Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರಸ್ತೆ ಬದಿ ಕಸ ಆರಿಸುತ್ತಿದ್ದವ ಇಂಜಿನಿಯರ್..! ಮಾತನಾಡಿಸಿದ ಯುವಕರಿಗೆ ಕಾದಿತ್ತು ಅಚ್ಚರಿ..!!
ಇತ್ತೀಚಿಗೆ ಯುವ ಜನೆಯ ದೊಡ್ಡ ಸಮಸ್ಯೆ ಓದು. ಏಕೆಂದರೆ ಓದು ಈಗ ದೊಡ್ಡ ಉದ್ಯಮ, ಹಾಗೆ ದೇಶದ ಬಹುದೊಡ್ಡ ಸಮಸ್ಯೆ ನಿರುದ್ಯೋಗ. ಡಿಗ್ರಿ ಕೈಯಲ್ಲಿ ಹಿಡಿದು ಹೊರಬರುವ ಮಂದಿಗೆಲ್ಲ ಉದ್ಯೋಗ ನೀಡುವುದು ಕನಸಿನ ಮಾತು. ಹೀಗಾಗಿ ಅದೆಷ್ಟೋ ಮಂದಿ ಕೆಲಸ ಸಿಗದೆ ನಿರುದ್ಯೋಗಿಗಳಾಗುತ್ತಾರೆ. ಮತ್ತೆ ಕೆಲವರು ಕೆಲಸ ಸಿಗದ ನೋವಿನಲ್ಲಿ ಜೀವನವನ್ನೇ ಅಂತ್ಯಗೊಳಿಸಿಕೊಳ್ಳುವಂತಹ ಕೃತ್ಯಕ್ಕೆ ಕೈ ಹಾಕುತ್ತಾರೆ.
ಆದ್ರೆ ಇತ್ತೀಚಿಗೆ ತಾವು ಓದಿದ್ದು ಒಂದು ಕ್ಷೇತ್ರವಾದರೆ ಯುವಕ ಯುವತಿಯರು ಕೆಲಸ ಮಾಡುವುದೇ ಮತ್ತೊಂದು ಕ್ಷೇತ್ರದಲ್ಲಿ ಎನ್ನುವಂತಾಗಿದೆ. ಅದರಲ್ಲೂ ಕೆಲವರು ಕಡಿಮೆ ಸಂಬಳಕ್ಕೆ ತಮಗೆ ಸಂಬಂಧಿಸದ ಇನ್ಯಾವುದೋ ಕ್ಷೇತ್ರದಲ್ಲಿ ದುಡಿಯುತ್ತಾರೆ. ಹೀಗಾಗಿ ಅವರ ಓದಿಗೆ ಈಗ ಬೆಲೆ ಇಲ್ಲದಂತಾಗಿದೆ.

ಅದರಲ್ಲೂ ಭಾರತ ಇಂಜಿನಿಯರ್‌ಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡುತ್ತಿರುವ ದೇಶ. ಒಂದು ವರ್ಷಕ್ಕೆ ಲಕ್ಷಾಂತರ ಮಂದಿ ಇಂಜಿನಿಯರಿಂಗ್ ಪದವಿ ಪಡೆದು ಹೊರಬರುತ್ತಾರೆ. ಅವರೆಲ್ಲು ಕಂಪನಿಗಳಿಗೆ ತಮ್ಮ ಫೈಲ್ ಹಿಡಿದು ಅಲೆಯುತ್ತಾರೆ. 100 ಮಂದಿ ಇಂಜಿನಿಯರ್‌ಗಳಲ್ಲಿ ಒಂದಿಷ್ಟು ಮಂದಿ ಮಾತ್ರ ಕೆಲಸ ಗಿಟ್ಟಿಸುತ್ತಾರೆ. ಉಳಿದವರು ಮತ್ತೆ ಬೇರೆ ಕಂಪನಿಗಳತ್ತ ಮುಖ ಮಾಡುತ್ತಾರೆ.
ಈ ರೀತಿ ಭಾರತದಲ್ಲಿ ನಡೆಯುತ್ತಲೇ ಇದೆ. ಆದ್ರೆ ಇಲ್ಲೊಬ್ಬ ಇಂಜಿನಿಯರಿಂಗ್ ಮುಗಿಸಿರುವ ಭಿಕ್ಷುಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ. ಆತ ಕೊಳಕು ಬಟ್ಟೆ ಹಾಕಿಕೊಂಡು ರಸ್ತೆಯಲ್ಲಿ, ಬೀದಿಯಲ್ಲಿರುವುದನ್ನು ಕಂಡು ಮಾತನಾಡಿಸಿದಾಗ ಆತ ಇಂಜಿನಿಯರಿಂಗ್ ಮಾಡಿರುವುದು ತಿಳಿದುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರು ಶಾಕ್ ಆಗಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾನೆ. ಕೆಲವ ಯುವಕರು ಊಟ ಮಾಡಿದ್ದೀರಾ ಎಂದು ಆತನನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ಆತ ಇಲ್ಲ ಎನ್ನುತ್ತಾನೆ, ನಂತರ ಯುವಕರು ಆತನಿಗೆ ಊಟದ ಪ್ಯಾಕೆಟ್ ಕೈಗಿಟ್ಟು ಊಟ ಮಾಡುವಂತೆ ಹೇಳುತ್ತಾರೆ.
ಹೀಗೆ ಆತನ ಜೊತೆ ಮಾತಿಗಿಳಿದ ಯುವಕರು ಏನು ಓದಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಆತ ಇಂಜಿನಿಯರಿಂಗ್ ಎಂದು ಉತ್ತರಿಸುತ್ತಾನೆ. ಈ ಉತ್ತರ ಕೇಳಿದ ಯುವಕರು ಶಾಕ್ ಆಗಿದ್ದಾರೆ. ಹೀಗಾಗಿ ಇಂಜಿನಿಯರ್ ಆದರೂ ಈ ಪರಿಸ್ಥಿತಿಗೆ ಕಾರಣವೇನು ಎಂದು ಕೇಳುತ್ತಾರೆ. ಕುಟುಂಬದ ಕಾರಣಗಳು ನನ್ನ ಇಂದಿನ ಸ್ಥಿತಿಗೆ ಕಾರಣ ಎಂದು ಆತ ಹೇಳುತ್ತಾನೆ.
ಕುಟುಂಬದ ಆರ್ಥಿಕ ಪರಿಸ್ಥಿತಿ ಮನೆ ತೊರೆಯುವಂತೆ ಮಾಡಿದೆ ಎಂದು ಆತ ಹೇಳುತ್ತಾನೆ. ಇಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ರದ್ದಿ ಪೇಪರ್ ಆಯ್ದು ಗುಜರಿಗೆ ಹಾಕುತ್ತಾನೆ. ಇದರಿಂದ ಒಂದಿಷ್ಟು ಹಣ ಸಂಪಾದಿಸುತ್ತಾನೆ. ಹಾಗೆ ರಾತ್ರಿ ಎಲ್ಲಿಯಾದರು ಮಲಗಿ ದಿನ ಕಳೆಯುತ್ತಾನೆ.
ಆತ ಇಷ್ಟೆಲ್ಲಾ ಹೇಳಿ ಮುಗಿಸುವಾಗ ಆತನ ಕಣ್ಣಲ್ಲಿ ನೀರು ಸುರಿಯುತ್ತಿದೆ. ಹೀಗಾಗಿ ಯುಕವರು ಅಳಬೇಡಿ ಎಂದು ಕಣ್ಣೀರು ಒರೆಸುವುದನ್ನು ನಾವು ನೋಡಬಹುದು. ಈ ವೀಡಿಯೊವನ್ನು @being_Jigar_rawal ಖಾತೆಯಿಂದ ಪೋಸ್ಟ್ ಮಾಡಲಾಗಿದೆ, "ನಾನು ಇಂಜಿನಿಯರ್" ಎಂಬ ಶೀರ್ಷಿಕೆಯೊಂದಿಗೆ. ಅಂದಿನಿಂದ ಇದು 20 ಮಿಲಿಯನ್ ವೀಕ್ಷಣೆ ಪಡೆದಿದೆ.
ಈ ಘಟನೆ ಕುರಿತಂತೆ ವಿಡಿಯೋ ನೋಡಿದ ಮಂದಿ ಅಚ್ಚರಿಯ ಕಮೆಂಟ್‌ಗಳ ಮಾಡಿದ್ದಾರೆ. ಆತ 20 ಅಥವಾ 25 ವರ್ಷದ ಹಿಂದೆ ತನ್ನ ಇಂಜಿನಿಯರಿಂಗ್ ಮುಗಿಸಿರಬಹುದು. ಅದ್ರೆ ಆತನಿಗೆ ಕೆಲಸ ಸಿಕ್ಕಿರಲಿಲ್ಲವೇ? ಇಂಜಿನಿಯರಿಂಗ್ ಎಂಬುದು ಕೂಡ ಬರಿ ಡಿಗ್ರಿ ಅಷ್ಟೆ ಉಳಿದಂತೆ ಎಲ್ಲಾ ಟ್ಯಾಲೆಂಟ್ ನಾವೇ ಬೆಳಸಿಕೊಳ್ಳಬೇಕು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications
