Latest Updates
-
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ!
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿವಾರ ಈ ತಪ್ಪು ಮಾಡಬೇಡಿ..! ಶನಿದೇವರ ಈ ಮಂತ್ರ ಪಠಿಸಿ..!
ಶನಿದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿ ಮಹಾರಾಜನು ಸಂತೋಷವಾಗಿದ್ದರೆ ನೀವು ಬಯಸಿದ ವರವನ್ನು ನೀಡುತ್ತಾನೆ. ಶನಿಯ ಕೃಪೆಯಿಂದ ವ್ಯಕ್ತಿಯ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯ ಮಳೆಯಾಗುತ್ತದೆ. ಶನಿದೇವನು ಕೋಪಗೊಂಡರೆ ಆತ ನಿಮ್ಮ ಹೆಗಲೇರಿದಂತೆ.
ಶನಿದೇವನ ವಕ್ರ ದೃಷ್ಟಿ ಬಿದ್ದರೆ ರಾತ್ರೋರಾತ್ರಿ ವ್ಯಕ್ತಿ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ ಎಂದು ನಂಬಲಾಗಿದೆ. ಆದುದರಿಂದ, ಶನಿ ಮಹಾರಾಜನು ನಿಮ್ಮ ಮೇಲೆ ಕೋಪಗೊಂಡು ನಿಮಗೆ ಅಶುಭ ತರಲು ದಾರಿಯಾಗುವಂತಹ ಕೆಲಸಗಳನ್ನು ಶನಿವಾರದಂದು ಮಾಡಬಾರದಂತೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ತಪ್ಪಾಗಿಯೂ ಸಹ, ಶನಿವಾರದಂದು ಈ ತಪ್ಪುಗಳನ್ನು ಮಾಡಬಾರದಂತೆ. ಹಾಗಾದರೆ ಶನಿವಾರ ಯಾವ ಕೆಲಸ ಬಗ್ಗೆ ನಾವು ಎಚ್ಚರವಹಿಸಬೇಕು, ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ನೋಡೋಣ.
ಮಾಂಸಹಾರ ಮಾಡಲೇಬಾರದು
ಶನಿದೇವ ಸಾತ್ವಿಕ ಆಹಾರವನ್ನು ಹೆಚ್ಚು ಇಷ್ಟಪಡುತ್ತಾನಂತೆ ಹಾಗಾಗಿ ಶನಿ ದೇವರ ನಂಬುವವರು, ಆತನ ಪೂಜೆ ಮಾಡುವವರು, ಆತನ ವ್ರತ ಕೈಗೊಂಡವರು ಈ ದಿನ ಮೊಟ್ಟೆ, ಮಾಂಸ, ಮೀನು ಅಥವಾ ಯಾವುದೇ ರೀತಿಯ ಮಾಂಸವನ್ನು ಸೇವಿಸಬೇಡಿ. ಸಾತ್ವಿಕ ಆಹಾರವನ್ನು ಸೇವಿಸಿ ಶನಿದೇವನು ಪ್ರಸನ್ನನಾಗುತ್ತಾನೆ ಎಂದು ಶಾಸ್ತ್ರ ಹೇಳುತ್ತದೆ.
ಹಾಲು, ಮೊಸರು ಮತ್ತು ಹುಳಿ
ಶನಿವಾರದಂದು ಮೊಸರು, ಹಾಲನ್ನು ಕುಡಿಯಬಾರದು, ಅಂದರೆ ಹಾಲು, ಮೊಸರಿಗೆ ಏನನ್ನಾದರೂ ಬೆರೆಸಿ ಕುಡಿಯಬಹುದು, ಅರಶಿನ, ಕೇಸರಿ, ಬೆಲ್ಲ ಹೀಗೆ ಏನಾದರೂ ಸೇರಿಸಿ ಕುಡಿಯಬಹುದು. ಇದರ ಜೊತೆ ಹುಳಿಯ ಅಂಶವನ್ನು ಶನಿವಾರ ಸೇವಿಸಬಾರದಂತೆ.
ಕೂದಲು ಮತ್ತು ಉಗುರುಗಳನ್ನು ಕತ್ತರಿಸುವುದು ನಿಷೇಧ
ಶನಿವಾರ ಕೂದಲು ಕತ್ತರಿಸಿಸುವುದು ನಿಷೇಧಿಸಲಾಗಿದೆ. ಈ ದಿನ ಕೂದಲು ಕತ್ತರಿಸಿ, ಉಗುರು ತೆಗೆದರೆ ಶನಿದೇವನು ಕೋಪಗೊಳ್ಳುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದ, ಈ ದಿನ ತಪ್ಪಾಗಿಯೂ ಈ ಕೆಲಸಗಳನ್ನು ಮಾಡಬೇಡಿ.
ಈ ವಸ್ತುಗಳನ್ನು ಖರೀದಿಸಬೇಡಿ
ಶನಿವಾರದಂದು ಶನಿ ದೇವರಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದನ್ನು ಸಹ ನಿಷೇಧಿಸಲಾಗಿದೆ. ಇದರಲ್ಲಿ ಕಬ್ಬಿಣದ ವಸ್ತುಗಳು, ಸಾಸಿವೆ ಎಣ್ಣೆ, ಉದ್ದಿನಬೇಳೆ, ಕಲ್ಲಿದ್ದಲು, ಉಪ್ಪು ಮತ್ತು ಕಪ್ಪು ಬಟ್ಟೆ ಇತ್ಯಾದಿ. ಶನಿವಾರದಂದು ಈ ವಸ್ತುಗಳನ್ನು ಖರೀದಿಸಬೇಡಿ. ಆದಾಗ್ಯೂ, ಈ ದಿನ ಸಾಸಿವೆ ಎಣ್ಣೆ ಮತ್ತು ಉದ್ದಿನ ಬೇಳೆಯನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಶನಿವಾರದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ.
ಶನಿವಾರ ಪಠಿಸಬೇಕಾದ ಮಂತ್ರ ಯಾವುದು?
ಶನಿವಾರದಂದು ಶನಿದೇವನ ಪೂಜೆ ಮಾಡುವಾಗ ಈ ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಪಠಿಸುವ ಮೂಲಕ ಶನಿದೇವನ ಅನುಗ್ರಹವನ್ನು ಪಡೆಯುತ್ತಾನೆ. ಶನಿವಾರ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಕಪ್ಪು ಬಟ್ಟೆ ಧರಿಸಿ. ಶನಿ ದೇವಸ್ಥಾನಕ್ಕೆ ಹೋಗಿ ಎಳ್ಳು ಅಥವಾ ಸಾಸಿವೆ ಎಣ್ಣೆಯನ್ನು ದಾನ ಮಾಡಿ. ಇದರ ನಂತರ ಈ ಮಂತ್ರವನ್ನು ಜಪಿಸಿ. ಈ ಮಂತ್ರವನ್ನು ಪಠಿಸುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ.
'ಓಂ ಶನಿದೇವಾಯ ನಮಃ'
ಓಂ ಪ್ರಾಂ ಪ್ರೀಂ ಪ್ರಂ ಸಹ ಶನೈಶ್ಚರಾಯ ನಮಃ
ಓಂ ಶನಿಶ್ಚರಾಯ ನಮಃ:
ಶನಿ ಗಾಯತ್ರಿ ಮಂತ್ರ
ಔಂ ಕೃಷ್ಣಾಂಗಾಯ ವಿದ್ಯಾಮ್ಹೇ ರವಿಪುತ್ರಾಯ ಧೀಮಹಿ ತನ್ನಃ ಸೌರಿಃ ಪ್ರಚೋದಯಾತ್
ಓಂ ಕೃಷ್ಣಾಂಗಾಯ ವಿದ್ಮಹೇ ರವಿಪುತ್ರಯ ಧೀಮಹಿ ತನ್ನಃ ಸೌರಿ: ಪ್ರಚೋದಯಾತ್



Click it and Unblock the Notifications
