Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ರಾಜ್ಯದಲ್ಲಿರುವ ಏಕದಂತನ ವಿಶೇಷ ದೇವಾಲಯ ಇವು..! ಗಣೇಶ ಚತುರ್ಥಿಯೇ ಇಲ್ಲಿನ ವಿಶೇಷ
ಗಣೇಶನ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಈ ನಡುವೆ ಹಬ್ಬಕ್ಕಾಗಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಗಣೇಶನ ಹಬ್ಬ ಅಂದ್ರೆ ದೇಶದ ಮೂಲೆ ಮೂಲೆಯಲ್ಲೂ ಮೂರ್ತಿಗಳು, ಪೂಜೆ, ಕ್ರೀಡೆ, ಮನರಂಜನೆ ಹೀಗೆ ಹಬ್ಬಕ್ಕೆ ಕಳೆ ಬಂದಿರುತ್ತದೆ. ಇದಕ್ಕಾಗಿಯೇ ತಯಾರಿ ಭರ್ಜರಿಯಾಗಿ ನಡೆಯುತ್ತದೆ. ಇನ್ನು ರಾಜ್ಯದಲ್ಲಿ ಗಣೇಶನಿಗೆ ಸಮರ್ಪಿತವಾದ ಹಲವು ದೇವಾಲಯಗಳಿವೆ.
ಈ ದೇವಾಲಯಗಳಲ್ಲೂ ಸಹ ಈ ಹಬ್ಬದಂದು ವಿಶೇಷ ಪೂಜೆ ನೆರವೇರುತ್ತದೆ. ಈ ಗಣೇಶನ ಹಬ್ಬದಂದು ನಾಡಿನ ಕೆಲವು ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರುವುದನ್ನು ನಾವು ನೋಡಬಹುದು.

ಕಾಸರಗೋಡಿ ದೇವಸ್ಥಾನ
ಕೇರಳ-ಕರ್ನಾಟಕ ಗಡಿಯಲ್ಲಿರುವ ಕಾಸರಗೋಡಿನ ಸಮೀಪವಿರುವ ಒಂದು ಪುಟ್ಟ ಗ್ರಾಮದಲ್ಲಿ ವಿಶೇಷ ಗಣೇಶನ ದೇವಾಲಯವಿದೆ. ಮೂಲತಃ, ಇದನ್ನು ಶಿವನ ದೇವಾಲಯವಾಗಿ ನಿರ್ಮಿಸಲಾಯಿತು ಆದರೆ ನಂತರ ಇದು ಗಣೇಶನ ಗುಡಿಗಾಗಿ ಹೆಚ್ಚು ಪ್ರಸಿದ್ಧವಾಯಿತು. ಮಧುರ್ ದೇವಸ್ಥಾನ ಅಥವಾ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನವು ಪವಾಡಗಳ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಇದು ಉತ್ತರ ಕೇರಳದ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ. ಇನ್ನು ಗಣೇಶನ ಹಬ್ಬದ ಸಮಯದಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ.
ಶರವು ಮಹಾಗಣಪತಿ ದೇವಸ್ಥಾನ
ಶರವು ಮಹಾಗಣಪತಿ ದೇವಸ್ಥಾನವು ಮಂಗಳೂರಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು ರಾಜ ವೀರ ನರಸಿಂಹ ಬಂಗರಾಜ (ತುಳುನಾಡಿನ ರಾಜ) ನಿರ್ಮಿಸಿದನೆಂದು ದಂತಕಥೆ ಹೇಳುತ್ತದೆ. ಇಲ್ಲಿರುವ ಗಣೇಶನನ್ನು ಸ್ವಯಂಭೂ (ಸ್ವಯಂ ವ್ಯಕ್ತ) ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲೂ ಕೂಡ ಗಣೇಶನ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನೆರವೇರುತ್ತದೆ.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ
ಉಡುಪಿ ಜಿಲ್ಲೆಯಲ್ಲಿರುವ ಈ ಆನೆಗುಡ್ಡೆ ವಿನಾಯಕ ದೇವಾಲಯ ಬಹಳ ಪ್ರಸಿದ್ಧಿ ಪಡೆದಿರುವ ದೇವಾಲಯ. ಆನೆಗುಡ್ಡೆ ದೇವಸ್ಥಾನವನ್ನು ಕುಂಬಾಶಿ ವಿನಾಯಕ ದೇವಸ್ಥಾನ ಎಂದೂ ಕರೆಯುತ್ತಾರೆ. ಇಲ್ಲಿ ಗಣೇಶನಂತಿರುವ ಕಲ್ಲು ಬಂಡೆಯನ್ನು ಬ್ರಾಹ್ಮಣನು ಪೂಜಿಸಿದ್ದನು. ಇದಾಗಿ ಇಲ್ಲಿಗೆ ಬಂದು ಏನೆ ಬೇಡಿಕೊಂಡರು ನೆರವೇರುತ್ತದೆ ಎಂದು ನಂಬಲಾಗಿದೆ. ಈ ದೇವಾಲಯ ಗಣೇಶ ಚತುರ್ಥಿಯಂದು ಭಕ್ತರಿಂದ ತುಂಬಿರುತ್ತದೆ.
ಇಡಗುಂಜಿ ವಿನಾಯಕ ದೇವಸ್ಥಾನ
ಇಡಗುಂಜಿ ವಿನಾಯಕ ದೇವಸ್ಥಾನಕ್ಕೆ 1000 ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಇಡಗುಂಜಿಯ ಈ ಗ್ರಾಮವು ಪವಾಡಗಳ ಸ್ಥಳವೆಂದು ನಂಬಲಾಗಿದೆ. ಇಡಗುಂಜಿ ಗಣೇಶನ ಶಕ್ತಿಯಲ್ಲಿ ಸ್ಥಳೀಯರು ಹಾಗೂ ಅಕ್ಕಪಕ್ಕದ ಜನರು ಅಪಾರ ನಂಬಿಕೆ ಹೊಂದಿದ್ದಾರೆ. ಈ ದೇವಾಲಯದಲ್ಲಿ ಗಣಪತಿಯ ವಿಶೇಷ ಪೂರ್ತಿ ನೋಡಬಹುದು.
ಗೋಕರ್ಣ ಮಹಾಗಣಪತಿ ದೇವಸ್ಥಾನ
ಗೋಕರ್ಣ ಮಹಾಗಣಪತಿ ದೇವಾಲಯವು ಪ್ರಸಿದ್ಧವಾದ ದಂತಕಥೆಗಳಲ್ಲಿ ಒಂದಕ್ಕೆ ಸಂಬಂಧಿಸಿದ ಸರಳವಾದ ದೇವಾಲಯವಾಗಿದೆ. ರಾವಣನು ಶಿವನಿಂದ ಆತ್ಮಲಿಂಗವನ್ನು ಪಡೆದ ರಾಮಾಯಣದ ಕಥೆ ಇದರಲ್ಲಿ ಅಡಗಿದೆ. ಇನ್ನು ಗಣೇಶ ಚತುರ್ಥಿಯಂದು ಈ ದೇವಾಲಯಕ್ಕೆ ಭೇಟಿ ನೀಡುವುದು ಸೂಕ್ತ ಸಮಯ. ಈ ದಿನ ವಿಶೇಷ ಪೂಜೆ ನೆರವೇರುತ್ತದೆ. ಆತ್ಮಲಿಂಗ ಇಟ್ಟಿರುವ ಜಾಗವೂ ಸಹ ಇಲ್ಲಿಯೇ ಇರುವುದರಿಂದ ಈ ದೇವಾಲಯ ವಿಶೇಷ ಗುರುತುಗಳ ತನ್ನಲ್ಲಿಟ್ಟುಕೊಂಡಿದೆ.
ಸತ್ಯಗಣಪತಿ ದೇವಾಲಯ
ಬೆಂಗಳೂರಿನ ಹೃದಯ ಭಾಗ ಜೆಪಿ ನಗರದಲ್ಲಿರುವ ಶ್ರೀ ಸತ್ಯಗಣಪತಿ ದೇವಸ್ಥಾನವನ್ನು ಗಣೇಶ ಚತುರ್ಥಿ ಆಚರಣೆಯಂದು ವಿಶೇಷವಾಗಿ ಅಲಂಕರಿಸುತ್ತಾರೆ. ಕಳೆದ ವರ್ಷ ಗಣೇಶೋತ್ಸವದಂದು ಈ ದೇವಾಲಯದಲ್ಲಿ 2 ಕೋಟಿ ರೂಪಾಯಿ ನೋಟು ಹಾಗೂ ನಾಣ್ಯಗಳ ಸಹಾಯದಿಂದ ಅಲಂಕೃತಗೊಂಡು ಇಡೀ ದೇಶದಲ್ಲಿ ಸುದ್ದಿಯಾಗಿತ್ತು. ಇದಿಷ್ಟೇ ಅಲ್ಲ ರಾಜ್ಯದ ಮೂಲೆ ಮೂಲೆಯಲ್ಲಿ ಗಣೇಶನಿಗೆ ಸಮರ್ಪಿತವಾದ ದೇವಾಲಯಗಳಿದ್ದು ಎಲ್ಲಾ ದೇವಾಲಯದಲ್ಲಿ ಆ ದಿನ ವಿಶೇಷ ಪೂಜೆ ನೆರವೇರುತ್ತದೆ.



Click it and Unblock the Notifications
