Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ: ಜಾಹೀರಾತು ವೈರಲ್..! ಏನಿದು ಸಂಪ್ರದಾಯ ಗೊತ್ತಾ
ಹುಡುಗ ಹುಡುಗಿಗೆ ಮದುವೆ ಮಾಡಲು ಕುಟುಂಬಸ್ಥರು ವಧು ವರರ ಅನ್ವೇಷಣೆ ಕೇಂದ್ರ ಅಥವಾ ಬ್ರೋಕರ್ ಇಲ್ಲದಿದ್ದರೆ ಪತ್ರಿಕೆಯಲ್ಲಿ ಜಾಹೀರಾತು ಸಹ ನೀಡುತ್ತಾರೆ. ಆದ್ರೆ ಮೃತಪಟ್ಟವರಿಗೆ ಮದುವೆ ಮಾಡೋ ಸಂಪ್ರದಾಯದ ಕುರಿತು ಎಂದಾದ್ರು ಕೇಳಿದ್ದೀರಾ? ಹೌದು ರಾಜ್ಯದಲ್ಲಿ ಇಂತಹದೊಂದು ಜಾಹೀರಾತು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪ್ರೇತ ಮದುವೆಯ ಕುರಿತ ಚರ್ಚೆ ಆರಂಭವಾಗಿದೆ.
ಹೌದು ಮಲೆನಾಡು, ಕರಾವಳಿ ಭಾಗದಲ್ಲಿ ಈಗಲೂ ಈ ಪ್ರೇತ ಮದುವೆ ನಡೆಯುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮರೆಯಾಗಿದ್ದ ಈ ಮದುವೆ, ಈಗ ದಿನಪತ್ರಿಕೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದೆ. ದಿನಪತ್ರಿಕೆಯೊಂದರಲ್ಲಿ ಪ್ರೇತ ಮದುವೆಗೆ ವರ ಬೇಕಿದೆ ಎನ್ನುವ ಜಾಹೀರಾತು ಪ್ರಕಟವಾಗಿದ್ದು ಓದುಗರನ್ನು ಅಚ್ಚರಿಗೆ ತಳ್ಳಿದೆ.

"ಬಂಗೇರ ಬದಿಯ 30 ವರ್ಷಗಳ ಹಿಂದೆ ತೀರಿ ಹೋದ ಹೆಣ್ಣು ಮಗುವಿಗೆ ಅದೇ ಜಾತಿಯ ಇತರ ಬದಿಯ 30 ವರ್ಷಗಳ ಹಿಂದೆ ತೀರಿಹೋದ ಗಂಡಿನ ಮನೆಯವರು ಪ್ರೇತ ಮದುವೆ ಮಾಡಿಸಲು ತಯಾರಿದ್ದರೆ, ದಯವಿಟ್ಟು ಸಂಪರ್ಕಿಸಿ" ಎಂದು ಜಾಹೀರಾತು ನೀಡಲಾಗಿದೆ.
ಏನಿದು ಏನಿದು ಪ್ರೇತ ಮದುವೆ? ಮದುವೆ ಸಂಪ್ರದಾಯ ಹೇಗೆ?
ಯಾರ ಮನೆಯಲ್ಲಾದರು ಮದುವೆಗೆ ಮುನ್ನವೇ ಹುಡುಗ ಅಥವಾ ಹುಡುಗಿ ಮೃತಪಟ್ಟರೆ ಅವರು ಮದುವೆ ವಯಸ್ಸಿಗೆ ಬಂದಾಗ ಮದುವೆ ಮಾಡಬೇಕು ಎಂದು ನಂಬಲಾಗಿದೆ. ಅವರು ಮದುವೆಯಾಗದಿದ್ದರೆ ಅವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ, ಬದಲಿಗೆ ಕುಟುಂಬಸ್ಥರಿಗೆ ಕಾಡುತ್ತಾರೆ ಎಂದು ನಂಬಲಾಗಿದೆ.
ಅಲ್ಲದೆ ಆ ಕುಟುಂಬದಲ್ಲಿ ಯಾವ ಶುಭ ಕಾರ್ಯವನ್ನೂ ಮಾಡಲು ಈ ಪ್ರೇತಗಳು ಬಿಡುವುದಿಲ್ಲ ಎಂದು ನಂಬಲಾಗಿದೆ. ಹೀಗಾಗಿ ಈ ಸಮಸ್ಯೆಗಳಿಂದ ದೂರಾಗಲು ಪ್ರೇತ ಮದುವೆ ಮಾಡಿಸಲಾಗುತ್ತದೆ. ಆ ಪ್ರೇತಗಳನ್ನು ಸಂತೃಪ್ತಿಪಡಿಸಲು ಮದುವೆ ಮಾಡಿಸಲು ಆ ಕುಟುಂಬದವರು ಮುಂದಾಗುತ್ತಾರೆ. ಇದರಿಂದ ತಮ್ಮ ಕುಟುಂಬಕ್ಕಾಗಲಿ ಮುಂದಿನ ಪೀಳಿಗೆಗಾಲಿ ಯಾವುದೇ ತೊಂದರೆ ಬರುವುದಿಲ್ಲ ಎನ್ನುವುದು ಉದ್ದೇಶವಾಗಿದೆ.
ಆದರೆ ಅದೇ ವಯಸ್ಸಿನ ಹುಡುಗ ಅಥವಾ ಹುಡುಗಿಯನ್ನು ಹುಡುಕಿ ಮದುವೆ ಮಾಡಿಸಬೇಕಾಗುತ್ತದೆ. ಅವರೂ ಸಹ ಮದುವೆಯಾಗದೇ ಮೃತಪಟ್ಟಿರಬೇಕಾಗುತ್ತದೆ. ಹೀಗಾಗಿ ವರನಿಗಾಗಿ ಹುಡುಗಿ ಮನೆಯವರು ಜಾಹೀರಾತು ನೀಡಿದ್ದಾರೆ. ಈ ಜಾಹೀರಾತು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಬಹುತೇಕ ಮಂದಿ ಈ ಪ್ರೇತ ಮದುವೆ ಕುರಿತು ಕೇಳದೆ ಇರುವವರು ಇದೇನು ವಿಚಿತ್ರ ಎಂದು ಹುಬ್ಬೇರಿಸಿದ್ದಾರೆ. ಅದರಲ್ಲೂ ಪ್ರೇತ ಮದುವೆ ಹೇಗೆ ಮಾಡುತ್ತಾರೆ ಎಂಬ ಗೊಂದಲಕ್ಕೆ ಬಿದ್ದಿದ್ದಾರೆ. ಜೀವ ಇರುವವರ ನಿಲ್ಲಿಸಿ ಮದುವೆ ಮಾಡುವುದಕ್ಕೂ ಪ್ರೇತಗಳಿಗೆ ಮದುವೆ ಮಾಡುವುದಕ್ಕೂ ಇರುವ ವ್ಯತ್ಯಾಸ ತಿಳಿಯದೆ ಮಂದಿ ತಲೆ ಕೆಡಿಸಿಕೊಂಡಿದ್ದಾರೆ.
ಈ ಮದುವೆ ನಡೆಯೋದು ಹೇಗೆ?
ಈ ಮದುವೆಯಲ್ಲಿ ಎರಡು ಪ್ರೇತಾತ್ಮಗಳಿಗೆ ಮದುವೆ ಮಾಡಲಾಗುತ್ತದೆ. ವಧು-ವರನಿಗೆ ಹಾಕಲಾಗುವ ಬಟ್ಟೆಗಳ ಇಟ್ಟು ಅದಕ್ಕೆ ಮದುವೆ ಮಾಡಿಸಲಾಗುತ್ತದೆ. ಅದರಲ್ಲೂ ಆಷಾಢದಲ್ಲಿಯೇ ಮದುವೆ ಮಾಡಿಸಲಾಗುತ್ತದೆ. ಸಂಪ್ರದಾಯದಂತೆ ಹುಡುಗಿಗೆ ರೇಷ್ಮೆ ಸೀರೆ, ತಾಳಿ, ಹೂವು ಮತ್ತು ಹುಡುಗನಿಗೆ ಪಂಚೆ, ಶಲ್ಯ ಎಲ್ಲವನ್ನೂ ತಂದು ಮದುವೆ ಮಾಡಲಾಗುತ್ತದೆ. ಮದುವೆ ಬಳಿಕ ಅತಿಥಿಗಳಿಗೆ ಊಟ ಕೂಡ ಹಾಕಲಾಗುತ್ತದೆ. ಆದರೆ ಹುಡುಗ ಹುಡುಗಿ ಮಾತ್ರ ಕಣ್ಣ ಮುಂದೆ ಕಾಣಸಿಗುವುದಿಲ್ಲ. ಆದರೆ ಈ ಮದುವೆ ಶಾಸ್ತ್ರೋಕ್ತವಾಗಿ ನಡೆದರೆ ಈ ಪ್ರೇತ ಕಾಟದಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ.
ಈ ಜಾಹೀರಾತು ನೋಡಿದ ಮಂದಿ ನಿಜಕ್ಕೂ ಆಘಾತಕ್ಕೊಳಗಾಗಿದ್ದಾರೆ. ಪ್ರೇತ ಮದುವೆ ಬಿಡಿ ಬದುಕಿರುವ ಮಂದಿಗೆ ಮದುವೆಯಾಗುತ್ತಿಲ್ಲ ಎಂದು ಸಂಕಷ್ಟ ತೋಡಿಕೊಂಡಿದ್ದಾರೆ.



Click it and Unblock the Notifications
