Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ವ್ಯಕ್ತಿಯ ಮೂಗಿನಿಂದ 150 ಜೀವಂತ ಹುಳುಗಳ ಹೊರತೆಗೆದ ವೈದ್ಯರು..!!
ನಾವು ಮನುಷ್ಯದ ದೇಹದೊಳಗೆ ಕೀಟಗಳು, ಹುಳುಗಳು ಸೇರಿಕೊಳ್ಳುವುದನ್ನು ನೋಡಿದ್ದೇವೆ. ಕೆಲವು ಬಾರಿ ಕಿವಿಯೊಳಗೆ ಕೀಟಗಳು ಹೋಗುವುದು, ಜೇಡ ಬಲೆ ಹಣೆಯುವುದು ಹೀಗೆ ಹತ್ತಾರು ಪ್ರಕರಣಗಳ ನೋಡಿದ್ದೇವೆ. ಇನ್ನು ಕೆಲವು ಬಾರಿ ಎಂತಹ ವಿಚಿತ್ರ ಘಟನೆ ನಡೆಯುತ್ತದೆ ಎಂದರೆ ಮೂಗಿನೊಳಗೆ ದೊಡ್ಡ ಕೀಟ ಸೇರುವುದು, ಕಿವಿಯೊಳಗೆ ಸೇರಿಕೊಂಡು ಶಸ್ತ್ರಚಿಕಿತ್ಸೆ ನೆರವೇರಿಸುವುದು ಹೀಗೆ ಚಿತ್ರ ವಿಚಿತ್ರ ಘಟನೆಗಳ ನೋಡಿದ್ದೇವೆ.
ಆದರೆ ನೀವೆಂದಾದರು ವ್ಯಕ್ಯಿಯ ಮೂಗಿನೊಳಗೆ ಜೀವಂತ 150 ಹುಳುಗಳು ಇದ್ದ ಘಟನೆ ಕೇಳಿದ್ದೀರ. ಹೌದು ಇಲ್ಲೊಬ್ಬ ವ್ಯಕ್ತಿಯ ಮೂಗಿನಿಂದ ವೈದ್ಯರು 150 ಜೀವಂತ ಹುಳುಗಳನ್ನು ಹೊರತೆಗೆದಿದ್ದಾರೆ. ಫ್ಲೋರಿಡಾದ ಜಾಕ್ಸನ್ ಎಂಬಾತನ ಮೂಗಿನಲ್ಲಿ ರಕ್ತ ಬರುತ್ತಿದ್ದ ಕಾರಣ ಆತ ವೈದ್ಯರ ಬಳಿ ಹೋದಾಗ ವೈದ್ಯರೇ ಶಾಕ್ ಆಗಿದ್ದಾರೆ. ಬಳಿಕ ಒಂದೊಂದೇ ಹುಳು ಹೊರತೆಗೆದಿದ್ದಾರೆ.
ಆತನಿಗೆ ಹುಳು ಇರುವುದು ಗೊತ್ತಾಗಿದ್ದು ಹೇಗೆ?
ಅಚ್ಚರಿಯ ವಿಚಾರವೆಂದರೆ ಜಾಕ್ಸನ್‌ಗೆ ಮೂಗಿನೊಳಗೆ ಅಷ್ಟೊಂದು ಹುಳುಗಳಿವೆ ಎಂಬುದೇ ತಿಳಿದಿರಲಿಲ್ಲವಂತೆ. ಆದರೆ ಕೆಲ ತಿಂಗಳಿಂದ ಮೂಗಿನಲ್ಲಿ ನೋವು ಕಾಣಿಸಿಕೊಂಡಿತ್ತು. ಇಷ್ಟಾದರೂ ಆತ ವೈದ್ಯರ ಬಳಿ ಹೋಗಿರಲಿಲ್ಲ. ಆದರೆ ಮೂಗೂ ಊದಿಕೊಂಡು ಬಳಿಕ ರಕ್ತ ಬರಲು ಆರಂಭಿಸಿದಾಗ ಆತ ವೈದ್ಯರ ಬಳಿ ತೆರಳಿದ್ದ.

ಮೂಗಿನೊಳಗೆ ಕ್ಯಾಮರಾ ಹಾಕಿದ ವೈದ್ಯರು
ಮೂಗು, ಬಾಯಿ ಊದಿಕೊಂಡಾಗ ವೈದ್ಯರ ಬಳಿ ಬಂದಾಗ, ಅವರು ಮೊದಲು ಸಣ್ಣ ಕ್ಯಾಮರಾವನ್ನು ಬಳಸಿ ಮೂಗಿನಲ್ಲಿ ಏನಾಗಿದೆ ಎಂದು ಅರಿಯಲು ಮುಂದಾದರು. ಈ ವೇಳೆ ಅವರಿಗೆ ಒಳಗೆ ಹುಳುಗಳು ಇರುವುದು ತಿಳಿದುಬಂದಿದೆ. ಹೀಗಾಗಿ ಅವರು ಸಣ್ಣ ಇಕ್ಕಳ ಬಳಸಿ ಹುಳುಗಳನ್ನು ಹೊರತೆಗೆಯಲು ಮುಂದಾದರು.
ಹುಳು ಸೇರಿಕೊಂಡಿದ್ದು ಹೇಗೆ?
ಸಾಮಾನ್ಯವಾಗಿ ಬದುಕಿರುವ ಮಾನವನ ದೇಹದಲ್ಲಿ ಹುಳುಗಳು ಸೃಷ್ಟಿಯಾಗುವುದಿಲ್ಲ. ದೇಹದಲ್ಲಿ ಹುಳು ಹುಟ್ಟಿಕೊಳ್ಳಲು ಯಾವ ಅಂಗಗಳು ಸಹಾಯ ಮಾಡುವುದಿಲ್ಲ. ಆದರೆ ಈ ಹುಳುಗಳು ಬಾಹ್ಯ ಬೆಂಬಲದಿಂದ ದೇಹವನ್ನು ಸೇರಿಕೊಂಡರೆ ಅಲ್ಲಿ ಸಂತಾನೋತ್ಪತ್ತಿ ಮಾಡುವ ಸಂಭವ ಅಧಿಕವಾಗಿರುತ್ತದೆ. ಈ ಹುಳುಗಳು ಸಹ ಬಾಹ್ಯವಾಗಿ ಸೇರಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಹೀಗಾಗಿ ಈ ಹುಳುಗಳ ಮೂಲ ಪತ್ತೆ ಮಾಡಲು ಅವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಸದ್ಯ ಜಾಕ್ಸನ್‌ಗೆ ಶಸ್ತ್ರ ಚಿಕಿತ್ಸೆ ನೆರವೇರಿಸದೆ ಹುಳುಗಳ ಹೊರತೆಗೆಯಲಾಗಿದ್ದು, ಅವರೀಗ ಚೇತರಿಸಿಕೊಂಡಿದ್ದಾರೆ. ಈ ಹುಳುಗಳನ್ನು ಅವರು ಹಾಗೆಯೇ ಬಿಟ್ಟಿದ್ದರೆ ಮೆದುಳಿಗೆ ಹಾನಿ ಮಾಡುತ್ತಿದ್ದವು. ಅಲ್ಲದೆ ಮೂಗಿನ ಸಂರ್ಕೀರ್ಣ ರಚನೆಯನ್ನು ಹಾಳು ಮಾಡಿ ಉಸಿರಾಟ ಸಮಸ್ಯೆ ಹಾಗೂ ಕ್ಯಾನ್ಸರ್‌ನಂತಹ ಭೀಕರ ಕಾಯಿಲೆಗೂ ಇವು ಕಾರಣವಾಗುತ್ತಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.
ಮಹಿಳೆ ಕಿವಿಯೊಳಗಿತ್ತು ಜೀವಂತ ಜೇಡ
ಕಳೆದ ವರ್ಷ ಮಾರ್ಚ್‌ನಲ್ಲಿ ಇಂತಹದ್ದೆ ಇನ್ನೊಂದು ಘಟನೆ ವರದಿಯಾಗಿದ್ದನ್ನು ನಾವು ಸ್ಮರಿಸಬಹುದು. ಮಹಿಳೆಯೊಬ್ಬರ ಕಿವಿಯಲ್ಲಿ ಜೀವಂತ ಜೇಡವೊಂದು ಗೂಡುಕಟ್ಟಿತ್ತು. ಆಕೆ ಕಿವಿನೋವು ಎಂದು ವೈದ್ಯರ ಬಳಿ ತೆರಳಿದಾಗ ಕಿವಿಯಲ್ಲಿ ಜೇಡಿ ಗೂಡು ಕಟ್ಟಿರುವುದು ಬೆಳಕಿಗೆ ಬಂದಿತ್ತು. ಅಚ್ಚರಿ ಎಂದರೆ ಆಕೆಗೆ ಕಿವಿ ನೋವು ಆರಂಭವಾಗಿ ಒಂದು ತಿಂಗಳು ಕಳೆದಿತ್ತು. ಒಂದು ತಿಂಗಳಿಂದ ಜೇಡ ಕಿವಿಯಲ್ಲೇ ಇತ್ತು. ಬಳಿಕ ವೈದ್ಯರು ಆಕೆಯ ಕಿವಿಯೊಳಗೆ ಔಷಧಿಯ ಡ್ರಾಪ್ಸ್ ಹಾಕುವ ಮೂಲಕ ಜೇಡ ಹೊರಬರುವಂತೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಭಾರೀ ಸದ್ದು ಮಾಡಿತ್ತು.
ಇನ್ನೊಂದು ಪ್ರಕರಣದಲ್ಲಿ ರೋಗಿಯ ಒಳಕಿವಿಯಲ್ಲಿ ಕೀಟವೊಂದು ಪತ್ತೆಯಾಗಿತ್ತು. ಇದು ಎಕ್ಸ್ ರೇ ಮಾಡಿದ ಬಳಿಕ ಕಂಡುಬಂದಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಘಟನೆ ನಡೆದಿತ್ತು. ಅಚ್ಚರಿ ಎಂದರೆ ಆ ಕೀಟ ಆತನ ದೇಹದಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ಮಾಡಿತ್ತು. ಎಕ್ಸ್‌ರೆಯಲ್ಲಿ ಅದೊಂದು ಸಣ್ಣ ಜಿರಳೆ ಆಕಾರದಲ್ಲಿ ಕಂಡು ಬಂದಿತ್ತು. ಬಳಿಕ ಆತನಿಗೆ ಶಸ್ತ್ರಚಿಕಿತ್ಸೆ ನೆರವೇರಿಸಬೇಕಾಗಿ ಬಂದಿತ್ತು.



Click it and Unblock the Notifications
