Latest Updates
-
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ!
ಭಾರತದ ಕೊನೆಯ ರೈಲ್ವೆ ನಿಲ್ದಾಣ ಯಾವುದು ಗೊತ್ತಾ?: ಗಾಂಧಿ-ಬೋಸ್ ಪ್ರಯಾಣಿಸಿದ್ದ ಮಾರ್ಗವಿದು!
ಭಾರತವು ವಿಶ್ವದ ಅತ್ಯಂತ ದೊಡ್ಡ ರೈಲ್ವೆ ಜಾಲ ಹೊಂದಿದೆ. ಹಾಗೆ ಅತೀ ಹೆಚ್ಚು ರೈಲುಗಳು ಬಹುದೊಡ್ಡ ಉದ್ಯೋಗ ನೀಡುವ ವಲಯೂ ಇದಾಗಿದೆ. ಹಾಗೆ ಭಾರತೀಯ ರೈಲ್ವೆಯು ಹಲವು ರೀತಿಯಲ್ಲಿ ಇಂದು ವಿಶ್ವದ ಗಮನ ಸೆಳೆಯುತ್ತಿದೆ. ಹೈಸ್ಪೀಡ್ ರೈಲಿನಿಂದ ಹಿಡಿದು ರೈಲು ಸೇವೆ ಮೇಲ್ದರ್ಜೆ ವರೆಗೂ ಸುದ್ದಿಯಾಗುತ್ತದೆ. ಹಾಗೆ ರೈಲು ಸೇವೆಗಳನ್ನು ನಾವು ಹಲವು ವಿಭಾಗಗಳಾಗಿ ಮಾಡಿದ್ದು ಇದು ವಿಶ್ವದಲ್ಲೇ ದೊಡ್ಡ ವಿಭಾಗೀಯ ರೈಲ್ವೆ ಎಂಬ ಖ್ಯಾತಿ ಪಡೆದಿದೆ.
ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ವ್ಯವಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. 8,000 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳು ಸುಮಾರು 68,000 ಕಿಲೋ ಮೀಟರ್‌ಗಳನ್ನು ಒಳಗೊಂಡಿದ್ದು, ಭಾರತದ ಕಷ್ಟಕರ ಸ್ಥಳದಲ್ಲು ರೈಲ್ವೆ ನಿಲ್ದಾಣ ನೋಡುವಂತಾಗಿದೆ. ಹಾಗೆ ಇನ್ನು ಹೊಸ ಹೊಸ ನಿಲ್ದಾಣಗಳು ನಿರ್ಮಾಣ ಹಂತದಲ್ಲಿವೆ.

ಭಾರತದಲ್ಲಿ 8 ಸಾವಿರಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಿವೆ. ಇದರಲ್ಲಿ ಕೆಲವೊಂದು ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಾಗಿದ್ದರೆ ಮತ್ತೆ ಕೆಲವು ಕೆಲವೇ ಮಂದಿಯಾಗಿ ನಿರ್ಮಾಣಗೊಂಡ ನಿಲ್ದಾಣಗಳಾಗಿವೆ. ಹಾಗೆ ರೈಲುಗಳಲ್ಲೂ ಸಹ ಹಲವು ರೈಲುಗಳು ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಹಾಗೆ ಮತ್ತೆ ಕೆಲವು ರೈಲುಗಳು ಕಡಿಮೆ ಜನರ ಸಂಪರ್ಕ ಸೇತುವೆಯಾಗಿದೆ. ಹಾಗೆ ಕೆಲವೊಂದು ವಿಶೇಷ ಸ್ಥಳಗಳಲ್ಲಿ ಹಾದುಹೋಗುತ್ತವೆ.
ನಿಸರ್ಗದ ಸುಂದರ ರಮಣೀಯ ಸ್ಥಳಗಳಲ್ಲಿ ಸಾಗುವ ರೈಲುಗಳಿಗೇನು ಕಡಿಮೆಯಿಲ್ಲ. ಹಾಗೆ ಭಾರತದಲ್ಲಿ ಕಟ್ಟ ಕಡೆಯ ರೈಲ್ವೆ ನಿಲ್ದಾಣ ಯಾವುದು ಗೊತ್ತಾ? ಹೌದು ಭಾರತದ ಈ ರೈಲು ನಿಲ್ದಾಣ ಕೊನೆಯ ಹಾಗೂ ಗಡಿಯಲ್ಲಿ ಹರಡಿದೆ. ಭಾರತ-ಬಾಂಗ್ಲಾದೇಶದ ಗಡಿಯಲ್ಲಿರುವ ಸಿಂಗಾಬಾದ್ ಭೌಗೋಳಿಕವಾಗಿ ಭಾರತದ ಕೊನೆಯ ರೈಲ್ವೆ ನಿಲ್ದಾಣವಾಗಿದೆ. ಇದು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಹಬೀಬ್‌ಪುರ ಪ್ರದೇಶದಲ್ಲಿದೆ.
ಈ ರೈಲು ನಿಲ್ದಾಣದಿಂದ ಹೊರಟ ರೈಲು ಬಾಂಗ್ಲಾದೇಶ ಪ್ರವೇಶಿಸಲಿದೆ. ಹೀಗಾಗಿ ಭೌಗೋಳಿಕವಾಗಿ ಕೊನೆಯ ನಿಲ್ದಾಣ ಎಂದು ಕರೆಯಲಾಗಿದೆ. ಬ್ರಿಟಿಷರ ಕಾಲದಲ್ಲಿ ಆರಂಭಗೊಂಡಿದ್ದ ಈ ರೈಲು ನಿಲ್ದಾಣವು ಸರಕು ಸೇವೆಗಾಗಿ ಬಳಸಲಾಗುತ್ತಿತ್ತು. ಇದು ಕೋಲ್ಕತ್ತಾದಿಂದ ಆರಂಭಗೊಂಡು ಬಾಂಗ್ಲಾದೇಶದ ರಾಜಧಾನಿ ಢಾಕಾ ವರೆಗೆ ಚಲಿಸುತ್ತಿತ್ತು.
ಹಾಗೆ ಸೀಮಿತ ಜನರಿಗೆ ಮಾತ್ರವೇ ಈ ಮಾರ್ಗದಲ್ಲಿ ಪ್ರಯಾಣಕ್ಕೆ ಅವಕಾಶವಿತ್ತು. ಸ್ವಾತಂತ್ರ್ಯಕ್ಕೂ ಮೊದಲು ಮಹಾತ್ಮ ಗಾಂಧಿ ಹಾಗೂ ಸುಭಾಷ್ ಚಂದ್ರ ಬೋಸ್ ಕೂಡ ಈ ಮಾರ್ಗದಲ್ಲಿ ಪ್ರಯಾಣಿಸಿದ್ದರು. ಅದನಂತರದಲ್ಲಿ ಈ ಮಾರ್ಗ ಕೊನೆಗೆ ಕೇವಲ ಸರಕು ಸಾಗಾಣಿಕೆಗೆ ಮಾತ್ರ ಸೀಮಿತವಾಯಿತು. ಹಾಗೆ ಇತಿಹಾಸದಲ್ಲಿ ದೊಡ್ಡ ಗುರುತಾಗಿ ಉಳಿಯಿತು.
1971 ರಲ್ಲಿ ಬಾಂಗ್ಲಾದೇಶ ರಚನೆಯಾದಾಗಿನಿಂದ ಸಿಂಘಾಬಾದ್ ಎರಡು ದೇಶಗಳ ನಡುವಿನ ವ್ಯಾಪಾರದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. 1978 ರಲ್ಲಿ ಈ ಮಾರ್ಗದ ಮೂಲಕ ಸರಕುಗಳ ರವಾನೆಗಾಗಿ ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಹಾಗೆ ಈ ಒಪ್ಪಂದಕ್ಕೆ 2011ರಲ್ಲಿ ತಿದ್ದುಪಡಿ ಸಹ ಮಾಡಲಾಗಿತ್ತು. ಹೀಗಾಗಿ ಈಗ ಸಿಂಘಾಬಾದ್ ರೈಲ್ವೆ ನಿಲ್ದಾಣದಲ್ಲಿ ಜನರ ಸಂಖ್ಯೆ ತೀರ ವಿರಳ ಎನ್ನಬಹುದು. ಅಲ್ಲಿ ಯಾರೊಬ್ಬರು ಪ್ರಯಾಣ ಮಾಡುವುದಿಲ್ಲ. ಹಾಗೆ ಅಲ್ಲಿ ಪ್ಯಾಸೆಂಜರ್ ರೈಲು ಬರುವುದಿಲ್ಲ. ಕೇವಲ ಸರಕು ರೈಲುಗಳು ಮಾತ್ರ ಚಲಿಸುತ್ತವೆ, ಇದರಿಂದ ಟಿಕೆಟ್ ಕೌಂಟರ್ ಕೂಡ ಖಾಲಿಯಾಗಿದೆ. ನಿಲ್ದಾಣದಲ್ಲಿ ಕೆಲವೇ ಕೆಲವು ಸಿಬ್ಬಂದಿ ಮಾತ್ರ ಇರಲಿದ್ದಾರೆ.
ಈಗ ಈ ಮಾರ್ಗದಲ್ಲಿ ಗಾಂಧಿ ಹಾಗೂ ಸುಭಾಷ್ ಚಂದ್ರ ಬೋಸ್ ಸಹ ಪ್ರಯಾಣಿಸಿದ್ದರು ಎಂಬುದು ಇತಿಹಾಸದಲ್ಲಿ ಅಚ್ಚಳಿಯದೆ ದಾಖಲಾಗಿದೆ. ಇಂತಹ ಹತ್ತಾರು ಅಚ್ಚರಿಗಳು, ವಿಶೇಷಗಳು ನಮ್ಮ ಭಾರತೀಯ ರೈಲ್ವೆಯಲ್ಲಿ ಅಡಗಿವೆ.



Click it and Unblock the Notifications