Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಡವರ ಜೀವನಾಡಿ ಉಚಿತ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ..! ಎಲ್ಲಿದೆ ಗೊತ್ತಾ?
ಭಾರತ ಮಾತ್ರವಲ್ಲ ಇಡೀ ವಿಶ್ವವನ್ನೇ ಕಾಡುತ್ತಿರುವ ರೋಗಗಳಲ್ಲಿ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ಇಳಿ ವಯಸ್ಸಿನಲ್ಲೂ ಕ್ಯಾನ್ಸರ್ ಮಾರಣಾಂತಿಕವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನು ಭಾರತ ಕ್ಯಾನ್ಸರ್ ರಾಜಧಾನಿಯಾಗುತ್ತಿದೆ ಎಂದು ಇತ್ತೀಚಿಗೆ ಅಧ್ಯಯನವೊಂದು ತಿಳಿಸಿದ್ದು, ಈ ಆತಂಕ ಹೆಚ್ಚಲು ಕಾರಣವಾಗಿದೆ.
ಇನ್ನೆರಡು ವರ್ಷದಲ್ಲಿ ಭಾರತ ಕ್ಯಾನ್ಸರ್ ರೋಗಿಗಳಿಗೆ ತಾಣವಾಗಲಿದೆಯಂತೆ, ಅಮೆರಿಕ ಹಾಗೂ ಇಂಗ್ಲೆಂಡ್ ದೇಶವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಲಿದೆ. ಅದರಲ್ಲೂ ಯುವ ವಯಸ್ಕರಲ್ಲಿ ಕ್ಯಾನ್ಸರ್ ಹೆಚ್ಚಾಗಲಿದೆ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ. ಇದಕ್ಕೆ ಹತ್ತು ಹಲವು ಕಾರಣವನ್ನೂ ತಿಳಿಸಲಾಗಿದೆ.

ಅದರಲ್ಲಿ ಮುಖ್ಯವಾಗಿ ಸ್ಕ್ಯಾನಿಂಗ್‌ಗೆ ಒಳಗಾಗುವವರ ಸಂಖ್ಯೆ ತೀರಾ ಕಡಿಮೆಯಿದ್ದು, ಇದು ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆ ಮಾಡುವುದು ಕಷ್ಟವಾಗುತ್ತಿದೆ. ಇಲ್ಲವೆ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗುವುದು ತಡವಾಗುತ್ತಿರುವುದು ಸಾವಿನ ಪ್ರಮಾಣ ಏರಿಕೆಗೆ ಕಾರಣವಾಗಿದೆ.
ಇನ್ನೊಂದು ಅಂಶ ಎಂದರೆ ಕ್ಯಾನ್ಸರ್ ಚಿಕಿತ್ಸೆ ಅತ್ಯಂತ ದುಬಾರಿಯಾಗಿರುವುದು, ಬಡವರು ಹಾಗೂ ಮಧ್ಯಮ ಕುಟುಂಬದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡರೆ ಅದರ ಚಿಕಿತ್ಸೆಗೆ ಹೆಚ್ಚು ವೆಚ್ಚವಾಗುತ್ತದೆ. ಹೀಗಾಗಿ ಭಾರತದಲ್ಲಿ ಸಾವಿನ ಪ್ರಮಾಣ ಏರಿಕೆಗೆ ಕಾರಣ ಎನ್ನಲಾಗಿದೆ.
ಆದ್ರೆ ಇಲ್ಲೊಂದು ಕಡೆ ಉಚಿತವಾಗಿ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲಾಗುತ್ತದೆ. ಹೌದು ಅಚ್ಚರಿ ಆದರೂ ಇದು ಸತ್ಯ ಕ್ಯಾನ್ಸರ್ ಚಿಕಿತ್ಸೆಯ ವೆಚ್ಚ ಭರಿಸಲಾಗದೆ ಇರುವವರಿಗೆ ಈ ಕೇಂದ್ರದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಈ ಕುರಿತು ಉದ್ಯಮಿ ಆನಂದ್ ಮಹೀಂದ್ರಾ ಮಾಹಿತಿ ಹಂಚಿಕೊಂಡಿದ್ದಾರೆ.
ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಒಡಿಶಾದ ಕ್ಯಾನ್ಸರ್ ಕೇಂದ್ರದ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಲು ಟ್ವಿಟರ್‌ನಲ್ಲಿ (ಎಕ್ಸ್) ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ರೋಗದ ಕೊನೆಯ ಹಂತಗಳಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತದೆ.
ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಅರುಣ್ ಬೋತ್ರಾ ಅವರ ಪೋಸ್ಟ್ ಅನ್ನು ಹಂಚಿಕೊಳ್ಳುವಾಗ ಮಹೀಂದ್ರಾ ಬರೆದಿದ್ದಾರೆ, '' ಎಂತಹ ಮಾನವೀಯ ಮತ್ತು ಉದಾರ ಯೋಜನೆ. ಸುಬ್ರೋತೋ, ನಿಮ್ಮ ರಾಜ್ಯ ಮತ್ತು ನಮ್ಮ ದೇಶವನ್ನು ಉತ್ತಮ ಸ್ಥಳವನ್ನಾಗಿ ಮಾಡಿದ್ದಕ್ಕಾಗಿ ನಾನು ನಿಮಗೆ ಮತ್ತು ಸುಸ್ಮಿತಾ ಅವರಿಗೆ ವಂದಿಸುತ್ತೇನೆ. ಅಂತಹ ಕಾಳಜಿಯ ಅಗತ್ಯವಿರುವ ಎಲ್ಲರಿಗೂ ನಾವು ಈ ಬಗ್ಗೆ ಸುದ್ದಿಯನ್ನು ಹಂಚಿಕೊಳ್ಳಬೇಕು" ಎಂದಿದ್ದಾರೆ.
ಉಚಿತ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಎಲ್ಲಿದೆ?
ಬೋತ್ರಾ ಅವರು ಭುವನೇಶ್ವರದಲ್ಲಿರುವ ಬಾಗ್ಚಿ ಕರುಣಾಶ್ರಯ ಉಪಶಾಮಕ ಆರೈಕೆ ಕೇಂದ್ರದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ, ಇದು ಈ ವಾರದ ಆರಂಭದಲ್ಲಿ ಒಳರೋಗಿ ಸೇವೆಗಳನ್ನು ಪ್ರಾರಂಭಿಸಿತ್ತು. "ಕ್ಯಾನ್ಸರ್‌ನ ಅಂತಿಮ ಹಂತವು ರೋಗಿ ಮತ್ತು ಕುಟುಂಬ ಇಬ್ಬರಿಗೂ ಸಾಮಾನ್ಯವಾಗಿ ಅತ್ಯಂತ ಕಷ್ಟಕರವಾಗಿರುತ್ತದೆ. ಒಬ್ಬನು ಮಾಡಬಹುದಾದ ಅತ್ಯುತ್ತಮವಾದ ಕೆಲಸವೆಂದರೆ ದುಃಖವನ್ನು ನಿವಾರಿಸುವುದು ಮತ್ತು ಅಂತಿಮ ವಾರಗಳು ಅಥವಾ ತಿಂಗಳುಗಳಲ್ಲಿ ಜೀವನದ ಗುಣಮಟ್ಟವನ್ನು ಒದಗಿಸುವುದು.. ಹೀಗಾಗಿ ರೋಗಿಗೆ ಜೀವನದ ಅಂತ್ಯದ ಆರೈಕೆ ಮತ್ತು ವಿಶ್ರಾಂತಿ ಆರೈಕೆ ಅಗತ್ಯಗಳ ನೀಡುತ್ತೇವೆ" ಅವರು ಬರೆದಿದ್ದಾರೆ.
ನೆಟ್ಟಿಗರಿಂದ ಭಾರೀ ಮೆಚ್ಚುಗೆ
ಈ ಪೋಸ್ಟ್ ಹಂಚಿಕೊಂಡಾಗಿನಿಂದ ನೆಟ್ಟಿಗರು ಶೇರ್ ಮಾಡಿಕೊಂಡಿರುವುದಲ್ಲದೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಯಾನ್ಸರ್ ರೋಗಿಗಳು ಹಾಗೂ ಅವರ ಕುಟುಂಬಕ್ಕೆ ಇದೊಂದು ಆತ್ಮಸ್ಥೈರ್ಯ ತುಂಬುವ ಸಾಧನವಾಗಲಿದೆ. ಇಂತಹ ಕಾರ್ಯಗಳು ಇನ್ನಷ್ಟು ನಡೆದರೆ ಮಾತ್ರ ಭಾರತದಿಂದ ಕ್ಯಾನ್ಸರ್ ಪಿಡುಗು ಮರೆಯಾಗಲು ಶ್ರಮಿಸಬಹುದು ಎಂದು ಆಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಕೇಂದ್ರಕ್ಕೆ ತೆರಳಲು ಯಾವೆಲ್ಲಾ ಸಿದ್ಧತೆ ಬೇಕು ಎಂಬ ಕುರಿತು ಮತ್ತಷ್ಟು ಮಾಹಿತಿ ಹಾಗೂ ಇನ್ನಷ್ಟು ಪ್ರಚಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಹಲವರಿಗೆ ಈ ರೀತಿಯ ಸೌಲಭ್ಯಗಳು ಇರುವುದು ತಿಳಿಯುವುದೇ ಇಲ್ಲ. ಇಂತಹ ಮಾಹಿತಿಗಳು ಹೊರಬಂದರೆ ಒಂದಿಷ್ಟು ಕುಟುಂಬಗಳಿಗೆ ನೆರವಾಗಲಿದೆ.



Click it and Unblock the Notifications


