Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸ ದಿನದಂದು ಧ್ವಜಾರೋಹಣ ಭಿನ್ನವಾಗಿರುತ್ತೆ..! ಏಕೆ ಗೊತ್ತಾ?
ಭಾರತ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಆಗಸ್ಟ್ 15ರಂದು ದೇಶದಾದ್ಯಂತ ರಾಷ್ಟ್ರೀಯ ಹಬ್ಬವಾಗಿ ಸ್ವಾತಂತ್ರ್ಯೋತ್ಸವ ಆಚರಿಸಲ್ಪಡುತ್ತಿದೆ. ಈ ಬಾರಿ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲು ಸಿದ್ಧತೆ ನಡೆದಿದೆ. ಈ ದಿನ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಇತ್ತ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಹಲವು ಕಡೆಗಳಲ್ಲಿ ಧ್ವಜಾರೋಹಣ ನೆರವೇರಲಿದೆ. ಈ ವೇಳೆ ಇಡಿ ದೇಶದಲ್ಲಿ ರಾಷ್ಟ್ರಗೀತೆ ಮೊಳಗಲಿದೆ. ಸ್ವಾತಂತ್ರ್ಯೋತ್ಸವದಲ್ಲಿ ಇಡೀ ದೇಶ ಸ್ವಾತಂತ್ರ್ಯ ಹೋರಾಟಗಾರರ, ಅವರ ತ್ಯಾಗ, ಬಲಿದಾನವನ್ನು ನೆನೆಯಲಿದೆ. ಅವರಿಗೆ ಗೌರವ ಸಲ್ಲಿಸಲಿದೆ.

ದೇಶದ ಇತಿಹಾಸದಲ್ಲಿ ಆಗಸ್ಟ್ 15 ಹಾಗೂ ಜನವರಿ 26 ಎರಡು ಪ್ರಮುಖ ದಿನಾಂಕಗಳು, ಈ ಎರಡು ದಿನ ಭಾರತದ ಇತಿಹಾಸವೇ ನೆನಪಿನಲ್ಲಿಟ್ಟುಕೊಳ್ಳಬೇಕಾದ ದಿನವಾಗಿದೆ. ಎರಡೂ ದಿನವೂ ಶಾಲೆಗಳ ಮೇಲೆ ಸರ್ಕಾರಿ ಕಚೇರಿ ಮೇಲೆ ಬಾವುಟ ಹಾರಾಡುವುದನ್ನು ನಾವು ನೋಡಬಹುದು. ಆದ್ರೆ ಈ ಎರಡೂ ದಿನದ ಆಚರಣೆಯಲ್ಲಿ ಕೆಲವು ವಿಭಿನ್ನತೆಗಳಿವೆ.
ಹೌದು ಎರಡು ದಿನವು ನಾವು ಬಾವುಟ ಹಾರಿಸುತ್ತೇವೆ, ಆದರೆ ಈ ಬಾವುಟ ಹಾರಿಸುವ ವಿಧಾನದಲ್ಲಿ ವಿಭಿನ್ನತೆ ಇದೆ. ಈ ಎರಡೂ ದಿನಗಳಲ್ಲಿ ಧೈರ್ಯ, ತ್ಯಾಗ, ಬಲಿದಾನ, ಶಾಂತಿ, ಮನುಷ್ಯ ಮತ್ತು ಪ್ರಕೃತಿ ನಡುವಿನ ಬಾಂದವ್ಯವನ್ನು ಸಾರುವ ಸಂಕೇತವನ್ನು ಸೂಚಿಸುವ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. ಆದರೆ ನೀವು ಎರಡೂ ದಿನದಂದು ವಿಭಿನ್ನವಾಗಿ ಬಾವುಟ ಹಾರಿಸುತ್ತೇವೆ ಎಂಬುದನ್ನು ಗಮನಿಸಿದ್ದೀರಾ?
ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜೋತ್ವದಂದು ನಡೆಸುವ ಧ್ವಜಾರೋಹಣ ಕಾರ್ಯಕ್ರಮಗಳ ನಡುವೆ ವ್ಯತ್ಯಾಸಗಳಿವೆ. ಜನವರಿ 26ರಂದು ನೆರೆವೇರಿಸುವ ಧ್ವಜಾರೋಹಣಕ್ಕಿಂತ ಆಗಸ್ಟ್ 15 ರಂದು ನೆರವೇರಿಸುವ ಧ್ವಜಾರೋಹಣ ವಿಭಿನ್ನವಾಗಿರಲಿದೆ. ಹಾಗಾದ್ರೆ ನಾವಿಂದು ಈ ವ್ಯತ್ಯಾಸಗಳೇನು? ಯಾವ ಬದಲಾವಣೆ ಇರಲಿದೆ ಎಂಬುದನ್ನು ನೋಡೋಣ.
ಜನವರಿ 26ರ ಧ್ವಜಾರೋಹಣ
ನಮಗೆಲ್ಲಾ ಜನವರಿ 26ರ ಗಣರಾಜ್ಯೋತ್ಸವ ಆಚರಣೆಯ ಹಿಂದಿರುವ ಉದ್ದೇಶವಂತೂ ತಿಳಿದೇ ಇದೆ. ಅಂದು ನಮ್ಮ ದೇಶವನ್ನು ಗಣರಾಜ್ಯ ಎಂದು ಘೋಷಿಸಿ ಸಂವಿಧಾನವನ್ನು ಅಧಿಕೃತವಾಗಿ ಒಪ್ಪಿಕೊಂಡ ದಿನವಾಗಿದೆ. ಆದರೆ ಈ ದಿನದಂದು ನಾವು ಧ್ವಜಾರೋಹಣ ಸಹ ನೆರವೇರಿಸುತ್ತೇವೆ. ಆದರೆ ಧ್ವಜವನ್ನು ಸ್ತಂಭದ ಮೇಲ್ಭಾಗದಲ್ಲಿ ಕಟ್ಟಲಾಗುತ್ತದೆ. ಬಳಿಕ ಹಗ್ಗ ಎಳೆಯುವುದರಿಂದ ಧ್ವಜವನ್ನು ಹಾರಿಸಲಾಗುತ್ತದೆ ಇದನ್ನು ಇಂಗ್ಲೀಷ್‌ನಲ್ಲಿ ಫ್ಲಾಗ್ ಅನ್ ಫರ್ಲಿಂಗ್ ಎನ್ನಲಾಗುತ್ತದೆ.
ಆಗಸ್ಟ್ 15ರ ಧ್ವಜಾರೋಹಣ
ಇನ್ನು ಆಸಗ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನೆರವೇರಿಸಿ ರಾಷ್ಟ್ರಗೀತೆ ಹಾಡಲಾಗುತ್ತದೆ. ಆದರೆ ಈ ವೇಳೆ ಬಾವುಟವನ್ನು ಕೆಳಗಿನಿಂದ ಕಟ್ಟಿ ಹಗ್ಗದ ಮೂಲಕ ಮೇಲಿನವರೆಗೂ ಎಳೆದು ಬಳಿಕ ಧ್ವಜ ಹಾರಿಸಲಾಗುತ್ತದೆ. ಇದನ್ನು ಇಂಗ್ಲಿಷ್‌ನಲ್ಲಿ ಫ್ಲಾಗ್ ಹೋಸ್ಟಿಂಗ್ ಎನ್ನಲಾಗುತ್ತದೆ. ಹೀಗಾಗಿ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಧ್ವಜಾರೋಹಣದ ನಡುವೆ ವಿಭಿನ್ನತೆ ಇದೆ.
ಇನ್ನೊಂದು ಕಡೆ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯ ಮೇಲೆ ಪ್ರಧಾನ ಮಂತ್ರಿ ಧ್ವಜಾರೋಹಣ ನೆರವೇರಿಸುತ್ತಾರೆ. ಆದರೆ ಗಣರಾಜ್ಯೋತ್ಸವ ದಿನಂದು ರಾಷ್ಟ್ರಪತಿಗಳು ಧ್ವಜಾರೋಹಣ ನೆರವೇರಿಸುತ್ತಾರೆ. ಗಣರಾಜ್ಯೋತ್ಸವದಂದು ರಾಜಪಥದಲ್ಲಿ ಧ್ವಜಾರೋಹಣ ನೆರವೇರುವುದು ಮತ್ತೊಂದು ವಿಶೇಷವಾಗಿದೆ.
ಗಣರಾಜ್ಯೋತ್ಸವದ ಆಚರಣೆಗೂ ಮುನ್ನ ರಾಷ್ಟ್ರಪತಿಗಳು ರಾಷ್ಟ್ರದ ನಾಗರಿಕರ ಉದ್ದೇಶಿಸಿ ಭಾಷಣ ಮಾಡುತ್ತಾರೆ. ಆದರೆ ಸ್ವಾತಂತ್ರ್ಯೋತ್ಸವದಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅಂದೇ ಪ್ರಧಾನ ಮಂತ್ರಿಗಳೂ ಭಾಷಣ ಮಾಡುತ್ತಾರೆ.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ತುಂಬಿದ್ದ ಫಲವಾಗಿ ಕೇಂದ್ರ ಸರ್ಕಾರ ಅಮೃತ್ ಮಹೋತ್ಸವ್ ಎಂಬ ಧ್ಯೇಯ ವಾಕ್ಯದಡಿ ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸ ಆಚರಿಸಲು ಕರೆ ನೀಡಿದೆ. ಈ ಕ್ರಮದಲ್ಲಿ ಹರ್ ಘರ್ ತಿರಂಗ ಅಭಿಯಾನವನ್ನು ಆರಂಭಿಸಿದೆ. ದೇಶದ ಪ್ರತಿಯೊಬ್ಬರ ಮನೆ ಮೇಲೂ ತಿರಂಗ ಹಾರಿಸುವ ಉದ್ದೇಶ ಇದಾಗಿದ್ದು, ನೀವು ಪೋಸ್ಟ್ ಮೂಲಕ ತಿರಂಗ ಮನೆಗೆ ತರಿಸಿಕೊಳ್ಳಬಹುದು.



Click it and Unblock the Notifications











