Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎರಡು ರಾಜ್ಯದಲ್ಲಿ ಹರಡಿದ ದೇಶದ ಏಕೈಕ ಜಿಲ್ಲೆ ಯಾವುದು ಗೊತ್ತಾ?
ನೀವು ಭಾರತದ ಭೌಗೋಳಿಕ ಲಕ್ಷಣಗಳ ಕುರಿತು ತಿಳಿದೇ ಇದ್ದೀರಿ. ಹತ್ತಾರು ರಾಜ್ಯಗಳ ಒಗ್ಗೂಡಿಸಿ, ಒಕ್ಕೂಟವನ್ನಾಗಿ ಮಾಡಲಾಗಿದೆ. ಹಾಗೆ ಆಯಾ ರಾಜ್ಯಗಳು ತಮ್ಮದೇ ಜಿಲ್ಲೆಗಳು, ಗಡಿಗಳ ಹೊಂದಿವೆ. ಹಾಗೆ ಪ್ರತಿಯೊಂದು ರಾಜ್ಯವು ಹಲವು ಜಿಲ್ಲೆ, ತಾಲೂಕು, ಗ್ರಾಮ ಎಂಬ ವಿಂಗಡಣೆ ಮಾಡಿರುವುದು ನೋಡಬಹುದು, ಹಾಗೆ ರಾಜ್ಯಗಳ ನಡುವೆ ಗಡಿ ಸಮಸ್ಯೆಗಳು ಇರುವುದನ್ನು ಸಹ ನಾವು ನೋಡಬಹುದು.
ಪ್ರತಿಯೊಂದು ರಾಜ್ಯಗಳು ಗಡಿಗೆ ಸಂಬಂಧಿಸಿದಂತೆ ಒಂದಲ್ಲಾ ಒಂದು ಸಮಸ್ಯೆಯನ್ನು ಕೂಡ ಎದುರಿಸುತ್ತಿರುವುದು ನೋಡಬಹುದು. ಹಾಗೆ ಗಡ ಪ್ರದೇಶದ ಜಿಲ್ಲೆಗಳು ಎರಡು ರಾಜ್ಯಗಳ ಜನರಿಂದ ತುಂಬಿರುವುದು ನೋಡಬಹುದು. ಆದ್ರೆ ಭಾರತದ ಏಕೈಕ ಜಿಲ್ಲೆಯೊಂದು ಎರಡು ರಾಜ್ಯಗಳಲ್ಲೂ ಹರಡಿಕೊಂಡಿದೆ. ಒಂದೇ ಜಿಲ್ಲೆ ಎರಡು ರಾಜ್ಯಗಳಲ್ಲಿ ಸ್ಥಾನ ಪಡೆದಿದೆ.

ಭಾರತದಲ್ಲಿ 788 ಜಿಲ್ಲೆಗಳಿವೆ ಅವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಮುಖ ಆಡಳಿತಾತ್ಮಕ ಪಾತ್ರವನ್ನು ವಹಿಸುತ್ತವೆ. ಹೌದು ಆಡಳಿತಾತ್ಮಕ ಉದ್ದೇಶದಿಂದಾಗಿ ಒಂದು ಜಿ್ಲೆಯನ್ನು ಎರಡು ರಾಜ್ಯಗಳಿಗೆ ಹಂಚಲಾಗಿದೆ. ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದ ರಾಜ್ಯದಲ್ಲಿ ಒಂದು ಜಿಲ್ಲೆ ಎರಡೂ ರಾಜ್ಯದಲ್ಲೂ ಕೂಡ ಹರಡಿಕೊಂಡಿದೆ.
ಚಿತ್ರಕೂಟ ಎಂಬ ಜಿಲ್ಲೆಯು ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶದ ನಡುವೆ ಹರಡಿಕೊಂಡಿದೆ. ಚಿತ್ರಕೂಟ ಜಿಲ್ಲೆಯ ನಾಲ್ಕು ಪ್ರಮುಖ ತಾಲೂಕುಗಳಾದ ಕಾರ್ವಿ, ಮನಕ್‌ಪುರ, ಮೌ ಮತ್ತು ರಾಜಾಪುರ ಉತ್ತರ ಪ್ರದೇಶದಲ್ಲಿವೆ. ಮತ್ತೊಂದೆಡೆ ಚಿತ್ರಕೂಟ ನಗರವು ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿದೆ. ಇದು ಈ ಇಡೀ ದೇಶದಲ್ಲಿ ಒಂದೇ ಜಿಲ್ಲೆ ಈ ರೀತಿ ಎರಡು ರಾಜ್ಯಗಳಲ್ಲಿ ವಿಂಗಡಣೆಗೊಂಡಿದೆ.
ಆ ಜಿಲ್ಲೆಯಲ್ಲಿ ಎರಡೂ ಸ್ಥಳೀಯ ಆಡಳಿತಗಳ ನಿಯಮ ಬಹುತೇಕ ಒಂದೇ ರೀತಿಯಾಗಿದೆ. ಹೀಗಾಗಿ ಅಲ್ಲಿನ ಜನರಿಗೂ ಕೂಡ ಇದು ಸಮಸ್ಯೆಯಾಗಿ ಪರಿಣಮಿಸಿಲ್ಲ. ಚಿತ್ರಕೂಟ ಜಿಲ್ಲೆಯ ಹೆಸರನ್ನು ನೀವು ಕೂಡ ಕೇಳಿರಬಹುದು. ಚಿತ್ರಕೂಟ ನಗರವು ರಾಮಾಯಣದಲ್ಲಿ ಪ್ರಮುಖ ವಿಚಾರವೊಂದರಿಂದ ನೆನೆಪಿಗೆ ಬರುತ್ತದೆ.
ರಾಮಾಯಣವು ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಕೈಗೊಂಡಾಗ ಇದೇ ಚಿತ್ರಕೂಟದಲ್ಲಿಯೇ ನೆಲೆಸಿದ್ದರು ಎಂದು ಹೇಳಲಾಗಿದೆ. ಹೀಗಾಗಿ ರಾಮಾಯಣದ ಕಥೆಯ್ಲಿ ಚಿತ್ರಕೂಟಕ್ಕೆ ಬಹಳ ಪ್ರಾಮುಖ್ಯತೆ ಇದೆ. ಚಿತ್ರಕೂಟದ ಕಾಡುಗಳಲ್ಲಿ 11 ವರ್ಷಗಳು, 11 ತಿಂಗಳು ಮತ್ತು 11 ದಿನಗಳನ್ನು ಅವರು ಕಳೆದಿದ್ದರು ಎನ್ನಲಾಗಿದೆ.
ಹಾಗೆ ಇಲ್ಲಿ ರಾಮ, ಸೀತೆಯ ಜೀವನ ಸಾರುವ ಅವರ ನೆನಪುಗಳು ಮರುಕಳಿಸುವ ಹಲವು ಕಥೆಗಳು ಇಂದಿಗೂ ಜೀವಂತವಾಗಿವೆ, ಅದರಲ್ಲಿ ಒಂದು ಗುಹೆ. ಈ ಗುಹೆಯಲ್ಲಿ ರಾಮ ಸೀತೆ ನೆಲೆಸಿದ್ದರಂತೆ. ಒಂದು ದಿನ ಅಲ್ಲಿ ಸೀತೆ ಸ್ನಾನ ಮಾಡುವಾಗ ರಾಕ್ಷಸನೊಬ್ಬ ಬಂದು ಸೀತೆ ಮೇಲೆ ಕಣ್ಣಿಟ್ಟನಂತೆ. ಈ ವೇಳೆ ಗುಹೆ ಕಾಯುತ್ತಿದ್ದ ಲಕ್ಷ್ಮಣನು ರಾಕ್ಷಸನ ಹಿಡಿದು ಗುಹೆಯ ಬಾಗಿಲಿಗೆ ಶಾಶ್ವತವಾಗಿ ನೇತಾಡುವಂತೆ ಶಪಿಸಿದನು. ಹೀಗಾಗಿ ಅಲ್ಲಿನ ಛಾವಣಿಯಲ್ಲಿ ಈಗಲೂ ರಾಕ್ಷಸನೊಬ್ಬನ ಮೂರ್ತಿ ನೇತಾಡುತ್ತಿರುವುದು ನೋಡಬಹುದು. ಈಗ ಈ ಗುಹೆ ಪವಿತ್ರ ಎಂದು ನಂಬಲಾಗಿದ್ದು, ಇಲ್ಲಿನ ನೀರನ್ನು ಜನರು ತೆಗೆದುಕೊಂಡು ಹೋಗುತ್ತಾರೆ. ತೀರ್ಥವಾಗಿ ಬಳಸುತ್ತಾರೆ.
ಹಾಗೆ ಮೊದಲ ಬಾರಿಗೆ ರಾಮ ಸೀತೆ ಅರಣ್ಯದೊಳಗೆ ವನವಾಸಕ್ಕೆಂದು ಕಾಲಿಟ್ಟು ಜಾಗ ಕೂಡ ಇದೇ ಚಿತ್ರಕೂಟದಲ್ಲಿದೆ. ರಾಮ ಸೀತೆ ಅರಣ್ಯಕ್ಕೆ ಬಂದು ಕಾಲಿಟ್ಟ ಜಾಗ ಈಗ ಆಶ್ರಮವಾಗಿ ಬದಲಾಗಿದೆ. ಹೀಗಾಗಿ ಚಿತ್ರಕೂಟ ರಾಮಾಯಣದ ಕಥೆಯನ್ನು ಜೀವಂತವಾಗಿ ಇರಿಸಿಕೊಂಡಿರುವ ಜಿಲ್ಲೆ. ಹಾಗೆ ಎರಡು ರಾಜ್ಯಗಳಲ್ಲಿ ಹರಡಿರುವ ಏಕೈಕ ಜಿಲ್ಲೆ ಎಂಬುದಾಗಿಯೂ ಹೆಸರಾಗಿದೆ.



Click it and Unblock the Notifications









