Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗಣೇಶನಿಗೆ ಮೋದಕ ಏಕೆ ಇಷ್ಟ ಗೊತ್ತಾ? ಇದರ ಕಥೆ ಇಲ್ಲಿದೆ ನೋಡಿ
ಗಣೇಶ ಚತುರ್ಥಿ ಹತ್ತಿರವಾಗುತ್ತಿದೆ. ಗಣೇಶನ ಕೂರಿಸಲು ಜನರು ಸಿದ್ಧತೆ ನಡೆಸಿದ್ದಾರೆ. ಹಿಂದೂ ಪುರಾಣಗಳ ಪ್ರಕಾರ ಈ ಗಣೇಶ ಹಬ್ಬಕ್ಕೆ ಬಹಳ ದೊಡ್ಡ ಇತಿಹಾಸವೇ ಇದೆ. ಸಾರ್ವಜನಿಕ ಗಣೇಶೋತ್ಸವದ ಹಿಂದೆಯೂ ಅತೀ ದೊಡ್ಡ ಇತಿಹಾಸವಿದೆ. ಇನ್ನು ವಿನಾಯಕ ಗಣಪತಿಯಾದ ಕಥೆಯೂ ಸಹ ರೋಮಾಂಚನಕಾರಿಯಾಗಿದೆ. ಆನೆಯ ತಲೆಯನ್ನ ವಿಘ್ನ ನಿವಾರಕನಿಗೆ ಹಾಕಿ ಆತ ಗಜಮುಖನಾಗಿ ಬದಲಾದ ಕಥೆ ಸಹ ನಮಗೆ ತಿಳಿದಿದೆ.
ಇನ್ನು ಗಣೇಶ ಹಬ್ಬ ಅಂದ್ರೆ ಅಲ್ಲಿ ವಿಶೇಷ ಆಚರಣೆಗಳನ್ನು ನೋಡುತ್ತೇವೆ. ಅದರಲ್ಲೂ ಗಣೇಶನಿಗೆ ಪ್ರಿಯ ಎಂದು ಮೊದಕವನ್ನು ಅರ್ಪಿಸುವುದನ್ನು ನಾವು ನೋಡಿದ್ದೇವೆ. ಗಣೇಶನಿಗೆ ಸಿಹಿ ಕಡಬು ಹಾಗೂ ಮೋದಕ ಎಂದರೆ ಎಲ್ಲಿಲ್ಲದ ಇಷ್ಟ, ಹೀಗಾಗಿ ಹಬ್ಬದಲ್ಲಿ ಈ ಎರಡು ಖಾದ್ಯ ಮಾಡಿಯೇ ಮಾಡುತ್ತಾರೆ. ಹಾಗಾದ್ರೆ ನಿಮಗೆ ಗೊತ್ತಾ ಗಣೇಶನಿಗೆ ಮೋದಕ ಪ್ರಿಯವಾದ ಸಿಹಿ ಏಕೆ? ಇದರ ಹಿಂದಿರುವ ಕಥೆ ಏನು ಗೊತ್ತಾ?

ಚೌತಿಯಂದು ಮೋದಕವಿಲ್ಲದಿದ್ದರೆ ಹಬ್ಬವೇ ಅಪೂರ್ಣ. ಮೋದಕ ಪ್ರಿಯನಿಗೆ ಕಡ್ಡಾಯವಾಗಿ ಮೋದಕ ಇಡಲೇಬೇಕು. ಭಗವಾನ್ ಗಣೇಶ ಮತ್ತು ಮೋದಕ ಸಿಹಿಯ ನಡುವೆ ಒಂದು ಬಾಂಧವ್ಯವಿದೆ. ಗಣೇಶ ಮೋದಕದ ಸಿಹಿಗೆ ಮಾರುಹೋದ ಘಟನೆಯೊಂದು ನಡೆದಿತ್ತು. ಒಮ್ಮೆ ಪಾರ್ವತಿಯರು ಶಾಂತವಾಗಿ ಕುಳಿತಿರುವಾಗ ಗಣೇಶನ ಹಾಗೂ ಕಾರ್ತಿಕೇಯ ಇಬ್ಬರು ಗಲಾಟೆ ಮಾಡಿಕೊಳ್ಳುತ್ತಿರುವುದು ಕಾಣಿಸಿತು. ಪಾರ್ವತಿ ಇಬ್ಬರನ್ನು ಹತ್ತಿರಕ್ಕೆ ಕರೆದು ಏಕೆ ಜಗಳ ಆಡುತ್ತಿದ್ದೀರಿ ಎಂದು ಕೇಳಿದಳು.
ಆಗ ಅವರಿಬ್ಬರಲ್ಲಿ ಉಂಟಾಗಿರುವ ಒಂದು ಪ್ರಶ್ನೆಯನ್ನು ಶಿವ-ಪಾರ್ವತಿಯರ ಮುಂದಿಟ್ಟರು. ನಮ್ಮಿಬ್ಬರಲ್ಲಿ ಯಾರು ಬುದ್ಧಿವಂತರು ಎಂದು ಹೇಳುವಂತೆ ಹಠ ಹಿಡಿದರು. ಈ ಪ್ರಶ್ನೆ ಕೇಳಿದ ಶಿವ ಪಾರ್ವತಿಯರು ಒಮ್ಮೆ ಅವರಿಗೆ ಯಾವ ಉತ್ತರ ನೀಡಬೇಕು ಎಂಬ ಗೊಂದಲಕ್ಕೆ ಬಿದ್ದರು, ಇಬ್ಬರಲ್ಲಿ ಯಾರು ಬುದ್ಧಿವಂತರೆಂದು ಸಾಬೀತು ಮಾಡುವುದು ಅವರಿಗೂ ದೊಡ್ಡ ಸವಾಲಾಗಿತ್ತು, ಹಾಗೆ ಅವರ ಬುದ್ಧಿ ಶಕ್ತಿ ತಾನಾಗಿಯೇ ಅವರಿಗೆ ತಿಳಿಯುವಂತೆ ಮಾಡಬೇಕು ಎಂದು ಆಲೋಚನೆ ಮಾಡಿದರು.
ಹೀಗಾಗಿ ಅವರಿಬ್ಬರ ಮುಂದೆ ಒಂದು ಸವಾಲು ಇಟ್ಟರು ಯಾರು ಬೇಗ ಇಡೀ ಭೂಮಿಯನ್ನು ಸುತ್ತು ಹಾಕಿ ಬರುತ್ತಾರೋ ಅವರು ಬುದ್ಧಿವಂತರು ಎಂಬ ಸವಾಲು ನೀಡುತ್ತಾರೆ. ಈ ಮಾತು ಕೇಳಿದ ಕಾರ್ತಿಕೇಯ ನವಿಲಿನ ಮೇಲೆ ಕುಳಿತು ಹಾರಿ ಹೋಗಿಯೇ ಬಿಟ್ಟ. ಆದ್ರೆ ವಿನಾಯಕ ಏನು ಮಾಡಬೇಕು ಎಂದು ತಿಳಿಯದೆ ಶಿವ ಪಾರ್ವತಿಯನ್ನೇ ನಿಲ್ಲಿಸಿ ಅವರಿಗೆ ಕೈಮುಗಿದು ಅವರಿಗೆ ಒಂದು ಸುತ್ತು ಬಂದ.
ಇದರ ಒಳಾರ್ಥ ತಿಳಿದ ಶಿವ ಪಾರ್ವತಿಯರು ಆತನ ಬುದ್ಧಿವಂತಿಕೆ ಕಂಡು ಆರ್ಶೀವಾದ ಮಾಡಿದರು. ಹಾಗೆ ವಿದ್ಯ ವಿನಾಯಕನಾಗಿ ಆತ ಬಿರುದು ಪಡೆದ. ಹಾಗೆ ಬಹುಮಾನವಾಗಿ ಆತನಿಗೆ ಶಿವ ಮೋದಕವನ್ನು ತಿನ್ನಿಸಿದ. ಈ ಮೋದಕದ ರುಚಿ ಕಂಡ ಗಣಪ ಅಲ್ಲಿದ್ದ ಎಲ್ಲಾ ಮೋದಕ ಕ್ಷಣದಲ್ಲಿ ಖಾಲಿ ಮಾಡಿಬಿಟ್ಟನಂತೆ. ಹೀಗಾಗಿ ಆತನಿಗೆ ಮೋದಕ ಅಂದರೆ ಪಂಚಪ್ರಾಣ ಎಂದು ನೈವೇದ್ಯ ಮಾಡಲಾಗುತ್ತದೆ.
ಇನ್ನೊಂದು ಕಥೆಯ ಪ್ರಕಾರ ದೇವಾನುದೇವತೆಗಳು ಶಿವ ಪಾರ್ವತಿ ಮನೆಗೆ ಭೇಟಿ ನೀಡುತ್ತಾರೆ. ಆಗ ಒಂದು ಮೋದಕವನ್ನು ಪಾರ್ವತಿಗೆ ಕೊಡುತ್ತಾರೆ. ಗಣೇಶ, ಕಾರ್ತಿಕ ಇಬ್ಬರಲ್ಲಿ ಯಾರಿಗೆ ಕೊಡುವುದು ಎಂಬ ಗೊಂದಲ ಪಾರ್ವತಿಗೆ ಮೂಡುತ್ತದೆ. ಈ ವೇಳೆ ಇಬ್ಬರಿಗೂ ಭೂಮಿಯನ್ನು ಮೊದಲು ಸುತ್ತಿ ಬರುವವರಿಗೆ ಈ ಮೋದಕ ಸಿಗುತ್ತದೆ ಎನ್ನುತ್ತಾಳೆ. ಇದಾದ ಬಳಿಕ ಏನಾಯಿತು ಎಂಬುದು ನಿಮಗೂ ಗೊತ್ತಿದೆ. ಶಿವ-ಪಾರ್ವತಿಯನ್ನೇ ಸುತ್ತಿ ಮೋದಕವನ್ನ ಗಣೇಶ ಸವಿದು ಬಿಟ್ಟಿದ್ದ ಎಂಬ ಕಥೆ ಇದೆ.



Click it and Unblock the Notifications
