Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬೆಂಕಿ ಹತ್ತಿಕೊಂಡು ಡ್ರೈವರ್‌ಲೆಸ್ ಆಗಿ ಚಲಿಸಿದ ಕಾರು: ದೆವ್ವ ಚಲಾಯಿಸಿದಂತಿದೆ ಎನ್ನುತ್ತಿರುವ ನೆಟ್ಟಿಗರು
ಗಾಡಿಗೆ ಬೆಂಕಿ ಹತ್ತಿಕೊಂಡು ಉರಿದಿರುವ ಅನೇಕ ಘಟನೆ ನಡೆದಿದೆ, ಚಲಿಸುತ್ತಿರುವ ಗಾಡಿಗೆ ಬೆಂಕಿ ಹತ್ತಿಕೊಂಡು ಉರಿದಿರುವುದು ಅಥವಾ ನಿಂತಿರುವ ಗಾಡಿಗೆ ಬಂಕಿ ಹತ್ತಿಕೊಂಡು ಉರಿದಿರುವ ಅನೇಕ ವೀಡಿಯೋಗಳಿವೆ, ಆದರೆ ಜೈಪುರದಲ್ಲಿ SUV ಗಾಡಿ ಬೆಂಕಿ ಹೊತ್ತಿಕೊಂಡು ಉರಿಯತ್ತಿರುವಾಗ ಡ್ರೈವರ್‌ಲೆಸ್ ಆಗಿ ಚಲಿಸಿರುವ ವೀಡಿಯೋ ವೈರಲ್ ಆಗಿವೆ. ಈ ವೀಡಿಯೋ ನೋಡಿದವರು ಘೋಸ್ಟ್ ಡ್ರೈವಿಂಗ್ ಕಾರ್ ಎಂದು ಕಮೆಂಟಿಸುತ್ತಿದ್ದಾರೆ.

ಸಿನಿಮೀಯ ರೀತಿಯ ಘಟನೆ ನಡೆದಿರುವುದು ಜೈಪುರದ ಸೋಡಲಾ ಸಬ್ಜಿ ಮಂಡಿಯಲ್ಲಿ. ಡ್ರೈವರ್ ಆ ಕಾರಿನಲ್ಲಿ ಇರಲಿಲ್ಲ, ಆವಾಗ ಕಾರಿಗೆ ಬೆಂಕಿ ಹತ್ತಿಕೊಂಡಿದೆ, ಅಷ್ಟು ಮಾತ್ರ ರಸ್ತೆಯಲ್ಲಿ ಒಳಗೊಬ್ಬ ಡ್ರೈವರ್ ಕೂತು ಓಡಿಸಿಕೊಂಡು ಹೋಗುವ ರೀತಿಯಲ್ಲಿ ಚಲಿಸಲಾರಂಭಿಸಿದೆ. ಬೆಂಕಿ ಉಂಡೆಯಂತೆ ಬರುತ್ತಿರುವ ಕಾರು ನೋಡಿದ ಜನರು ದಿಕ್ಕು ಪಾಲಾಗಿ ಓಡಲಾರಂಭಿಸಿದ್ದಾರೆ. ಆದರೆ ಅದೃಷ್ಟವಶಾತ್ ಏನೂ ಆಗಿಲ್ಲ.
ಏನಿದು ಘಟನೆ?
ಈ ಕಾರನ್ನು ಜಿತೇಂದ್ರ ಎಂಬುವವರು ಓಡಿಸುತ್ತಿದ್ದರು, ಅವರಿಗೆ ಶಾರ್ಟ್‌ಸರ್ಕ್ಯೂಟ್ ಆಗಿದೆ ಎಂಬುವುದು ತಕ್ಷಣವೇ ಗೊತ್ತಾಗುತ್ತದೆ, ಕೂಡಲೇ ಕಾರಿನಿಂದ ಹೊರಗಡೆ ಇಳಿದು ಬಿಡುತ್ತಾರೆ, ಅಷ್ಟರಲ್ಲಿಯೇ ಕಾರಿಗೆ ಬೆಂಕಿ ಪೂರ್ತಿಯಾಗಿ ಆವರಿಸಿಕೊಂಡು ಬಿಟ್ಟಿತ್ತು, ಅಲ್ಲದೆ ಆ ಕಾರು ಸ್ಟಾರ್ಟ್‌ನಲ್ಲಿಯೇ ಇದ್ದ ಕಾರಣ ಕಾರು ಚಲಿಸಲಾರಂಭಿಸಿದೆ. ಅಲ್ಲಿದ್ದವರಿಗೆ ಒಂದು ಕ್ಷಣ ಏನು ಮಾಡಬೇಕೆಂದೇ ಗೊತ್ತಾಗಲ್ಲ, ತಮ್ಮ ರಕ್ಷಣೆಗೆ ಓಡಲಾರಂಭಿಸುತ್ತಾರೆ. ಪುಣ್ಯಕ್ಕೆ ಕಾರು ಎಲೆವೇಟರ್‌ನಲ್ಲಿ ಸ್ಲೋ ಆಗಿ ಡಿವೈಡರ್‌ಗೆ ಗುದ್ದಿ ನಿಂತಿತ್ತು, ಆದರೆ ಕಾರು ಮಾತ್ರ ಸುಟ್ಟು ಕರಕಲಾಗಿ ಹೋಯ್ತು.
ಇತ್ತೀಚೆಗೆ ಥಾಯ್ಲೆಂಡ್ ಬಸ್‌ಗೆ ಶಾರ್ಟ್ ಸರ್ಕ್ಯೂಟ್ ಆಗಿ 17ಕ್ಕೂ ಹೆಚ್ಚು ಪುಟಾಣಿಗಳು ಸಾವನ್ನಪ್ಪಿದ್ದರು
ಮಕ್ಕಳು ಕುಣಿಯುತ್ತಾ , ನಲಿಯುತ್ತಾ ಫೀಲ್ಡ್ ಟ್ರಿಪ್ ಹೋಗಿದ್ದರು, ಅವರು ಪ್ರಯಾಣಿಸಿದ್ದು ಲಕ್ಷುರಿ ಬಸ್, ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ಆಗಿ ಬಸ್‌ಗೆ ಬೆಂಕಿ ಹತ್ತಿಕೊಂಡು ಉರಿಯಲಾರಂಭಿಸಿತು, ಆ ಬಸ್‌ನ ಡ್ರೈವರ್ ಇಳಿದು ಎಮರ್ಜೆನ್ಸಿ ಗ್ಯಾಸ್ ಮುಖಾಂತರ ಬೆಂಕಿ ಆರಿಸಲು ಪ್ರಯತ್ನಿಸಿದರು. ಕೆಲ ಪುಟಾಣಿಗಳನ್ನು ತೀವ್ರ ಗಾಯದಿಂದ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಯ್ತು, ಆದರೆ ಟೀಚರ್ಸ್ ಹಾಗೂ 17 ಪುಟಾಣಿಗಳು ಸಾವನ್ನಪ್ಪಿದ್ದರು, ಈ ಘಟನೆ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತು.
ಗಾಡಿಯ ವೈರ್‌ಗಳ ಕನೆಕ್ಷನ್ ಸರಿಯಾಗಿದೆಯೇ ಎಂದು ಮೆಕ್ಯಾನಿಕ್ ಬಳಿಪರಿಶೀಲಿಸಬೇಕು
ಗಾಡಿಗೆ ಬೆಂಕಿ ತಗುಲಿರುವ ಘಟನೆಗಳು ತುಂಬಾ ನಡೆಯುತ್ತಿವೆ, ನೀವು ನಿಮ್ಮ ಗಾಡಿಯ ಕಂಡೀಷನ್ ಸರಿಯಾಗಿ ಇದೆಯೇ ಎಂದು ತಿಳಿಯಲು ಮೆಕ್ಯಾನಿಕ್ ಬಳಿ ಪರಿಶೀಲಿಸಿ.
ಯಾವುದೇ ವೈರ್ ಒಂದಕ್ಕೊಂದು ತಗುಲಿಕೊಂಡಂತೆ ಇರಬಾರದು, ವೈರ್‌ಗಳನ್ನು ಕಟ್ ಮಾಡಿ ಜೋಡಿಸಿರುವುದು, ಅಲ್ಟ್ರಾರೇಷನ್ ಮಾಡಿಸಿದರೆ ಈ ರೀತಿಯಾಗುವ ಸಾಧ್ಯತೆ ಇದೆ.
ಕಾರಿನಲ್ಲಿ ಹಲವು ಗ್ಯಾಡ್ಜೆಟ್ಸ್ ಬಳಸಬೇಡಿ
ಓನರ್ ಮ್ಯಾನ್ಯೂಲ್ ಪರಿಶೀಲಿಸಿ, ಅದರಲ್ಲಿ ಕಾರಿಗೆ ಕರೆಕ್ಟ್ ಪ್ಯೂಸ್ ಬಳಸಲಾಗಿದೆಯೇ ಎಂದು ಪರಿಶೀಲಿಸಬೇಕು.



Click it and Unblock the Notifications
