Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಲಾಲಾಬಾಗ್ ಗಣಪನಿಗೆ ಮೊದಲ ದಿನವೇ ₹50 ಲಕ್ಷ ದೇಣಿಗೆ..!
ದೇಶದಾದ್ಯಂತ ಈಗ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಹಲವು ಕಡೆಗಳಲ್ಲಿ ದೈತ್ಯ ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ. ಹಾಗೆ ವಿಶೇಷ ಪೂಜೆ, ಕಾರ್ಯಕ್ರಮಗಳು ನಡೆಯುತ್ತಿದೆ. ಬಹುತೇಕ ಸಾರ್ವಜನಿಕ ಗಣೇಶೋತ್ಸವಗಳು ಮೂರು ದಿನಗಳಿಂದ ಹಿಡಿದು ಒಂದು ತಿಂಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ.
ಇನ್ನು ಮುಂಬೈನ ಕಿಂಗ್ ಆಫ್ ಲಾಲಾಭಾಗ್ ಎಂದು ಕರೆಯಲ್ಪಡುವ 'ಲಾಲ್‌ಬಾಗ್ಚಾ ರಾಜಾ' ಗಣಪತಿ ಇಡೀ ದೇಶದಲ್ಲೇ ಖ್ಯಾತಿ ಪಡೆದಿರುವ ಗಣೇಶ ಆಗಿದೆ. ಮುಂಬೈನ ಅತೀ ದೊಡ್ಡ ಹಾಗೂ ಅತೀ ಹೆಚ್ಚು ಮಂದಿ ಸೇರುವ ಗಣೇಶ ಇದಾಗಿದೆ. ಹೀಗಾಗಿ ಲಾಲ್‌ಬಾಗ್ ಗಣೇಶ ಹೆಸರು ಪಡೆದುಕೊಂಡಿದೆ.

ಈಗ ಲಾಲ್‌ಬಾಗ್‌ನ ಈ ಗಣಪ ಮೊದಲ ದಿವನೇ ದಾಖಲೆಯ ದೇಣಿಗೆ ಸಂಗ್ರಹಿಸುವ ಮೂಲಕ ಮತ್ತೆ ಸುದ್ದಿಯಾಗಿದೆ. 7 ತಾರೀಖಿನಂದು ಈ ಗಣೇಶನ ಪ್ರತಿಷ್ಠಾಪಿಸಲಾಗಿತ್ತು. ಪ್ರತಿಷ್ಠಾಪನೆಯ ದಿನವೇ ಲಕ್ಷ ಲಕ್ಷ ಮಂದಿ ಗಣೇಶನ ದರ್ಶನ ಪಡೆದಿದ್ದಾರೆ. ಅದೇ ದಿನ ದೇಣಿಗೆಯಾಗಿ 48,30,000 ರೂ ಸಂಗ್ರಹಿಸಲಾಗಿದೆ.
ಮುಂಬೈನ ಹಲವು ಪ್ರಸಿದ್ಧ ಗಣಪನ ಮೂರ್ತಿಗಳಲ್ಲಿ ಇದು ಸಹ ಒಂದಾಗಿದೆ. ಮೊದಲ ದಿನವೇ ಭಕ್ತರ ಕಾಣಿಗೆ ಹಾಗೂ ದೇಣಿಗೆಯ ಹಣ 50 ಲಕ್ಷ ರೂಪಾಯಿ ಸನಿಹಕ್ಕೆ ತಲುಪಿದೆ. ಗಣೇಶೋತ್ಸವ ಮುಗಿಯು ವೇಳೆಗೆ 1 ಕೋಟಿ ರೂಪಾಯಿಗೂ ಅಧಿಕ ದೇಣಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ.
ಮಧ್ಯ ಮುಂಬೈನಲ್ಲಿರುವ 'ಲಾಲ್‌ಬಾಗ್ಚಾ ರಾಜಾ' ಮತ್ತು 'ಚಿಂಚಪೋಕ್ಲಿ ಚಾ ಚಿಂತಾಮಣಿ' ಸೇರಿದಂತೆ ದೊಡ್ಡ ಮತ್ತು ಪ್ರಸಿದ್ಧ ಗಣಪತಿ ಮಂಡಲಗಳಿಗೆ ದೇವರ ದರ್ಶನ ಪಡೆಯಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು. ಗಣೇಶ ಚತುರ್ಥಿಯ ನಿಮಿತ್ತ ಶನಿವಾರ ಹಲವು ಮಂಡಲಗಳು ತಮ್ಮ ಗಣಪತಿ ಮೂರ್ತಿಗಳನ್ನು ಭವ್ಯ ಮೆರವಣಿಗೆಯೊಂದಿಗೆ ತಂದಿದ್ದಾರೆ.
ಮಹಾರಾಷ್ಟ್ರದ ಜಲ್ನಾದಲ್ಲಿ ಭಕ್ತಾದಿಗಳು ಗಣೇಶನ ಪ್ರತಿಷ್ಠಾಪನೆ ಮಾಡಿದ ಬಳಿಕ ಆರತಿ ಮಾಡಿ ಸಂವಿಧಾನದ ಪೀಠಿಕೆಯನ್ನು ಓದಿ ಗಮನ ಸೆಳೆದಿದ್ದಾರೆ. ಮುಂಬೈನ ಬಹುತೇಕ ಗಣಪತಿಯು ಸುಮಾರು 10 ದಿನಗಳ ಕಾಲ ನಡೆಯುತ್ತದೆ.
ಚಿನ್ನದ ಕಿರೀಟ ನೀಡಿದ ಅನಂತ್ ಅಂಬಾನಿ
ಇತ್ತೀಚಿಗೆ ಭವ್ಯ ರೀತಿಯಲ್ಲಿ ವಿವಾಹವಾದ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಇದೇ ಗಣಪನಿಗೆ ಚಿನ್ನದ ಕಿರೀಟ ಉಡುಗೊರೆಯಾಗಿ ನೀಡಿದ್ದಾರೆ. ಸುಮಾರು 20 ಕೆ.ಜಿ ತೂಕದ ಚಿನ್ನದ ಕಿರೀಟ ಇದಾಗಿದೆ. ಈ ಸೇವಾ ಸಮಿತಿಯ ಸದಸ್ಯರು ಆಗಿರುವ ಅನಂತ್ ಅಂಬಾನಿ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಕಿರೀಟವು ಸುಮಾರು 15 ಕೋಟಿ ರೂಪಾಯಿ ಮೌಲ್ಯದ್ದು ಎನ್ನಲಾಗಿದೆ. ಇದಕ್ಕೂ ಮೊದಲು ಸಹ ಈ ಗಣೇಶನಿಗೆ ಹಲವಾರು ಮಂದಿ ಬೆಳ್ಳಿ, ಚಿನ್ನ ಸೇರಿ ವಿವಿಧ ರೀತಿಯ ವಸ್ತುಗಳ ದೇಣಿಗೆಯಾಗಿ ನೀಡಿದ್ದರು. ಈ ಸಾಲಿಗೆ ಚಿನ್ನದ ಕಿರೀಟವೊಂದು ಸೇರಿಕೊಂಡಿದೆ. ಅಲ್ಲದೆ ಅನಂತ್ ಅಂಬಾನಿ ಹಾಗೂ ಈ ಲಾಲಾಬಾಗ್ ಗಣಪನ ನಡುವೆ ಹಲವು ವರ್ಷಗಳ ನಂಟಿದೆ.
ಕೋವಿಡ್ ಕಾಲದಲ್ಲಿ ಅಗತ್ಯವಿರುವ ಮಂದಿಗೆ ಕಿಟ್‌ಗಳ ನೀಡುವುದು ಸೇರಿ ನೆರವು ನೀಡಲು ಈ ಗಣೇಶನ ಸಮಿತಿ ಮುಂದಾಗಿತ್ತು. ಲಕ್ಷಕ್ಕೂ ಅಧಿಕ ಮಂದಿಗೆ ನೆರವು ನೀಡಿತ್ತು. ಇದೇ ವೇಳೆ ಅನಂತ್ ಅಂಬಾನಿ ತಮ್ಮ ರಿಲಾಯನ್ಸ್ ಫೌಂಡೇಶನ್ ವತಿಯಿಂದ 24 ಡಯಾಲಿಸಿಸ್ ಯಂತ್ರವನ್ನು ದೇಣಿಗೆಯಾಗಿ ನೀಡಿದ್ದರು.
ಸೆಪ್ಟೆಂಬರ್ 7 ರಿಂದ ಪ್ರಾರಂಭವಾಗುವ ಗಣಪತಿ ಹಬ್ಬವು ಮಹಾರಾಷ್ಟ್ರದಲ್ಲಿ ಪ್ರಮುಖ ಆಚರಣೆಯಾಗಿದೆ. 11ನೇ ದಿನ ಮುಂಬೈನ ಪ್ರಮುಖ ಬೀದಿಯಲ್ಲಿ ಲಾಲಾಬಾಗ್ ಗಣೇಶನ ಮೆರವಣಿಗೆ ಸಾಗುತ್ತದೆ. ಈ ವೇಳೆ ಲಕ್ಷ ಲಕ್ಷ ಮಂದಿ ರಸ್ತೆಯ ಇಕ್ಕೆಲಗಳಲ್ಲಿ ಸೇರುತ್ತಾರೆ.



Click it and Unblock the Notifications
