Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ವಿದ್ಯುತ್ ಶಾಕ್ ತಗುಲಿದ ಬಾಲಕನ ಜೀವ ಉಳಿಸಿದ ವೈದ್ಯೆ..! ದೇವರಂತೆ ಕಂಡ ಜನ..!
ಮನುಷ್ಯರ ಜೀವನ ಈಗ ನೀರ ಮೇಲಿನ ಗುಳ್ಳೆಯಂತೆ. ಯಾವಾಗ ಅಪಾಯ ಬಂದು ಬಿಡುತ್ತೆ ಅನ್ನೋದನ್ನ ಯಾರು ಸಹ ಊಹಿಸಲು ಸಾಧ್ಯವಿಲ್ಲ. ಅದರಲ್ಲೂ ಹೃದಯಾಘಾತ, ಮೂರ್ಛೆಯಂತಹ ಕಾಯಿಲೆ ಇದ್ದವರು ಯಾವಾಗ ಕುಸಿದು ಬೀಳುತ್ತಾರೆ ಅನ್ನೋದನ್ನ ಅಂದಾಜಿಸಲು ಸಹ ಸಾಧ್ಯವಿಲ್ಲ.
ಆದ್ರೆ ಯಾರಾದರು ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ ಅವರಿಗೆ ಸಿಪಿಆರ್ ಮಾಡುವ ಮೂಲಕ ಮತ್ತೆ ಜೀವನ ನೀಡಬಹುದು. ಅದರಲ್ಲೂ ಹೃದಯ ಬಡಿತ ನಿಂತಾಗ ಈ ಸಿಪಿಆರ್ ಎಂಬ ಪ್ರಥಮ ಚಿಕಿತ್ಸೆ ಅವರ ಜೀವ ಉಳಿಸಲು ನೆರವಾಗಲಿದೆ.

ಸದ್ಯ ಈಗ ಇಲ್ಲೊಬ್ಬ ಪುಟ್ಟ ಬಾಲಕನನ್ನು ಮಹಿಳಾ ವೈದ್ಯರೊಬ್ಬರು ಈ ಸಿಪಿಆರ್ ಮಾಡಿ ಜೀವ ಉಳಿಸಿದ ಘಟನೆ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿ ವೈದ್ಯರ ಮಾನವೀಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಶಾಕ್ ತಗುಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪುಟ್ಟ ಬಾಲಕನ ಜೀವ ಉಳಿಸುವಲ್ಲಿ ಮಹಿಳಾ ವೈದ್ಯರು ಯಶಸ್ವಿಯಾಗಿದ್ದಾರೆ.
ಏನಿದು ಘಟನೆ?
ಆಂಧ್ರ ಪ್ರದೇಶದ ವಿಜಯವಾಡದ ಅಯ್ಯಪ್ಪ ನಗರದಲ್ಲಿ ಮನೆಯಲ್ಲಿ 6 ವರ್ಷದ ಬಾಲಕನಿಗೆ ವಿದ್ಯುತ್ ಶಾಕ್ ತಗುಲಿದೆ. ಇದರಿಂದ ಕುಸಿದು ಬಿದ್ದ ಆತ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ. ಹೀಗಾಗಿ ಆತನ ಹಿಡಿದು ಪೋಷಕರು ರಸ್ತೆಯಲ್ಲಿ ಓಡುತ್ತಿದ್ದರು. ಅವರು ಆಸ್ಪತ್ರೆಗೆ ಸಾಗಿಸುವ ದಾವಂತದಲ್ಲಿ ರಸ್ತೆಯುದ್ದಕ್ಕೂ ಸಹಾಯಕ್ಕೆ ಕೂಗಿದ್ದಾರೆ.
ಇದೇ ವೇಳೆ ಇಲ್ಲಿಯೇ ಇದ್ದ ಮಹಿಳಾ ವೈದ್ಯೆ ಡಾ.ರವಳಿಕಾ ಈ ಪೋಷಕರ ಗೋಳಾಟ ಕಂಡು ಸ್ಥಳಕ್ಕೆ ಓಡಿ ಬಂದು ಹುಡುಗನಿಗೆ ಪ್ರಥಮ ಚಿಕಿತ್ಸೆ ಮಾಡುವುದಾಗಿ ಹೇಳಿ ಕೂಡಲೆ ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ಆರಂಭಿಸಿದ್ದಾರೆ. ಐದು ನಿಮಿಷಗಳ ನಿರಂತರ ಸಿಪಿಆರ್ ಮೂಲಕ ಬಾಲಕ ಪ್ರಜ್ಞಾ ಸ್ಥಿತಿಗೆ ಬಂದಿದ್ದಾನೆ. ಇದನ್ನು ಕಂಡ ಸುತ್ತಲಿನವರು ವೈದ್ಯೆ ಕಾರ್ಯಕ್ಕೆ ಮೆಚ್ಚಿ ಚಪ್ಪಾಳೆ ಹೊಡೆದು ದೇವರಂತೆ ಬಂದು ಬಾಲಕನ ಜೀವ ಉಳಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈದ್ಯರು ಒಂದು ನಿಮಿಷವೂ ಸಮಯ ಹಾಳು ಮಾಡದೆ ಬಾಲಕನಿಗೆ ರಸ್ತೆಯಲ್ಲಿಯೇ ಸಿಪಿಆರ್‌ಗೆ ಮುಂದಾದರು. ಈ ದೃಶ್ಯ ನೋಡಿದ ಮಂದಿ ಗುಂಪು ಗುಂಪಾಗಿ ಅಲ್ಲಿ ಸೇರಿದ್ದರೆ ಕೆಲವರು ಅಚ್ಚರಿಯಿಂದ ಇಲ್ಲೇನು ನಡೆಯುತ್ತಿದೆ ಎಂದು ಅಚ್ಚರಿಗೊಳಗಾದರು. ವೈದ್ಯೆ ಬಾಲಕನ ಎದೆ ಮೇಲೆ ಕೈ ಇಟ್ಟು ನಿರಂತರ ಸಿಪಿಆರ್ ಮಾಡಿದ್ದಾರೆ. ಬಾಲಕ ಸ್ವಲ್ಪ ಚೇತರಿಸಿಕೊಂಡಿದ್ದನ್ನು ನೋಡಿದ ಪೋಷಕರು ವೈದ್ಯೆಗೆ ಕೈಮುಗಿದು ಧನ್ಯವಾದ ಅರ್ಪಿಸಿದ್ದಾರೆ.
ಇನ್ನು ಸಿಪಿಆರ್ ಬಳಿಕ ಮತ್ತೆ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಬಾಲಕನ ಪರೀಕ್ಷಿಸಿದ ವೈದ್ಯರು ಮೊದಲು ಸಿಪಿಆರ್ ಮಾಡಿದ್ದರಿಂದ ಬಾಲಕನ ಜೀವ ಉಳಿದಿದೆ ಎಂದಿದ್ದಾರೆ. ಜೊತೆಗೆ ಆ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ರೀತಿಯ ಸಿಪಿಆರ್ ತರಬೇತಿ ಎಲ್ಲರಿಗೂ ನೀಡಬೇಕು ತುರ್ತು ಸಂದರ್ಭದಲ್ಲಿ ನೆರವಿಗೆ ಬರಲಿದೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಜೊತೆಗೆ ಸಮಯ ಪ್ರಜ್ಞೆ ಮೆರೆದ ವೈದ್ಯೆಯ ಕಾರ್ಯಕ್ಕೆ ಜನರು ಮೆಚ್ಚಿ ಆಕೆಯ ಹಾಡಿ ಹೊಗಳಿದ್ದಾರೆ. ಇಂತಹ ವೈದ್ಯರು ಎಲ್ಲೆಡೆ ಇದ್ದರೆ ಒಂದಿಷ್ಟು ಜೀವಗಳು ಆಸ್ಪತ್ರೆಗೆ ತಲುಪುವ ಮುನ್ನವೇ ಉಳಿದುಬಿಡುತ್ತವೆ, ಅವರಿಗೊಂದು ಸಲಾಮ್ ಎಂದಿದ್ದಾರೆ. ಜೊತೆಗೆ ಆಕೆಯ ಧೈರ್ಯಕ್ಕೆ ಜನ ಹೊಗಳಿದ್ದಾರೆ. ಇಂತಹ ವೈದ್ಯರಿಂದಲೇ ಇಂದು ನೂರಾರು ಮಂದಿ ಜೀವ ಉಳಿಸಿಕೊಳ್ಳುವಂತಾಗಿದೆ. ಅವರನ್ನು ದೇವರು ಕಾಪಾಡಲಿ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications
