Latest Updates
-
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು?
ಮನೆಯಲ್ಲೇ ಮಾಡಿ ಪರಿಸರ ಸ್ನೇಹಿ ಬಾವುಟ..! ಮಕ್ಕಳ ಕೈಗಿಟ್ಟರೆ ಆ ಖುಷಿಯೇ ಬೇರೆ..!
ಸ್ವಾತಂತ್ರ್ಯ ದಿನಾಚರಣೆ ಹತ್ತಿರವಾಗಿತ್ತಿದೆ, ಭಾರತದಲ್ಲಿ ರಾಷ್ಟ್ರೀಯ ಹಬ್ಬವಾಗಿ ಈ ದಿನವನ್ನ ಆಚರಿಸಲಾಗುತ್ತದೆ. ಇಂದು ಸ್ವಾತಂತ್ರ್ಯಕ್ಕಾಗಿ ಮಡಿದ ಮಹಾನ್ ನಾಯಕರ ತ್ಯಾಗ, ಬಲಿದಾನವನ್ನು ನೆನೆದು ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ನಾವಿಂದು ಅನುಭವಿಸುತ್ತಿರುವ ಈ ಸ್ವಾತಂತ್ರ್ಯದ ಹಿಂದೆ ಎಷ್ಟು ಮಂದಿಯ ಶ್ರಮದ ಬೆವರ ಹನಿ ಇದೆ ಎಂಬುದನ್ನು ನಾವು ನೆನಪು ಮಾಡಿಕೊಳ್ಳುವ ದಿನವಾಗಿರಲಿದೆ.
ಹೀಗೆ ಸ್ವಾತಂತ್ರ್ಯೋತ್ಸವದ ಅರ್ಥಪೂರ್ಣ ಆಚರಣೆ ಆರಂಭವಾಗುವುದು ಶಾಲೆಗಳಿಂದ. ಶಾಲೆಯಲ್ಲಿ ಇದೊಂದು ಹಬ್ಬವೇ. ಅಂದು ಮಕ್ಕಳು ಕೇಸರಿ ಬಿಳಿ ಹಸಿರು ಬಣ್ಣದ ಬಟ್ಟೆ ಧರಿಸಿ ಧ್ವಜಾರೋಹಣ ಸೆರವೇರಿಸಿ ರಾಷ್ಟ್ರಗೀತೆ ಹಾಡಿ ಸ್ವಾತಂತ್ರ್ಯ ಹೋರಾಟಗಾರರ ನೆನೆಯುತ್ತಾರೆ. ಅವರಲ್ಲೂ ಸ್ವಾತಂತ್ರ್ಯದ ಕುರಿತಾದ ಅರಿವು ಮೂಡಿಸುವ ಪ್ರಯತ್ನ ಇದಾಗಿರಲಿದೆ.

ಇನ್ನು ಈ ಸ್ವಾತಂತ್ರ್ಯೋತ್ಸವ ವೇಳೆ ಪ್ಲಾಸ್ಟಿಕ್ ಬಾವುಟಗಳ ಬಳಸುವುದು ನಾವು ನೋಡಿದ್ದೇವೆ. ಆದರೆ ಈ ಪ್ಲಾಸ್ಟಿಕ್ ಧ್ವಜ ಪರಿಸರಕ್ಕೂ ಒಳ್ಳೆಯದಲ್ಲ ಜೊತೆಗೆ ನಾವು ಎಲ್ಲೆಂದರಲ್ಲಿ ಎಸೆಯುತ್ತೇವೆ, ಇದು ರಾಷ್ಟ್ರ ಧ್ವಜಕ್ಕೆ ಅಗೌರವ ಸೂಚಿಸಿದಂತೆ. ಹೀಗಾಗಿ ಎಲ್ಲರೂ ಪ್ಲಾಸ್ಟಿಕ್ ಮುಕ್ತ ಭಾವುಟ ಬಳಸುವುದು ಉತ್ತಮ. ಹಾಗಾದ್ರೆ ನೈಸರ್ಗಿಕವಾಗಿ ಭಾವುಟ ತಯಾರಿಸುವುದು ಹೇಗೆ? ಮನೆಯಲ್ಲೇ ಭಾವುಟ ತಯಾರಿಸಿ ನಿಮ್ಮ ಮಕ್ಕಳ ಕೈಗೆ ನೀಡಿದರೆ ಅವರಿಗೂ ಪರಿಸರದ ಬಗ್ಗೆ ಕಾಳಜಿ ಮೂಡುತ್ತೆ ಜೊತೆಗೆ ಎಲ್ಲರಲ್ಲೂ ಇದು ಜಾಗೃತಿ ಮೂಡಿಸುತ್ತದೆ.
ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಈ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಮನೆಯಲ್ಲೇ ಬಾಳೆ ಎಲೆ ಬಳಸಿ ಹೇಗೆ ತ್ರಿವರ್ಣ ಧ್ವಜ ತಯಾರಿಸಬಹುದು ಎಂಬುದನ್ನು ವಿಡಿಯೋದಲ್ಲಿ ವಿವರಿಸಲಾಗಿದ್ದು, ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪರಿಸರಕ್ಕೂ ಹಾನಿಯಿಲ್ಲದೆ ನೋಡಲು ಸುಂದರವಾಗಿ ಹಾಗೂ ಮಣ್ಣಿನಲ್ಲಿ ಕರಗುವಂತಹ ಈ ಭಾವುಟ ಎಲ್ಲರ ಗಮನ ಸೆಳೆಯುತ್ತಿದೆ.
@priyas.artwork ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋ ಈಗ ಬರೋಬ್ಬರಿ 7 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ಎಲ್ಲರೂ ಈ ರೀತಿ ಪರಿಸರ ಸ್ನೇಹಿ ಭಾವುಟ ಮಾಡಿ ತಮ್ಮ ಮಕ್ಕಳಿಗೆ ನೀಡುವಂತೆ ಸಲಹೆ ನೀಡಿದ್ದಾರೆ.
ವಿಡಿಯೋದಲ್ಲಿ ವಿವರಿಸಿದ್ದಂತೆ ಮೊದಲು ಒಂದು ದೊಡ್ಡ ಬಾಳೆ ಎಲೆ ತೆಗೆದುಕೊಂಡು ಅದರ ಮಧ್ಯದಿಂದ ಅರ್ಧ ದಂಟು ಇರುವಂತೆ ನೋಡಿಕೊಂಡು ಕತ್ತರಿಸಿಕೊಳ್ಳಬೇಕು. ಬಳಿಕ ಅದರ ದಂಟಿಗೆ ನೀಲಿ ಬಣ್ಣ ಬಳಿಯಬೇಕು. ಬಾವುಟದ ಆಕಾರವಾಗಿ ಕೇಸರಿ, ಬಿಳಿ, ಹಸಿರು ಬಣ್ಣ ಬಳಿದು ಮಧ್ಯದಲ್ಲಿ ಸಣ್ಣದಾಗಿ ಅಶೋಕ ಚಕ್ರವನ್ನು ಬಿಡಿಸಬೇಕು. ಇಷ್ಟಾದರೆ ನಿಮ್ಮ ಮುಂದೆ ನೈಸರ್ಗಿಕ ಭಾವುಟ ರೆಡಿಯಾಗುತ್ತದೆ.
ಇಂತಹ ಭಾವುಟಗಳು ಈಗ ಮಾರುಕಟ್ಟೆಗೂ ಲಗ್ಗೆ ಇಟ್ಟಿವೆ, ಪರಿಸರ ಸ್ನೇಹಿ ವಸ್ತುಗಳ ಮೇಲೆ ಹೆಚ್ಚು ಜನರು ಒಲವು ತೋರಿಸಲು ಮುಂದಾದ ಪರಿಣಾಮ ಈಗ ಹೆಚ್ಚಿನವರು ಇಂತಹ ವಸ್ತುಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಈ ಸಾಲಿಗೆ ಬಾಳೆ ಎಲೆಯ ಭಾವುಟ ಸಹ ಸೇರಿಕೊಂಡಿದೆ. ಈ ವಿಡಿಯೋ ನೋಡಿದ ಮಂದಿ ಈ ಬಾರಿಯ ಸ್ವಾತಂತ್ರ್ಯೋತ್ಸವದಂದು ಈ ಪರಿಸರ ಸ್ನೇಹಿ ಭಾವುಟ ನಾವು ಸಹ ಮಾಡಿ ಕೈ ಜೋಡಿಸೋಣ ಎನ್ನುತ್ತಿದ್ದಾರೆ.
ಮಕ್ಕಳು ಸಹ ಇಂತಹ ಭಾವುಟ ಕೈಯಲ್ಲಿ ಹಿಡಿದು ಪರಿಸರ ಸ್ನೇಹಿಯಾಗಿರುವ ಕುರಿತು ಜಾಗೃತಿ ಮೂಡಿಸುವ ವ್ಯಕ್ತಿಗಳಾಗುತ್ತಾರೆ. ಇತ್ತ ಬೆಲೆಯಲ್ಲೂ ತುಂಬಾನೆ ಕಡಿಮೆಯಾಗುತ್ತದೆ. ನೀವು ಮಾರುಕಟ್ಟೆಯಲ್ಲಿ 10 ರೂಪಾಯಿಯಿಂದ ಸಾವಿರ ರೂಪಾಯಿಯ ಭಾವುಟವನ್ನೂ ಸಹ ನೋಡಬಹುದು. ಆದ್ರೆ ಇದು ಕಡಿಮೆ ಖರ್ಚಿನಲ್ಲಿ ಸುಂದರವಾದ ಭಾವುಟ ಮಾಡುವ ದಾರಿಯಾಗಿದೆ.



Click it and Unblock the Notifications