Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜೂನ್ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳು, ವ್ರತಗಳ ಬಗ್ಗೆ ಸಂಪೂರ್ಣ ಮಾಹಿತಿ
ಜೂನ್ ತಿಂಗಳಿನಲ್ಲಿ ಪಿತೃದೋಷ ನಿವಾರಣೆಗಾಗಿ ಅಪರಾ ಏಕಾದಶಿ, ವಟ ಸಾವಿತ್ರಿ ವ್ರತ, ಅಪ್ಪಂದಿರ ದಿನ ಹೀಗೆ ಅನೇಕ ಕಾರಣಗಳಿಂದ ಈ ಮಾಸ ವಿಶೇಷವಾಗಿದೆ. ಜೂನ್ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳು ವಿಶೇಷ ದಿನಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ:

ಜೂನ್ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳು
ಜೂನ್ 2, ಭಾನುವಾರ
ಅಪರಾ ಏಕಾದಶಿ
ವೈಷ್ಣವ ಅಪರಾ ಏಕಾದಶಿ
ಜೂನ್ 3, 2024 ಸೋಮವಾರ
ಮಾಸಿಕ ಶಿವರಾತ್ರಿ, ಪ್ರದೋಷ ವ್ರತ
ಜೂನ್ 4, ಮಂಗಳವಾರ
ವಿಶ್ವ ಪರಿಸರ ದಿನ
ಜೂನ್ 5, ಬುಧವಾರ
ಶನಿ ಜಯಂತಿ, ವಟ ಸಾವಿತ್ರಿ ವ್ರತ
ಜೂನ್ 6, ಗುರುವಾರ
ಜ್ಯೇಷ್ಠ ಅಮವಾಸ್ಯೆ
ಜೂನ್ 6, ಗುರುವಾರ
ಜೂನ್ 10, ಸೋಮವಾರ
ವಿನಾಯಕ ಚತುರ್ಥಿ
ಜೂನ್ 16, ಭಾನುವಾರ
ಗಂಗಾ ದಸರಾ
ಜೂನ್ 16, ಭಾನುವಾರ
ಅಪ್ಪಂದಿರ ದಿನ
ಗಾಯತ್ರಿ ಜಯಂತಿ, ಶುಕ್ಲ ಏಕಾದಶಿ
ಜೂನ್ 17, ಸೋಮವಾರ
ಜೂನ್ 21 ಶುಕ್ರವಾರ
ಪೂರ್ಣಿಮಾ ವ್ರತ, ಅಂತರರಾಷ್ಟ್ರೀಯ ಯೋಗ ದಿನ
ಕಾಲಾಷ್ಟಮಿ
ಜೂನ್ 28, ಶುಕ್ರವಾರ
ಅಪರಾ ಏಕಾದಶಿ: ಅಪರಾ ಏಕಾದಶಿಯ ಮಹತ್ವದ ಬಗ್ಗೆ ಹೇಳುವುದಾದರೆ ಈ ಏಕಾದಶಿಯನ್ನು ಆಚರಿಸುವುದರಿಂದ ಪಿತೃದೋಷದಿಂದ ಮುಕ್ತಿ ಸಿಗಲಿದೆ. ಈ ದಿನ ತರ್ಪಣ ನೀಡಿದರೆ ಮರಣವೊಂದಿದ ಪಿತೃಗಳಿಗೆ ಮೋಕ್ಷ ಸಿಗಲಿದೆ. ಈ ದಿನ ಹೋಮ, ಪೂಜಾ ಕಾರ್ಯಗಳಿಗೆ ತುಂಬಾ ಒಳ್ಳೆಯದಿದೆ.
ಅಪರಾ ಏಕಾದಶಿಯನ್ನು ಆಚರಿಸುವುದರಿಂದ ಪ್ರೇತ ದೋಷವಿರಲ್ಲ, ಶ್ರೀ ವಿಷ್ಣುವಿನ ಸಹಾಯದಿಂದ ಎಲ್ಲಾ ಕಷ್ಟಗಳು ದೂರಾಗುವುದು, ಭೂತ-ಪ್ರೇತ ಅಂತ ದುಷ್ಟ ಶಕ್ತಿಗಳ ಕಾಟವಿರಲ್ಲ. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು.
ವಟ ಸಾವಿತ್ರಿ ವ್ರತ
ವಟ ಸಾವಿತ್ರಿ ವ್ರತವನ್ನು ಮಹಿಳೆಯರು ಆಚರಿಸುತ್ತಾರೆ. ಮಹಿಳೆಯರು ಗಂಡನ ಶ್ರೇಯಸ್ಸಿಗಾಗಿ ಈ ವ್ರತವನ್ನು ಆಚರಿಸಲಾಗುವುದು. ಪೌರಾಣಿಕ ನಂಬಿಕೆ ಪ್ರಕಾರ ಸಾವಿತ್ರಿ ತನ್ನ ಪತಿ ಸತ್ಯವಾನನ ಜೀವ ಉಳಿಸಲು 3 ದಿನ ಉಪವಾಸವಿದ್ದು ಈ ವ್ರತವನ್ನು ಆಚರಿಸಿದಳು, ಹಾಗಾಗಿ ಅಮವಾಸ್ಯೆಯ 3 ದಿನಗಳ ಮೊದಲು ಈ ವಟ ಸಾವಿತ್ರಿ ವ್ರತವನ್ನು ಆಚರಿಸಲಾಗುವುದು. ಈ ವ್ರತ ತ್ರಯೋದಶಿ ತಿಥಿಯಿಂದ ಪ್ರಾರಂಭವಾಗಿದೆ. ಈ ದಿನ ಆಲದ ಮರದ ಸುತ್ತ ಸುತ್ತು ಹಾಕಿ ದೀಪ ಹಚ್ಚಿ ಪೂಜೆಯನ್ನು ಮಾಡಲಾಗುವುದು.
ಗಂಗಾ ದಸರಾ
ಜ್ಯೇಷ್ಠ ಮಾಸದ ಶುಕ್ಲ ಪಕ್ಷದ 10ನೇಯ ದಿನದಂದು ಗಂಗಾ ದಸರಾವನ್ನು ಉತ್ತರ ಭಾರತದ ಕಡೆಗೆ ಆಚರಿಸಲಾಗುವುದು. ಗಂಗಾ ದಸರಾ ದಿನದಂದು ಗಂಹೆ ಭುಮಿಗೆ ಬಂದಳು ಎಂದು ಹೇಳಲಾಗುವುದು. ಗಂಗಾ ದಸರಾದಂದು ಗಂಗೆಗೆ ಆರತಿ ಎತ್ತಿ ಪೂಜೆ ಮಾಡಲಾಗುವುದು.
ಅಪ್ಪಂದಿರ ದಿನ
ಜೂನ್ 16ರಂದು ಅಪ್ಪಂದಿರ ದಿನವನ್ನು ಆಚರಿಸಲಾಗುವುದು. ಅಪ್ಪ ಪ್ರತಿಯೊಬ್ಬರ ಬದುಕಿನ ಹೀರೋ ಅಪ್ಪ, ಅಪ್ಪನ ತ್ಯಾಗ ಕಾಣುತ್ತೇವೆ, ಆದರೆ ಅಪ್ಪನ ತ್ಯಾಗ ಕಾಣುವುದಿಲ್ಲ. ಅಪ್ಪ ಮನೆಗಾಗಿ ತನ್ನೆಲ್ಲಾ ಜೀವನವನ್ನು ಕಳೆಯುತ್ತಾನೆ, ತಾನು ಕಷ್ಟಪಟ್ಟು ದುಡಿದರೂ ಪರ್ವಾಗಿಲ್ಲ, ಮಕ್ಕಳು ಚೆನ್ನಾಗಿರಬೇಕು ಎಂದು ಬಯಸುವ ಜೀವವೇ ಅಪ್ಪ.



Click it and Unblock the Notifications
