Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಅಗತ್ಯ ವಸ್ತುಗಳು ಸೇರಿ 50 ಸಾವಿರ ಇಟ್ಟುಕೊಳ್ಳಲು ಹೇಳಿದ್ಯಾ ಸರ್ಕಾರ: ವೈರಲ್ ಪೋಸ್ಟ್ ಸತ್ಯತೆ ಏನು?
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಗೆ ಪ್ರತಿಕಾರವಾಗಿ ಭಾರತ ಈಗ ಪಾಕಿಸ್ತಾನದ ವಿರುದ್ಧ ದಾಳಿ ನಡೆಸುತ್ತಿರುವುದು ಇಡೀ ವಿಶ್ವದಾದ್ಯಂತ ಸುದ್ದಿಯಾಗುತ್ತಿದೆ. ಅದರಲ್ಲೂ ಹಲವು ಕಡೆಗಳಿಂದ ಭಾರತ ದಾಳಿ ಮಾಡುತ್ತಿರುವುದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಭಾರತದ ಹಾಗೂ ಪಾಕ್ ನಡುವಿನ ಉದ್ವಿಗ್ನತೆ ಹೆಚ್ಚಾಗಲು ಇದು ಕಾರಣವಾಗಿದೆ. ಇದೆಲ್ಲದರ ನಡುವೆ ಈಗ ಈ ಸಮಯವನ್ನೇ ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಲವು ನಕಲಿ ಸುದ್ದಿಗಳು, ವಿಡಿಯೋಗಳ ಹರಿಬಿಡಲಾಗಿದೆ. '
ಎರಡು ದೇಶದಗಳ ನಡುವಿನ ಯುದ್ಧದ ಆತಂಕದಿಂದಾಗಿ ವಿಮಾನಯಾನ, ರೈಲ್ವೆ, ಸಮಯದಲ್ಲಿ ಬದಲಾವಣೆ ಹಾಗೆ ಪ್ರವಾಸಿಗರು ಕೆಲವು ಸ್ಥಳಗಳಿಗೆ ತೆರಳದಂತೆ ಸೂಚಿಸಲಾಗಿದೆ. ಹಾಗೆ ಆನ್‌ಲೈನ್‌ನಲ್ಲಿ ಹರಡಲಾಗಿರುವ ಮಾಹಿತಿಗಳು ನಿಜವಲ್ಲ ಎನ್ನಲಾಗಿದೆ. ಸೇನೆಯ ಕುರಿತಾದ ಮಾಹಿತಿ ಹಾಗೆ ಆಪರೇಷನ್ ಸಂಬಂಧಿಸಿದಂತೆ ಅಧಿಕೃತ ಖಾತೆಗಳಲ್ಲಿ ಹಂಚಿಕೊಳ್ಳಲಾದ ಮಾಹಿತಿಯನ್ನಷ್ಟೇ ಹಂಚಿಕೊಳ್ಳಬಹುದಾಗಿದೆ.

ಆದ್ರೆ ಈಗ ಎರಡು ದೇಶಗಳ ನಡುವಿನ ಉದ್ವಿಗ್ನತೆ ಸಂಬಂಧ ದೇಶದಲ್ಲಿ ಮತ್ತೊಂದು ಸುದ್ದಿ ಹರಡುತ್ತಿದೆ. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಮೊದಲೇ ಖರೀದಿಸಿಕೊಂಡು ಹಾಗೆ ಮನೆಯಲ್ಲಿ ಕನಿಷ್ಠ 50 ಸಾವಿರ ಹಣವನ್ನು ಕಷ್ಟದ ಸಮಯಕ್ಕೆ ಇಟ್ಟುಕೊಳ್ಳುವಂತೆ ಪೋಸ್ಟರ್‌ವೊಂದು ಹರಿದಾಡುತ್ತಿದೆ. ಯುದ್ಧ ಭೀತಿ ಹಿನ್ನೆಲೆ ದೇಶದಲ್ಲಿ ಸೂಪರ್ ಮಾರ್ಕೆಟ್‌ಗಳು, ಎಟಿಎಂ, ಬ್ಯಾಂಕ್‌ಗಳು ಮುಚ್ಚಬಹುದು ಎಂಬ ಆತಂಕಕಾರಿ ವಿಚಾರವನ್ನು ಕೂಡ ಹರಡಲಾಗಿದೆ.
ಭಾರತ ಸರ್ಕಾರ ಹೊರಡಿಸಿದೆ ಎಂದು ಈ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ. ಗಡಿ ಪ್ರದೇಶಗಳಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಸರ್ಕಾರವು ನಾಗರಿಕರು ಕನಿಷ್ಠ ₹50,000 ನಗದು, ಎರಡು ತಿಂಗಳವರೆಗೆ ಔಷಧಿಗಳು, ಆಹಾರ, ನೀರು, ಟಾರ್ಚ್‌ಗಳು, ಪವರ್ ಬ್ಯಾಂಕ್‌ಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಮನೆಯಲ್ಲಿಯೇ ಸಂಗ್ರಹಿಸಲು ಸೂಚಿಸಿದೆ ಎಂದು ಪೋಸ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಆದ್ರೆ ಭಾರತದ ಸರ್ಕಾರದ ಹೆಸರಿನಲ್ಲಿ ಹರಡಲಾದ ಈ ಮಾಹಿತಿ ನಕಲಿಯಾಗದೆ. ಸರ್ಕಾರವು ಅಂತಹ ಯಾವುದೇ ಸಲಹೆಯನ್ನು ನೀಡಿಲ್ಲ. ಮೇ 06, 2025 ರಂದು, ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋದ ಸತ್ಯ-ಪರಿಶೀಲನಾ ಘಟಕವು ಈ ಸುದ್ದಿ ಸುಳ್ಳು ಎಂದು ದೃಢೀಕರಿಸಿದೆ. ಹಾಗೆ ಈ ರೀತಿಯ ಹೇಳಿಕೆಯನ್ನು ಸರ್ಕಾರವು ಬಿಡುಗಡೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗೆ ಗೃಹ ಸಚಿವಾಲಯ, ರಕ್ಷಣಾ ಸಚಿವಾಲಯ, ಸೇರಿ ಯಾವುದೇ ಅಧಿಕೃತ ಸೈಟ್‌ನಲ್ಲಿ ಈ ಕುರಿತಾದ ಮಾಹಿತಿ ಹಂಚಿಕೊಂಡಿಲ್ಲ ಎಂದು ತಿಳಿದುಬಂದಿದೆ.
ಇದೇ ರೀಗತಿಯ ಪೋಸ್ಟ್‌ಗಳನ್ನು ಎಕ್ಸ್ ಖಾತೆಗಳಲ್ಲಿ ಹಂಚಕೊಳ್ಳಲಾಗಿದೆ. ಅದೆಲ್ಲವೂ ನಕಲಿಯಾಗಿವೆ ಎಂದು ತಿಳಿದುಬಂದಿದೆ. ಅದೇ ರೀತಿ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್‌ನ ಕೆಳಗೆ ಇದು ನಕಲಿ ಎಂಬ ಟಿಪ್ಪಣಿ ಸಹ ನೋಡಬಹುದು. ಸರ್ಕಾರವು ಅಂತಹ ಯಾವುದೇ ಸಲಹೆಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ವಿಶ್ವಾಸಾರ್ಹ ಮಾಹಿತಿಗಾಗಿ ಜನರು ಅಧಿಕೃತ ಸರ್ಕಾರಿ ಮೂಲಗಳನ್ನು ಮಾತ್ರ ಅವಲಂಬಿಸಬೇಕೆಂದು ಅದು ಒತ್ತಾಯಿಸಿದೆ.
ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ನಾಗರಿಕರು ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ₹50,000 ನಗದು ಇಟ್ಟುಕೊಳ್ಳುವಂತೆ ಒತ್ತಾಯಿಸುವ ಈ ವೈರಲ್ ಸಲಹೆಯು ನಕಲಿಯಾಗಿದೆ. ಸರ್ಕಾರ ಈ ರೀತಿಯಾಗಿ ಯಾವುದೇ ಸಲಹೆಯನ್ನು ನೀಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದೊಂದೆ ಅಲ್ಲ ಯುದ್ದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ರೀತಿಯ ನಕಲಿ ಸುದ್ದಿಗಳ ಜೆರಡಲಾಗುತ್ತಿದೆ. ಹಾಗೆ ಸೇನೆಯ ಕುರಿತಾದ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ಮನವಿ ಕೂಡ ಮಾಡಲಾಗಿದೆ. ನಿಖರ ಹಾಗೂ ಅಧಿಕೃತ ಸ್ಚಿವಾಲಯದ ಸಮಾಜಿಕ ಜಾಲತಾಣದ ಖಾತೆಗಳ ಪರಿಶೀಲಿಸುವಂತೆಯೂ ಹೇಳಲಾಗಿದೆ.



Click it and Unblock the Notifications
