Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕೊಳೆ ಬಟ್ಟೆ ಹಾಕಿ ಐಷಾರಾಮಿ ಹೋಟೆಲ್‌ಗೆ ಬಂದ ಖ್ಯಾತ ನಟಿ..! ಆ ಮೇಲೆ ಆಗಿದ್ದೇನು ಗೊತ್ತಾ?
ಬೃಹತ್ ನಗರಗಳಲ್ಲಿರುವ ಐಷಾರಾಮಿ ಹೋಟೆಲ್‌ಗಳು ಶ್ರೀಮಂತ ಪಾಲಿಗೆ ಮಾತ್ರ ಸೇವೆ ನೀಡುವ ತಾಣಗಳಾಗಿವೆ. ಯಾಕಂದ್ರೆ ಅಲ್ಲಿ ಬಡವರು ಹೋಗುವುದೂ ಕಷ್ಟ ಹೋದರು ಅಲ್ಲಿನ ಆಹಾರದ ಬೆಲೆ ಕೇಳಿ ಆಘಾತಕ್ಕೊಳಗಾಗಬೇಕಾಗುತ್ತದೆ. ಆದ್ರೆ ಸೆಲೆಬ್ರಿಟಿಗಳಿಗೆ ಶ್ರೀಮಂತರಿಗೆ ಇದೆಲ್ಲಾ ಸಾಮಾನ್ಯ, ಅವರಿಗೆ ಐಷಾರಾಮಿ ಹೋಟೆಲ್‌ನಲ್ಲಿಯೇ ಊಟ ತಿಂಡಿ ಮಾಡಿ ಅಭ್ಯಾಸ ಆಗಿರುತ್ತದೆ.
ಆದ್ರೆ ಇಲ್ಲಿ ಬಾಲಿವುಡ್ ನಟಿ, ಸೀರಿಯಲ್, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಚಾಹರ್ ಚೌಧರಿಯನ್ನೇ ಹೋಟೆಲ್ ಒಳ ಹೋಗುವುದರಿಂದ ತಡೆದಿರುವ ಘಟನೆ ನಡೆದಿದೆ. ಹೋಟೆಲ್ ಸಿಬ್ಬಂದಿ ಆಕೆಯನ್ನು ಗುರುತು ಹಿಡಿಯದ ಕಾರಣ ಬಾಗಿಲಲ್ಲೇ ತಡೆದು ನಿಲ್ಲಿಸಲಾಗಿತ್ತು. ಆದರೆ ಕೊಳಕು ಬಟ್ಟೆ ಹಾಕಿದ್ದ ಕಾರಣ ಆಕೆಯನ್ನು ಸಿಬ್ಬಂದಿ ತಡೆದಿದ್ದರು.

ವೈರಲ್ ಭಯಾನಿ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರಿಯಾಂಕಾ ಹೋಟೆಲ್ ಆವರಣದೊಳಗೆ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಆಕೆ ಕೊಳಕು ಬಟ್ಟೆಗಳನ್ನು ಧರಿಸಿದ್ದಾಳೆ, ಹೋಟೆಲ್‌ಗೆ ಪ್ರವೇಶಿಸುತ್ತಿದ್ದಂತೆ, ಸಿಬ್ಬಂದಿ ಮತ್ತು ಮ್ಯಾನೇಜರ್ ಅವಳನ್ನು ನಿಲ್ಲಿಸಿ ಅವಳು ಎಲ್ಲಿಗೆ ಹೋಗುತ್ತಿದ್ದಾಳೆ ಎಂದು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಪ್ರಿಯಾಂಕಾ ಒಳಗೆ ಹೋಗುವುದಾಗಿ ತಿಳಿಸಿದರೂ ಅವರು ಅವಕಾಶ ನೀಡಲಿಲ್ಲ. ವಿಡಿಯೋ ಶೇರ್ ಆದ ತಕ್ಷಣ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಅವರಲ್ಲಿ ಒಬ್ಬರು ಬರೆದಿದ್ದಾರೆ, ಆಕೆಯ ಹೊಸ ಮ್ಯೂಸಿವ್ ವೀಡಿಯೊ "ದೋಸ್ಟ್ ಬ್ಯಾಂಕ್" ನ ಬಿಟಿಎಸ್ ಇದು ಪ್ರಚಾರದ ಸ್ಟಂಟ್ ಎಂದಿದ್ದಾರೆ.
ಪ್ರಿಯಾಂಕಾ ಚಹರ್ ಚೌಧರಿ 2019ರಲ್ಲಿ 'ಗತ್ಬಂಧನ್' ಕಾರ್ಯಕ್ರಮದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಜನಪ್ರಿಯ ಶೋ ಉದಯನ್‌ನಲ್ಲಿ ಕಾಣಿಸಿಕೊಂಡ ನಂತರ ಅವರು ಖ್ಯಾತಿ ಗಳಿಸಿದರು. ಅಲ್ಲದೆ, ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ 16 ರಲ್ಲಿ ಭಾಗವಹಿಸಲು ಅವರು 2022 ರಲ್ಲಿ ಕಾರ್ಯಕ್ರಮವನ್ನು ತೊರೆದರು. ಅವರು ಶೋನಲ್ಲಿನ ತನ್ನ ಕಾರ್ಯಕ್ಕಾಗಿ ವ್ಯಾಪಕವಾದ ಮನ್ನಣೆಯನ್ನು ಗಳಿಸಿದರು ಮತ್ತು ಎರಡನೇ ರನ್ನರ್ ಅಪ್ ಆದರು. ನಟಿ ಇತ್ತೀಚೆಗೆ 'ದಸ್ ಜೂನ್ ಕಿ ರಾತ್' ಎಂಬ ಅಸ್ಕರ್ ಪ್ರಾಜೆಕ್ಟ್ ನಲ್ಲೂ ನಟಿಸುತ್ತಿದ್ದಾರೆ.
ಆದರೆ ಆಕೆ ಈ ರೀತಿ ಕೊಳೆ ಬಟ್ಟೆ ಧರಿಸಿ ಹೋಟೆಲ್‌ಗೆ ಬಂದಿದ್ದು ಏಕೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಜೊತೆಗೆ ಆಕೆಯನ್ನು ಒಳಗೆ ಬಿಡದ ಹೋಟೆಲ್ ಸಿಬ್ಬಂದಿ ವಿರುದ್ಧರೂ ಟೀಕೆಗಳು ಕೇಳಿಬರುತ್ತಿವೆ.
ಸದ್ದು ಮಾಡಿತ್ತು ನಮ್ಮ ಮೆಟ್ರೋ ಘಟನೆ
ಇನ್ನು ಬೆಂಗಳೂರು ಮೆಟ್ರೋದಲ್ಲೂ ಇಂತಹದ್ದೆ ಘಟನೆಯೊಂದು ದೇಶವ್ಯಾಪಿ ಸದ್ದು ಮಾಡಿತ್ತು. ಮೆಟ್ರೋ ಸಿಬ್ಬಂದಿ ರೈತರೊಬ್ಬನಿಗೆ ಆತನ ಬಟ್ಟೆ ಮಣ್ಣಾಗಿದೆ ಎಂದು ಮೆಟ್ರೋದಲ್ಲಿ ಸಂಚಾರ ನಿರಾಕರಿಸಿದ್ದ ಘಟನೆ ವರದಿಯಾಗಿತ್ತು.
ಬಟ್ಟೆ ಶುಚಿಯಿಂದ ಇಲ್ಲ ಎಂಬ ಕಾರಣಕ್ಕೇ ರೈತನನ್ನು ಮೆಟ್ರೋ ಒಳಗಡೆ ಬಿಡದೆ ಸಿಬ್ಬಂದಿ ಅವಮಾನಿಸಿದ್ದರು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ದೃಶ್ಯಗಳನ್ನು ವೀಕ್ಷಣೆ ಮಾಡಿದ್ದ ಸಾರ್ವಜನಿಕರು ಬಿಎಂಆರ್‌ಸಿಎಲ್‌ಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು.
ಇದಾದ ಬಳಿಕ ಬಟ್ಟೆ ಸರಿಯಿಲ್ಲ, ಶರ್ಟ್ ಗುಂಡಿಯನ್ನು ಹಾಕಿಕೊಂಡು ನೀಟಾಗಿ ಬಾ ಎಂದು ಕಾರ್ಮಿಕನೋರ್ವನನ್ನು ಹೊರಗಡೆ ನಿಲ್ಲಿಸಿ ಮೆಟ್ರೋ ಸಿಬ್ಬಂದಿ ಅವಮಾನಿಸಿದ ಘಟನೆ ಬೆಂಗಳೂರಿನ ದೊಡ್ಡ ಲಕ್ಕಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿತ್ತು. ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು, ಸಾರ್ವಜನಿಕರು ಮೆಟ್ರೋ ಸಿಬ್ಬಂದಿಯ ಈ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಕಾರ್ಮಿಕನನ್ನು ಅವಮಾನಿಸಿದ ಮೆಟ್ರೋ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆಯೂ ಒತ್ತಾಯಿಸಿದ್ದರು.



Click it and Unblock the Notifications
