Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸಿಕ್ಕಾಪಟ್ಟೆ ಸಾಲ ಆಗಿದ್ಯಾ? ನಿತ್ಯ ಈ ಮಂತ್ರಗಳನ್ನು ಪಠಿಸಿ!
ಮನುಷ್ಯನಿಗೆ ಅವನದ್ದೇ ಆದ ಆಸೆ, ಆಕಾಂಕ್ಷೆಗಳು ಇರುತ್ತದೆ. ಅದನ್ನು ಪೂರೈಸಿಕೊಳ್ಳೋದಕ್ಕೆ ಹಣ ಬೇಕೇ ಬೇಕು. ಎಲ್ಲಾ ಆಸೆಗಳನ್ನು ಪೂರೈಸಿಕೊಳ್ಳಲು ಕೈಯಲ್ಲಿ ಹಣ ಇಲ್ಲದಿದ್ದಾಗ ಖಂಡಿತ ಸಾಲ ಮಾಡ್ತೀವಿ. ಆದರೆ ಆ ಸಾಲವನ್ನು ಪೂರೈಸಿಕೊಳ್ಳಲು ನಮ್ಮಿಂದ ಸಾಧ್ಯವಾಗೋದಿಲ್ಲ. ಎಷ್ಟೋ ಬಾರಿ ನಾವು ಸಾಲವನ್ನು ತೀರಿಸ್ಬೇಕು ಅಂತ ಅಂದುಕೊಂಡ್ರು ಕೂಡ ಕೈಯಲ್ಲಿ ದುಡ್ಡೇ ಉಳಿಯೋದಿಲ್ಲ.
ನಮ್ಮ ಗ್ರಹಗತಿಗಳು ಸರಿಯಿಲ್ಲದಿದ್ದಾಗ ಹೀಗೆಲ್ಲಾ ಆಗೋದು ಸಾಮಾನ್ಯ. ದುರಾದೃಷ್ಟ ಬೆನ್ನು ಹತ್ತಿದಾಗ ನಾವು ಆರ್ಥಿಕವಾಗಿ ಸಂಪೂರ್ಣವಾಗಿ ಕುಗ್ಗಿ ಹೋಗುತ್ತೀವಿ. ಆದರೆ ಈ ಸಾಲದ ಹೊರೆಯಿಂದ ಹೊರ ಬರೋದಕ್ಕೆ ಸಾಧ್ಯವೇ ಇಲ್ವಾ? ಖಂಡಿತ ಹೊರಬರಬಹುದು. ನಿತ್ಯ ಈ ಮಂತ್ರಗಳನ್ನು ಪಠಣೆ ಮಾಡಿದ್ರೆ ನಮ್ಮೆಲ್ಲಾ ಸಾಲ ಪರಿಹಾರವಾಗಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ. ಹಾಗಾದ್ರೆ ಆ ಮಂತ್ರಗಳು ಯಾವುದು ಅನ್ನೋದನ್ನು ತಿಳಿಯೋಣ.

ಸಾಲ ಪರಿಹಾರವಾಗಲು ನಿತ್ಯ ಈ ಮಂತ್ರಗಳನ್ನು ಪಠಿಸಿ :
ಲಕ್ಷ್ಮೀ ಗಾಯತ್ರಿ ಮಂತ್ರ :
ಓಂ ಹ್ರೀಂ ಮಹಾಲಕ್ಷ್ಮೀ ಚ ವಿದ್ಮಹೇ ವಿಷ್ಣುಪತ್ನೀ ಚ ಧೀಮಹಿ ತನ್ನೋ ಲಕ್ಷ್ಮೀಃ ಪ್ರಚೋದಯಾತ್
ಪ್ರಯೋಜನಗಳು: ಲಕ್ಷ್ಮಿ ದೇವಿಯ ಗಾಯತ್ರಿ ಮಂತ್ರವು ಸಾಲ ಪರಿಹಾರಕ್ಕೆ ಪ್ರಯೋಜನಕಾರಿಯಾಗಿದೆ. ಈ ಮಂತ್ರವನ್ನು ನಿತ್ಯ 108 ಬಾರಿ ಜಪಿಸಿದರೆ ಲಕ್ಷ್ಮಿ ದೇವಿಯ ಅನುಗ್ರಹವು ನಮ್ಮ ಮೇಲಿರುತ್ತಂತೆ. ಮುಂದೆಂದೂ ಸಾಲದ ಸಮಸ್ಯೆ ಬಾರದಂತೆ ಆಕೆ ನಮ್ಮನ್ನು ಕಾಪಾಡುತ್ತಾಳಂತೆ.
ಓಂ ಆಂ ಹ್ರೀಂ ಕ್ರೌಂ ಶ್ರೀಂ ಶ್ರೀಯೇ ನಮಃ ಮ್ಮಲಕ್ಷ್ಮಿ ನಾಶಾಯ ಮಾಮೃಣೋತಿರ್ಣಂ ಕುರು ಕುರು ಸಂಪದಂ ವರ್ಧಯ ಸ್ವಾಹಾ
ಪ್ರಯೋಜನಗಳು: ಈ ಮಂತ್ರವನ್ನು ಪಠಿಸುವುದರಿಂದ ನಿಮಗೆ ಆರ್ಥಿಕ ಲಾಭವಾಗಲಿದೆ. ಮತ್ತು ಸಾಲದ ಸಮಸ್ಯೆ ಪರಿಹರಿಸಲು ಸಹಾಯ ಮಾಡುತ್ತದೆ. ಈ ಮಂತ್ರವನ್ನು ಕೂಡ ನಿತ್ಯ 108 ಬಾರಿ ಜಪಿಸಿ.
ಮಹಾಮೃತ್ಯುಂಜಯ ಮಂತ್ರ :
ಮೃತ್ಯುಂಜಯ ಮಹಾದೇವ ತ್ರಾಹಿಮ ಶರಣಾಗತಮ್ ॥ ಜನ್ಮಮೃತ್ಯುಜರವ್ಯಾಧಿಪೀಠಾಃ ಕರ್ಮ್ಬಧನಃ ।
ಪ್ರಯೋಜನಗಳು: ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತಂತೆ. ಮತ್ತು ಮಹಾದೇವನ ಕೃಪೆಯಿಂದ ಜೀವನವು ಸಂತೋಷವಾಗಿರಲಿದ್ಯಂತೆ.
ಶಿವ ಮಂತ್ರ :
ಓಂ ನಮಃ ಶಿವಾಯ ಶ್ರೀ ಪ್ರಸಾದಯತಿ ಸ್ವಾಹಾ
ಪ್ರಯೋಜನಗಳು: ಮಹಾದೇವನ್ನು ಒಲಿಸಿಕೊಳ್ಳೋದಕ್ಕೆ ಈ ಮಂತ್ರವು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಶಿವ ಮಂತ್ರವನ್ನು 108 ಬಾರಿ ಜಪಿಸುವುದರಿಂದ ಸಾಲದಿಂದ ಮುಕ್ತಿ ಸಿಗುತ್ತಂತೆ.
ಶ್ರೀ ಕೃಷ್ಣ ಮಂತ್ರ :
ಓಂ ಶ್ರೀ ನಮಃ ಶ್ರೀ ಕೃಷ್ಣ ಪರಿಪೂರ್ಣತಮಾಯ ಸ್ವಾಹಾ
ಪ್ರಯೋಜನಗಳು: ಹಣವನ್ನು ಗಳಿಸಲು ಕೃಷ್ಣ ಮಂತ್ರವು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲ, ಈ ಮೇಲಿನ ಮಂತ್ರವನ್ನು ನಿಯಮಿತವಾಗಿ ಪಠಿಸುವವರು ಜೀವನದಲ್ಲಿ ಯಾವುದೇ ರೀತಿ ದುಃಖವನ್ನು ಎದುರಿಸುವುದಿಲ್ಲವಂತೆ.
ಮಂಗಳದೇವನ ಮಂತ್ರ :
ಧರಣಿ ಗರ್ಭ ಸಂಭೂತಂ ವಿದ್ಯುತ್ ಕಾಂತಿ ಸಮ್ಪ್ರಭಮ್ ।
ಕುಮಾರಂ ಶಕ್ತಿ ಹಸ್ತಂ ತಾನ್ ಮಂಗಲಂ ಪ್ರಣಮಾಮ್ಯಹಮ್ ।
ಪ್ರಯೋಜನಗಳು:
ತ್ರಯೋದಶಿಯ ದಿನವು ಮಂಗಳವಾರ ಬಂದರೆ ಅದನ್ನು ಭೌಮ ಪ್ರದೋಷ ಎಂದು ಕರೆಯಲಾಗುತ್ತದೆ. ಈ ದಿನ ಉಪ್ಪು ಮತ್ತು ಮೆಣಸಿನಕಾಯಿಗಳನ್ನು ಸೇವಿಸುವುದನ್ನು ತ್ಯಜಿಸುವುದು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. ಮಂಗಳದೇವನು ಸಾಲದ ದೇವರು. ಈ ದಿನ ಸಾಯಂಕಾಲ ಭೋಲೇನಾಥನನ್ನು ಪೂಜಿಸಿದರೆ ಭೋಲೇನಾಥನ ಗುರುಗಳ ಕೃಪೆಯಿಂದ ಋಣಭಾರದಿಂದ ಶೀಘ್ರ ಮುಕ್ತಿ ಪಡೆಯಬಹುದಂತೆ.
ಸಾಲದ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಈ ಸಮಸ್ಯೆಯಿಂದ ನೀವು ಹೊರ ಬರಬೇಕಾದರೆ ನಿತ್ಯ ಈ ಮಂತ್ರಗಳನ್ನು ಪಠಿಸೋದನ್ನು ಮರೀಬೇಡಿ.



Click it and Unblock the Notifications

