Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ಪುರಾಣದಲ್ಲಿ ಹೇಳಲಾದ ಈ ಅಣ್ಣ-ತಂಗಿಯರ ಕಥೆ ಗೊತ್ತಾ? ರಾಖಿ ಕಟ್ಟೋದು ಯಾಕೆ ನೋಡಿ.!
ನಾಳೆ ಪವಿತ್ರ ಆಚರಣೆಯಾದ ರಕ್ಷಾ ಬಂಧನ ದೇಶದಾದ್ಯಂತ ಆಚರಿಸಲ್ಪಡುತ್ತಿದೆ. ಈ ಸಂಭ್ರಮದಲ್ಲಿ ಸಹೋದರ, ಸಹೋದರಿಯರು ರಾಖಿ ಕಟ್ಟುವ ಮೂಲಕ ಈ ಹಬ್ಬ ಆಚರಿಸುತ್ತಾರೆ. ಹಬ್ಬವು ಅಣ್ಣ ತಂಗಿಯರ ಭಾಂಧವ್ಯದ ಸಂಕೇತವಾಗಿದೆ. ರಕ್ಷಾಬಂಧನ ಎಂಬ ಪದದ ಮೂಲ ಸಂಸ್ಕೃತದವಾಗಿದ್ದು ಇದರ ಅರ್ಥ ಹೆಸರೇ ಸೂಚಿಸುವಂತೆ ರಕ್ಷಣೆಯ ಗಂಟು ಎಂಬುದಾಗಿದೆ.
ಆದರೆ ಈ ರಕ್ಷಾ ಬಂಧನ ಸಂಬಂಧ ಪುರಾತನ ಗ್ರಂಥಳಲ್ಲಿ ಒಂದಿಷ್ಟು ಕಥೆಗಳಿವೆ. ಹಿಂದೂ ಮಹಾಕಾವ್ಯಗಳಲ್ಲಿ ಹಲವು ಕಥೆಗಳಿವೆ. ಮಹಾಭಾರತದಲ್ಲಿ ಸುಂದರ ಅಣ್ಣ-ತಂಗಿಯ ಕಥೆಗಳಿವೆ. ಹಾಗಾದ್ರೆ ನಾವಿಂದು ಪುರಾಣಗಳಲ್ಲಿ ಬರುವ ಸಹೋದರ ಸಹೋದರಿಯ ಕತೆ ಬಗ್ಗೆ ನೋಡೋಣ.

ಕೃಷ್ಣ- ದ್ರೌಪದಿ
ಕೃಷ್ಣ ಹಾಗೂ ದ್ರೌಪದಿ ನಡುವೆ ಸಹೋದರ ಸಹೋದರಿಯ ಭಾಂದವ್ಯವಿತ್ತು. ಒಂದು ಬಾರಿ ಶ್ರೀಕೃಷ್ಣ ಬಯಲಿನಲ್ಲಿ ಗಾಳಿಪಟ ಹಾರಿಸುತ್ತಿದ್ದನಂತೆ. ಈ ವೇಳೆ ಆತನ ಒಂದು ಬೆರಳಿಗೆ ಗಾಯವಾಗಿತ್ತು. ವಿಪರೀತ ರಕ್ತ ಬರುತ್ತಿತ್ತು. ಇದನ್ನು ನೋಡಿದ ದ್ರೌಪದಿ ಓಡೋಡಿ ಬಂದು ತನ್ನ ಸೀರೆಯನ್ನೇ ಹರಿದು ಗಾಯದಿಂದ ರಕ್ತ ಬರದಂತೆ ಕಟ್ಟಿದಳು. ಇದಾದ ಬಳಿಕ ಶ್ರೀಕೃಷ್ಣ ಆಕೆಯನ್ನು ಎಂತಹ ಸಮಯದಲ್ಲಿ ಬೇಕಾದರೂ ಕೂಗಿಕೊಂಡರು ನಾನು ನಿನ್ನ ರಕ್ಷಣೆಗೆ ಸಿದ್ಧನಿರುತ್ತೇನೆ ಎಂದು ಭರವಸೆ ನೀಡಿದ ಎಂದು ಕಥೆ ಹೇಳುತ್ತದೆ.
ಇದಾದ ಬಳಿಕ ದುಶ್ಶಾಸನನು ದ್ರೌಪದಿಯ ಸೀರೆಯನ್ನು ಎಳೆಯುವಾಗ ರಕ್ಷಣೆಗೆ ಬಂದ ಶ್ರೀಕೃಷ್ಣ ಯಾರಿಂದಲೂ ಮಡಚಲು ಆಗದಂತಹ ಸೀರೆಯನ್ನು ಆಕೆಗೆ ಉಡಿಸಿದ್ದ ಕಥೆ ನಾವೆಲ್ಲಾ ಓದಿದ್ದೇವೆ.
ಗಣೇಶನ ಕಥೆ ಗೊತ್ತಾ?
ಗಣೇಶ ಕೈಲಾಸ ವಾಸದಲ್ಲಿ ರಕ್ಷಾ ಬಂಧನ ಆಚರಿಸಲು ಮುಂದಾಗಿದ್ದನಂತೆ ಆತ ನಾಗದೇವತೆಯಾಗಿದ್ದ ಮಾನಸಳೊಂದಿಗೆ ರಾಖಿ ಹಬ್ಬ ಆಚರಿಸಲು ಮುಂದಾಗಿದ್ದ. ಈ ವೇಳೆ ಚಿಕ್ಕ ಮಕ್ಕಳಾಗಿದ್ದ ಶುಭ್ ಹಾಗೂ ಲಾಭ್ ಈ ಹಬ್ಬವನ್ನು ತಾವೂ ಆಚರಿಸಬೇಕು ಎಂದು ಹಠ ಹಿಡಿದರಂತೆ. ಮಕ್ಕಳ ಆಸೆ ಪೂರೈಸುವ ಭರವಸೆ ನೀಡಿದ ಗಣೇಶನು ಅಗ್ನಿ ದೇವನ ಕುರಿತು ಜಪ ಮಾಡಿದನು. ಈ ವೇಳೆ ಸಂತೋಷಿ ಮಾ ಜನಿಸಿದಳು. ಸಂತೋಷಿ ಮಾ ಗಣೇಶನ ಮಗಳಾಗಿ ಜನಿಸಿದಳು. ಈ ವೇಳೆ ಆಕೆ ಸಹೋದರರಿಗೆ ರಾಖಿ ಕಟ್ಟಿದಳು ಎಂಬ ಪುರಾಣ ಕಥೆಯೊಂದಿದೆ.
ರಕ್ಷಾ ಬಂಧನ ಆಚರಿಸಿದ್ದ ಯಮ ಹಾಗೂ ಯಮುನಾ
ಯಮ ಮತ್ತು ಯಮುನಾ ಸಹೋದರ ಸಹೋದರಿಯರಾಗಿದ್ದು, 12 ವರ್ಷಗಳಿಂದ ಪರಸ್ಪರ ಭೇಟಿಯಾಗಿರಲಿಲ್ಲ. ಇದು ಯಮುನಾಳ ಬೇಸರಕ್ಕೆ ಕಾರಣವಾಗಿತ್ತು. ಈ ವಿಚಾರ ಗಂಗಾ ದೇವಿಗೆ ತಿಳಿದು ಯಮನನ್ನು ಕಂಡು ಸಹೋದರಿ ಯಮುನಾಳ ಭೇಟಿಯಾಗುವಂತೆ ಸೂಚನೆ ನೀಡುತ್ತಾಳೆ. ಈ ವೇಳೆ ಸಹೋದರ ಯಮನ ಬರುವಿಕೆ ಸುದ್ದಿ ಕೇಳಿದ ಯಮುನಾ ಭಕ್ಷ್ಯ ಭೋಜನ ಸಿದ್ಧಪಡಿಸಿದಳು. ಮನೆಯ ಒಳಗೆ ಬಂದ ಕೂಡಲೆ ಕೈಗೆ ರಾಖಿ ಕಟ್ಟಿದ್ದಳು. ಈ ವೇಳೆ ಯಮ ಆಕೆಗೆ ಸ್ವರ್ಗಸ್ಥರಾಗುವಂತೆ ವರವನ್ನು ಉಡುಗೊರೆಯಾಗಿ ದಯಪಾಲಿಸಿದ್ದ ಎಂದು ನಂಬಲಾಗಿದೆ.
ಲಕ್ಷ್ಮಿ ದೇವಿಯು ಬಲಿ ದೇವರಿಗೆ ರಾಖಿ ಕಟ್ಟಿದ್ದಳು
ವಿಷ್ಣು ಪುರಾಣದ ಪ್ರಕಾರ, ಬಲಿ ಭಗವಾನ್ ವಿಷ್ಣುವನ್ನು ರಕ್ಷಣೆ ನೀಡುವಂತೆ ಕೇಳಿಕೊಂಡಿದನು. ಆತ ಒಪ್ಪಿಕೊಂಡು ದ್ವಾರಪಾಲಕರಾದನು. ವಿಷ್ಣುವು ತನ್ನ ನಿವಾಸದಲ್ಲಿ ಇಲ್ಲದಿರುವಾಗ, ಲಕ್ಷ್ಮಿ ದೇವಿಯು ಬಲಿ ಬಳಿ ವಿಚಾರಿಸಲು ಹೋದಳು. ಬಲಿ ಬಾಗಿಲು ತೆರೆದಾಗ ಲಕ್ಷ್ಮಿ ಆತನ ಕೈಗೆ ರಾಖಿ ಕಟ್ಟಿದಳು. ಬಳಿಕ ಆತ ಯಾವ ಉಡುಗೊರೆ ಬೇಕಾದರು ಕೇಳು ಎಂದಾಗ ಲಕ್ಷ್ಮಿ ತನಗೆ ವಿಷ್ಣುವನ್ನು ವಾಪಾಸು ನೀಡುವಂತೆ ಕೇಳಿಕೊಂಡಳು. ಸಹೋದರಿಯ ಈ ಮನವಿಗೆ ಸ್ಪಂಧಿಸಿದ ಬಲಿದೇವ, ವಿಷ್ಣುವನ್ನು ದ್ವಾರಪಾಲಕ ಕರ್ತವ್ಯದಿಂದ ಮುಕ್ತಿಗೊಳಿಸಿದನು.



Click it and Unblock the Notifications
