Latest Updates
-
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್!
ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತ ಆನೆ ಯಾವುದು ಗೊತ್ತಾ? ಇದು ರಾಜರ ಮೆಚ್ಚಿನ ಆನೆ
ದಸರಾ ಅಂದಕ್ಷಣ ಮೈಸೂರು ನೆನಪಾಗುತ್ತೆ. ಮೈಸೂರು ಅರಮನೆಯ ಅಲಂಕಾರ ಹಾಗೆ ವಿಜಯದಶಮಿಯಂದು ನಡೆಯುವ ಜಂಬೂಸವಾರಿಯಂತು ಎಲ್ಲರ ಗಮನ ಸೆಳೆಯಲಿದೆ. ಜಂಬೂಸವಾರಿಯಲ್ಲಿ ಚಾಮುಂಡಿ ತಾಯಿಯ ಮೂರ್ತಿಯು ಚಿನ್ನದ ಅಂಬಾರಿಯಲ್ಲಿ ಮೆರವಣಿಗೆ ಹೊರಡಲಿದೆ. ಈ ಜಂಬೂಸವಾರಿಗೆ ಅಂಬಾರಿ ಎಷ್ಟು ಆಕರ್ಷಣೆಯೋ ಅದರಂತೆ ಆನೆಗಳು ಕೂಡ ಅಷ್ಟೇ ಮುಖ್ಯ ಅಂಶ.
ದಸರಾ ಆನೆಗಳ ನೋಡಲೆಂದೇ ಲಕ್ಷಾಂತರ ಮಂದಿ ಮೈಸೂರಿನಲ್ಲಿ ಸೇರುವುದು ನೋಡಬಹುದು. ಇನ್ನು ಈ ಬಾರಿ ಅಭಿಮನ್ಯೂ ಅಂಬಾರಿ ಹೊರುವ ಜವಾಬ್ದಾರಿ ಹೊತ್ತುಕೊಂಡಿದ್ದಾನೆ. ಈಗಾಗಲೆ ಸಿದ್ದತೆಗಳು ನಡೆದಿದ್ದು, ಅದರೊಂದಿಗೆ ಪಟ್ಟದ ಆನೆಗಳು ಕೂಡ ಹೆಜ್ಜೆ ಹಾಕಲಿವೆ. ಅಂಬಾರಿ ಹೊರುವ ಆನೆಗೆ ಬಹಳ ಪ್ರಾಮುಖ್ಯತೆ ಇದೆ.

ಅಂಬಾರಿ ಹೊರುವ ಆನೆ ಯಾವ ರೀತಿಯಲ್ಲಿ ತಯಾರಿಯಲ್ಲಿ ತೊಡಗಬೇಕು, ಅದಕ್ಕೆ ನಿರ್ದಿಷ್ಟ ಮಾನದಂಡಗಳು ಕೂಡ ಇವೆ. ಇನ್ನು ಅರ್ಜುನನ ಮರಣದ ನಂತರ ಅಭಿಮನ್ಯೂ ಅಂಬಾರಿ ಹೊರುತ್ತಿದ್ದಾನೆ. ಆದ್ರೆ ಮೊಟ್ಟ ಮೊದಲ ಬಾರಿಗೆ ಅಂಬಾರಿಯನ್ನು ಹೊತ್ತಿರುವ ಆನೆ ಯಾವುದು? ಅದರ ಹಿಂದಿರುವ ಕಥೆ ನಿಮಗೆ ಗೊತ್ತಾ?
ಈಗ ಆನೆಯ ಮೇಲೆ ಅಂಬಾರಿ ಹಾಗೆ ಚಾಮುಂಡೇಶ್ವರಿ ತಾಯಿಯ ವಿಗ್ರಹ ಇರಲಿದೆ. ಆದ್ರೆ ಹಿಂದೆ ಮೈಸೂರು ಮಹಾರಾಜರು ಅಂಬಾರಿಯಲ್ಲಿ ಕುಳಿತು ಮೆರವಣಿಗೆ ಸಾಗುತ್ತಿದ್ದರು. ಹಾಗಾದ್ರೆ ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ಅಂಬಾರಿ ಹೊತ್ತ ಆನೆ ಯಾವುದು?
ಅಂಬಾರಿ ಹೊತ್ತು ರೆಕಾರ್ಡ್ ಬರೆದ ಜಯಮಾರ್ತಾಂಡ
ಜಯಮಾರ್ತಾಂಡ ಎಂಬ ಆನೆ ಮೊಟ್ಟ ಮೊದಲ ಬಾರಿಗೆ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತ ಆನೆ ಆಗಿದೆ. ಮೈಸೂರು ರಾಜರ ಅಚ್ಚು ಮೆಚ್ಚಿನ ಆನೆಯೂ ಇದಾಗಿತ್ತಂತೆ. ಪಿರಿಯಪಟ್ಟಣದ ಬೆಟ್ಟದ ಪುರ ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ಆನೆಗಳ ಗುಂಪಿನಿಂದ ಬೇರ್ಪಟ್ಟಿದ್ದ ಆನೆಯ ಮರಿ ಈ ಜಯಮಾರ್ತಾಂಡ ಆನೆ. ಆಗಿನ ಕಾಲದಲ್ಲಿ ರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಈ ಆನೆಯ ಮರಿಯನ್ನು ಸಾಕಲು ಉದ್ದೇಶಿಸಿ ಮೈಸೂರಿನಲ್ಲಿಯೇ ಅದನ್ನು ಪಾಲನೆ ಪೋಷಣೆ ಮಾಡಿದ್ದರು.
ಇದಾದ ಬಳಿಕ 1860ರ ವೇಳೆಗೆ ಮೊದಲ ಬಾರಿಗೆ ಈ ಆನೆ ದಸರಾದಲ್ಲಿ ಭಾಗಿಯಾಗಿತ್ತು. ಅಂದಿನಿಂದ ಬರೋಬ್ಬರಿ 45 ವರ್ಷಗಳ ಕಾಲ ಜಯಮಾರ್ತಾಂಡ ಅಂಬಾರಿ ಹೊತ್ತು ದಸರಾದಲ್ಲಿ ಭಾಗಿಯಾಗಿದ್ದಾನೆ. ಹೀಗಾಗಿ ರಾಜರಿಗೆ ಅತ್ಯಂತ ಮುದ್ದಿನ ಆನೆ ಆಗಿತ್ತು. ಈಗಲೂ ಈ ದಾಖಲೆ ಜಯಮಾರ್ತಾಂಡ ಆನೆಯ ಹೆಸರಿನಲ್ಲಿದೆ.
ರಾಜರಿಗೆ ಈ ಆನೆ ಅಚ್ಚು ಮೆಚ್ಚು ಹಾಗೆ ದೀರ್ಘಕಾಲ ಅಂಬಾರಿ ಹೊತ್ತು ಸಾಗಿದ್ದರಿಂದ ಮೈಸೂರು ಅರಮನೆಯ ವಸ್ತು ಸಂಗ್ರಹಾಲಯ ಎದುರಿನ ಅರಮನೆಯ ಮಹಾದ್ವಾರವೊಂದಕ್ಕೆ ಜಯಮಾರ್ತಾಂಡ ದ್ವಾರ ಎಂದು ಹೆಸರಿಡಲಾಗಿದೆ.
ಮಹಾರಾಜರ ಹೊತ್ತು ಸಾಗಿದ ಕೊನೆಯ ಆನೆ ಬಿಳಿಗಿರಿ
ಹೀಗೆ ಮೈಸೂರು ದಸರಾದಲ್ಲಿ ಹಲವು ಆನೆಗಳು ಅಂಬಾರಿ ಹೊತ್ತು ಸಾಗಿವೆ. ಆದ್ರೆ ಕೊನೆಯದಾಗಿ ರಾಜರನ್ನು ಅಂಬಾರಿಯಲ್ಲಿ ಕುಳ್ಳಿರಿಸಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಬಿಳಿಗಿರಿ ಆನೆ. ಇದಾದ ಬಳಿಕ ರಾಜರ ಬದಲಾಗಿ ಚಾಮುಂಡೇಶ್ವರಿ ದೇವಿಯ ವಿಗ್ರಹ ಇಟ್ಟು ಸಾಗುವುದು ನಡೆದು ಬಂದಿದೆ.
ರಾಜ್‌ಕುಮಾರ್ ಜೊತೆ ನಟಿಸಿದ ಆನೆ ರಾಜೇಂದ್ರ
ಬಿಳಿಗಿರಿಯ ಬಳಿಕ ಅಂಬಾರಿ ಹೊರುತ್ತಿದ್ದ ರಾಜೇಂದ್ರ ಆನೆ ಡಾ.ರಾಜ್‌ಕುಮಾರ್ ಅವರು ನಟಿಸಿದ್ದ ಗಂಧದಗುಡಿ ಸಿನಿಮಾದಲ್ಲಿ ಕಾಣಿಸಿಕೊಂಡಿತು. ಇಡೀ ಚಿತ್ರದಲ್ಲಿ ಈ ಆನೆ ಕಾಣಿಸಿಕೊಂಡಿತ್ತು. ರಾಜೇಂದ್ರನ ಬಳಿಕ 18 ಬಾರಿ ಅಂಬಾರಿ ಹೊತ್ತ ಕೀರ್ತಿ ದ್ರೋಣನಿಗೆ ಸಲ್ಲುತ್ತದೆ. ಆದರೆ ಅತೀ ಹೆಚ್ಚು ಬಾರಿ ಅಂಬಾರಿ ಹೊತ್ತು ಸಾಗಿದ್ದು ಜಯಮಾರ್ತಾಂಡ ಎಂಬ ಆನೆಯಾಗಿದೆ.



Click it and Unblock the Notifications
