Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ಹಣಕ್ಕಾಗಿ ತಮ್ಮನ್ನು ತಾವೇ ಮದುವೆಯಾದ್ರು..! ಸಾಮೂಹಿಕ ವಿವಾಹದಲ್ಲಿ ಭಾರೀ ಗೋಲ್ಮಾಲ್..!
ಮದುವೆ ಅನ್ನೋದು ಏಳೇಳು ಜನ್ಮದ ಅನುಬಂಧ, ಅದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತೆಲ್ಲಾ ಹಿರಿಯರು ಹೇಳೋದನ್ನು ಕೇಳಿದ್ದೀವಿ. ಆದ್ರೆ ಹಣಕ್ಕಾಗಿ ಮದುವೆ ನಿಶ್ಚಯ ಆಗೋದು ಎಲ್ಲಾದ್ರು ಕೇಳಿದ್ದೀರಾ? ಹೌದು ಇಂತಹ ಕಥೆಗಳು ಕಲಿಗಾಲದಲ್ಲಿ ನಡೆಯುತ್ತಿದೆ. ಹಣಕ್ಕಾಗಿ ಸುಳ್ಳು ಮದುವೆ ನಡೆಯುತ್ತಿವೆ.
ಸರ್ಕಾರದಿಂದ ಬರುವ ಸಹಾಯಧನದ ಆಸೆಗಾಗಿ ಇಲ್ಲೊಂದು ಕಡೆ ಭಾರೀ ಗೋಲ್ಮಾಲ್ ನಡೆದಿದೆ. ಸರ್ಕಾರದ ಹಣ ಪಡೆಯಲು ಅವರನ್ನ ಅವರೇ ಮದುವೆಯಾದ ಪ್ರಸಂಗವೂ ವರದಿಯಾಗಿದೆ. ಹಾಗಾದರೆ ಈ ಘಟನೆ ನಡೆದಿದ್ದೇಲ್ಲಿ, ಏನಿದು ಹಣಕ್ಕಾಗಿ ಮದುವೆ ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಉತ್ತರ ಪ್ರದೇಶದಲ್ಲಿದಲ್ಲಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಇಂತಹ ವಿಚಿತ್ರ ಘಟನೆ ನಡೆದಿದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಪುರುಷರು ಮತ್ತು ಮಹಿಳೆಯರು ಸೇರಿ ಬ್ರೋಕರ್‌ಗಳು ಭಾಗಿಯಾಗಿದ್ದಾರೆ. ಜನವರಿ 25ರಂದು ಬೃಹತ್ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ 15ಕ್ಕೂ ಹೆಚ್ಚು ವಿವಾಹ ದುಡ್ಡಿಯಾಗಿ ನಡೆದಿವೆ ಎಂದು ತಿಳಿದುಬಂದಿದೆ.
ಏನಿದು ಹಣಕ್ಕಾಗಿ ಮದುವೆ?
ಉತ್ತರ ಪ್ರದೇಶ ಸರ್ಕಾರ ಸಾಮೂಹಿಕ ಮದುವೆಯಾದ ಜೋಡಿಗೆ ಹಣ ನೀಡುವ ಯೋಜನೆ ಜಾರಿ ಮಾಡಿದೆ. ವಧುವಿಗೆ 35,000 ಹಾಗೂ ಮದುವೆ ಸಾಮಗ್ರಿಗೆ 10 ಸಾವಿರ ಕಾರ್ಯಕ್ರಮಕ್ಕೆ 6 ಸಾವಿರ ಸೇರಿ ಒಟ್ಟು 51 ಸಾವಿರ ರೂಪಾಯಿ ಸಹಾಯಧನ ನೀಡುತ್ತಿದೆ. ಈ ಹಣ ಹೊಡೆಯಲು ನಕಲಿ ಮದುವೆಗಳು ನಡೆದಿವೆ.
ನಕಲಿ ಮದುವೆಗೆ ಏನೆಲ್ಲಾ ಮಾಡಿದ್ರು ಗೊತ್ತಾ?
ಹಣ ಕಂಡರೆ ಹೆಣವು ಬಾಯಿಬಿಡುತ್ತೆ ಅನ್ನೋದು ಸುಳ್ಳಲ್ಲ ನೋಡಿ. ಹಣಕ್ಕಾಗಿ ಇಲ್ಲಿ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿ ಐಡಿಯಾ ಮಾಡಿದ್ದಾರೆ. ಹುಡುಗ ಹಾಗೂ ಹುಡುಗಿಗೆ ತಲಾ 2 ಸಾವಿರ ಹಣ ನೀಡುವುದಾಗಿ ಆಮಿಷ ಒಡ್ಡಿ ಕರೆತಂದಿದ್ದಾರೆ. ಮದುವೆ ಆಗುವಂತಹ ನಾಟಕವಾಡಿಸಿ ಅವರಿಂದ ಕೆಲ ದಾಖಲಾತಿ ಪಡೆದು ಬಿಟ್ಟುಕಳುಹಿಸುತ್ತಾರೆ. ಆದರೆ ಸರ್ಕಾರದಿಂದ ಬರುವ 51 ಸಾವಿರ ಸಹಾಯಧನವನ್ನು ತಮ್ಮ ಖಾತೆಗೆ ಜಮಾ ಮಾಡಿಕೊಳ್ಳುತ್ತಾರೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು, ಸ್ಥಳೀಯ ನಾಯಕರು ಸೇರಿದ್ದಾರೆ.
ಜೋಡಿಯೂ ಇಲ್ಲದೆ ತಮಗೆ ತಾವೇ ಹಾರ ಹಾಕಿಕೊಂಡ ವಧು-ವರರು
ಇನ್ನು ಈ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಧು-ವರರಂತೆ ಬಟ್ಟೆ ತೊಡಿಸಿ ಕರೆತರಲಾಗಿದ್ದ ಕೆಲವರು ಬೇರೆಯವರಿಗೆ ಹಾರ ಹಾಕಲು ನಿರಾಕರಿಸಿ ತಮಗೆ ತಾವೇ ಹಾರ ಹಾಕಿಕೊಂಡು ನಿಂತಿದ್ದರು. ಅವರಿಗೆ 2 ಸಾವಿರ ರೂಪಾಯಿ ಮುಂಗಡವಾಗಿ ನೀಡಿ ಕರೆತರಲಾಗಿತ್ತು ಎಂಬುದು ಬಳಿಕ ತಿಳಿದುಬಂದಿದೆ. ಅವರಿಗೆ ಹಾರ ಹಾಕಿ ಸುಮ್ಮನೆ ನಿಲ್ಲುವಂತೆ ನಿರ್ದೇಶನ ನೀಡಲಾಗಿತ್ತಂತೆ. ರಾಜ್ ಕುಮಾರ್ ಎಂಬ 19 ವರ್ಷದ ಯುವಕ, ತನಗೆ ವರನಂತೆ ಪೋಸ್ ಕೊಡಲು ಹಣದ ನೀಡಲಾಗಿತ್ತು, ಅನೇಕರಿಗೆ ಈ ರೀತಿ ಭಾಗವಹಿಸುವಂತೆ ಒತ್ತಾಯಿಸಲಾಯಿತು ಎಂದು ಹೇಳಿದ್ದಾನೆ.
ಈ ಬಗ್ಗೆ ತನಿಖೆ ನಡೆಸಲು ಮತ್ತು ಫಲಾನುಭವಿಗಳನ್ನು ಪರಿಶೀಲಿಸಲು ಅಧಿಕಾರಿಗಳು ತಕ್ಷಣವೇ ತ್ರಿಸದಸ್ಯ ಸಮಿತಿಯನ್ನು ರಚಿಸಿದ್ದಾರೆ. ತನಿಖೆ ಮುಗಿಯುವವರೆಗೂ ಆರೋಪಿಗಳಿಗೆ ಯಾವುದೇ ಹಣ ವರ್ಗಾವಣೆ ಮಾಡುವುದಿಲ್ಲ ಎಂದು ಹೇಳಲಾಗಿದೆ. ಯಾವುದೇ ಹಣಕಾಸಿನ ವಹಿವಾಟುಗಳು ಸಂಭವಿಸುವ ಮೊದಲು ಹಗರಣವನ್ನು ಬಹಿರಂಗಪಡಿಸಲಾಯಿತು, ನಿಜವಾದ ಫಲಾನುಭವಿಗಳಿಗೆ ಉದ್ದೇಶಿಸಲಾದ ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯುತ್ತದೆ. ಈ ಘಟನೆಯು ಅಂತಹ ಸಮುದಾಯದ ಘಟನೆಗಳ ಸಮಗ್ರತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ ಮತ್ತು ಸರ್ಕಾರಿ ಯೋಜನೆಗಳಲ್ಲಿನ ಮೋಸದ ಚಟುವಟಿಕೆಗಳನ್ನು ತಡೆಗಟ್ಟಲು ಕಟ್ಟುನಿಟ್ಟಾದ ಮೇಲ್ವಿಚಾರಣೆಯ ಅಗತ್ಯವನ್ನು ಮತ್ತೆ ಮತ್ತೆ ಒತ್ತಿ ಹೇಳುತ್ತಿದೆ.



Click it and Unblock the Notifications












