Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಬಲಶಾಲಿ ಭೀಮ ಏಕೆ ಫೇಮಸ್! ಆತನ ಹಿಂದಿದೆ ಸಿನಿಮಾದಂತಹ ಸ್ಟೋರಿ..ನೀವು ಕೇಳಿದ್ದೀರಾ?
ದಸರಾ ಎಂದ ತಕ್ಷಣ ನಿಮಗೆ ಮೈಸೂರು ನೆನಪಾಗಬಹುದು, ಹಾಗೆ ಮೈಸೂರು ದಸರಾ ಅಂದರೆ ಎಲ್ಲರಿಗೂ ನೆನಪಾಗೋದು ಜಂಜೂಸವಾರಿ. ವಿಶ್ವ ಪ್ರಸಿದ್ಧ ಜಂಬೂಸವಾರಿ ವೀಕ್ಷಣೆಗೆ ಲಕ್ಷ ಲಕ್ಷ ಜನ ಸೇರುತ್ತಾರೆ. ಹಾಗೆ ಜಂಬೂವಾರಿಯಲ್ಲಿ ಚಿನ್ನದ ಅಂಬಾರಿ ಹಾಗೆ ಅಂಬಾರಿ ಮೇಲೆ ವಿರಾಜಮಾನಳಾಗಿ ಕುಳಿತ ಜಾಮುಂಡಿಯನ್ನು ಎಲ್ಲರು ಕಣ್ತುಂಬಿಕೊಳ್ಳುತ್ತಾರೆ.
ಹಾಗೆ ಅಂಬಾರಿ ಎಷ್ಟು ಮುಖ್ಯವೋ ಹಾಗೆ ಅಂಬಾರಿ ಹೊರುವಂತಹ ಆನೆಯೂ ಕೂಡ ಅಷ್ಟೇ ಮುಖ್ಯ. ಭಾರತೀಯ ಇತಿಹಾಸ ಹಾಗೂ ಪರಂಪರೆಯಲ್ಲಿ ಆನೆಗಳಿಗೆ ದೇವರ ಸ್ಥಾನ ನೀಡಲಾಗಿದೆ. ಸಾಕ್ಷಾತ್ ಗಜಮುಖನಾಗಿ ಗಣೇಶನ ಪ್ರತಿರೂಪಕವಾಗಿ ಪೂಜ್ಯ ಭಾವದಿಂದ ನೋಡಲಾಗುತ್ತದೆ. ದಸರಾ ಆನೆಗಳು ಅಂದ್ರೆ ಎಲ್ಲರಿಗೂ ಬಹಳ ಪ್ರೀತಿ.

ಈ ಆನೆಗಳು ದಶಕಗಳಿಂದ ದಸರಾದಲ್ಲಿ ಪಾಲ್ಗೊಳ್ಳುವುದು ನೋಡಬಹುದು. ಆದ್ರೆ ಈ ಆನೆಗಳ ಪೈಕಿ ಈಗ ಎಲ್ಲರ ಫೇವರಿಟ್ ಆಗಿರೋದು ಭೀಮ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಎಲ್ಲರ ಸೆಳೆಯುವ ಆನೆ ಭೀಮ. ಅಂಬಾರಿ ಹೊರುವ ಆನೆ ಅಲ್ಲದಿದ್ದರೂ ಭೀಮನಷ್ಟು ಪ್ರಸಿದ್ಧಿ ಪಡೆದಿರುವ ಮತ್ತೊಂದು ಆನೆಯಿಲ್ಲ.

ಅರಮನೆಯ ಪಟ್ಟದಾನೆ ಆಗಿರುವ ಭೀಮ ಈಗ ರಾಜ್ಯದಲ್ಲೆಡೆ ಸುದ್ದಿಯಾಗುತ್ತಿರುವ ಆನೆ. ಅಂಬಾರಿ ಹೊರುವ ಅಭಿಮನ್ಯುವಿಗಿಂತಲೂ ಭೀಮನ ಅಭಿಮಾನಿಗಳೇ ಹೆಚ್ಚು. ಹಾಗಾದ್ರೆ ಭೀಮ ಏಕೆ ಅಚ್ಚು ಮೆಚ್ಚಿನ ಆನೆ ಅನ್ನೋದು ನಿಮಗೆ ಗೊತ್ತಾ? ಈ ಭೀಮನ ವಿಶೇಷತೆಗಳೇನು ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ದಸರಾ ಆನೆಗಳ ಪೈಕಿ ಬಹುತೇಕರ ನೆನಪಿನಲ್ಲಿ ಉಳಿದಿರುವ ಆನೆಯ ಹೆಸರು ಭೀಮ. ಅಚ್ಚರಿ ಅಂದರೆ ಕ್ಯಾಪ್ಟನ್ ಅಭಿಮನ್ಯೂಗಿಂತಲೂ ಈತನೇ ಬಲಶಾಲಿ. ತೂಕದಲ್ಲಿ ಅಭಿಮನ್ಯೂ ಮೀರಿಸುವ ಭೀಮ ಮಗುವಿನಂತ ಮನಸ್ಸಿನವನು. ಆದ್ರೆ ಎಂತಹ ಕಠಿಣ ಪರಿಸ್ಥಿತಿಯ ಕಾರ್ಯಾಚರಣೆಯಲ್ಲೂ ಭಾಗಿಯಾಗಿ ಕಾಡಾನೆಗಳ ಸೊಕ್ಕು ಇಳಿಸುವ ಬಲಶಾಲಿ ಆತ.
ಭೀಮನ ಕಥೆ ಏನು ಗೊತ್ತಾ?
ಈಗ ಎಲ್ಲರ ಗಮನ ಸೆಳೆಯುತ್ತಿರುವ ಭೀಮ 2002ರಲ್ಲಿ ಅತ್ಯಂತ ಕೋಪಿಷ್ಟ ಆನೆ. ನಾಗರಹೊಳೆ ಅಭಯಾರಣ್ಯದ ಮತ್ತಿಗೆ ಗೂಡು ವಲಯದ ಭೀಮನಕಟ್ಟೆ ಎಂಬಲ್ಲಿ ಈ ಆನೆಯನ್ನು ಸೆರೆ ಹಿಡಿಯಲಾಗಿತ್ತು. ತಾಯಿ ಆನೆಯಿಂದ ಬೇರ್ಪಟ್ಟು ಅಲೆದಾಡುತ್ತಿದ್ದ ಸಣ್ಣ ಮರಿಯಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದರು.
ಗುಂಪಿನಿಂದ ಬೇರ್ಪಟ್ಟಿದ್ದ ಮರಿ ಆನೆ ಘೀಳಿಡುತ್ತಾ ಓಡಾಡುತ್ತಿತ್ತು, ಅದನ್ನು ಮರಳಿ ಗುಂಪಿಗೆ ಸೇರಿಸಲು ಹರಸಾಹಸ ಮಾಡಲಾಗಿತ್ತು. ಆದರೆ ಸತತ 2ರಿಂದ 3 ದಿನಗಳ ಕಾರ್ಯಾಚರಣೆ ನಡೆಸಿದರು ತಾಯಿ ಆನೆಯ ಪತ್ತೆಯಾಗಿರಲಿಲ್ಲ. ಬಳಿಕ ಅಧಿಕಾರಿಗಳ ಗಮನಕ್ಕೆ ತಂದು ಈ ಗಂಡು ಮರಿಯನ್ನು ಮತ್ತಿಗೆ ಗೂಡು ಆನೆ ಕ್ಯಾಂಪ್‌ಗೆ ಕರೆತರಲಾಗಿತ್ತು.
ಬಾಟಲಿ ಬಾಟಲಿ ಹಾಲನ್ನು ಒಮ್ಮೆಲೆ ಕುಡಿಯುತ್ತಿದ್ದ ಅದರ ಸ್ವಭಾವ ಕಂಡು ಅದಕ್ಕೆ ಭೀಮ ಎಂದು ಹೆಸರಿಡಲಾಗಿತ್ತು. ತುಂಟಾಟ ಆಡುತ್ತಿದ್ದ ಆನೆ ಮರಿ ನೋಡು ನೋಡುತ್ತಲೇ ಬೃಹತ್ ಗಾತ್ರದಲ್ಲಿ ಬೆಳೆದು ನಿಂತಿತ್ತು. ಈಗ ಈ ಭೀಮನಿಗೆ 25 ವರ್ಷ ವಯಸ್ಸಾಗಿದೆ. ಆದ್ರೆ ಇಂದಿಗೂ ಮಗುವಿನಂತೆ ಇದನ್ನು ನೋಡಿಕೊಳ್ಳಲಾಗುತ್ತಿದೆ.
ದನಗಳೊಂದಿಗೆ ಊರಿಗೆ ಬಂದಿದ್ದ ಭೀಮ
ಭೀಮನಿಗೆ ಆಗಿನ್ನು 6 ತಿಂಗಳು ತಾಯಿಯಿಂದ ಬೇರ್ಪಟ್ಟಿದ್ದ ಅನೆ ಮರಿ ಇದು. ಕಾಡಿನಲ್ಲಿ ಮೇಯಲು ಹೋಗಿದ್ದ ದನಗಳ ಜೊತೆಗೆ ಊರು ಸೇರಿತ್ತು. ಭೀಮನಕಟ್ಟೆ ಬಳಿ ಇರುವ ಅಳ್ಳೂರು ಗ್ರಾಮವನ್ನು ಪ್ರವೇಶಿಸಿತ್ತು. ನೋಡಲು ಪುಟ್ಟದಾದ ಮರಿಯನ್ನು ಗ್ರಾಮಸ್ಥರು ಮೊದಲು ಆರೈಕೆ ಮಾಡಿದ್ದರು. ಆನೆ ಮರಿಗೆ ಪೂಜೆ ಮಾಡಿ, ಊರಿನಲ್ಲಿ ಮೆರವಣಿಗೆ ಕೂಡ ಮಾಡಿದರು. ಬಳಿಕ ನೇರವಾಗಿ ಅರಣ್ಯ ಇಲಾಖೆಗೆ ಒಪ್ಪಿಸಿದರು. ಆದರೆ ಮರಳಿ ಕಾಡಿಗೆ ಬಿಡುವ ಇಲಾಖೆಯ ಪ್ರಯತ್ನ ವಿಫಲವಾಗಿತ್ತು.

ಭೀಮನ ಸಾಕಿದವರು ಯಾರು?
ಅರಣ್ಯ ಇಲಾಖೆ ಸುಪರ್ದಿಗೆ ಬಂದಿದ್ದ ಭೀಮನನ್ನು ಸಾಕುವುದು ದೊಡ್ಡ ಜವಾಬ್ದಾರಿಯಾಗಿತ್ತು. ಮತ್ತಿಗೆ ಗೂಡು ಮತ್ತಿಗೆ ಗೂಡು ಆನೆ ಕೇಂದ್ರದಲ್ಲಿ ಮಾವುತರಾಗಿದ್ದ ಕುಳ್ಳರಾಮ ಎಂಬುವರ ಹೆಗಲಿಗೆ ಭೀಮನ ಸಾಕುವ ಹೊಣೆಗಾರಿಕೆ ನೀಡಲಾಗಿತ್ತು. ಬಳಿಕ ಕುಳ್ಳರಾಮ ದಂಪತಿ ಭೀಮ ಬೆಳೆಸುವ ಜವಾಬ್ದಾರಿ ತೆಗೆದುಕೊಂಡರು. ಇದೇ ಸಮಯದಲ್ಲಿ ಭೀಮನ ಜೊತೆಗೆ 6ಕ್ಕೂ ಹೆಚ್ಚು ಮರಿಗಳಿದ್ದವು. ಆದ್ರೆ ಅದರಲ್ಲಿ ಬದುಕುಳಿದಿದ್ದು ಭೀಮ ಮಾತ್ರ. ಭೀಮನನ್ನು ಸ್ವಂತ ಮಗನ ಹಾಗೆ ಬೆಳೆಸಿದ್ದರು.
ಅಂಬಾರಿ ಹೊರುವ ಜವಾಬ್ದಾರಿಯೂ ಆತನದ್ದೆ
ಅಂಬಾರಿ ಹೊರುತ್ತಿರುವ ಕ್ಯಾಪ್ಟನ್ ಅಭಿಮನ್ಯು ಸದ್ಯದಲ್ಲೇ ನಿವೃತ್ತಿಯಾಗಲಿದ್ದಾನೆ. ಇದಾದ ಬಳಿಕ ಅಂಬಾರಿ ಹೊರುವುದು ಭೀಮ ಎನ್ನಲಾಗುತ್ತಿದೆ. ಸಮತಟ್ಟಾದ ಬೆನ್ನು ಹಾಗೆ ಉದ್ದವಾಗಿರಬೇಕು. ಅಲ್ಲದೆ ಬಲಶಾಲಿಯೂ ಆಗಿರಬೇಕು. ಸದ್ಯ ಭೀಮನಿಗೆ ಈ ಎಲ್ಲಾ ಲಕ್ಷಣಗಳೂ ಇವೆ. ಅಭಿಮನ್ಯುವಿನ ನಿವೃತ್ತಿ ಬಳಿಕ ಭೀಮನೇ ಅಂಬಾರಿ ಹೊರಲಿದ್ದಾನೆ ಎಂದು ಹೇಳಲಾಗಿದೆ.
ಭೀಮ 2017 ರಲ್ಲಿ ಮೊದಲ ಬಾರಿಗೆ ದಸರಾಗೆ ಹಬ್ಬದಲ್ಲಿ ಭಾಗಿಯಾಗಲು ಆಯ್ಕೆಯಾಗುತ್ತಾನೆ. ಅರಮನೆ ಪಟ್ಟದಾನೆಯಾಗಿ ಭೀಮನನ್ನು ಅರಮನೆ ಮೈದಾನದಲ್ಲಿ ತಾಲೀಮಿಗಾಗಿ ಕರೆತರಲಾಗುತ್ತದೆ. ಇದಾದ ಬಳಿಕ 4 ವರ್ಷಗಳ ಕಾಲ ಸಾಲಾನೆಯಾಗಿ ತದನಂತರ 2022 ರಿಂದ ಪಟ್ಟದ ಆನೆಯಾಗಿ ಆಯ್ಕೆಯಾಗುತ್ತಿದೆ.
ಕಾರ್ಯಾಚರಣೆಯಲ್ಲಿ ನಂಬರ್ ಒನ್ ಭೀಮ
25 ವರ್ಷದ ಭೀಮ ಹಲವು ಖೆಡ್ಡಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಸೈ ಎನಿಸಿಕೊಂಡಿದೆ. ಕಾಡಿನಿಂದ ನಾಡಿಗೆ ಬಂದು ಪುಂಡಾಟ ಮೆರೆಯುತ್ತಿದ್ದ ಕಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಅಭಿಮನ್ಯು, ಪ್ರಶಾಂತ, ಹರ್ಷ ಆನೆಯೊಂದಿಗೆ ಮುಂಚೂಣಿಯಲ್ಲಿ ಪಾಲ್ಗೊಳ್ಳುವ ಭೀಮ ಎಂದಿಗೂ ಹಿಂದೇಟು ಹಾಕಿದವನಲ್ಲ.
ಆನ್‌ಲೈನ್‌ನಲ್ಲಿ ಭೀಮನದ್ದೆ ಹವಾ
ಆನ್‌ಲೈನ್‌ನಲ್ಲಿ ಎಲ್ಲಿ ನೋಡಿದ್ರು ಭೀಮನ ಗಜಗಾಂಭೀರ್ಯ ನಡೆಯ ಜೊತೆಗೆ ಒಂದಿಷ್ಟು ತುಂಟಾಟದ ವಿಡಿಯೋಗಳು, ಜನರತ್ತ ನಮಸ್ಕರಿಸುವುದು, ಮಾವುತನೊಂದಿಗೆ, ಮಾವುತನ ಮಕ್ಕಳು, ದಸರಾ ನೋಡಲು ಬರುವ ಜನರೊಂದಿಗೆ ಬೆರೆತ ವಿಡಿಯೋಗಳು ಸಿಗುತ್ತವೆ. ಹೀಗಾಗಿ ಭೀಮನಿಗೀಗ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. ಒಮ್ಮೆ ಪ್ರೀತಿ ಭೀಮ ಎಂದು ಕೂಗಿದರೆ ಸಾಕು ಸೊಂಡಿಲು ಎತ್ತಿ ಅವರತ್ತ ತಿರುಗುವ ಮಹಾಕಾಯ ಆತನಾಗಿದ್ದಾನೆ.



Click it and Unblock the Notifications
