Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂರ್ಯಗ್ರಹಣ ಪ್ರಾಣಿ, ಪಕ್ಷಿ, ಜೇನುಗಳ ಮೇಲೆ ಬೀರುವ ಪರಿಣಾಮವೇನು..? ಅಚ್ಚರಿ ಮಾಹಿತಿ..!
ಈ ವರ್ಷ ಸೂರ್ಯ ಗ್ರಹಣವು ಇದೇ ಏಪ್ರಿಲ್ 8ರಂದು ಸಂಭವಿಸುತ್ತಿದೆ. ಈ ನಡುವೆ ಗ್ರಹಣದಿಂದ ಎಚ್ಚರ ವಹಿಸುವಂತೆ ಅಮೆರಿಕನ್ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಅಂದು ಗ್ರಹಣ ವೀಕ್ಷಿಸಲೆಂದು ದೂರ ದೂರ ಪ್ರಯಾಣ ಮಾಡದಂತೆ ಹಾಗೂ ಕಾರು, ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದಿರುವಂತೆ ಸೂಚಿಸಿದ್ದಾರೆ.
ಏಕೆಂದರೆ ಈ ಗ್ರಹಣ ಸಮಯದಲ್ಲಿ ಅಪಘಾತಗಳ ಸಂಖ್ಯೆ ಏರಿಕೆಯಾಗಿರುವುದು ಕಂಡುಬಂದಿದೆ. ಈ ಹಿಂದೆ ಸಂಭವಿಸಿರುವ ಗ್ರಹಣ ಕಾಲದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿರುವ ಕಾರಣ ಈ ರೀತಿ ಎಚ್ಚರಿಸಿದ್ದಾರೆ. ಇನ್ನು ಗ್ರಹಣ ಕಾಲದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬ ದೊಡ್ಡ ನಿಯಮಗಳೇ ಇವೆ.

ಹಿಂದೂ ಸಂಪ್ರದಾಯದ ಪ್ರಕಾರ ಗ್ರಹಣ ಅತ್ಯಂತ ಕೆಟ್ಟ ಕಾಲವಾಗಿದೆ. ಇದೊಂದು ಭೂ ಮಂಡಲಕ್ಕೆ ಅಂಟಿಕೊಳ್ಳುವ ಸೂತಕ ಎನ್ನಲಾಗುತ್ತದೆ. ಇನ್ನು ಭಾರತದಲ್ಲಿ ಗ್ರಹಣ ಸಂಭವಿಸುವಾಗ ಯಾರು ಸಹ ಹೊರ ಬರಬಾರದು ಎಂಬ ಅಲಿಖಿತ ನಿಯಮವಿದೆ. ಗ್ರಹಣದಲ್ಲಿ ಹೊರಬಂದರೆ ನಾನಾ ರೀತಿಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದು ಹಿರಿಯರ ವಾದವಾಗಿತ್ತು.
ಗ್ರಹಣ ಎಂಬುದು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳ ಮೇಲೂ ತನ್ನ ಪ್ರಭಾವ ಬೀರುತ್ತದೆ ಎಂಬುದು ಸಾಬೀತಾಗಿದೆ. ಹಾಗಾದರೆ ನಾವಿಂದು ಗ್ರಹಣ ಸಮಯದಲ್ಲಿ ಪ್ರಾಣಿಗಳ ಮೇಲೆ ಯಾವ ರೀತಿಯ ಪ್ರಭಾವ ಉಂಟಾಗುತ್ತದೆ ಎಂಬುದನ್ನು ನಾವಿಂದು ತಿಳಿಯೋಣ.
Sciencenews.org ನ ವರದಿಯ ಪ್ರಕಾರ, ಈ ವರ್ಷದ ಸಂಪೂರ್ಣ ಗ್ರಹಣವು ಹೆಚ್ಚು ಕಾಲ ಇರುತ್ತದೆ, ಆಕಾಶವು ಕತ್ತಲೆಯಾಗುತ್ತದೆ ಮತ್ತು ಸೂರ್ಯನ ಕಿರಣಗಳು ಅತ್ಯಂತ ಕೆಟ್ಟ ಪರಿಣಾಮಕ್ಕೆ ಕಾರಣವಾಗುತ್ತವೆ.
ಪಕ್ಷಿಗಳ ಮೇಲೆ ಪರಿಣಾಮ
ಕಾರ್ನೆಲ್ ವಿಶ್ವವಿದ್ಯಾನಿಲಯದ ಕಾರ್ನೆಲ್ ಲ್ಯಾಬ್ ಆಫ್ ಆರ್ನಿಥಾಲಜಿಯ ಸಂಶೋಧಕರು, ಹಕ್ಕಿಗಳು, ಬಾವಲಿಗಳು ಮತ್ತು ಕೀಟಗಳ ಚಲನವಲನಗಳ ಮೇಲೆ ಹಗಲಿನಲ್ಲಿ ಕತ್ತಲೆಯಾಗುವ ಪರಿಣಾಮದಿಂದ ಏನಾಗುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. "ಸೌರಗ್ರಹಣವು ಪಕ್ಷಿಗಳ ನಡವಳಿಕೆಯನ್ನು ಸ್ಕ್ರಾಂಬಲ್ ಮಾಡಬಲ್ಲದು" ಎಂಬ ವರದಿಯನ್ನು ಪ್ರಕಟಿಸಿದರು - ರೆಕ್ಕೆಗಳಿರುವ ಜೀವಿಗಳು ಬೆಳಕಿನ ಬದಲಾವಣೆಗಳಿಗೆ ಹೆಚ್ಚು ಹೊಂದಿಕೊಳ್ಳುತ್ತವೆ. ಏಕೆಂದರೆ ಪಕ್ಷಿಗಳು ಹಗಲಿನಲ್ಲಿ ವಲಸೆ ಕಾರ್ಯ ಮಾಡುತ್ತವೆ. ಆದರೆ ಏಕಾಏಕಿ ಸಂಪೂರ್ಣ ಸೂರ್ಯ ಗ್ರಹಣವು ಕತ್ತಲೆ ತರುವುದರಿಂದ ಅವುಗಳ ವಲಸೆ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ ಎಂದಿದ್ದಾರೆ.
ಪ್ರಾಣಿಗಳ ಮೇಲೆ ಪರಿಣಾಮ
ಒಂದೆರಡು ವರ್ಷಗಳಲ್ಲಿ ವಿಜ್ಞಾನಿಗಳು ಗ್ರಹಣಗಳ ಸಮಯದಲ್ಲಿ ಪ್ರಾಣಿಗಳ ನಡವಳಿಕೆಯನ್ನು ವೀಕ್ಷಿಸಿ ಅವುಗಳ ಮೇಲೂ ಅಧ್ಯಯನ ನಡೆಸಿದ್ದಾರೆ. ಏಪ್ರಿಲ್ 8 ರಂದು ಏಕಾಏಕಿ ಕತ್ತಲು ಆವರಿಸುವಾಗ ಟೆಕ್ಸಾಸ್‌ನ ಫೋರ್ಟ್ ವರ್ತ್ ಮೃಗಾಲಯದಲ್ಲಿ ಪ್ರಾಣಿಗಳ ವರ್ತನೆ ಹೇಗೆ ಭಿನ್ನವಾಗಿರುತ್ತದೆ ಎಂದು ಅರ್ಥೈಸಲು ಸಂಶೋಧಕರು ಮುಂದಾಗಿದ್ದಾರೆ.
ಆದರೆ ಇದಕ್ಕೂ ಮೊದಲು 2017ರಲ್ಲಿ ದಕ್ಷಿಣ ಕೆರೊಲಿನಾ ಮೃಗಾಲಯದಲ್ಲಿ ಇತರ ವಿಚಿತ್ರ ಪ್ರಾಣಿಗಳ ನಡವಳಿಕೆಯನ್ನು ಪತ್ತೆಹಚ್ಚಿದ್ದಾರೆ. ಗ್ರಹಣ ಕಾಲದಲ್ಲಿ ಪ್ರಾಣಿಗಳೂ ವಿಚಿತ್ರವಾಗಿ ಕೂಗುವುದು, ಗುಹೆಗಳು, ಗೂಡುಗಳಿಂದ ಹೊರಬರದೆ ಇದ್ದ ಪರಿಸ್ಥಿತಿಯನ್ನು ಅವರು ಗುರುತು ಮಾಡಿದ್ದಾರೆ.
ದಕ್ಷಿಣ ಕೆರೊಲಿನಾದ ಕೊಲಂಬಿಯಾದ ರಿವರ್‌ಬ್ಯಾಂಕ್ಸ್ ಮೃಗಾಲಯದಲ್ಲಿ ಗ್ಯಾಲಪಗೋಸ್ ಆಮೆಗಳು ಗ್ರಹಣ ಸಮಯದಲ್ಲಿ ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗಿರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಆದರೆ ಅವುಗಳ ಈ ನಡುವಳಿಕೆಗೆ ಕಾರಣ ತಿಳಿದುಬಂದಿಲ್ಲ. ಇದರ ಜೊತೆ ಗಂಡು ಜಿರಾಫೆಗಳು ಝೂನಲ್ಲಿ ಓಡಲು ಆರಂಭಿಸಿದ್ದವು. ಸೈಬೀರಿಯನ್ ಕೋತಿಗಳು ಎಲ್ಲಾ ಗುಂಪು ಕಟ್ಟಿಕೊಂಡು ಆತಂಕದಲ್ಲಿದ್ದರೆ ಬೇರೆ ಪ್ರಾಣಿಗಳು ಕೂಗುವುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.
ಜೇನುನೊಣಗಳ ಮೇಲೆ ಪರಿಣಾಮಗಳು
ಸಂಶೋಧನೆಯ ಪ್ರಕಾರ, ಸೂರ್ಯಗ್ರಹಣದ ಸಮಯದಲ್ಲಿ ಜೇನುನೊಣಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. 2017 ರ ಸೂರ್ಯಗ್ರಹಣದ ಸಮಯದಲ್ಲಿ ಜೇನುನೊಣಗಳ ಪರಾಗಸ್ಪರ್ಶಕಗಳ ನಡವಳಿಕೆಯನ್ನು ತನಿಖೆ ಮಾಡಲಾಗಿದೆ. ಈ ಗ್ರಹಣದ ವೇಳೆ ಜೇನು ನೊಣಗಳು ತನ್ನ ಕೆಲಸವನ್ನು ಸಂಪೂರ್ಣ ನಿಲ್ಲಿಸಿಬಿಡುತ್ತವೆ. ಅಂದರೆ ಜೇನು ತಯಾರಿಕೆಯಾಗಿ ಅವು ಹೂವುಗಲ ಮಕರಂದ ಸಂಗ್ರಹಿಸಲು ಮುಂದಾಗುವುದಿಲ್ಲ. ಒಟ್ಟಿಗೆ ಗೂಡಿನಲ್ಲಿ ಕುಳಿತು ಝೇಂಕಾರ ಹಾಕುತ್ತಿರುತ್ತವೆ ಎಂದು ಉಲ್ಲೇಖಿಸಲಾಗಿದೆ.



Click it and Unblock the Notifications