Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
'ಸಂಪೂರ್ಣ ವಿನಾಶದ ದಿನ': ಭೂಮಿ ಅಂತ್ಯದ ಕುರಿತು ವಿಜ್ಞಾನಿಗಳ ಉತ್ತರ.!
ನಮ್ಮ ಭೂಮಿ ರೂಪಗೊಂಡಿರುವ ಇತಿಹಾಸ ನಿಮಗೆಲ್ಲಾ ತಿಳಿದಿರಬಹುದು. ಕೋಟಿ ಕೋಟಿ ವರ್ಷಗಳ ಹಿಂದೆ ನಡೆದ ಬಹುದೊಡ್ಡ ವಿದ್ಯಮಾನಗಳು ಇಂದಿನ ಭೂಮಿ ಹಾಗೂ ಸೌರ ಮಂಡಲದ ಸೃಷ್ಟಿಗೆ ಕಾರಣವಾಗಿದೆ. ಇದಕ್ಕೆ ಹಲವು ಸಿದ್ದಾಂತಗಳು, ವೈಜ್ಞಾನಿಕ ಕಾರಣಗಳು ಕೂಡ ಇದೆ. ಹಾಗೆ ಈ ಭೂಮಿ ಮೇಲೆ ಸಣ್ಣ ಸಣ್ಣ ವೈರಸ್‌ನಿಂದ ಹಿಡಿದು ದೊಡ್ಡ ಡೈನೋಸಾರ್‌ವರೆಗೂ ವಿಕಾಸ ಸಿದ್ದಾಂತದ ಸಾಕ್ಷಿ ಕಾಣಬಹುದು.
ಹಾಗೆ ಭೂಮಿ ಯಾವಾಗ ಕೊನೆಯಾಗುತ್ತೆ ಅನ್ನೋದನ್ನು ನಾವು ಊಹಿಸಬಹುದಷ್ಟೇ ಹೊರತು ನಿಖರವಾಗಿ ಇದೇ ದಿನ ಭೂಮಿ ಅಂತ್ಯವಾಗಲಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇನ್ನು ಈ ಭೂಮಿ ಒಂದಲ್ಲಾ ಒಂದು ದಿನ ಅಂತ್ಯವಾಗುವುದು ಖಚಿತ ಎಂದು ವಿಜ್ಞಾನಿಗಳು ಕೂಡ ಹೇಳುತ್ತಿದ್ದಾರೆ. ಅದು 100 ಅಥವಾ 200 ವರ್ಷಗಳಲ್ಲಿ ಅಲ್ಲ. ಬದಲಿಗೆ ಸರಿ ಸುಮಾರು 250 ಮಿಲಿಯನ್ ವರ್ಷಗಳ ನಂತರ ಎಂದು ಅಂದಾಜಿಸಿದ್ದಾರೆ.

250 ಮಿಲಿಯನ್ ವರ್ಷಗಳೆಂದರೇ ಭೂಮಿಯ ಈಗಿನ ಸ್ವರೂಪವೇ ಬದಲಾಗಿರಬಹುದು. ಹಾಗೆ ಭಾರತ ಜಾರಿ ಮತ್ತೊಂದು ಖಂಡದೊಂದಿಗೆ ಸೇರಿರಬಹುದು, ಅಲ್ಲದೆ ಹೊಸದಾಗಿ ಒಂದಿಷ್ಟು ಖಂಡಗಳು ನಿರ್ಮಾಣವಾಗಿರಬಹುದು. ಆದ್ರೆ 250 ಮಿಲಿಯನ್ ವರ್ಷಗಳ ನಂತರ ಈ ಭೂಮಿ ಅಂತ್ಯವಾಗಲಿದೆ ಎಂದಿದ್ದಾರೆ. ಹಾಗೆ ಈ ಭೂಮಿ ಯಾವ ರೀತಿಯಾಗಿ ಅಂತ್ಯವಾಗಲಿದೆ ಎಂಬುದನ್ನು ಕೂಡ ವಿವರಿಸಿದ್ದಾರೆ.
ಭೂಮಿ ವಿನಾಶದತ್ತ ಸಾಗುತ್ತಿದೆ ಎನ್ನುವ ಅಂಶವನ್ನು ವಿಜ್ಞಾನಿಗಳು ಹೇಳಿದ್ದಾರೆ. ಹಾಗೆ ಭೂಮಿ ಮೇಲಿರುವ ಹಾಗೆ ನೀರಿನಲ್ಲಿರುವ ಯಾವುದೇ ಒಂದು ಜೀವಿಯೂ ಬದುಕುಳಿಯಲು ಆಗದಂತಹ ರೀತಿಯಲ್ಲಿ ಭೂಮಿನ ವಿನಾಶ ಇರಲಿದೆಯಂತೆ. ಇದನ್ನು ಸಂಪೂರ್ಣ ವಿನಾಶದ ದಿನ ಎಂದು ಕರೆಯಲಾಗಿದೆ. ಬ್ರಿಸ್ಟಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಪ್ಯೂಟರ್ ಸಿಮ್ಯುಲೇಶನ್ ಅನ್ನು ಅಭಿವೃದ್ಧಿಪಡಿಸಿ. ಆ ಮೂಲಕ ಮುಂದಿನ 250 ಮಿಲಿಯನ್ ವರ್ಷದಲ್ಲಿ ಭೂಮಿ ಮೇಲೆ ಏನೆಲ್ಲಾ ನಡೆಯಲಿದೆ ಎಂಬುದನ್ನು ಪತ್ತೆ ಮಾಡಿದ್ದಾರೆ.
ಈ ಹಿಂದೆ ಊಹಿಸಿದಕ್ಕಿಂತಲೂ ವೇಗವಾಗಿ ಭೂಮಿ ಅಂತ್ಯದ ಕಡೆಗೆ ಸಾಗುತ್ತಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ಭೂಮಿ ಮೊದಲು ಬರಡಾಗುತ್ತದೆ, ನಂತರ ವಾಸಯೋಗ್ಯವಾಗಿ ಉಳಿಯದೆ ಅಲ್ಲಿ ಒಂದೇ ದೊಡ್ಡ ಖಂಡ ನಿರ್ಮಾಣವಾಗುತ್ತದೆ ಎಂದು ವಿವರಿಸಿದ್ದಾರೆ. ಭೂಮಿ ಮೇಲೆ ಯಾರು ಉಳಿಯಲಾಗದಷ್ಟು ಬಿಸಿಯಾಗುತ್ತದೆ. ಜ್ವಾಲಾಮುಖಿಗಳು ಕಿ.ಮೀಟರ್ ದೂರಕ್ಕೆ ಸಿಡಿಯುತ್ತವೆ. ನೀರಿನ ಮೂಲವೇ ಇಲ್ಲದಂತಾಗುತ್ತದೆ.
ಈ ಸಮಯದಲ್ಲಿ ಭೂಮಿಯ ಮೇಲೆ ಬೆಂಕಿ ಹರಿಯುತ್ತಿರುತ್ತದೆ, ಹೀಗಾಗಿ ತಾಪಮಾನ 70 ಡಿಗ್ರಿಗಿಂತ ಹೆಚ್ಚಾಗಿರುತ್ತದೆ. ಭೂಮಿ ಮೇಲೆ ಇಂಗಾಲದ ಡೈ ಆಕ್ಸೈಡ್ ಪ್ರಮಾಣವು ಈ ಹಿಂದೆ ಅಂದಾಜಿಸಿರುವುದಕ್ಕಿಂತಲು ಹೆಚ್ಚು ವೇಗವಾಗಿ ಅಂದಾಜಿಸಿದ ಪ್ರಮಾಣಕ್ಕಿಂತಲೂ ಹೆಚ್ಚಾಗಿ ಶೇಖರಣೆಯಾಗಿದೆ. ಇದು ಕೂಡ ಭೂಮಿಯ ವಿನಾಶದಲ್ಲಿ ಬಹುದೊಡ್ಡ ಕೊಡುಗೆ ನೀಡಲಿದೆ ಎಂದು ವರದಿಯಾಗಿದೆ.
ಜ್ವಾಲಾಮುಖಿಗಳು ಶಾಖವನ್ನು ತಡೆದುಕೊಳ್ಳಲು ಸಾಧ್ಯವಾಗದಿದ್ದಾಗ ಸ್ಫೋಟಗೊಳ್ಳುತ್ತವೆ ಮತ್ತು ಭೂಮಿಯ ಹೆಚ್ಚಿನ ಭಾಗವು ಜ್ವಾಲಾಮುಖಿಗಳಿಂದ ಆವೃತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಜ್ವಾಲಾಮುಖಿಗಳು ಸ್ಪೋಟಗೊಂಡಾಗ ಅತೀ ಹೆಚ್ಚು ಪ್ರಮಾನದ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಹೀಗಾಗಿ ಜನರ ಸಾವಿಗೆ ಈ ಜ್ವಾಲಾಮುಖಿಗಳ ಕಾರಣ ನೀಡಲಾಗಿದೆ. ಭೂಮಿಯ ನಾಶವೂ ಈ ಜ್ವಾಲಾಮುಖಿಗಳ ಸ್ಪೋಟದಿಂದ ಉಂಟಾಗಲಿದೆ ಎಂದು ಅವರು ಹೇಳಿದ್ದಾರೆ.



Click it and Unblock the Notifications
