Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಶ್ರೀಕೃಷ್ಣ ಜನ್ಮಾಷ್ಟಮಿಯಂದು ಈ ತಪ್ಪುಗಳ ಮಾಡಲೇಬೇಡಿ..!
ನಾಳೆ ನಾಡಿನಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ, ಶ್ರದ್ಧಾ ಭಕ್ತಿಯಿಂದ ಶ್ರೀಕೃಷ್ಣನ ಆರಾಧಿಸಲಾಗುತ್ತದೆ. ಶ್ರೀ ಕೃಷ್ಣ ಹುಟ್ಟಿದ ದಿನ ಎಂದು ಈ ದಿನವನ್ನ ಆಚರಿಲಾಗುತ್ತದೆ. ಬೆಣ್ಣೆ ಕಳ್ಳ ಎಂದು ಕರೆಯಲ್ಪಡುವ ಶ್ರೀಕೃಷ್ಣ ಹುಟ್ಟಿದ ಕಥೆಯೇ ರೋಚಕ. ಹೋರಾಟ ಮಾಡಿಕೊಂಡೇ ಜನಿಸಿದಾತ ಶ್ರೀ ಕೃಷ್ಣ. ವಿಷ್ಣುವಿನ ಎಂಟನೇ ಅವತಾರ ಎಂದು ನಂಬಲಾಗಿದೆ.
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ಪ್ರಮುಖ ಘಟನೆಯು ಶ್ರೀಕೃಷ್ಣನ ಜನ್ಮಕ್ಕೆ ಸ್ಫೂರ್ತಿ ನೀಡಿತು.ಕೃಷ್ಣ ಪಕ್ಷದ ಅಷ್ಟಮಿಯ ದಿನ ದೇವಕಿಯ ಎಂಟನೇ ಮಗ ಹುಟ್ಟಿದ, ಆತನೇ ಭಗವಾನ್ ಕೃಷ್ಣ.ವಾಸುದೇವ ತನ್ನ ಕಂದ ಕೃಷ್ಣನನ್ನು ಯಮುನಾ ನದಿಯ ಸಹಾಯದಿಂದ ಗೋಕುಲದಲ್ಲಿನ ತನ್ನ ಸ್ನೇಹಿತ ನಂದಗೋಪ ಇರುವಲ್ಲಿಗೆ ಕರೆತರುತ್ತಾನೆ. ಅದೇ ಸಮಯದಲ್ಲಿ ನಂದಾ ಅವರ ಪತ್ನಿ ಯಶೋದಾ ಕೂಡ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ ಎಂಬ ಕಥೆ ಇದೆ.

ಈ ದಿನ ಉಪವಾಸವಿದ್ದು ನೀವು ಕೃಷ್ಣನ ಪೂಜೆ ಮಾಡಿದರೆ ಎಲ್ಲಾ ಪಾಪಗಳಿಂದ ಮುಕ್ತಿ ದೊರೆಯಲಿದೆ. ಈ ದಿನ ಶ್ರೀಕೃಷ್ಣನ ಪೂಜೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರಲಿದೆ, ಸಂಪತ್ತು ವೃದ್ಧಿಸಲಿದೆ ಎಂದು ನಂಬಲಾಗಿದೆ. ಆದರೆ ಅಪ್ಪಿ ತಪ್ಪಿಯೂ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಈ ತಪ್ಪನ್ನು ಮಾಡಬಾರದಂತೆ. ಹಾಗಾದ್ರೆ ಆ ದಿನ ಯಾವ ತಪ್ಪು ಮಾಡಬಾರದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಾಂಸ ಮತ್ತು ಮೊಟ್ಟೆಗಳನ್ನು ಸೇವಿಸಬೇಡಿ
ಕೃಷ್ಣ ಜನ್ಮಾಷ್ಟಮಿಯ ಆಚರಣೆಗೂ ಮುನ್ನ ಅಂದರೆ ನೀವು ಈ ದಿನ ಮನೆಯಲ್ಲಿ ಪೂಜೆ ಮಾಡುವವರಿದ್ದರೆ ಮೂರು ದಿನಗಳ ಕಾಲ ವ್ರತ ಮಾಡಬೇಕಾಗುತ್ತದೆ. ಇಲ್ಲವೆ ಒಂದು ದಿನವಾದರು ಮಾಂಸಹಾರ ಬಿಡಬೇಕಾಗುತ್ತದೆ. ಈ ಹಬ್ಬದ ಉಪವಾಸವು ಪವಿತ್ರ ಮತ್ತು ಮಂಗಳಕರ ಆಚರಣೆಗಳನ್ನು ಒಳಗೊಂಡಿರುವುದರಿಂದ ಮಾಂಸಾಹಾರಿ ಆಹಾರವನ್ನು ಕಟ್ಟುನಿಟ್ಟಾಗಿ ಬಿಡಬೇಕು. ಇದರ ಜೊತೆಗೆ ಬೆಳ್ಳುಳ್ಳಿ ಸೇವನೆಯನ್ನೂ ಸಹ ಬಿಡುವುದು ಉತ್ತಮ.
ಉಪಾಹಾರದ ನಂತರ ಚಹಾವನ್ನು ಕುಡಿಯಬಾರದು
ಉಪಹಾರದ ಬಳಿಕ ಬೆಳಗ್ಗೆ ಚಹಾ ಸೇವಿಸಬಾರದಂತೆ. ಕೃಷ್ಣ ಜನ್ಮಾಷ್ಟಮಿಯಲ್ಲಿ ಉಪವಾಸ ಮಾಡುತ್ತಾರೆ. ಆದ್ರೆ ಕೆಲವರು ಈ ದಿನ ಚಹಾ ಹೆಚ್ಚೆಚ್ಚು ಕುಡಿಯುತ್ತಾರೆ. ಇದನ್ನು ಸಹ ಮಾಡಬಾರದು.
ಎಣ್ಣೆಯಲ್ಲಿ ಕರಿದ ತಿಂಡಿ ಸೇವಿಸಬಾರದು
ಹೆಚ್ಚು ಎಣ್ಣೆ ಹಾಕಿ ಕರಿದ ತಿಂಡಿಯನ್ನು ಸವಿಯಬಾರದಂತೆ. ಇದರ ಬದಲಿಗೆ ಹಾಲು, ಮೊಸರು, ತುಪ್ಪ ಹೀಗೆ ಸಾತ್ವಿಕ ಆಹಾರ ಸೇವಿಸಬೇಕಂತೆ.
ನೆಲದ ಮೇಲೆ ಕುಳಿತು ಪೂಜೆ ಮಾಡಬೇಡಿ
ಮನೆಯಲ್ಲಿ ಶ್ರೀಕೃಷ್ಟನ ಮೂರ್ತಿಗೆ ಪೂಜೆ ಮಾಡುವಾಗ ನೆಲದ ಮೇಲೆ ಕುಳಿತು ಪೂಜೆ ಮಾಡಬಾರದಂತೆ. ಕೃಷ್ಣದ ಎದುರು ಮಣೆ ಅಥವಾ ಚಾಪೆ ಹಾಕಿ ಕುಳಿತು ಪೂಜೆ ಮಾಡಬೇಕು.
ಏನು ಮಾಡಬೇಕು?
ಮನೆಯ ಸ್ವಚ್ಛೆತೆಗೆ ಮೊದಲ ಆಧ್ಯತೆ
ಈ ದಿನ ನೀವು ಸ್ವಚ್ಛತೆಗೆ ಮೊದಲ ಆಧ್ಯತೆ ನೀಡಬೇಕು. ಮನೆಯಲ್ಲಿ ಕಸ, ಕೊಲೆ ಇಲ್ಲದಂತೆ ಸ್ವಚ್ಛ ಮಾಡಿದ ಬಳಿಕ ಪೂಜೆಗೆ ಸಿದ್ಧತೆ ನಡೆಸಬೇಕು. ಶುಭ್ರವಾದ ಬಟ್ಟೆ ಧರಿಸಿ. ಮನೆಯನ್ನು ಸ್ವಚ್ಛ ಮಾಡಿದ ಬಳಿಕ ಪೂಜೆ ನೆರವೇರಿಸಬೇಕು.
ಸಂಕಲ್ಪ ಮಾಡಿ
ನೀವು ಉಪವಾಸವನ್ನು ಮುರಿಯದೆ ಅಥವಾ ಯಾವುದೇ ತಪ್ಪುಗಳನ್ನು ಮಾಡದೆ ಶ್ರೀಕೃಷ್ಣನಿಗೆ ಎಲ್ಲಾ ಭಕ್ತಿ ಮತ್ತು ಪ್ರಾಮಾಣಿಕತೆಯಿಂದ ಉಪವಾಸವನ್ನು ಮಾಡುತ್ತೀರಿ. ಇದರ ಮಧ್ಯೆ ಶ್ರೀಕೃಷ್ಣನ ನಾಮಸ್ಮರಣೆ ಮಾಡುತ್ತಾ ಇರಿ.
ಉಪವಾಸ
ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಉಪವಾಸ ಮಾಡಿದರೆ ಬಹಳ ಉತ್ತಮವಂತೆ. ಈ ದಿನ ಉಪಹಾರವನ್ನು ಮಾತ್ರ ಸೇವಿಸಿ ಶ್ರೀಕೃಷ್ಣ ನಾಮಸ್ಮರಣೆ ಮಾಡುತ್ತಾರೆ.
ಅನ್ನದಾನ ಮಾಡಿ
ಮನೆಯಲ್ಲಿ ಪೂಜೆ ನೆರವೇರಿದ ಬಳಿಕ ಅನ್ನದಾನ ಮಾಡಬೇಕಂತೆ. ಇದರಿಂದ ಕೃಷ್ಣನಿಗೆ ಮಾಡಿದ ವ್ರತ ಹಾಗೂ ಪೂಜೆ ಫಲ ನೀಡಲಿದೆ ಎಂದು ಹಿರಿಯರು ಹೇಳುತ್ತಾರೆ.



Click it and Unblock the Notifications
