Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಕಾಡಾನೆಯಿಂದ ಜಸ್ಟ್ ಮಿಸ್, ಪ್ರಾಣ ಉಳಿಸಲು ಕಾರಿನಡಿಯಲ್ಲಿ ಅವಿತ ರೈತ: ಸಕಲೇಶಪುರದಲ್ಲಿ ನಡೆದ ಘಟನೆಯ ವೀಡಿಯೋ
ಕಾಡಾನೆಯ ದಾಳಿಯಿಂದ ಕೂದಳೆಯಲ್ಲಿ ಮಿಸ್ ಆದ ವ್ಯಕ್ತಿಯ ವೀಡಿಯೋ ವೈರಲ್ ಆಗುತ್ತಿದೆ, ಪಾಪ ಆ ವ್ಯಕ್ತಿ ಒಂದು ಸೆಕೆಂಡ್‌ನಲ್ಲಿ ಕಾಡಾನೆ ದಾಳಿಯಿಂದ ಪಾರಾಗಿದ್ದಾನೆ. ಇದು ನಡೆದಿರುವುದು ಬೇರೆಲ್ಲೂ ಅಲ್ಲ ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರದ ಕೆಸಗುಲಿ ಗ್ರಾಮದಲ್ಲಿ.
ಇದು ಬೆಳಗ್ಗೆ ನಡೆದ ಘಟನೆಯಾಗಿದೆ. ವೀಡಿಯೋದಲ್ಲಿ ಸಮಯ 5.40 ತೋರಿಸುತ್ತಿದೆ, ಆ ಸಮಯದಲ್ಲಿ ಆನೆ ಪ್ರತ್ಯಕ್ಷವಾಗಿರುವುದು ಆ ಭಾಗದ ಜನರ ಆತಂಕ ಹೆಚ್ಚಿಸಿದೆ. ಸಾಮಾನ್ಯವಾಗಿ ಕಾಡಾನೆಗಳು ಕತ್ತಲಾಗುತ್ತಿದ್ದಂತೆ ಕಾಡಿನಿಂದ ನಾಡಿಗೆ ಬರುತ್ತದೆ, ಮುಂಜಾನೆ ಹೊತ್ತಿನಲ್ಲಿಯೇ ಕಾಡಿಗೆ ಮರಳುತ್ತದೆ, ಕೆಲವೊಮ್ಮೆ ತಾವು ಬಂದ ದಾರಿ ತಪ್ಪಿದಾಗ ಈ ರೀತಿ ಹಗಲಿನಲ್ಲಿ, ನಡು ಮಧ್ಯಾಹ್ನ ಕಾಡಾನೆ ಕಂಡು ಬರುವುದು.

ಅಡಿಕೆ ತೋಟದಲ್ಲಿ ವ್ಯಕ್ತಿಯ ಮೇಲೆ ದಾಳಿಗೆ ಯತ್ನ
ಅದೊಂದು ಅಡಿಕೆ ತೋಟ, ಆ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುತ್ತಾರೆ, ವೀಡಿಯೋದಲ್ಲಿ ಇಬ್ಬರನ್ನು ಕಾಣಬಹುದು, ಮೊದಲಿಗೆ ಒಬ್ಬರ ಕಣ್ಣಿಗೆ ಕಾಡಾನೆ ಬೀಳುತ್ತದೆ, ಕಾಡಾನೆ ಕಣ್ಣಿಗೆ ಬೀಳುತ್ತಲೇ ಎದ್ನೋ ಬಿದ್ನೋ ಅಂತ ವ್ಯಕ್ತಿ ಓಡಲಾರಂಬಿಸುತ್ತಾರೆ, ಕಾಡಾನೆಯೂ ಹಿಮ್ಮೆಟ್ಟಿ ಬರುತ್ತದೆ, ಆನೆಯ ದೇಹ ಮಾತ್ರ ಅಷ್ಟು ದೊಡ್ಡದು , ಆದರೆ ಅದು ಓಡಲಾರಂಭಿಸಿದರೆ ತುಂಬಾನೇ ವೇಗವಾಗಿ ಓಡುತ್ತದೆ. ಆನೆ ಓಡಿಸುವಾಗ ಅಡ್ಡವಾಗಿ ಓಡಬೇಕು, ಹಾವು ಓಡಿಸುವಾಗ ನೇರವಾಗಿ ಓಡಬೇಕು ಎಂದು ಹೇಳುತ್ತಾರೆ.
ಇಲ್ಲಿಯೂ ಅಷ್ಟೇ ವ್ಯಕ್ತಿ ಅಡ್ಡವಾಗಿ ಓಡಿದ್ದಕ್ಕೆ ಪ್ರಾಣ ಉಳಿದಿದೆ. ಹೌದು ಆನೆ ಓಡಿಸಿಕೊಂಡು ಬರುತ್ತದೆ, ಇನ್ನೇನು ಸೊಂಡಲಿನಿಂದ ಆ ವ್ಯಕ್ತಿಯನ್ನು ಹಿಡಿಯಬೇಕು ಅಡ್ಡಕ್ಕೆ ಓಡುತ್ತಾರೆ, ಆ ವ್ಯಕ್ತಿಯ ಆ ರೀತಿಯ ಓಟವೇ ಅವರ ಪ್ರಾಣ ಉಳಿಸಿದೆ.
ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಲು ಮುಂದಾದ ಘಟನೆ ಸಕಲೇಶಪುರ ತಾಲ್ಲೂಕಿನ ಕೆಸಗುಲಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಆನೆ ಅಟ್ಯಾಕ್ಗೆ ಬಂದಂತೆ ಕಾರ್ಮಿಕ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.#Hassan #kesaguli #elephant #Attack pic.twitter.com/xwDdFttFQY
— Harshith Achrappady (@HAchrappady) March 4, 2024
ಕಾರಿನಡಿಯಲ್ಲಿ ಅವಿತು ಜೀವ ಕಾಪಾಡಿಕೊಂಡ ವ್ಯಕ್ತಿ
ಅಲ್ಲಿಂದ ಓಡಿದ ಅವರು ಮನೆಗೆ ತಲುಪಿ ಮನೆಯೊಳಗೆ ನುಗ್ಗಲು ನೋಡುತ್ತಾರೆ, ಮನೆ ಬೀಗ, ನೋಡಿದರೆ ಮನೆಮುಂದೆ ಕಾರು ಇರುತ್ತದೆ, ಅದರಡಿಯಲ್ಲಿ ತೆವಳಿ ಮಲಗುತ್ತಾರೆ, ಇವರನ್ನು ಆನೆ ಅಟ್ಟಿಸುವುದನ್ನು ನೋಡಿ ಮತ್ತೊಬ್ಬ ವ್ಯಕ್ತಿ ಮತ್ತೊಂದು ಬದಿಯಿಂದ ಓಡಿ ಬರುತ್ತಾರೆ, ನಂತರ ಮನೆ ವರಾಂಡದಲ್ಲಿ ನೋಡುತ್ತಾರೆ, ಈ ಆನೆ ಓಡಿಸಿದ ವ್ಯಕ್ತಿಗಾಗಿ ಹುಡುಕುವುದನ್ನು ಕಾಣಬಹುದು, ಈ ವ್ಯಕ್ತಿ ಸ್ವಲ್ಪ ಹೊತ್ತಿನ ಬಳಿಕ ಕಾರಿನಡಿಯಿಂದ ಹೊರಬಂದು ಆನೆ ಹೋಯ್ತೇ ಎಂದು ನೋಡುತ್ತಾರೆ. ಆ ಬಳಿಕ ಮನೆಯ ಬೀಗ ತೆಗೆಯಲಾಗುವುದು, ಬಹುಶಃ ಅದಿ ಅವರದ್ದೇ ಮನೆಯಾಗಿರಬಹುದು.
ಕಾಡಾನೆಯ ನಿರಂತರ ದಾಳಿ
ಈ ಆನೆಯನ್ನು ಕರಡಿ ಕಾಡಾನೆ ಎಂದು ಹೇಳಲಾಗುತ್ತಿದೆ. ಜನವರಿ 4ಕ್ಕೆ ಬೇಲೂರಿನಲ್ಲಿ ವಸಂತ್ ಎಂಬವರನ್ನು ಬಲಿ ಪಡೆದಿದ್ದು ಇದೇ ಆನೆ ಎಂದು ಹೇಳಲಾಗುತ್ತಿದೆ, ಹದಿನೈದು ದಿನಗಳ ಹಿಂದೆಯಷ್ಟೇ ಹೆಬ್ಬನಹಳ್ಳಿಯಲ್ಲಿ ಮೂವರ ಮೇಲೆ ದಾಳಿ ಮಾಡಿತ್ತು. ಮನುಷ್ಯರ ಮೇಲೆ ದಾಳಿ ಮಾಡುವುದು ಈ ಆನೆಗೆ ಅಭ್ಯಾಸವಾಗಿ ಬಿಟ್ಟಿದೆ. ಈ ಕಾಡಾನೆಯನ್ನು ಸೆರೆ ಹಿಡಿಯದಿದ್ದರೆ ಅಲ್ಲಿರುವ ಜನರಿಗೆ ಸಂಕಷ್ಟ ತಪ್ಪಿದ್ದಲ್ಲ. ಕರ್ನಾಟಕದ ಬಹುತೇಕ ಕಡೆ ಕಾಡಾನೆ ಕಾಟವಿದೆ.
ಸ್ವಲ್ಪ ದಿನಗಳ ಹಿಂದೆ ಕೇರಳದಲ್ಲಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಕಾಡಾನೆ ವ್ಯಕ್ತಿಯನ್ನು ಕೊಂದು ಹಾಕಿತು. ಕರ್ನಾಟಕದಿಂದ ಕೇರಳಕ್ಕೆ ಹೋದ ಆನೆ ಅದಾಗಿದ್ದು ಒಬ್ಬ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿದೆ. ಆನೆ ಕಾಟದ ವೀಡಿಯೋ ಆಗಾಗ ವೈರಲ್ ಆಗುತ್ತಿದೆ, ಕಾಡಾನೆಗಳು ನಾಡಿಗೆ ಬಾರದಿರಲು ಕಾಡಿನಲ್ಲಿ ಅವರಿಗೆ ಆಹಾರ ಕೊರತೆಯಾಗದಂತೆ ನೋಡಿಕೊಳ್ಳಬೇಕು, ಆದರೆ ಕಾಡುಗಳು ನಾಶವಾಗಿರುವುದರಿಂದ ನಾಡಿಗೆ ಬರುತ್ತದೆ, ಮನುಷ್ಯ ಅತಿಯಾಸೆ ಪಟ್ಟು ತನ್ನ ಸಂಕಷ್ಟಕ್ಕೆ ತಾನೇ ಕಾರಣವಾಗಿದ್ದಾನೆ, ಈಗ ಕಾಡು ಪ್ರಾಣಗಳು ನಾಡಿಗೆ ಬರುತ್ತಿದೆ, ಅರಣ್ಯದ ರಕ್ಷಣೆಯ ಮಹತ್ವವನ್ನು ಪ್ರತಿಯೊಬ್ಬ ಮನುಷ್ಯ ಅರಿಯಬೇಕಾಗಿದೆ.



Click it and Unblock the Notifications