Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ನೋಡಲು ಎಷ್ಟು ಸುಂದರವೋ ಅಷ್ಟೇ ಅಪಾಯಕಾರಿ: ಬಾಲಕನ ಜೀವ ತೆಗೆದ ಚಿಟ್ಟೆ
ಚಿಟ್ಟೆಗಳು ಅಂದರೆ ಎಲ್ಲರು ಒಮ್ಮೆ ಕಣ್ಣು ಅರಳಿಸಿ ಅವುಗಳನ್ನೇ ನೋಡುತ್ತಾರೆ. ಹೂವುಗಳಿರುವ ಕಡೆಗಳಲ್ಲಿ ನೂರಾರು ಚಿಟ್ಟೆಗಳು ಹಾರಾಡುವುದು ನೋಡಬಹುದು. ಹಾಗೆ ಪಾರ್ಕ್‌ಗಳಲ್ಲಿ ಚಿಟ್ಟೆಗಳನ್ನೇ ನೋಡಲು ಜನರು ಮುಗಿಬಿಳೋದು ಸಹ ನೋಡಬಹುದು. ಆದ್ರೆ ಈ ಚಿಟ್ಟೆ ಒಬ್ಬ ಹದಿಹರೆಯದ ಬಾಲಕನ ಜೀವವನ್ನೇ ತೆಗೆದಿದೆ ಅಂದ್ರೆ ನಂಬಲೇಬೇಕಿದೆ.
ಹೌದು ಈ ಚಿಟ್ಟೆಗಳು ಎಷ್ಟು ಸುಂದರವಾಗಿ ಕಾಣಿಸುತ್ತವೋ ಅಷ್ಟೆ ಡೇಂಜರಸ್ ಅನ್ನೋದು ನಿಮಗೆ ಗೊತ್ತಾ? ಹೌದು ಈ ಚಿಟ್ಟೆಯಿಂದ ಬಾಲಕನೊಬ್ಬ ಜೀವ ಕಳೆದುಕೊಂಡಿದ್ದಾನೆ. ಹಾಗಾದ್ರೆ ಆತನಿಗೆ ಆಗಿದ್ದೇನು ಅನ್ನೋದನ್ನು ನೋಡಿ.

ಬ್ರೆಜಿಲ್‌ನಲ್ಲಿ 14 ವರ್ಷದ ಬಾಲಕ ಚಿಟ್ಟೆಯ ಅಳಿದುಳಿದ ಅವಶೇಷಗಳಿಂದ ತಯಾರಿಸಿದ್ದ ಮಿಶ್ರಣವನ್ನು ಇಂಜೆಕ್ಷನ್ ಟ್ಯೂಬ್ ಮೂಲಕ ತನ್ನ ದೇಹಕ್ಕೆ ಚುಚ್ಚಿಕೊಂಡ ಬಳಿಕ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದು ಅಪಾಯಕಾರಿ ಸೋಶಿಯಲ್ ಮೀಡಿಯಾ ಚಾಲೆಂಜ್‌ಗೆ ಸಂಬಂಧಿಸಿದ ಪ್ರಕರಣವೇ ಎಂಬುದು ಭಾರೀ ಆತಂಕ ಹುಟ್ಟಿಸುವಂತೆ ಮಾಡಿದೆ.
ದಕ್ಷಿಣ ಅಮೆರಿಕದ ಕೆಲವು ಭಾಗಗಳಲ್ಲಿ ವೈರಲ್ ಆಗುತ್ತಿರುವ ಕೆಲವು ಸೋಶಿಯಲ್ ಮೀಡಿಯಾ ಚಾಲೆಂಜ್ ಟ್ರೆಂಡ್‌ನ ಭಾಗವಾಗಿ ಈ ಸಾವು ಕೂಡ ಸಂಭವಿಸಿದೆಯೇ ಎಂಬ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. 14 ವರ್ಷದ ಡೇವಿ ನೂನ್ಸ್ ಮೊರೆರಾ ಸತ್ತಿರುವ ಚಿಟ್ಟೆಯ ಅವಶೇಷಗಳೊಂದಿಗೆ ನೀರನ್ನು ಬೆರೆಸಿ ತನ್ನ ಕಾಲಿಗೆ ಮಿಶ್ರಣವನ್ನು ಚುಚ್ಚಿಕೊಂಡಿದ್ದಾನೆ. ಬಳಿಕ ಆಟವಾಡುವಾಗ ಕಾಲು ನೋವಾಗುತ್ತಿದೆ ಎಂದು ಬಂದು ತಂದೆಯ ಬಳಿ ಹೇಳಿದ್ದ ಇದಾದ ಬಳಿಕ ಆತ ವಾಂತಿ ಮಾಡಲು ಆರಂಭಿಸಿದ.
ತಕ್ಷಣವೇ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭವಾದಾಗಲು ಕೂಡ ಆತನ ಆರೋಗ್ಯ ಕ್ಷೀಣಿಸುತ್ತಲೇ ಇತ್ತು. ನಂತರ ವಿಟೋರಿಯಾ ಡಿ ಕಾನ್ಕ್ವಿಸ್ಟಾದಲ್ಲಿರುವ ಆಧುನಿಕ ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ಆಸ್ಪತ್ರೆಯಲ್ಲಿ ಬರೋಬ್ಬರಿ 1 ವಾರಗಳ ಕಾಲ ಆತನಿಗೆ ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಆತನಿಗೆ ಎಲ್ಲಾ ರೀತಿ ಪರೀಕ್ಷೆಗಳ ನೆರವೇರಿಸಿದ್ದರು. ಹಾಗೆ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಒಂದು ವಾರದ ಬಳಿಕ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಬಳಿಕ ಸಾವಿನ ಕಾರಣ ಪತ್ತೆ ವೈದ್ಯರು ಪ್ರಯತ್ನಿಸುತ್ತಿದ್ದಾರೆ. ಹಾಗೆ ಚಿಟ್ಟೆಯ ಅವಶೇಷ ದೇಹದೊಳಗೆ ಹಾಕಿದ ಕಾರಣದಿಂದ ಆತನ ಸಾವಾಗಿದೆ ಎಂಬುದನ್ನು ದೃಢಪಡಿಸಿಲ್ಲ. ಆದ್ರೆ ಎಂಬಾಲಿಸಮ್‌ಗೆ ಒಳಗಾಗಿ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಸಿರಿಂಜ್ ಮೂಲಕ ಚುಚ್ಚಿಕೊಂಡಾಗ ಅದರಿಂದ ಗಾಳಿಯ ಗುಳ್ಳೆಗಳು ನರದಲ್ಲಿ ಸೇರಿ ರಕ್ತ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ.
ಆದ್ರೆ ಮಾನವನ ಹುಡುಕಾಟದಲ್ಲಿ ಚಿಟ್ಟೆಗಳಿಂದ ಉಂಟಾಗುವ ಹಾಗೂ ಅಪಾಯಕಾರಿ ವಿಷಗಳ ಕುರಿತು ಇನ್ನು ಯಾವುದೇ ಮಾಹಿತಿಗಳು, ಅಧ್ಯಯನಗಳು ನಡೆದಿಲ್ಲ. ಅಮೇಜಾನ್‌ನಲ್ಲಿ ನೆಲೆಸಿರುವ ಕೆಲವೊಂದು ಸಣ್ಣ ಹುಳುಗಳಲ್ಲಿ ವಿಷಕಾರಿ ಅಂಶಗಳ ಕುರಿತಂತೆ ಸಣ್ಣ ಪುಟ್ಟ ಅಧ್ಯಯನಗಳು ನಡೆದಿವೆ. ಆದ್ರೆ ಚಿಟ್ಟೆಗಳ ಸಂಭಾವ್ಯ ಅಪಾಯಗಳ ಕುರಿತು ಯಾವುದೇ ಅಧ್ಯಯನಗಳು ನಡೆದಿಲ್ಲ.
ಹೀಗಾಗಿ ಬಾಲಕನ ಪ್ರಾಣಕ್ಕೆ ಅಪಾಯ ತಂದಿಟ್ಟ ಚಿಟ್ಟೆ ಹಾಗೂ ಆ ಪ್ರದೇಶದಲ್ಲಿ ನೆಲೆಸಿರುವ ಕೀಟಗಳಲ್ಲಿರುವ ವಿಷಕಾರಿ ಅಂಶಗಳ ಕುರಿತಂತೆ ಯಾವುದೇ ಮಾಹಿತಿಗಳು ಎಲ್ಲಿಯೂ ಇಲ್ಲ. ಇನ್ನೊಂದು ಕಡೆ ಆ ಬಾಲಕ ಚಿಟ್ಟೆಯ ಅವಶೇಷ ತನ್ನ ದೇಹಕ್ಕೆ ಚುಚ್ಚಿಕೊಳ್ಳಲು ಕಾರಣವೇನು ಎಂಬುದು ಕೂಡ ರಹಸ್ಯವಾಗಿದೆ. ಇದು ಸೋಶಿಯಲ್ ಮೀಡಿಯಾದ ಚಾಲೆಂಜ್ ಅನ್ನು ಆತ ಸ್ವೀಕರಿಸಿರಬಹುದು ಎಂದು ಕೂಡ ಅಂದಾಜಿಸಲಾಗಿದೆ.



Click it and Unblock the Notifications