಾಂಸಾಹಾರ ಮತ್ತು ಮದ್ಯ ಸೇವನೆಯನ್ನು ಮಾಡಬಾರದು ಎಂದು ಪರಿಗಣಿಸಲಾಗಿದೆ. ಶುಕ್ರವಾರ ಮಾಂಸ ಮತ್ತು ಮದ್ಯ ಸೇವಿಸಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಮತ್ತು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ.
ಶುಕ್ರವಾರ ಯಾರೊಂದಿಗೂ ಮಾತನಾಡುವಾಗ ನಿಂದನೀಯ ಪದಗಳನ್ನು ಬಳಸಬಾರದಂತೆ. ಈ ದಿನ ಯಾರಾದರೂ ಜಗಳವಾಡಿದರೆ ಅಥವಾ ನಿಂದಿಸಿದರೆ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಎಂದು ನಂಬಲಾಗಿದೆ.
ಶುಕ್ರವಾರದಂದು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಆದರೆ ಈ ದಿನ ಕೆಲವು ವಸ್ತುಗಳನ್ನು ದಾನ ಮಾಡಬಾರದು. ಈ ದಿನ ಬೆಳ್ಳಿ ಮತ್ತು ಸಕ್ಕರೆಯನ್ನು ದಾನ ಮಾಡುವುದು ಅಶುಭ. ಈ ವಸ್ತುಗಳನ್ನು ದಾನ ಮಾಡುವುದರಿಂದ ಶುಕ್ರ ಗ್ರಹ ದುರ್ಬಲವಾಗುತ್ತದೆ ಎಂದು ನಂಬಲಾಗಿದೆ. ಈ ಕಾರಣದಿಂದಾಗಿ, ಒಬ್ಬ ವ್ಯಕ್ತಿಯು ಜೀವನದಲ್ಲಿ ಭೌತಿಕ ಸಂತೋಷದಿಂದ ವಂಚಿತನಾಗುತ್ತಾನೆ ಎಂದು ನಂಬಲಾಗಿದೆ.
ಇದಲ್ಲದೇ ಈ ದಿನದಂದು ಯಾರೊಂದಿಗೂ ಹಣದ ವ್ಯವಹಾರ ಮಾಡಬಾರದು. ಶುಕ್ರವಾರದಂದು ಯಾರೊಬ್ಬರಿಂದ ಸಾಲ ಪಡೆಯುವುದು ಅಥವಾ ಹಣವನ್ನು ನೀಡುವುದು ಅಶುಭವೆಂದು ಪರಿಗಣಿಸಲಾಗಿದೆ. ಶುಕ್ರವಾರದಂದು ಪೂಜೆ ಮತ್ತು ಅಡಿಗೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಾರದು. ಈ ರೀತಿ ಮಾಡುವುದರಿಂದ ಮನೆಗೆ ಐಶ್ವರ್ಯ ಬರುವುದಿಲ್ಲ ಎಂದು ಶಾಸ್ತ್ರ ಹೇಳುತ್ತದೆ.
ಈ ದಿನ ಕೊಳಕು ಮತ್ತು ಹರಿದ ಬಟ್ಟೆಗಳನ್ನು ಧರಿಸಿ ದೇವರಿಗೆ ಪೂಜೆ ಮಾಡಬಾರದು. ಕೊಳಕು ಮತ್ತು ಹರಿದ ಬಟ್ಟೆಗಳನ್ನು ಧರಿಸುವುದು ರಾಹು ನಿಮ್ಮನ್ನು ದುರ್ಬಲಗೊಳಿಸುತ್ತಾನೆ ಎಂದು ನಂಬಲಾಗಿದೆ.
ಶುಕ್ರವಾರ ಯಾವ ಮಂತ್ರ ಪಠಿಸಬೇಕು
ಶುಕ್ರವಾರ ರಾತ್ರಿ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ ಲಕ್ಷ್ಮಿ ದೇವಿಯನ್ನು ಪೂಜಿಸಿ. ಪೂಜೆಯಲ್ಲಿ 'ಐಂ ಹ್ರೀಂ ಶ್ರೀಂ ಅಷ್ಟಲಕ್ಷ್ಮೀಯ್ಯಾ ಹ್ರೀಂ ಸಿದ್ಧಯೇ ಮಾಂ ಗೃಹೇ ಆಗಚ್ಛಗಚ್ಛ ನಮಃ ಸ್ವಾಹಾ' ಎಂಬ ಮಂತ್ರವನ್ನು 108 ಬಾರಿ ಜಪಿಸಿ. ಶುಕ್ರವಾರ ರಾತ್ರಿ ಶ್ರೀ ಲಕ್ಷ್ಮೀಸೂಕ್ತವನ್ನೂ ಪಠಿಸಿ.
ಶುಕ್ರವಾರ ಮಧ್ಯರಾತ್ರಿ, ಲಕ್ಷ್ಮಿ ದೇವಿಯ ಎಂಟನೇ ರೂಪವಾದ ಅಷ್ಟಲಕ್ಷ್ಮಿಯನ್ನು ಪೂಜಿಸಿ, ಶ್ರೀ ಯಂತ್ರವನ್ನು ಇರಿಸಿ, ತುಪ್ಪದ 8 ದೀಪಗಳನ್ನು ಬೆಳಗಿಸಿ, ಗುಲಾಬಿ ಪರಿಮಳಯುಕ್ತ ಧೂಪವನ್ನು ಹತ್ತಿಸಿ ಸಿಹಿತಿಂಡಿಗಳನ್ನು ಅರ್ಪಿಸಿ. ಕನಕಧಾರಾ ಸ್ತೋತ್ರವನ್ನೂ ಪಠಿಸಿ. ಪೂಜೆಯ ಸಮಯದಲ್ಲಿ ದೇವತೆಗೆ ಗುಲಾಬಿ ಹೂವುಗಳನ್ನು ಅರ್ಪಿಸಿ.
ಶುಕ್ರವಾರ ರಾತ್ರಿ ಮಾತೃ ದೇವಿಯ ಧ್ಯಾನ ಮಾಡಿ, ಪೂಜೆ ಮತ್ತು ಧ್ಯಾನದಲ್ಲಿ ಯಾವುದೇ ರೀತಿಯ ಅಡಚಣೆಯಾಗದಂತೆ ವಿಶೇಷ ಕಾಳಜಿ ವಹಿಸಿ. ಇಲ್ಲದಿದ್ದರೆ ಪೂಜೆಗೆ ಅಡ್ಡಿಯಾಗಬಹುದು. ಲಕ್ಷ್ಮಿ ದೇವಿಯನ್ನು ಪೂಜಿಸುವುದರ ಜೊತೆಗೆ, ಶುಕ್ರವಾರ ರಾತ್ರಿ ಭಗವಾನ್ ವಿಷ್ಣುವನ್ನು ಸಹ ಆರಾಧಿಸಿ. ಹೀಗೆ ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಈ ದಿನ, ವಿಷ್ಣುವಿಗೆ ದಕ್ಷಿಣಾವರ್ತಿ ಶಂಖದಿಂದ ಅಭಿಷೇಕ ಮಾಡಿ. ಈ ಪರಿಹಾರಗಳನ್ನು ಮಾಡುವುದರಿಂದ ನೀವು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತೀರಿ.



Click it and Unblock the Notifications
