Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
Budget 2025: ಎಲ್‌ಪಿಜಿ ದರ ಇಳಿಕೆಯಾಗುತ್ತಾ? ಬಜೆಟ್‌ನಿಂದ ಜನರ ನಿರೀಕ್ಷೆ ಏನು?
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಬಜೆಟ್ ಅನ್ನು ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಇದೇ ಫೆಬ್ರವರಿ 1ರಂದು ಶನಿವಾರ ಬಜೆಟ್ ಮಂಡನೆಗೆ ಸಕಲ ತಯಾರಿ ನಡೆದಿದೆ. ಈ ನಡುವೆ ಬಜೆಟ್‌ನಿಂದ ಜನಸಾಮಾನ್ಯರಿಗೆ ಯಾವ ರೀತಿ ಕೊಡುಗೆ ನೀಡಲಿದ್ದಾರೆ. ಯಾವೆಲ್ಲಾ ತೆರಿಗೆಯಿಂದ ವಿನಾಯಿತಿ ಸಿಗಲಿದೆ ಎಂಬುದು ಚರ್ಚೆಯಾಗುತ್ತಿದೆ.
ಅದರಲ್ಲೂ ಫೆಬ್ರವರಿ 1ರಂದು ಮಂಡಿಸುತ್ತಿರುವ ಬಜೆಟ್‌ನಲ್ಲಿ ಮಧ್ಯಮ ವರ್ಗದ ನಿರೀಕ್ಷೆಗಳು, ಬೇಡಿಕೆಗಳು ಈಡೇರಲಿದ್ಯಾ ಎಂಬ ಕುತೂಹಲವು ಇದೆ. ಹಾಗೆ ಎಲ್ಲರ ಗಮನ ಈಗ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರದ ಕಡೆಗೆ ನಿಟ್ಟಿದೆ. ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನವೇ ದರ ಪರಿಷ್ಕರಣೆಗೆ ಮುಂದಾಗಲಿವೆ. ಆದರೆ ಇದೇ ದಿನ ಬಜೆಟ್ ಕೂಡ ಇರುವುದರಿಂದ ಈ ಬಾರಿ ಎಲ್‌ಪಿಜಿ ದರ ಇಳಿಕೆಯಾಗಲಿದ್ಯಾ ಎಂಬ ಕುತೂಹಲ ಮೂಡಿದೆ.

ಈ ಬಾರಿಯ ಬಜೆಟ್‌ನಿಂದ ಜನರ ನಿರೀಕ್ಷೆ ಏನು?
ಕಳೆದ ಬಾರಿ ಚುನಾವಣಾ ವರ್ಷ ಆಗಿದ್ದ ಕಾರಣ ಮಧ್ಯಂತರ ಬಜೆಟ್ ಹಾಗೂ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸಲಾಗಿತ್ತು. ಈ ಸಮಯದಲ್ಲಿ ಎಲ್‌ಪಿಜಿ ದರ ಇಳಿಕೆ ಆಗಿದ್ದಲ್ಲದೆ ಏರಿಕೆಯೂ ಆಗಿತ್ತು. ಮಧ್ಯಂತರ ಬಜೆಟ್ ವೇಳೆಗೆ ಎಲ್‌ಪಿಜಿ ದರ ಏರಿಕೆಯಾಗಿತ್ತು. ಆದರೆ ಮತ್ತೆ ಜುಲೈನಲ್ಲಿ ಘೊಷಿಸಲಾದ ಪೂರ್ಣಾವಧಿ ಬಜೆಟ್‌ನಲ್ಲಿ ಮೆಟ್ರೋ ನಗರದಲ್ಲಿ 19 ಕೆ.ಜಿ ಸಿಲಿಂಡರ್ ಬೆಲೆ 30 ರೂಪಾಯಿ ಕಡಿಮೆ ಮಾಡಲಾಗಿತ್ತು. ಇನ್ನು ಈ ಬಾರಿ ಎಲ್‌ಪಿಜಿ ಗ್ಯಾಸ್ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸುವ ಸೂಚನೆ ಇದೆ. ಒಂದು ವೇಳೆ ಸಬ್ಸಿಡಿಯನ್ನು ಶೇ.8ರಷ್ಟು ಹೆಚ್ಚಿಸಿದರೆ ಎಲ್‌ಪಿಜಿ ದರದಲ್ಲಿ ಇಳಿಕೆಯಾಗಬಹುದು ಎಂಬ ನಿರೀಕ್ಷೆ ಇಡಲಾಗಿದೆ.
ವೇತನ ಪಡೆಯುವವರು ನಿರಾಳ?
ಈ ಬಾರಿಯ ಬಜೆಟ್ ವೇತನ ಪಡೆಯುವ ಮಂದಿಗೆ ತೆರಿಗೆ ವಿನಾಯಿತಿಗೆ ಕಾರಣವಾಗುವ ನಿರೀಕ್ಷೆ ಇಡಲಾಗಿದೆ. ಕಳೆದ ಬಜೆಟ್‌ನಲ್ಲಿ 7 ಲಕ್ಷ ರೂಪಾಯಿ ವರೆಗೆ ವಾರ್ಷಿಕ ವೇತನ ಪಡೆಯುವ ಉದ್ಯೋಗಿಗಳಿಗೆ ಯಾವುದೇ ತೆರಿಗೆ ವಿಧಿಸಿರಲಿಲ್ಲ. ಹಾಗೆ ಈ ನಡುವೆ ಹೊಸ ತೆರಿಗೆ ನೀತಿ ಜಾರಿಯಾಗುವ ನಿರೀಕ್ಷೆ ಕೂಡ ಇದೆ.
ಬೆಂಗಳೂರಿಗರ ಬೇಡಿಕೆಗಳೇನು?
ಕಳೆದ ಬಜೆಟ್‌ನಲ್ಲಿ ನಿರೀಕ್ಷೆಗೆ ತಕ್ಕಂತೆ ಬೆಂಗಳೂರಿಗರಿಗೆ ಹೊಸದೇನು ಸಿಕ್ಕಿರಲಿಲ್ಲ. ಆದ್ರೆ ಈ ಬಜೆಟ್‌ನಲ್ಲಿ ಹೊಸದಾಗಿ ಟನಲ್ ರಸ್ತೆ ನಿರ್ಮಾಣ ಸಂಬಂಧ ಅನುದಾನ ನಿರೀಕ್ಷಿಸಲಾಗಿದೆ. ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ 18 ಕಿ,ಮೀ ಟನಲ್ ರಸ್ತೆ ನಿರ್ಮಾಣಕ್ಕೆ 15 ಸಾವಿರ ಕೋಟಿ ರೂಪಾಯಿ ಅನುದಾನದ ನಿರೀಕ್ಷೆ ಮಾಡಲಾಗಿದೆ.
ಮೆಟ್ರೋ ರೈಲು ಮಾರ್ಗಗಳಿಗೆ 5 ಕಾರಿಡಾರ್ ವಿಸ್ತರಣೆ ಪ್ರಸ್ತಾಪ, ಮೆಲ್ಸೇತುವೆ, ಕಾವೇರಿ ನದಿ ನೀರು ಪೂರೈಕೆ ಸಂಬಂಧ 5ನೇ ಹಂತದ ಯೋಜನೆಗೆ ಅನುದಾನ ಘೋಷಣೆಯ ನಿರೀಕ್ಷೆ ಮಾಡಲಾಗಿದೆ.
ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಜಿಎಸ್‌ಟಿ ಅಡಿ ತರುವ ಸಂಭಾವನೀಯ ದೃಷ್ಟಿಕೋನಕ್ಕೆ ಈ ಬಜೆಟ್‌ನಲ್ಲಿ ಹೊಸದಾಗಿ ಕಾನೂನು ಕುರಿತ ವಿಶ್ಲೇಷಣೆ ಪಡೆಯಬಹುದು. ಇಲ್ಲವೆ ತೈಲದ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.



Click it and Unblock the Notifications
