Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ದೇಶದ ಈ ಎರಡೇ ಹಳ್ಳಿಯಲ್ಲಿ ದೀಪಾವಳಿ ಸಂಭ್ರಮವಿಲ್ಲ: ದಶಕದ ಶಾಪ, ಬೆಳಕೆಂದರೆ ಸೂತಕ!!
ದೀಪಾವಳಿ ಅಂದ್ರೆ ಬೆಳಕಿನ ಹಬ್ಬ. ಬದುಕಿನ ಕತ್ತಲೆಯನ್ನು ಕಳೆದು ಬೆಳಕು ತರುವಂತಹ ಹಬ್ಬ ಎಂದು ಹೇಳಲಾಗುತ್ತದೆ. ದೀಪಾವಳಿಯು ಸಂತೋಷ, ದೀಪಾವಳಿ ಎಂದರೆ ವಿಜಯ ಮತ್ತು ಸಾಮರಸ್ಯವನ್ನು ಗುರುತಿಸಲು ಸ್ಮರಿಸುವ ಹಬ್ಬವಾಗಿದೆ. ಇದು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಇಡೀ ದೇಶದಾದ್ಯಂತ ಹಾಗೆ ವಾರಗಳಿಗೂ ಹೆಚ್ಚು ಕಾಲ ಆಚರಿಸುವುದು ನೋಡಬಹುದು.

ಉತ್ತರ ಭಾರತದಲ್ಲಿ ಇದನ್ನು ರಾಮನ ವಿಜಯ ಎಂಬುದಾಗಿ ಕರೆಯಲಾಗಿದೆ. ಈ ದಿನದಂದು ಭಗವಾನ್ ರಾಮನು 14 ವರ್ಷಗಳ ವನವಾಸದ ನಂತರ ಅಯೋಧ್ಯೆಗೆ ಮರಳಿದನು ಎಂದು ನಂಬಲಾಗಿದೆ. ಹಾಗೆ ದಕ್ಷಿಣ ಭಾರತದಲ್ಲಿ ವಿಷ್ಣು, ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಪುರಾಣ ಕಥೆಗಳ ನೋಡಬಹುದು.
ದೀಪಾವಳಿಯ ರಾತ್ರಿ ಲಕ್ಷ್ಮಿ ದೇವಿಯು ಜನರ ಮನೆಗೆ ಭೇಟಿ ನೀಡಿ ಆಶೀರ್ವದಿಸುತ್ತಾಳೆ ಎಂಬುದು ನಂಬಿಕೆ. ಆದ್ದರಿಂದ ಭಕ್ತರು ಹಬ್ಬಕ್ಕಾಗಿ ತಮ್ಮ ಮನೆಗಳನ್ನು ದೀಪಗಳಿಂದ ಅಲಂಕರಿಸುತ್ತಾರೆ. ರಂಗೋಲಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಇನ್ನು ದೀಪಾವಳಿಯಲ್ಲಿ ಇಡೀ ಊರಿಗೆ ಊರೆ ಸಂಭ್ರಮದಿಂದ ಹಬ್ಬ ಆಚರಿಸುವುದು ನೋಡಬಹುದು.
ದೀಪಾವಳಿಯಲ್ಲಿ ಇಡೀ ದೇಶವೇ ಸಂಭಮ್ರದಲ್ಲಿ ಮುಳುಗಲಿದೆ. ಮಕ್ಕಳು ಚಿಕ್ಕಪುಟ್ಟ ಪಟಾಕಿಗಳ ಸಿಡಿಸುವುದು, ಹೊಸ ಬಟ್ಟೆ ತೊಡುವುದು, ಸಿಹಿ ತಿಂಡಿ ಸವಿಯುವುದು ಸಾಮಾನ್ಯ. ಆದ್ರೆ ಭಾರತದ ಕೆಲ ಭಾಗದಲ್ಲಿ ದೀಪಾವಳಿ ಅಂದ್ರೆ ಸೂತನ. ದೀಪಾವಳಿ ಅಂದರೆ ಭಯ, ದೀಪಾವಳಿ ಅಂದ್ರೆ ಅದೇನೋ ಸಂಕಟ. ಹೌದು ಸಂಭ್ರಮದ ಹಬ್ಬವಾದ ದೀಪಾವಳಿ ಈ ಜನರಿಗೆ ಮಾತ್ರ ಯಾರ ಬಳಿ ಹೇಳಲಾಗದ ದುಖಃ, ಮರೆಯಲಾಗದ ಗಾಯದಂತೆ.
ಭಾರತದ ಈ ಭಾಗಗಳಲ್ಲಿ ದೀಪಾವಳಿ ಸಂಭ್ರಮ ತರುವ ಬದಲಾಗಿ ದೀಪಾವಳಿ ನೋವು ತರುತ್ತದೆ. ಹಾಗಾದ್ರೆ ಅವರಿಗೆ ದೀಪಾವಳಿ ಸಂಭ್ರಮ ಏಕಿಲ್ಲಾ? ಆ ಭಾಗದಲ್ಲಿ ದೀಪಾವಳಿ ಏಕೆ ದೊಡ್ಡ ಆಘಾತ ಉಂಟು ಮಾಡುತ್ತೆ ಅನ್ನೋದನ್ನು ನೋಡೋಣ.
ಮೇಲುಕೋಟೆಯಲ್ಲಿ ಕಹಿ ನೆನಪಿನ ದೀಪಾವಳಿ
ಮೈಸೂರಿನಿಂದ ಕೆಲವೇ ಕಿ.ಮೀ ದೂರದಲ್ಲಿರುವ ಹಾಗೆ ಮಂಡ್ಯ ಜಿಲ್ಲೆಯ ಪಾಂಡವಪುರದ ಈ ಮೇಲುಕೋಟೆ ದೇವಾಲಯದ ಕಾರಣಕ್ಕೆ ಪ್ರಸಿದ್ಧಿ ಪಡೆದಿದೆ. ಮೇಲುಕೋಟೆ ಚೆಲುವರಾಯಸ್ವಾಮಿ ದೇವಸ್ಥಾನ ಪ್ರತಿ ವರ್ಷ ಲಕ್ಷಾಂತರ ಮಂದಿ ಪ್ರವಾಸಿಗರು, ಭಕ್ತರು ಆಗಮಿಸುವ ಸ್ಥಳ. ಆದ್ರೆ ಈ ಊರಿನ ದೀಪಾವಳಿ ಕಹಿ ನೆನಪುಗಳ ತನ್ನಲ್ಲಿಟ್ಟುಕೊಂಡಿದೆ.
ದೀಪಾವಳಿ ದಿನದಂದೇ ಅಲ್ಲಿ ದೊಡ್ಡ ನರಮೇಧವೇ ನಡೆದಿತ್ತು. ಇತಿಹಾಸದ ಪುಟದಲ್ಲಿ ದಾಖಲಾದ ಈ ಘಟನೆ ಅಲ್ಲಿನ ಜನರಿಗೆ ಇಂದಿಗೂ ಕಾಡುವ ಹಾಗೆ ಕಣ್ಣ ಮುಂದೆ ಕಟ್ಟಿರುವ ಕಹಿ ನೆನಪುಗಳ ಹೊಂದಿದೆ. ಮಂಡ್ಯಂ ಎಂಬ ಸಮುದಾಯ ಈ ಪ್ರದೇಶದಲ್ಲಿ ನೆಲೆಸಿತ್ತು. ಇದು ಇದು ಒಡೆಯರ್ ಆಡಳಿತಕ್ಕೆ ಒಳಪಟ್ಟಿದ್ದ ಪ್ರದೇಶ. ಹಾಗೆ ಒಡೆಯರ್ ಅವರಿಗೆ ಪ್ರತಿಯಾಗಿ ಹೈದರಾಲಿ ಸಹ ಆಡಳಿತ ನಡೆಸುತ್ತಿದ್ದ ಈ ಇಬ್ಬರು ರಾಜರ ನಡುವೆ ಯಾವಾಗಲು ಮುಸುಕಿನ ಯುದ್ಧ ನಡೆಯುತ್ತಲೇ ಇತ್ತು.
ಒಡೆಯರ್ ಅಂದಿನ ಈಸ್ಟ್ ಇಂಡಿಯಾ ಕಂಪನಿಯ ಸಹಾಯದೊಂದಿಗೆ ಹೈದರಾಲಿಯ ಹಿಮ್ಮಟ್ಟಿಸಲು ಮುಂದಾದರು. ಹಾಗೆ ಹೈದರಾಲಿಯು ಈ ಯೋಜನೆಯ ತಂತ್ರ ತಿಳಿದುಕೊಂಡು ಈ ಭಾಗದಲ್ಲಿ ನೆಲೆಸಿದ್ದ ಇಬ್ಬರು ಸಹೋದರರನ್ನು ಸೆರೆ ಹಿಡಿದನು. ಇವರು ಒಡೆಯರ್ ಸೇನೆಗೆ ನಿಷ್ಟರಾಗಿದ್ದರು. ಹಾಗೆ ಹೈದರಾಲಿಗೆ ಹೆದರಿ ಉಳಿದ ಮಂದಿ ಮದ್ರಾಸ್ ಪ್ರೆಸಿಡೆನ್ಸಿಗೆ ಪರಾರಿಯಾದರು. ಹಾಗೆ ಹೈದರಾಲಿ 1873ರಲ್ಲಿ ನಿಧನರಾದರು.
ಹೈದರಾಲಿ ಬಳಿಕ ಟಿಪ್ಪು ಸುಲ್ತಾನ್ ಈ ಭಾಗದ ಆಡಳಿತ ನಡೆಸುತ್ತಿದ್ದ. ಟಿಪ್ಪು ಕುರಿತಾಗಿ ಹಾಗೆ ಸೇನೆಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದವರ ವಿರುದ್ಧ ತಿರುಗಿ ಬೀಳುತ್ತಿದ್ದ. ಹಾಗೆ ಇಡೀ ಮಂಡ್ಯಂ ಸಮುದಾಯವನ್ನು ಆತ ನಿರ್ನಾಮ ಮಾಡಬೇಕು ಎಂದು ಬಯಸಿದ್ದ. ಇದಕ್ಕೆ ಕಾಲ ಕೂಡಿ ಬರಲಿ ಎಂದು ಕಾಯುತ್ತಿದ್ದ. ಈ ಸಮಯದಲ್ಲಿ ಮೇಲುಕೋಟೆ ಭಾಗದಲ್ಲಿದ್ದ ಮಂಡ್ಯಂ ಸಮುದಾಯ ದೀಪಾವಳಿ ಆಚರಿಸುವ ಕುರಿತು ಸಭೆ ಕರೆದಿದ್ದರು, ಈ ಮಾಹಿತಿ ಟಿಪ್ಪು ಸುಲ್ತಾನನಿಗೆ ತಿಳಿದಿತ್ತು.
ಟಿಪ್ಪು ಸುಲ್ತಾನ್ ಶ್ರೀರಂಗಪಟ್ಟಣದ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನೆರೆದಿದ್ದ ಮಂಡ್ಯಂ ಸಮುದಾಯದ ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಲು ತನ್ನ ಸೈನ್ಯವನ್ನು ಕಳುಹಿಸಿದನು. ದೀಪಾವಳಿಯನ್ನು ಆಚರಿಸಲು ಅಲ್ಲಿ ಜನರ ದೊಡ್ಡ ಸಭೆ ಸೇರಿತ್ತು. ಟಿಪ್ಪು ಸುಲ್ತಾನನ ಸೈನ್ಯವು ಅಲ್ಲಿ ನೆರೆದಿದ್ದ ಎಲ್ಲ ಜನರನ್ನು ಹತ್ಯೆ ಮಾಡಿತು, ಅವರಲ್ಲಿ ಹೆಚ್ಚಿನವರು ಮಂಡ್ಯಂ ಸಮುದಾಯದವರು. ಹಾಗೆ ಊರಿನ ಪ್ರಮುಖರನ್ನು ಆತ ನೇಣು ಹಾಕಿದ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಈ ಭಾಗದಲ್ಲಿ ದೀಪಾವಳಿ ಸಂಭ್ರಮ ತರುವ ಬದಲು ಅವರ ಹಿರಿಯರಿಗೆ ಗೌರವ ಸೂಚಿಸಲು ತ್ಯಾಗವನ್ನು ನೆನೆಯಲು ಸಹ ಆಚರಿಸುತ್ತಾರೆ.
ಹಿಮಾಚಲ ಪ್ರದೇಶದ ಹಮೀರ್‌ಪುರ್‌ನಲ್ಲೂ ದೀಪಾವಳಿಗೆ ಇಲ್ಲ ಸಂಭ್ರಮ
ಹಿಮಾಚಲ ಪ್ರದೇಶದ ಈ ಊರಿನಲ್ಲಿ ದೀಪಾವಳಿ ಸಂಭ್ರಮ ಇಲ್ಲ. ಹಮೀರ್‌ಪುರ ಜಿಲ್ಲೆಯ ಒಂದು ಸಣ್ಣ ಹಳ್ಳಿಯಾದ ಸಮ್ಮೂ ಶತಮಾನದ ಹಿಂದಿನಿಂದಲೂ ದೀಪಾವಳಿ ಆಚರಿಸೋದಿಲ್ಲ. ಈ ದಿನ ಇಡೀ ಊರು ಶಾಪಗ್ರಸ್ಥ ಎಂದು ಕರೆಯಲಾಗಿದೆ. ಹಿಂದಿನ ಕಾಲದಲ್ಲಿ ರೂಢಿಯಲ್ಲಿದ್ದ ಸತಿ ಪದ್ಧತಿಯು ಇಲ್ಲಿನ ಜನರು ದೀಪಾವಳಿ ಮಾಡದಂತೆ ತಡೆಯಿತ್ತಂತೆ. ಅಂದು ಬಡ ಕುಟುಂಬದ ವ್ಯಕ್ತಿಯೊಬ್ಬ ಮೃತಪಟ್ಟ ಬಳಿಕ ಆತನ ಪತ್ನಿಯನ್ನು ಸತಿ ಪದ್ಧತಿಯಂತೆ ಚಿತೆಗೆ ಹಾಕಲಾಯಿತ್ತಂತೆ. ಆದ್ರೆ ಆಕೆ ಇಡೀ ಗ್ರಾಮಕ್ಕೆ ಶಾಪ ನೀಡಿದಳಂತೆ. ಈ ದಿನ ಹಚ್ಚುವ ಬೆಂಕಿ ಇಡೀ ಊರನ್ನು ಸುಡಬೇಕು ಎಂದು ಕಿರುಚಿದಳಂತೆ.
ಹೀಗಾಗಿ ದೀಪಾವಳಿಯನ್ನು ಅವರು ಆಚರಿಸುವುದಿಲ್ಲ. ದೀಪಾವಳಿಯಲ್ಲಿ ಹಚ್ಚುವ ದೀಪವು ಇಡೀ ಊರನ್ನೇ ಸುಡಲಿದೆ ಎಂಬ ನಂಬಿಕೆ ಅವರದ್ದು, ಆದ್ರೆ ಈ ದಿನದಂದು ಅವರು ಸಂಗೀತ, ನೃತ್ಯದಂತಹ ಆಚರಣೆ ಮಾಡುತ್ತಾರೆ ಆದ್ರೆ ಪಟಾಕಿ, ದೀಪ ಹಚ್ಚುವುದನ್ನು ನಿಷೇಧಿಸುತ್ತಾರೆ. ಹಾಗೆ ಈ ದಿನ ಯಾರಾದರು ದೀಪಾವಳಿ ಆಚರಿಸಿದರೆ ಅವರ ಮನೆಯಲ್ಲಿ ಸಾವು ಸಂಭವಿಸಲಿದೆ ಎಂಬ ಭಯ ಅವರಲ್ಲಿ ಇಂದಿಗೂ ಇದೆ.



Click it and Unblock the Notifications




