Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಎಲ್ಲಾ ನಕಲಿ ಸ್ವಾಮಿ..! ನೀವು ಕುಡಿಯೋ ತಂಪು ಪಾನಿಯ ಸಹ ನಕಲಿ..!
ನೀವು ಮಾರುಕಟ್ಟೆಯಲ್ಲಿಂದು ಹತ್ತು ಹಲವು ತಂಪು ಪಾನೀಯಗಳನ್ನು ನೋಡಬಹುದು. ಅವು ಬಣ್ಣಗಳಲ್ಲಿ ಬೇರೆ ಬೇರೆ ತರ ಕಂಡರೂ ಅದರ ರುಚಿ ಮತ್ತು ಅದರ ತಯಾರಿಕೆಯಲ್ಲಿ ಬಳಸುವ ರಾಸಾಯನಿಕಗಳು ಒಂದೇ ಆಗಿರುತ್ತವೆ. ಅವು ಒಂದಕ್ಕಿಂತ ಒಂದು ಭಿನ್ನವಾಗಿರದಿದ್ದರೂ ಅವುಗಳಿಂದ ಆಗುವ ಹಾನಿ ಮಾತ್ರ ಒಂದೇ ರೀತಿಯಾಗಿರುತ್ತದೆ.
ತಂಪು ಪಾನೀಯದಿಂದ ಆಗುವ ದುಷ್ಪರಿಣಾಮಗಳು ನಮಗೆ ತಿಳಿದಿದೆ. ಈ ಬಗ್ಗೆ ಹಲವು ಬಾರಿ ಚರ್ಚೆಗಳೂ ಸಹ ನಡೆಯುತ್ತಿರುತ್ತವೆ. ಈ ತಂಪು ಪಾನಿಯಗಳು ಎಷ್ಟು ಹಾನಿಕಾರಕ ಎಂಬ ಬಗ್ಗೆ ವಿವಾದ, ಚರ್ಚೆ, ಸಂಶೋದನೆ ನಡೆಯುತ್ತಲೆ ಇರುತ್ತದೆ. ಕೆಲವು ಬಾರಿ ಈ ತಂಪು ಪಾನೀಯಗಳ ಕುರಿತಂತೆ ಅಂತಾರಾಷ್ಟ್ರೀಯ ಮಟ್ಟದಲ್ಲು ಚರ್ಚೆಯಾಗುತ್ತವೆ.

ಇಷ್ಟೇ ಅಲ್ಲ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ತಂಪು ಪಾನೀಯಗಳಿಗೆ ಸಂಬಂಧಿಸಿದಂತೆ ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹದ್ದೇ ವಿಡಿಯೋವೊಂದು ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ಹೇಗೆ ಕೋಕಾ ಕೋಲಾ ತಂಪು ಪಾನಿಯ ತಯಾರಾಗುತ್ತದೆ ಎಂದು ತೋರಿಸಲಾಗಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಅಕ್ಷರಶಃ ಶಾಕ್‌ಗೆ ಒಳಗಾಗಿದ್ದಾರೆ.
ನೀವು ಸಹ ಅಂತಾರಾಷ್ಟ್ರೀಯ ಬ್ರಾಂಡ್ ಆಗಿರುವ ಕೋಕಾ ಕೋಲಾದ ರುಚಿ ನೋಡಿರಬಹುದು. ಎಲ್ಲಾ ಅಂಗಡಿಗಳಲ್ಲಿ ಇದು ಸಾಮಾನ್ಯವಾಗಿ ಸಿಗುತ್ತದೆ. ಜೊತೆಗೆ ಪಾರ್ಟಿ, ಕಾರ್ಯಕ್ರಮ, ಮನೆಗಳಲ್ಲಿ ನಾವು ಬಾಯಿ ಚಪ್ಪರಿಸಿ ಕುಡಿದಿರುತ್ತೇವೆ. ಆದ್ರೆ ಈ ತಂಪು ಪಾನಿಯ ತಯಾರಾಗೋದು ಎಲ್ಲಿ? ಹೇಗೆಲ್ಲಾ ತಯಾರಿಸುತ್ತಾರೆ ಎಂಬುದನ್ನು ನೀವು ನೋಡಿದರದೀರಾ? ಅಥವಾ ಆ ಬಗ್ಗೆ ಯೋಚಿಸಿದ್ದೀರಾ?
ಕೋಕಾ ಕೋಲಾ ಒಂದು ಅಂತಾರಾಷ್ಟ್ರೀಯ ಕಂಪನಿ ಸಾಮಾನ್ಯವಾಗಿ ದೊಡ್ಡ ದೊಡ್ಡ ಉತ್ಪಾದನಾ ಘಟಕದಲ್ಲಿ ಈ ತಂಪು ಪಾನಿಯ ತಯಾರಾಗುತ್ತದೆ. ಆದರೆ ಈ ವೈರಲ್ ಆಗಿರುವ ವಿಡಿಯೋದಲ್ಲಿ ನಕಲಿ ಕೋಕಾ ಕೋಲಾವನ್ನು ಒಂದು ಗೂಡಿನಂತಿರುವ ಮನೆಯೊಂದರಲ್ಲಿ ತಯಾರಿಸಲಾಗುತ್ತಿದೆ. ಅದು ಸಹ ಸ್ವಚ್ಛತೆ ಇಲ್ಲದ ಗೂಡಿನಂತಹ ಮನೆಯಲ್ಲಿ ಈ ಕೋಕಾ ಕೋಲಾ ಬಾಟಲಿಗಳಿಗೆ ತುಂಬಿಸಲಾಗುತ್ತಿದೆ.
ಈ ವಿಡಿಯೋ ನೋಡಿದ ಜನರು ಶಾಕ್‌ಗೆ ಒಳಗಾಗಿದ್ದಾರೆ. ಮಾರುಕಟ್ಟೆಯಲ್ಲಿ 100 ರೂಪಾಯಿ ವರಗೂ ಬೆಲೆಯಿದೆ. ಆದರೆ ಇಷ್ಟು ಬೆಲೆ ನೀಡಿ ಖರೀದಿಸುವ ಕೋಕಾ ಕೋಲಾ ಈ ರೀತಿ ನಕಲಿಯಾಗಿ ತಯಾರಿಸಲಾಗುತ್ತಿದೆ ಎಂದು ಜನ ಶಾಕ್ ಆಗಿದ್ದಾರೆ.
ಆದರೆ ಈ ವಿಡಿಯೋ ಯಾವ ಪ್ರದೇಶದ್ದು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಆದರೆ ಅದರಲ್ಲಿ ಕೆಲವರು ಕೋಕಾ ಕೋಲಾ ಬಾಟಲಿಗೆ ಪಾನಿಯ ತುಂಬಿಸುತ್ತಿರುವುದು ಹಾಗೂ ಅದಕ್ಕೆ ಕಾರ್ಬೋನೆಟೆಡ್ ಗ್ಯಾಸ್ ತುಂಬಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಎಕ್ಸ್‌ನಲ್ಲಿ ಬಳಕೆದಾರರು ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯೋ 1 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದ್ದು, ನೆಟ್ಟಿಗರು ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ ಇದು ಎಲ್ಲಿ ನಡೆದಿರುವುದು ಎಂಬುದು ನಿಖರವಾಗಿಲ್ಲ. ಈ ತಂಪು ಪಾನಿಯ ಮಿಶ್ರಣಕ್ಕೆ ಯಾವ ರಾಸಾಯನಿಕ ಬೆರೆಸುತ್ತಿದ್ದಾರೆ. ಇದರ ಘಟಕ ಎಲ್ಲಿದೆ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೆ ಇಂದು ನಕಲಿ ಉತ್ಪನ್ನಗಳು ಹೇಗೆ ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ ಎಂಬುದನ್ನು ತೋರಿಸುತ್ತಿದೆ.
ಒಂದು ಬ್ರಾಂಡ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ನಕಲಿ ಉತ್ಪನ್ನ ಮಾರುಕಟ್ಟೆಗೆ ತರುವುದು ಇದೇನು ಹೊಸ ಪ್ರಕರಣವಲ್ಲ ಈ ಹಿಂದೆಯೂ ಹತ್ತಾರು ಜನಪ್ರಿಯ ಬ್ರಾಂಡ್‌ಗಳ ನಕಲಿ ವಸ್ತುಗಳನ್ನು ಮಾರುಕಟ್ಟೆಗೆ ತಂದ ಉದಾಹರಣೆಗಳಿವೆ. ಅವು ಜನಪ್ರಿಯ ಬ್ರಾಂಡ್ ಶೂಗಳು, ಬಟ್ಟೆಗಳು, ಮೊಬೈಲ್‌ಗಳು, ವಾಚ್‌ಗಳು, ಸ್ಪೀಕರ್‌ಗಳು ನಾವು ನಕಲಿಯಾಗಿರುವುದನ್ನು ನೋಡಿದ್ದೇವೆ. ಆದ್ರೆ ಇದರಿಂದ ಜೀವಕ್ಕೆ ಯಾವ ಹಾನಿಯೂ ಇಲ್ಲ ಆದರೆ ತಂಪು ಪಾನಿಯ ನಕಲು ಮಾಡಿದರೆ ಜೀವಕ್ಕೂ ಹಾನಿಯಾಗಲಿದೆ. ಹೀಗಾಗಿ ಈ ವಿಡಿಯೋ ಈಗ ಜನರ ಚಿಂತೆಗೀಡು ಮಾಡಿದೆ.



Click it and Unblock the Notifications