Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ವಿದೇಶದಲ್ಲಿ ನೆಲೆಸಬೇಕಾ? ಈ ದೇಶ ನಿಮಗೆ ₹92 ಲಕ್ಷ ನೀಡಿ ಸ್ವಾಗತಿಸುತ್ತೆ..! ಆದ್ರೆ ಒಂದೇ ಕಂಡೀಷನ್
ನೀವು ಬೇರೊಂದು ಕಡೆ ಹೋಗಿ ಸೆಟೆಲ್ ಆಗಬೇಕು ಎಂಬ ಆಸೆ ನಿಮಗಿದ್ದರೆ ಹಲವು ಕಡೆಗಳಲ್ಲಿ ಹೊಸದಾಗಿ ನಿವೇಶನ ಖರೀದಿಸುವುದು ಹಗೆ ಹೊಸ ಮನೆ ಖರೀದಿ ಮಾಡುವ ಬಯಕೆ ಹೊಂದಿರುತ್ತೀರಿ. ಹಾಗೆ ಹಲವರು ವಿದೇಶಕ್ಕೆ ತೆರಳವುದು ಅಲ್ಲಿಯ ಪೌರತ್ವ ಪಡೆದು ಅಲ್ಲಿಯೇ ನೆಲೆಸಲು ಮುಂದಾಗುವುದನ್ನು ನೋಡಬಹುದು. ಆದ್ರೆ ವಿದೇಶದಲ್ಲಿ ಮನೆ ಖರೀದಿ, ಆಸ್ತಿ ಖರೀದಿ ಅಷ್ಟು ಸುಲಭವಲ್ಲ.
ಆದ್ರೆ ಈಗ ಕೆಲವೊಂದು ದೇಶಗಳು ಜನರನ್ನು ತಮ್ಮ ದೇಶಕ್ಕೆ ಆಗಮಿಸಿ ಇಲ್ಲಿಯೇ ನೆಲೆಸುವಂತೆ ಬೇಡಿಕೆ ಇಡುತ್ತಿವೆ. ಏಕೆಂದರೆ ಜನಸಂಖ್ಯೆ ಇಳಿಕೆಯಾಗುವುದು ಕೆಲವೊಂದು ದೇಶಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಹೌದು ಕೆಲವು ದೇಶಗಳು ಜನಸಂಖ್ಯಾ ಸ್ಪೋಟದಿಂದಾಗಿ ಪರಿತಪಿಸಿವೆ. ಜನಸಂಖ್ಯೆ ಏರಿಕೆ ಕಡಿಮೆ ಮಾಡಲು ಹತ್ತಾರು ರೀತಿಯ ಕಾರ್ಯಕ್ರಮ ರೂಪಿಸುತ್ತಿವೆ.

ಆದ್ರೆ ಮತ್ತೆ ಕೆಲವು ದೇಶಗಳಲ್ಲಿ ಹಿರಿಯ ನಾಗರಿಕರ ಸಂಖ್ಯೆ ಏರಿಕೆಯಾಗಿದ್ದು, ಅಲ್ಲಿ ಯುವ ಜನಸಂಖ್ಯೆ ಹಾಗೂ ಮಕ್ಕಳ ಜನನ ದರ ಇಳಿಕೆಯಾಗಿ ದೊಡ್ಡ ಸಮಸ್ಯೆ ತಂದಿದೆ. ಮತ್ತೆ ಕೆಲವು ದೇಶಗಳು ಜನಸಂಖ್ಯೆಯ ಕೇಂದ್ರೀಕರಣದಿಂದ ತಲ್ಲಣಗೊಂಡಿವೆ. ಅಂತಹ ದೇಶದ ನಗರ ಪ್ರದೇಶದಲ್ಲಿ ವಿಪರೀತ ಜನಸಂಖ್ಯೆ ಇದ್ದು ಗ್ರಾಮೀಣ ಭಾಗದಲ್ಲಿ ಕೃಷಿ ಮಾಡಲು ಯಾರೊಬ್ಬರು ಇಲ್ಲದೆ ಪಾಳು ಬಿದ್ದ ಹಳ್ಳಿಗಳನ್ನು ನೋಡಲಾಗುತ್ತಿದೆ.
ಈಗ ಇಂತಹದ್ದೆ ಸಮಸ್ಯೆಯೊಂದನ್ನು ಹೊಂದಿರುವ ದೇಶವೊಂದು ಅಲ್ಲಿಗೆ ಬಂದು ನೆಲೆಸಲು ಬರೋಬ್ಬರಿ 92 ಲಕ್ಷ ರೂಪಾಯಿ ಅನುದಾನ ನೀಡಲು ಮುಂದಾಗುತ್ತಿದೆ. ಹೌದು ನೀವು ಇಟಲಿಯ ಹೆಸರು ಕೇಳಿರಬಹುದು. ಇಟಲಿ ಎಂದರೆ ಅದು ಅದ್ಭುತ ಪ್ರಾಕೃತಿಕ ಸೌಂದರ್ಯ ಹೊಂದಿರುವ ದೇಶ. ಸುತ್ತಲೂ ಬೆಟ್ಟು ಗುಡ್ಡಗಳಿಂದ ತುಂಬಿರುವ ದೇಶವಾಗಿದೆ. ಹಾಗೆ ಅಲ್ಲಿನ ಜನಸಂಖ್ಯೆಯ ದರ ಈಗ ಸಮಸ್ಯೆ ತರುತ್ತಿದೆ.
ಉತ್ತರ ಇಟಲಿ ಭಾಗದಲ್ಲಿ ಈಗ ಜನಸಂಖ್ಯೆಯ ವಿಕೇಂದ್ರೀಕರಣ ಇಲ್ಲದೆ ಸರ್ಕಾರಕ್ಕೆ ಹೊಸ ಸವಾಲು ಎದುರಾಗಿದೆ. ಈ ದೇಶದ ನಗರದಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿದ್ದರೆ ಇನ್ನೊಂದು ಕಡೆ ಗ್ರಾಮೀಣ ಭಾಗದಲ್ಲಿ ಯಾರು ಊಹಿಸದ ರೀತಿಯಲ್ಲಿ ಜನಸಂಖ್ಯೆ ಇಳಿಕೆಯಾಗುತ್ತಿರುವುದು ನೋಡಬಹುದು. ಹೀಗಾಗಿ ಗ್ರಾಮೀಣ ಭಾಗದಲ್ಲಿ ನೆಲೆಸಲು ಹಾಗೆ ಕೃಷಿ ಕಾರ್ಯ ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಈ ರೀತಿಯ ಕ್ರಮಕ್ಕೆ ಮುಂದಾಗಿದೆ.
ಆದ್ರೆ ಇಟಲಿಗೆ ಹೋಗಿ ನೆಲೆಸಲು ಒಂದಿಷ್ಟು ನಿಯಮಗಳು, ಷರತ್ತುಗಳು ಕೂಡ ಹಾಕಲಾಗಿದೆ. ಟ್ರೆಂಟಿನೊ ನಗರದ ಅತೀ ವಿರಳವಾದ ಜನಸಂಖ್ಯೆ ಹೊಂದಿರುವ ಹಳ್ಳಿಯಾಗಿದೆ. ಆದ್ರೆ ಈ ಭಾಗದ ಹಳ್ಳಿಗಳ ಪರಿಸ್ಥಿತಿ ಸೋಚನೀಯವಾಗಿದೆ. ಅಲ್ಲಿ ಹಳ್ಳಿ ಜನರು ನಗರಗಳತ್ತ ವಲಸೆ ಹೋಗಿ ಈಗ ಹಳ್ಳಿಗಳು ಖಾಲಿಯಾಗಿವೆ. ಇದು ಕೃಷಿ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಸರ್ಕಾರವೇ ಮೊದಲು ನಿಗದಿ ಮಾಡುವ ಸ್ಥಳದಲ್ಲಿ ನೆಲೆಸಲು ನೀವು ಸಿದ್ದವಿದ್ದರೆ ಇಲ್ಲಿಗೆ ತೆರಳಬಹುದು. ಹೀಗಾಗಿ ಸರ್ಕಾರ ಅಲ್ಲಿ ನೆಲೆಸಲು ಮನೆ ಹಾಗೂ ನಿವೇಶನ ಖರೀದಿಗಾಗಿ ಸುಮಾರು 92 ಲಕ್ಷ ರೂಪಾಯಿ ಅನುದಾನವಾಗಿ ನೀಡಲಿದೆ. ಎರಡು ಭಾಗವಾಗಿ ಈ ಹಣ ಸಹಾಯ ಕೆಲಸವನ್ನು ಮಾಡಲಿದೆಯಂತೆ. ಮೊದಲು 74.2 ಲಕ್ಷ ರೂಪಾಯಿಯನ್ನು ಮನೆಯ ನವೀಕರಣಕ್ಕೆಂದು ನೀಡಲಿದೆ. 18 ಲಕ್ಷ ರೂಪಾಯಿ ಆಸ್ತಿ ಖರೀದಿಗಾಗಿ ನೀಡಲಿದೆಯಂತೆ. ಈ ಸೌಲಭ್ಯ ಪಡೆಯಲು ಇಟಲಿಯಲ್ಲಿ ನೆಲೆಸಿರುವವರು ಮಾತ್ರವಲ್ಲದೆ ವಲಸಿಗರು ಕೂಡ ಅರ್ಹರು ಎಂದು ತಿಳಿಸಲಾಗಿದೆ.
ಆದ್ರೆ ಈ ಮನೆಯಲ್ಲಿ ಕನಿಷ್ಠ ಅವರು 10 ವರ್ಷ ವಾಸವಾಗಿರುತ್ತೇವೆ ಎಂಬ ಷರತ್ತಿನ ಮೇಲೆ ನೆಲೆಸಬೇಕಾಗುತ್ತದೆ. ಒಂದು ವೇಳೆ ಅದು ಸಾಧ್ಯವಾಗದೆ ಅರ್ಧದಲ್ಲಿಯೇ ಅಲ್ಲಿಂದ ಮರಳಲು ಅಥವಾ ಸರ್ಕಾರದ ನಿಗದಿತ ಜಾಗದಲ್ಲಿ ನೆಲೆಸದೆ ಬೇರೊಂದು ಕಡೆ ನೆಲೆಸಿದರೆ ಸರ್ಕಾರ ನೀಡಿದ ಅನುದಾನದ ಶೇ.100ರಷ್ಟು ಹಣವನ್ನು ವಾಪಾಸು ಮಾಡಬೇಕಾಗುತ್ತದೆ.



Click it and Unblock the Notifications