Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಶುಕ್ರವಾರ ಈ ಪರಿಹಾರ ಮಾಡಿದರೆ ಆರ್ಥಿಕ ಸಂಕಷ್ಟ ದೂರಾಗುವುದು
ಶುಕ್ರವಾರ ಲಕ್ಷ್ಮಿ ಪೂಜೆಗೆ ಶ್ರೇಷ್ಠವಾದ ದಿನ, ಈ ದಿನ ಲಕ್ಷ್ಮಿಯನ್ನು ಆರಾಧಿಸಿದರೆ ನಮ್ಮೆಲ್ಲಾ ಆರ್ಥಿಕ ಸಂಕಷ್ಟ ದೂರಾಗಿ ಸಂಪತ್ತು ಹೆಚ್ಚಾಗುವುದು, ಶುಕ್ರವಾರದಂದು ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಲಕ್ಷ್ಮಿ ಆರಾಧನೆಗೆ ಶುಕ್ರವಾರ ಶ್ರೇಷ್ಠವಾದ ದಿನ
ವಾರದ ಏಳು ದಿನಗಳಲ್ಲಿ ಶುಕ್ರವಾರ ಲಕ್ಷ್ಮಿ ದೇವಿಗೆ ಮೀಸಲಾದ ದಿನ. ಈ ದಿನ ಲಕ್ಷ್ಮಿ ಆರಾಧನೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗುವುದು, ಲಕ್ಷ್ಮಿ ಕೃಪೆಗೆ ಪಾತ್ರರಾಗಬೇಕೆಂದರೆ ಮನೆಯನ್ನು ಶುದ್ಧವಾಗಿ ಇಡಬೇಕು, ಮನೆಯಲ್ಲಿ ಗಲಾಟೆವಿರಬಹುದು, ಮನೆಯಲ್ಲಿ ಪಾಸಿಟಿವಿಟಿ ಹೆಚ್ಚಿರಬೇಕು, ಹೀಗೆ ಮಾಡುವುದರಿಂದ ಆ ಮನೆಯತ್ತ ಲಕ್ಷ್ಮಿ ಆಕರ್ಷಿತಳಾಗುತ್ತಾಳೆ.
ಈ ದಿನ ಲಕ್ಷ್ಮಿಯನ್ನು ಹೀಗೆ ಆರಾಧಿಸಿದರೆ ಒಳ್ಳೆಯದು
ತಾವರೆ ಹೂವು ಅರ್ಪಿಸಿ ಲಕ್ಷ್ಮಿ ಪೂಜೆ
ಲಕ್ಷ್ಮಿ ಪೂಜೆಯಂದು ನೀವು ಕಮಲದ ಹೂವು ಅರ್ಪಿಸಿ, ತುಪ್ಪದ ದೀಪ ಹಚ್ಚಿ ಪೂಜೆಯನ್ನು ಮಾಡಿ. ಹೀಗೆ ಮಾಡುವುದರಿಂದ ಲಕ್ಷ್ಮಿಗೆ ಹೊಸ ಆದಾಯದ ಅವಕಾಶಗಳು ದೊರೆಯುವುದು.
ಶಂಖ ನಾದ
ಸಂಜೆ ಹೊತ್ತು ಲಕ್ಷ್ಮಿ ಪೂಜೆ ಸಮಯದಲ್ಲಿ ಶಂಖವನ್ನು ಊದಿ, ಈ ಶಂಖದ ಶಬ್ದದಿಂದ ಮನೆಯಲ್ಲಿ ಮೊಳಗಿದಾಗ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ.
ಈ ದಿನ ಹಸುವಿಗೆ ಮೇವು ತಿನ್ನಿಸಿ
ಶುಕ್ರವಾರ ಲಕ್ಷ್ಮಿಯನ್ನು ಪೂಜಿಸಿದ ಬಳಿಕ ಪ್ರಸಾದವನ್ನು ಹಸುವಿಗೆ ತಿನ್ನಿಸಿ, ಇದರಿಂದ ಆರ್ಥಿಕ ತೊಂದರೆ ದೂರಾಗುವುದು.
ಈ ದಿನ ಕುಬೇರ ಯಂತ್ರ ಸ್ಥಾಪಿಸಿ
ಶುಕ್ರವಾರದಂದು ಲಕ್ಷ್ಮಿಯನ್ನು ಪೂಜಿಸಿ ಕುಬೇರ ಯಂತ್ರ ಸ್ಥಾಪಿಸಿ, ಈ ಯಂತ್ರವನ್ನು ಪ್ರತಿ ಶುಕ್ರವಾರ ಆರಾಧಿಸಿ, ಇದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗುವುದು.
ಶುಕ್ರವಾರ ನೀವು ಲಕ್ಷ್ಮಿಯನ್ನು ಆರಾಧಿಸುವುದು ಮಾತ್ರವಲ್ಲ, ಕೆಲವೊಂದು ಕಾರ್ಯ ಮಾಡಬಾರದು ಎಂದು ಹೇಳಲಾಗುವುದು.
ಲಕ್ಷ್ಮಿ ಮಂತ್ರ ಪಠಿಸಿ
ಲಕ್ಷ್ಮಿಬೀಜ ಮಂತ್ರ 1
ಓಂ ಹ್ರೀಮ್ ಶ್ರೀಮ್ ಲಕ್ಷ್ಮೀಭ್ಯೋ ನಮಃ
ಲಕ್ಷ್ಮಿ ಬೀಜ ಮಂತ್ರ 2
ಓಂ ಶ್ರಿಂಗ್ ಶ್ರೀಯೆ ನಮಃ
ಲಕ್ಷ್ಮಿ ಗಾಯತ್ರಿ ಮಂತ್ರ
ಓಂ ಶ್ರೀ ಮಹಾಲಕ್ಷ್ಮೀಯೇ ಚ ವಿದಾಮಹೇ ವಿಷ್ಣು ಪತ್ನಿಯೇ ಚ ದೀಮಹಿ ತನ್ನೊ ಲಕ್ಷ್ಮೀ ಪ್ರಚೋದಯಾತ್ ಓಂ
ಮಹಾಲಕ್ಷ್ಮಿ ಮಂತ್ರ
ಓಂ ಸರ್ವಬಾಧಾ ವಿನಿರ್ಮುಕ್ತೋ, ಧನ್ ಧಾನ್ಯ್ ಸು ತನ್ವಿತಾಃ ಮನುಷ್ಯೊ ಮತಪ್ರಸಾದಿನ್ ಭವಿಷ್ಯತಿ ನ ಸನ್ಷ್ಯಾ ಓಂ
ಜ್ಯೇಷ್ಠ ಲಕ್ಷ್ಮಿ ಮಂತ್ರ
ಓಂ ಅಲಿಂಗ್ ಹ್ರಿಂಗ್ ಶ್ರಿಂಗ್ ಜ್ಯೇಷ್ಠ ಲಕ್ಷ್ಮಿ ಸ್ವಯಂಭೂವೆ ಹ್ರಿಂಗ್ ಜ್ಯೇಷ್ಟಾಯೀ ನಮಃ
ಶ್ರೀ ಲಕ್ಷ್ಮಿ ನರಸಿಂಗ ಮಂತ್ರ
ಓಂ ಹ್ರಿಂಗ್ ಕ್ಷರಂಗ್ ಶ್ರಿಂಗ್ ಲಕ್ಷ್ಮಿ ನರಸಿಂಹಾಯಾ ನಮಃ
ಓಂ ಕ್ಲಿಂಗ್ ಕ್ಷರಂಗ್ ಶ್ರಿಂಗ್ ಲಕ್ಷ್ಮಿ ದೇವಾಯೀ ನಮಃ
ಏಕಾದಶಾಕ್ಷರ್ ಸಿದ್ಧ ಲಕ್ಷ್ಮಿ ಮಂತ್ರ
ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ಶ್ರಿಂಗ್ ಸಿದ್ಧದಾ ಲಕ್ಷ್ಮೀಯೇ ನಮಃ
ದ್ವದಶಾಕ್ಷರ್ ಮಹಾಲಕ್ಷ್ಮಿ ಮಂತ್ರ
ಓಮ್ ಅಲಿಂಗ್ ಹ್ರಿಂಗ್ ಶ್ರಿಂಗ್ ಕ್ಲಿಂಗ್ ಸಾಹು ಜಗತ್ಪ್ರಸೂತಾಯಿ ನಮಃ
ಈ ಮಂತ್ರಗಳನ್ನು ಪಠಿಸುವುದರಿಂದ ಸಂಪತ್ತು ಹೆಚ್ಚಾಗಲಿದೆ.
ಶುಕ್ರವಾರದಂದು ಈ 5 ತಪ್ಪುಗಳನ್ನು ಮಾಡಬೇಡಿ
- ಧರ್ಮಗ್ರಂಥಗಳ ಪ್ರಕಾರ, ಈ ದಿನ ಕೊಳಕು ಬಟ್ಟೆಗಳನ್ನು ಧರಿಸಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ , ಧರಿದ್ರ ಹೆಚ್ಚಾಗುವುದು.
- ಮನೆಯನ್ನು ಸ್ವಚ್ಛವಾಗಿಡಬೇಕು, ಕೊಳೆ, ಕಸಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ.
- ಶುಕ್ರವಾರದಂದು ಹಣ, ಆಸ್ತಿಗೆ ಸಂಬಂಧಿಸಿದ ಕೆಲಸ ಮಾಡುವುದನ್ನು ತಪ್ಪಿಸಬೇಕು. ಶಾಸ್ತ್ರಗಳ ಪ್ರಕಾರ, ಈ ದಿನದಂದು ಆಸ್ತಿಯನ್ನು ಖರೀದಿಸುವುದು ಅಥವಾ ಮಾರುವುದು ಶುಭವಲ್ಲ.
- ಈ ದಿನದಂದು ಹಣದ ಕೊಡುವುದು, ಸಾಲ ಪಡೆಯುವುದು ಮಾಡಬಾರದು.
- ಶಾಸ್ತ್ರಗಳ ಪ್ರಕಾರ ಶುಕ್ರವಾರದಂದು ಸಕ್ಕರೆ ಸಾಲ ನೀಡಬಾರದು ಎಂದು ಹೇಳಲಾಗುವುದು.



Click it and Unblock the Notifications
