Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಅಕ್ಷಯ ತೃತೀಯದ ದಿನ ಯಾವ ವಸ್ತು ಖರೀದಿಸಬಾರದು..! ಯಾವುದು ನಿಷಿದ್ಧ
ಅಕ್ಷಯ ತೃತೀಯ ಎಂಬುದು ಆಧ್ಯಾತ್ಮಿಕ ಕಾರಣಗಳಿಗಾಗಿ ವಿಶೇಷ ದಿನ ಎನಿಸಿದೆ. 2025ರಲ್ಲಿ ಇದೇ ಏಪ್ರಿಲ್ 30ರಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಅಕ್ಷಯ ತೃತೀಯ ಅತ್ಯುತ್ತಮ ದಿನವಾಗಿದೆ. ಈ ದಿನ ಎಲ್ಲಾ ಶುಭ ಕಾರ್ಯಗಳಿಗೆ ಮುನ್ನುಡಿ ಬರೆಯಲಾಗುತ್ತದೆ. ಈ ದಿನದಂದು ಹಲವು ಹಲವು ರೀತಿಯ ವಸ್ತುಗಳನ್ನು ಮನೆಗೆ ತರುತ್ತಾರೆ. ಅದರಲ್ಲಿ ಹೆಚ್ಚಾಗಿ ಚಿನ್ನ ಖರೀದಿಸುವುದು ನೋಡಬಹುದು.
ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಒಳಿತಾಗಲಿದೆ ಎಂದು ನಂಬಕೆ ಇದೆ. ಹೀಗಾಗಿ ಅಕ್ಷಯ ತೃತೀಯ ದಿನದಂದು ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬಿರುತ್ತವೆ. ಹಾಗೆ ಈ ದಿನದಂದು ಹೊಸ ಕಾರು, ಮನೆ, ಬಟ್ಟೆ, ಜಮೀನು, ವಜ್ರ, ಹೊಸ ವ್ಯಾಪಾರ ಆರಂಭಿಸುವುದು ಹೀಗೆ ಹಲವು ರೀತಿಯ ಕೆಲಸಗಳ ಮಾಡಲು ಮುಂದಾಗುತ್ತಾರೆ.

ಹಾಗೆ ಅಕ್ಷಯ ತೃತೀಯದ ಈ ಶುಭ ದಿನದಂದು ಕೆಲವೊಂದು ವಸ್ತು ಖರೀದಿಸಿದರೆ ಲಾಭವಾಗುತ್ತದೆ. ಹಾಗೆ ಶುಭಕರವಾಗಲಿದೆ. ಹಾಗೆ ಕೆಲವೊಂದು ವಸ್ತುಗಳನ್ನು ಈ ದಿನ ಮನೆಗೆ ತರುವುದು ದರಿದ್ರತನಕ್ಕೆ ಕಾರಣವಾಗಲಿದೆ. ಹಾಗಾದ್ರೆ ಈ ದಿನ ಯಾವ ವಸ್ತುಗಳನ್ನು ಖರೀದಿಸಬಾರದು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅಲ್ಯೂಮೀನಿಯಂ ಅಥವಾ ಕಬ್ಬಿಣದ ಪಾತ್ರೆ
ಈ ದಿನದಂದು ಕಪ್ಪು ಬಣ್ಣಕ್ಕೆ ಸಂಬಂಧಿಸಿದ ಯಾವುದೇ ವಸ್ತುವನ್ನು ಖರೀದಿಸಬಾರದು ಎಂದು ಹೇಳಲಾಗಿದೆ. ಹಾಗೆ ಪ್ಲಾಸ್ಟಿಕ್, ಉಕ್ಕು, ಅಲ್ಯೂಮೀನಿಯಂ, ಕಬ್ಬಿಣದಿಂದ ತಯಾರಾದ ವಸ್ತುಗಳ ಖರೀದಿಗೆ ಮುಂದಾಗಬೇಡಿ. ಇವು ರಾಹುವಿಗೆ ಸಂಬಂಧಿಸಿದ ವಸ್ತುಗಳು ಎಂದು ನಂಬಲಾಗಿದೆ. ಇದರಿಂದ ಮನೆಯಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂದು ಕೂಡ ಹೇಳಲಾಗಿದೆ. ಹೀಗಾಗಿ ಕಪ್ಪು ಬಣ್ಣದ ವಸ್ತುಗಳ ಖರೀದಿಯಿಂದ ದೂರ ಉಳಿಯುವುದು ಉತ್ತಮ. ಹಾಗೆ ಕಪ್ಪು ಬಣ್ಣದ ಹರಳು ಹೊಂದಿರುವ ಆಭರಣಗಳನ್ನು ಕೂಡ ಈ ದಿನ ಖರೀದಿಸಬಾರದು.
ಚೂಪಾದ ಅಥವಾ ಮೊನಚಾದ ವಸ್ತುಗಳು
ಅಕ್ಷಯ ತೃತೀಯ ದಿನದಂದು ಚಾಕು, ಬ್ಲೇಡ್, ಕತ್ತರಿ ಮತ್ತು ಕೊಡಲಿಯಂತಹ ಹರಿತವಾದ ಮತ್ತು ಮೊನಚಾದ ವಸ್ತುಗಳನ್ನು ಖರೀದಿಸಬಾರದು. ಅಂತಹ ವಸ್ತುಗಳನ್ನು ಖರೀದಿಸುವುದರಿಂದ ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ. ಅದರಲ್ಲೂ ಗೃಹಬಳಕೆ ಕೆಲಸಕ್ಕಾಗಿ ಅಥವಾ ಮನೆ ಒಳಗೆ ಬಳಸುವ ಉದ್ದೇಶದಿಂದ ಯಾವುದೇ ಚೂಪಾದ ವಸ್ತುಗಳ ಖರೀದಿಗೆ ಮುಂದಾಗಬಾರದು.
ಮುಳ್ಳಿನ ಸಸ್ಯ
ಅಕ್ಷಯ ತೃತೀಯದ ದಿನದಂದು ಮನೆಯಲ್ಲಿ ಇಡಲು ಅಥವಾ ಅಲಂಕಾರಕ್ಕಾಗಿ ಪ್ಲಾಸ್ಟಿಕ್ ಗಿಡಗಳು, ಮುಳ್ಳು ಹೊಂದಿರುವ ಗಿಡಗಳ ತರಬಾರದು. ಗುಲಾಬಿ, ಕಳ್ಳಿ, ಕ್ರೋಟಾನ್ ಸಸ್ಯ ಸೇರಿ ಇನ್ನಿತರೆ ಮುಳ್ಳು ಹೊಂದಿರುವ ಗಿಡಗಳ ಖರೀದಿಯು ನಿಮಗೆ ನಷ್ಟಕ್ಕೆ ಕಾರಣವಾಗಬಹುದು. ಇದು ಭವಿಷ್ಯದಲ್ಲಿ ನಿಮ್ಮ ಮನಃಶಾಂತಿ ಹಾಳು ಮಾಡುತ್ತದೆ ಎಂದು ಹೇಳಲಾಗಿದೆ.
ಸಾಲ ನೀಡುವುದು ನಿಷಿದ್ಧ
ಅಕ್ಷಯ ತೃತೀಯದ ದಿನದಂದು ನೀವು ಖರ್ಚು ಮಾಡುಬಹುದು. ಆದ್ರೆ ಯಾರಿಗೂ ಸಾಲ ನೀಡಬೇಡಿ. ಈ ದಿನ ಸಾಲ ಪಡೆದವರು ಅತ್ಯಂತ ಸುಖ ಸಂತೋಷ ಪಡೆಯಲಿದ್ದಾರೆ. ಆದ್ರೆ ಸಾಲ ನೀಡಿದವರಿಗೆ ಆ ಹಣ ವಾಪಾಸು ಬರುವುದು ಅನುಮಾನ ಹಾಗೆ ಅದರಿಂದ ಹಲವು ರೀತಿಯ ಆರ್ಥಿಕ ಸಂಕಷ್ಟಗಳ ಎದುರಿಸಬೇಕಾಗುತ್ತದೆ. ಅಕ್ಷಯ ತೃತೀಯದಲ್ಲಿ ಲಕ್ಷ್ಮಿ ಮನೆಯಲ್ಲಿ ನೆಲೆಸಲು ಮುಂದಾಗುವ ಕಾರಣ ಅನಗತ್ಯ ಖರ್ಚು ಅಥವಾ ಹಣ ಇಲ್ಲದೆ ಇರುವುದು ಸಾಲ ನೀಡುವುದು ಮಾಡಬೇಡಿ.
(ಹಕ್ಕು ತ್ಯಾಗ: ಈ ಲೇಖನದಲ್ಲಿ ಉಲ್ಲೇಖಿಸಲಾದ ಪರಿಹಾರಗಳು/ಪ್ರಯೋಜನಗಳು/ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯಾಗಿದ್ದು, ಈ ಅಂಶಗಳ ಅನುಸರಿಸುವ ಮೊದಲು ಸೂಕ್ತ ತಜ್ಞರ ಅಭಿಪ್ರಾಯ ಪಡೆಯುವುದು ಮುಖ್ಯ. ಈ ಲೇಖನದ ಉದ್ದೇಶ ಕೇವಲ ಮಾಹಿತಿ ಒದಗಿಸುವುದಾಗಿದೆ)



Click it and Unblock the Notifications