Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಟ ವಿಜಯಕಾಂತ್ ಬಗ್ಗೆ ಗೊತ್ತಾ? ತಮಿಳು ನೆಲದಲ್ಲಿ ಕ್ಯಾಪ್ಟನ್ ಆಗಿ ಮೆರೆದಿದ್ದ ಜನನಾಯಕ..!
'ಕ್ಯಾಪ್ಟನ್' ವಿಜಯಕಾಂತ್ ತಮಿಳುನಾಡಿನ ಕೊಟ್ಯಾಂತರ ಅಭಿಮಾನಿಗಳ ಅಗಲಿದ್ದಾರೆ. ತಮಿಳುನಾಡು ಅಷ್ಟೇ ಅಲ್ಲ. ವಿಶ್ವದ ಮೂಲೆ ಮೂಲೆಯಲ್ಲಿ ವಿಜಯ್‌ಕಾಂತ್ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ತಮ್ಮ ನೆಚ್ಚಿನ ನಾಯಕನ ಅಗಲಿಕೆ ಸುದ್ದಿ ಕೇಳಿ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ.
ವಿಜಯಕಾಂತ್ ತಮ್ಮ ಕ್ರಾಂತಿಕಾರಿ ಸ್ವಭಾವದಿಂದಲೇ ಜನಪ್ರಿಯತೆಯನ್ನು ಗಳಿಸಿದ್ದರು. ಸಿನಿಮಾಗಳಲ್ಲೂ ಅಷ್ಟೇ ರೆಬೆಲ್ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಿದ್ದಾರೆ. ಅವರು ತಮಿಳಿನ ಎಂಜಿಆರ್ ಅವರ ಅಭಿಮಾನಿಯಾಗಿದ್ದವರು. ಅವರಂತೆಯೇ ಸಿನಿಮಾದಲ್ಲಿ ನಟಿಸಬೇಕು, ನಾಯಕ ನಟನಾಗಿ ಮಿಂಚಬೇಕು ಅಂತ ಇಚ್ಛೆಪಟ್ಟಿದ್ದರು. ಅವರು ಹಿಡಿದ ಹಾದಿಯಲ್ಲಿಯೇ ವಿಜಯಕಾಂತ್ ನಡೆದು ಬಂದು ಯಶಸ್ವಿಯಾಗಿದ್ದರು.

ಕ್ಯಾಪ್ಟನ್ ಮಾಡಿದ ಸಿನಿಮಾ
ಡಿಎಂಕೆ ಹುಟ್ಟುಹಾಕಿದ್ದ ಅವರು ತಮ್ಮ ಜೀವನದುದ್ದಕ್ಕೂ ಹಲವು ನಾಯಕತ್ವ ವಹಿಸಿದ್ದರು. ಹಲವು ಮೊದಲುಗಳಿಗೆ ಸಾಕ್ಷಿಯಾಗಿದ್ದರು. ಸಾರ್ವಜನಿಕ ರಂಗದಲ್ಲೂ ಅವರೂ ಕ್ಯಾಪ್ಟನ್ ಅಂತಲೇ ಫೇಮಸ್ ಆಗಿಬಿಟ್ಟಿದ್ದರು. ವಿಜಯಕಾಂತ್ 1952ರಂದು ಮುಧುರೈನಲ್ಲಿ ಜನಿಸಿದರು. ಮೊದಲು ಅವರ ಹೆಸರು ವಿಜಯರಾಜ್ ಎಂಬುದಾಗಿತ್ತು. ಆದರೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಅವರು ಕಾಂತ್ ಎಂದು ಸೇರಿಸಿಕೊಂಡಿದ್ದರು. ಇದಾದ ಬಳಿಕ 1991ರಲ್ಲಿ ತೆರೆಕಂಡ 'ಕ್ಯಾಪ್ಟನ್ ಪ್ರಭಾಕರನ್' ಚಿತ್ರದಲ್ಲಿನ ಅವರ ನಟನೆಯ ಬಳಿಕ ಅವರ ಹೆಸರ ಮುಂದೆ ಕ್ಯಾಪ್ಟನ್ ಸಹ ಸೇರಿಕೊಂಡಿತು. ಇದಾದ ಬಳಿಕ ಅವರು ಕ್ಯಾಪ್ಟನ್ ವಿಜಯಕಾಂತ್ ಆಗಿ ಬದಲಾದರು. ಈ ಸಿನಿಮಾದಲ್ಲಿ ಅವರು ಅರಣ್ಯ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಅವರ ಸಿನಿ ಜೀವನದಲ್ಲೇ ಈ ಪಾತ್ರ ಅಚ್ಚಳಿಯದಾಗಿ ಉಳಿದುಕೊಂಡಿತು.
1990ರಲ್ಲಿ ಅವರು ಪ್ರೇಮಲತಾ ಅವರ ಜೊತೆ ವಿವಾಹವಾದರು. ಆಕೆ ವಿಜಯಕಾಂತ್ ಅವರ ಸಿನಿಮಾ ಹಾಗೂ ರಾಜಕೀಯ ಜೀವನಕ್ಕೆ ಬೆನ್ನೆಲುಬಾಗಿ ನಿಂತರು.
ಡಿಎಂಡಿಕೆ ಪಕ್ಷ ಸ್ಥಾಪನೆ
2005ರಲ್ಲಿ ವಿಜಯಕಾಂತ್ ದೇಶಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಪಕ್ಷ ಸ್ಥಾಪಿಸಿದರು. ಈ ವೇಳೆ ತಮಿಳುನಾಡಿನಲ್ಲಿ ಎಐಡಿಎಂಕೆ ಪ್ರಾಬಲ್ಯಯುತ ಪಕ್ಷವಾಗಿ ಹೊರಹೊಮ್ಮಿತ್ತು. ಈ ಪಕ್ಷದ ಎದುರು ವಿಜಯಕಾಂತ್ ಹೋರಾಟಕ್ಕಿಳಿದಿದ್ದರು. 2006ರಲ್ಲಿ ಮೊದಲ ವಿಧಾನಸಭಾ ಚುನಾವಣೆಯಲ್ಲಿಯೇ ಡಿಎಂಡಿಕೆ ಪಕ್ಷ ಯಾರು ಊಹಿಸದ ಗೆಲುವು ಕಂಡಿತು. ವಿಜಯಕಾಂತ್ ಒಬ್ಬರೇ ಪಕ್ಷದಿಂದ ಗೆದ್ದು ಬೀಗಿದರು. ಇದರ ಹೊರತಾಗಿಯೂ ತಮಿಳುನಾಡಿನಲ್ಲಿ ಡಿಎಂಡಿಕೆ ಪಕ್ಷದ ಪ್ರಾಬಲ್ಯಕ್ಕೆ ಕಾರಣವಾಯಿತು.
ವಿಪಕ್ಷ ನಾಯಕರಾದ ವಿಜಯಕಾಂತ್
ಇದಾದ ಬಳಿಕ 2011ರ ಚುನಾವಣೆಯಲ್ಲಿ ಡಿಎಂಡಿಕೆ ಇನ್ನಿಲ್ಲದ ಯಶಸ್ಸು ಕಂಡಿತು. ಎಐಎಡಿಎಂಕೆ ಜೊತೆ ಕೈಜೋಡಿಸಿದ್ದ ವಿಜಯಕಾಂತ್ ಬರೋಬ್ಬರಿ 41 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಇದರಲ್ಲಿ 29 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾದರು. ಇದು ಡಿಎಂಕೆ ಪಕ್ಷಕ್ಕಿಂತ ಅಧಿಕ ಸಂಖ್ಯೆಯಾಗಿತ್ತು. ಈ ಚುನಾವಣೆಯ ಗೆಲುವು ವಿಜಯಕಾಂತ್ ಅವರನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೇರುವಂತೆ ಮಾಡಿತು. 2016ರ ವರೆಗೂ ಅವರೇ ವಿಪಕ್ಷ ನಾಯಕನಾಗಿ ಗುರುತಿಸಿಕೊಂಡಿದ್ದರು.
ಆದರೆ 2016ರ ಚುನಾವಣೆ ಡಿಎಂಡಿಕೆ ಪಕ್ಷಕ್ಕೆ ಹೀನಾಯ ಸೋಲು ತಂದುಕೊಟ್ಟಿತು. ಒಂದೂ ಸ್ಥಾನ ಗೆಲ್ಲದೆ ಸ್ವತಃ ವಿಜಯಕಾಂತ್ ಸಹ ಸೋಲು ಕಂಡರು. ಬಳಿಕ 2019ರಲ್ಲಿ ಎಐಡಿಎಂಕೆ ಹಾಗೂ ಬಿಜೆಪಿ ಜೊತೆ ಹೊಂದಾಣಿಕೆಯೊಂದಿಗೆ ಲೋಕಸಭೆಗೆ ಧುಮುಕಿತು. ಆದರೆ ಇಲ್ಲೂ ಸೋಲಾಗಿತ್ತು. ಈ ಚುನಾವಣೆ ಬಳಿಕ ವಿಜಯಕಾಂತ್ ರಾಜಕೀಯದಿಂದ ದೂರಾದರು. ಅವರ ಪತ್ನಿ ಡಿಎಂಡಿಕೆ ಪಕ್ಷದ ಅಧಿಕಾರ ಮುಂದುವರೆಸಿದರು.
ನಟ ಮತ್ತು ರಾಜಕಾರಣಿಯಾಗಿ ಅವರ ವೃತ್ತಿಜೀವನದ ಜೊತೆಗೆ, ವಿಜಯಕಾಂತ್ ಅವರು ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದರು ಮತ್ತು ಕ್ಯಾಪ್ಟನ್ ಟಿವಿ ಎಂಬ ಚಾನೆಲ್ ಅನ್ನು ಸ್ಥಾಪಿಸಿದರು. ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.



Click it and Unblock the Notifications