Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಸೇನಾ ಆಡಳಿತದಿಂದ ದೇಶ ಕಾಪಾಡಿದ್ದ ಶೇಖ್ ಹಸೀನಾ ಯಾರು ಗೊತ್ತಾ? ಈಗ ದೇಶ ಬಿಡುವ ಸ್ಥಿತಿ ಬಂದಿದ್ದೇಕೆ?
ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದೆ, 1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗಿ ಆದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲು ನೀಡುವ ನಿರ್ಧಾರ ಈಗ ಸುನಾಮಿ ಎಬ್ಬಿಸಿದೆ. ವಿದ್ಯಾರ್ಥಿಗಳ ರೋಷಾವೇಶಕ್ಕೆ ಇಡೀ ದೇಶದಲ್ಲಿ ಹಿಂಸೆ ಭುಗಿಲೆದ್ದಿದೆ. ಸದ್ಯ ಬಾಂಗ್ಲಾದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಅವರು ವಿದೇಶಕ್ಕೆ ಪಲಾಯಾನ ಮಾಡಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಶೇಖ್ ಹಸೀನಾ ರಾಜೀನಾಮೆ ನೀಡಿದ್ದ ಬೆನ್ನಲ್ಲೆ ಬಾಂಗ್ಲಾ ಸೇನೆ ಅಧಿಕಾರ ನಡೆಸಲಿದೆ. ಸೇನಾ ಆಡಳಿತ ಅಂದರೆ ಪ್ರಜಾಪ್ರಭುತ್ವಕ್ಕೆ ಕೊಕ್ಕೆ ಬಿದ್ದಂತೆ. ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್ ಸೇನೆಯು ಮಧ್ಯಂತರ ಸರ್ಕಾರವನ್ನು ರಚಿಸಲಿದೆ ಮತ್ತು ಶಾಂತಿಯ ಹಾದಿಗೆ ಮರಳಲು ಪ್ರತಿಭಟನಾಕಾರರಿಗೆ ಮನವಿ ಮಾಡಿಕೊಂಡಿದ್ದಾರೆ.

ದೇಶದಲ್ಲಿ ಬಿಕ್ಕಟ್ಟು ಇದೆ, ನಾನು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದೇನೆ ಮತ್ತು ಈ ದೇಶವನ್ನು ನಡೆಸಲು ನಾವು ಮಧ್ಯಂತರ ಸರ್ಕಾರವನ್ನು ರಚಿಸಲು ನಿರ್ಧರಿಸಿದ್ದೇವೆ. ನಾನು ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಮತ್ತು ನಿಮ್ಮ ಜೀವ ಮತ್ತು ಆಸ್ತಿಯನ್ನು ರಕ್ಷಿಸುವ ಭರವಸೆಯನ್ನು ನಾನು ತೆಗೆದುಕೊಳ್ಳುತ್ತೇವೆ ಎಂದು ವಾಕರ್-ಉಜ್-ಝಮಾನ್ ಹೇಳಿದ್ದಾರೆ.
ಯಾರು ಈ ಶೇಖ್ ಹಸೀನಾ ಗೊತ್ತಾ?
ಬಾಂಗ್ಲಾದೇಶವನ್ನು ಸುಧೀರ್ಘವಾಗಿ ಆಳಿರುವ ಶೇಖ್ ಹಸೀನಾ, ಒಮ್ಮೆ ಬಾಂಗ್ಲಾದೇಶವನ್ನು ಮಿಲಿಟರಿ ಆಡಳಿತದಿಂದ ಪಾರು ಮಾಡಿದ್ದ ಕೀರ್ತಿ ಇವರಿಗೆ ಸಲ್ಲುತ್ತದೆ. 76 ವರ್ಷದ ಅವರು ಈ ವರ್ಷದ ಜನವರಿಯಲ್ಲಿ ಐದನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದರು. ವಿರೋಧ ಪಕ್ಷಗಳ ವಿರುದ್ಧ ದೊಡ್ಡ ಆರೋಪ ಹೊರಿಸಿದ್ದ ಅವರು ಮತ್ತೆ ಅಧಿಕಾರಕ್ಕೆ ಬಂದರು.
ಆದರೆ ಬಾಂಗ್ಲಾದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರ ಹೆಚ್ಚಾಗಿತ್ತಲ್ಲದೆ ಸುಮಾರು 18 ಮಿಲಿಯನ್ ಯುವಕರು ನಿರುದ್ಯೋಗಿಗಳಾಗಿದ್ದರು. ಇದು ಯುವಕರನ್ನು ಮತ್ತಷ್ಟು ಕೆರಳುವಂತೆ ಮಾಡಿತ್ತು.
ಹಸೀನಾ 27 ವರ್ಷ ವಯಸ್ಸಿನವಳಾಗಿದ್ದಾಗ 1975ರ ದಂಗೆಯಲ್ಲಿ ತನ್ನ ತಾಯಿ ಮತ್ತು ಮೂವರು ಸಹೋದರರೊಂದಿಗೆ ದಂಗೆಕೋರ ಮಿಲಿಟರಿ ಅಧಿಕಾರಿಗಳು ತನ್ನ ತಂದೆ, ಪ್ರಧಾನ ಮಂತ್ರಿ ಶೇಖ್ ಮುಜಿಬುರ್ ರೆಹಮಾನ್ ಅವರನ್ನು ಹತ್ಯೆ ಮಾಡಿದಾಗ ವಿದೇಶಕ್ಕೆ ತೆರಳಬೇಕಾಯಿತು. 6 ವರ್ಷದ ಬಳಿಕ ವಿದೇಶದಿಂದ ಮರಳಿ ಪಕ್ಷದ ಆಡಳಿತವನ್ನು ಕೈಗೆತ್ತಿಕೊಂಡರು. ನಂತರ ಒಂದು ದಶಕದ ಸುದೀರ್ಘ ಹೋರಾಟವನ್ನು ಪ್ರಾರಂಭಿಸಿದಳು. ಈ ಹೋರಾಟದಲ್ಲಿ ಹಲವು ಬಾರಿ ಬಂಧನ, ಗೃಹಬಂಧನವನ್ನೂ ಆಕೆ ಎದುರಿಸಿದ್ದಳು.
1990 ರಲ್ಲಿ ಮಿಲಿಟರಿ ಸರ್ವಾಧಿಕಾರಿ ಹುಸೇನ್ ಮುಹಮ್ಮದ್ ಇರ್ಷಾದ್ ಅವರ ಆಡಳಿತ ಕೊನೆಗಾಣಿಸಲು ವಿರೋಧ ಪಕ್ಷದ ಜೊತೆಗೆ ಸೇರಿಕೊಂಡರು. ಇದು ಬಾಂಗ್ಲಾ ರಾಜಕೀಯದಲ್ಲಿ ಹೊಸ ಇತಿಹಾಸ ಬರೆಯಿತು. ಹಸೀನಾ ಮೊದಲ ಬಾರಿಗೆ 1996 ರಲ್ಲಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. 2007 ರಲ್ಲಿ ಮಿಲಿಟರಿ ಬೆಂಬಲಿತ ಸರ್ಕಾರದ ದಂಗೆಯ ನಂತರ ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಯಿತು. ಬಳಿಕ ಭ್ರಷ್ಟಾಚಾರ ಆರೋಪದಿಂದ ಮುಕ್ತರಾಗಿ ಬಂದು ತಕ್ಷಣವೇ ಚುನಾವಣೆಗೆ ಧುಮುಕಿ ಗೆದ್ದು ಮತ್ತೆ ಪ್ರಧಾನಿಯಾದರು. ಬರೋಬ್ಬರಿ 15 ವರ್ಷಗಳ ಕಾಲ ಅವರು ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.
ಆದರೆ ಇತ್ತಿಚಿನ ಬೆಳವಣಿಗೆಯಲ್ಲಿ ಪ್ರಧಾನಿ ವಿರುದ್ಧ ದಂಗೆ ಏರ್ಪಟ್ಟಿತ್ತು. ಇದು ಶೇಖ್ ಹಸೀನಾ ದೇಶವನ್ನೇ ಬಿಟ್ಟು ತೆರಳುವಂತೆ ಮಾಡಿದೆ. ಜೊತೆಗೆ ಬಾಂಗ್ಲಾದಲ್ಲಿ ಸೇನಾ ಆಡಳಿತ ಜಾರಿಯಾಗುತ್ತಿದೆ.



Click it and Unblock the Notifications
