Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯಶಸ್ಸಿನ ಮೆಟ್ಟಿಲು ಹತ್ತಬೇಕಾದರೆ ಈ ಅಡೆತಡೆಗಳು ಇರಲೇಬಾರದು : ವಿಧುರ
ಜೀವನದಲ್ಲಿ ಒಂದನ್ನು ಪಡೆದುಕೊಳ್ಳಬೇಕಾದರೆ ಮತ್ತೊಂದನ್ನು ಕಳೆದುಕೊಳ್ಳಲೇಬೇಕು. ಅದೇ ರೀತಿ ಭವಿಷ್ಯದಲ್ಲಿ ಸುಖವನ್ನು ಅನುಭವಿಸಬೇಕಾದರೆ ಕಷ್ಟಗಳನ್ನು ಎದುರಿಸಲೇಬೇಕಾಗಿರುತ್ತದೆ. ಆಗ ಮಾತ್ರ ಯಶಸ್ವಿಯಾಗೋದಕ್ಕೆ ಸಾಧ್ಯ. ಮಹಾತ್ಮ ವಿಧುರರು ಕೂಡ ಜೀವನದಲ್ಲಿ ಯಶಸ್ವಿಯಾಗಲು ಈ ಅಡೆತಡೆಗಳನ್ನು ನಿಮ್ಮ ಜೀವನದಿಂದ ತೆಗೆದು ಹಾಕಿ ಎಂದು ಹೇಳಿದ್ದಾರೆ. ಹಾಗಾದ್ರೆ ವಿಧುರರು ಹೇಳಿರುವ ಆ ಅಡೆ ತಡೆಗಳು ಯಾವುದು ಅನ್ನೋದನ್ನ ತಿಳಿಯೋಣ.
ಚಾಣಕ್ಯ ನೀತಿಯಂತೆಯೇ ವಿಧುರರ ನೀತಿಗಳು ಕೂಡ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ನಿಮಗೊತ್ತಾ ಪಂಚ ಪಾಂಡವರು ಕೂಡ ವಿಧುರರ ಸಲಹೆಗಳನ್ನು ಕೇಳುತ್ತಿದ್ದರಂತೆ. ನೀವು ಕೂಡ ಇವರ ನೀತಿಗಳನ್ನು ಪಾಲಿಸಿದರೆ ನಿಮ್ಮ ಜೀವನ ಮತ್ತಷ್ಟು ಸುಂದರವಾಗುತ್ತದೆ. ಅದ್ರಲ್ಲೂ ಮುಖ್ಯವಾಗಿ ನಿಮ್ಮ ಅಭಿವೃದ್ಧಿಗೆ ತಡೆಯಾಗಿರುವ ಈ ವಿಚಾರಗಳನ್ನು ದೂರವಿಟ್ಟರೆ ಖಂಡಿತ ನೀವು ಯಶಸ್ಸು ಸಾಧಿಸುತ್ತೀರಿ.

1. ನಿದ್ದೆ
ಆಚಾರ್ಯ ವಿಧುರರ ಪ್ರಕಾರ ನಿಮಗೇನಾದರೂ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಉದ್ದೇಶವಿದ್ದರೆ ಮೊದಲು ನೀವು ನಿದ್ದೆಯನ್ನು ಬಿಟ್ಟು ಬಿಡಬೇಕು ಎಂದು ವಿಧುರರು ಹೇಳಿದ್ದಾರೆ. ಆದರೆ ಅನೇಕರು ನಿದ್ದೆಗೆ ಒಗ್ಗಿಕೊಂಡು ತಾವು ಮಾಡೋದಕ್ಕೆ ಹೊರಟಿರುವ ಕೆಲಸವನ್ನೇ ಮರೆತು ಬಿಡುತ್ತಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ಮಲಗು ಮೊದಲು ತಾವು ಏನನ್ನು ಮಾಡೋದಕ್ಕೆ ಹೊರಟಿದ್ದೇವೆ ಅನ್ನೋದನ್ನ ತಲೆಯಲ್ಲಿಟ್ಟು ಮಲಗಬೇಕು. ಆಗ ಮಾತ್ರ ಸಾಧನೆ ಮಾಡೋದಕ್ಕೆ ಸಾಧ್ಯ.
ಅತಿಯಾಗಿ ನಿದ್ದೆ ಮಾಡುವುದು ಒಳ್ಳೆಯದಲ್ಲ. ಪ್ರತಿ ದಿನ ಸರಿಯಾದ ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡಿ ನಂತರ ತಮ್ಮ ದಿನನಿತ್ಯ ಕೆಲಸಕ್ಕೆ ಮರಳಬೇಕು. ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳುವುದು ಕೂಡ ಯಶಸ್ವಿ ಜೀವನದ ಕೀಲಿಕೈ ಎಂದು ಹೇಳಿದ್ದಾರೆ. ನಿದ್ದೆಯನ್ನು ಬಿಟ್ಟರೆ ಮಾತ್ರ ಜೀವನದಲ್ಲಿ ಯಶಸ್ವಿಯಾಗೋದಕ್ಕೆ ಸಾಧ್ಯ ಎಂದು ವಿಧುರರು ಹೇಳಿದ್ದಾರೆ. ಆದರೆ ಯಾರು ನಿದ್ದೆಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾರೋ ಅವರು ಜೀವನದಲ್ಲಿ ಮುಂದೆ ಬರೋದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ.
2. ಸಮಯ ಪಾಲನೆ
ಮಹಾತ್ಮ ವಿಧುರರು ಸಮಯ ಪಾಲನೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ತುಂಬಾನೇ ಮುಖ್ಯವಾಗುತ್ತದೆ. ನಾವು ಯಾವುದಾದರೂ ಕೆಲಸಕ್ಕೆ ಕೈ ಹಾಕಿದರೆ ಆ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸಬೇಕು. ಜೀವನದಲ್ಲಿ ಯಶಸ್ವಿಯಾಗಬೇಕು ಅನ್ನೋ ವ್ಯಕ್ತಿಗಳು ಯಾವುದೇ ಕೆಲಸವಾದರೂ ಅದನ್ನು ಅವಧಿಗೆ ಮೊದಲೇ ಮುಗಿಸುತ್ತಾರೆ. ಹಾಗೂ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಯಾವುದಾದರೂ ಕೆಲಸದಲ್ಲಿ ನೀವು ಕೊಂಚ ತಡಮಾಡಿದ್ರು ಕೂಡ ನಿಮಗೆ ಸಿಗಬೇಕಾಗಿದ್ದ ದೊಡ್ಡ ಅವಕಾಶಗಳು ತಪ್ಪಿ ಹೋಗಬಹುದು. ಹೀಗಾಗಿ ಯಾವುದೇ ಕೆಲಸವಾದರೂ ಸರಿ ಅದರ ಬಗ್ಗೆ ಬೇಜವಾಬ್ದಾರಿ ತೋರುವುದು ಸರಿಯಲ್ಲ ಅಂತ ವಿಧುರರು ಹೇಳಿದ್ದಾರೆ.
3. ಭಯ
ಮಹಾತ್ಮ ವಿಧುರರ ಪ್ರಕಾರ ನಾವು ಸಾಧನೆ ಮಾಡೋದಕ್ಕೆ ಹೊರಟ ಹಾದಿಯಲ್ಲಿ ಸಾವಿರಾರು ಅಡೆತಡೆಗಳು ಎದುರಾಗುತ್ತದೆ. ಆದರೆ ಅವುಗಳ ದೈರ್ಯದಿಂದ ಎದುರಿಸೋದು ಮುಖ್ಯವಾಗುತ್ತದೆ. ಹೀಗಾಗಿ ಭಯವನ್ನು ಮೆಟ್ಟಿನಿಂತು ಜೀವನದಲ್ಲಿ ಮುಂದೆ ಸಾಗಲು ಕಲಿಯಬೇಕು. ಯಾರ ಯಶಸ್ಸಿನ ಮಾರ್ಗದಲ್ಲಿ ಸಾಗಲು ಇಚ್ಛಿಸುತ್ತಾರೋ ಅವರ ದೊಡ್ಡ ಶತ್ರುವೇ ಭಯ. ಹಾಗಾಗಿ ನೀವು ಭಯವನ್ನು ಗೆದ್ದರೆ ಭಾಗಶಃ ಯಶಸ್ಸು ಗಳಿಸಿದಂತೆ ಅರ್ಥ. ಆದ್ದರಿಂದ ಪ್ರತಿಯೊಬ್ಬರು ಭಯವನ್ನು ಗೆಲ್ಲೋದು ಹೇಗೆ ಅನ್ನೋದನ್ನ ಕಲಿಯಬೇಕು.
4. ಉದಾಸೀನ
ನಮ್ಮ ಜೀವನದಲ್ಲಿ ಯಶಸ್ಸು ಸಾಧಿಸೋದಕ್ಕೆ ಇರುವ ಬಹುದೊಡ್ಡ ಅಡಚನೆ ಎಂದರೆ ಅದು ಉದಾಸೀನ. ಉದಾಸೀನ ಮಾಡಿದರೆ ನೀವೆಂದಿಗೂ ಯಶಸ್ವಿಯಾಗೋದಕ್ಕೆ ಸಾಧ್ಯವೇ ಇಲ್ಲ. ಉದಾಸೀನ ಹೆಚ್ಚಾದಂತೆ ಇವತ್ತು ಮಾಡೋ ಕೆಲಸವನ್ನು ನಾವು ನಾಳೆಗೆ ಮುಂದೂಡುತ್ತೇವೆ. ವಿಧುರರ ಪ್ರಕಾರ ಉದಾಸೀನವನ್ನು ಕಟ್ಟಿ ಹಾಕದಿದ್ದರೆ ಯಶಸ್ಸು ಅಸಾಧ್ಯವೆಂದು ಹೇಳಿದ್ದಾರೆ. ಉದಾಸೀನ ನಿಮ್ಮನ್ನು ಪ್ರತಿನಿತ್ಯ ಸೋಲಿನೆಡೆಗೆ ತಳ್ಳುತ್ತದೆ. ಇದನ್ನು ನೀವು ಅರಿತುಕೊಳ್ಳುವಷ್ಟು ಹೊತ್ತಿಗೆ ಸಮಯ ಮೀರಿರುತ್ತದೆ. ಹೀಗಾಗಿ ಉದಾಸೀನವನ್ನು ನಿಮ್ಮ ಜೀವನದಿಂದ ಆಚೆ ಇಟ್ಟಷ್ಟು ನಿಮಗೆ ಒಳ್ಳೆಯದು.
5. ಕೋಪ
ಕೋಪ ನಿಯಂತ್ರಣದಲ್ಲಿರಬೇಕು. ಯಾರು ಕೋಪವನ್ನು ನಿಯಂತ್ರಿಸೋದಿಲ್ಲವೋ ಅವರು ಜೀವನದಲ್ಲಿ ಬಹಳ ಸಮಸ್ಯೆಗಳನ್ನು ಎದುರಿಸುತ್ತಾರೆ. ನಿಮ್ಮ ಒಂದು ಕೋಪದಿಂದ ಅನೇಕ ಜನರಿಗೆ ನಿಮ್ಮ ಮೇಲಿರುವ ಭಾವನೆಯೇ ಬದಲಾಗಬಹುದು. ನೀವೆಷ್ಟೇ ಒಳ್ಳೆಯ ಕೆಲಸ ಮಾಡಿದ್ದರೂ ಆ ಒಂದು ಕೋಪ ನಿಮ್ಮನ್ನು ಕೆಟ್ಟವರನ್ನಾಗಿ ಮಾಡಿ ಬಿಡುತ್ತದೆ. ಕೋಪ ಹೇಗಿರುತ್ತೆ ಅಂದರೆ ಅದು ನಮ್ಮ ಯಶಸ್ಸಿಗೆ ಕಡಿವಾಣ ಹಾಕಿಬಿಡಬಹುದು. ಯಶಸ್ಸಿನ ಹಾದಿಯಲ್ಲಿ ನಿಮಗೆ ಅಡೆತಡೆಗಳು ಎದುರಾಗೋದು ಸಾಮಾನ್ಯ. ಹಾಗಂತ ನೀವು ಕೋಪಿಸಿಕೊಂಡು ಹಿಂದೆ ಬಂದರೆ ನೀವು ಇಷ್ಟು ದಿನ ಕಷ್ಟ ಪಟ್ಟಿರೋದೆಲ್ಲ ವ್ಯರ್ಥವಾಗುತ್ತದೆ.
ಗೆಲುವು ಯಾರ ಜೀವನದಲ್ಲೇ ಆಗಲಿ ಯಶಸ್ಸು ಅಂದುಕೊಂಡಷ್ಟು ಸುಲಭ ಇರೋದಿಲ್ಲ. ತಾಳ್ಮೆಯಿಂದ ಕಾಯಬೇಕು. ಇಂತಹ ಸಂದರ್ಭದಲ್ಲಿ ಕೆಲವು ಅಡೆತಡೆಗಳು ಎದುರಾಗಬಹುದು. ಹಾಗಾದಾಗ ಅದರಿಂದ ಹಿಂದೆ ಸರಿಯೋದು ಹೇಡಿಗಳ ಲಕ್ಷಣ. ಜೀವನದಲ್ಲಿ ಮುನ್ನುಗ್ಗುವ ಗುಣ ಇದ್ದಾಗ ಮಾತ್ರ ಯಶಸ್ಸು ಒಲಿಯೋದಕ್ಕೆ ಸಾಧ್ಯ.



Click it and Unblock the Notifications


