Latest Updates
-
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ!
ಮಂತ್ರಾಲಯದ ರಾಯರ ಮಹಿಮೆ ಎಂತದ್ದು ಗೊತ್ತಾ? ವೆಂಕಟನಾಥ ರಾಯರಾದ ಕಥೆ ಇದು..!
ಅಪಾರ ಮಹಿಮರೂ ದಯಾಳುಗಳೂ ಯತಿಶ್ರೇಷ್ಠರೂ ಆಗಿರುವ ಶ್ರೀ ರಾಘವೇಂದ್ರಸ್ವಾಮಿಗಳು ಮಂತ್ರಾಲಯದಲ್ಲಿ ನೆಲೆಸಿದ್ದಾರೆ. ಭಕ್ತರ ಆರಾಧ್ಯ ದೇವ ಎಂದೇ ಗುರುಗಳು ಪ್ರಸಿದ್ಧಿ ಪಡೆದಿದ್ದಾರೆ. ನಿತ್ಯವೂ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆಯುತ್ತಾರೆ. ಭಕ್ತರನ್ನು ನೆನೆದರೆ ಕ್ಷಣ ಮಾತ್ರದಲ್ಲಿ ಕಷ್ಟಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಅವರ ಭಕ್ತರಲ್ಲಿದೆ. ಅಲ್ಲದೆ ನಂಬಿ ಬಂದ ಭಕ್ತರನ್ನು ರಾಯರು ಎಂದಿಗೂ ಕೈಬಿಡುವುದಿಲ್ಲ ಎಂಬುದು ಭಕ್ತರ ವಾದವಾಗಿದೆ.
ಸಹಸ್ರಾರು ಭಕ್ತರ ಹೊಂದಿರುವ ರಾಯರು ಈಗಲೂ ಮಂತ್ರಾಲಯದಲ್ಲಿ ಅಂದರೆ ಬೃಂದಾವನದಲ್ಲಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಭಕ್ತರ ಕಷ್ಟಕ್ಕೆ ಎಂದಿಗೂ ನಾನು ಸಿದ್ಧರಿರುವುದಾಗಿ ಅವರೇ ಹೇಳಿ ಮಂಚಾಲಮ್ಮನ ಸನ್ನಿಧಿಯಲ್ಲಿ ಸಶರೀರ ವಾಗಿ ಬೃಂದಾವನ ಪ್ರವೇಶಿಸಿದರು ಎಂದು ನಂಬಲಾಗಿದೆ. ಹಾಗಾದರೆ ಈ ಮಂತ್ರಾಲಯ ಹುಟ್ಟಿಕೊಂಡಿದ್ದೇಗೆ? ರಾಘವೇಂದ್ರ ಸ್ವಾಮಿ ಭಕ್ತರ ಇಷ್ಟಾರ್ಥಗಳ ನೆರವೇರಿಸುವ ರಾಯರಾಗಿ ಬದಲಾಗಿದ್ದೇಗೆ?
ಹೌದು ಲೋಕಕಲ್ಯಾಣಕ್ಕಾಗಿ ರಾಯರು ಗುರುಗಳಾಗಿ ಜನ್ಮ ತಳೆದ ಅವರು ಮುಂದಿನ 700 ವರ್ಷಗಳ ವರೆಗೆ ಭಕ್ತರ ಕಷ್ಟ ಆಲಿಸುವುದಾಗಿ ಭಾಷೆ ಕೊಟ್ಟರಂತೆ. ಹಾಗಾದರೆ ಅವರು ಎಲ್ಲಿಂದ ಬಂದರು..? ಹೇಗೆ ಗುರುಗಳಾದರು ಎಂಬುದನ್ನು ನೋಡಿ.

ತಮಿಳುನಾಡಿನಲ್ಲಿ ರಾಯರ ಜನನ
ಕ್ರಿ.ಶ. 1595ರಂದು ತಮಿಳುನಾಡಿನ ಭುವನಗಿರಿಯಲ್ಲಿ ರಾಯರು ಜನಿಸಿದರು. ಬೀಗಮುದ್ರೆ ಮನೆತನದ ಗೋಪಮ್ಮ ಹಾಗೂ ತಿಮ್ಮಣ್ಣ ಭಟ್ಟ ದಂಪತಿಯ ಮಗನಾಗಿ ಜನ್ಮ ತಳೆದರು ಎಂದು ಹೇಳಲಾಗಿದೆ. ದಂಪತಿ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತ ಬಳಿಕ ರಾಯರ ಜನನವಾಗಿತ್ತಂತೆ. ಹರಕೆಯ ಫಲವಾಗಿ ಜನಿಸಿದ ರಾಯರಿಗೆ ವೆಂಕಟನಾಥ ಎಂದು ಹೆಸರಿಡಲಾಗಿತ್ತು. ಆದರೆ ಪುರಾಣದ ಪ್ರಕಾರ ಇವರು ದೇವಲೋಕದ ಶಂಕುಕರ್ಣ ಎಂಬ ದೇವರ ಅವತಾರವಂತೆ. ಆತ ಬ್ರಹ್ಮನ ಶಾಪಕ್ಕೆ ಗುರಿಯಾಗಿ ಭೂಲೋಕದಲ್ಲಿ ರಾಘವೇಂದ್ರರಾಗಿ ಜನಿಸಿದರು ಎಂಬ ನಂಬಿಕೆಯಿದೆ.
ರಾಯರು ಆರಂಭದಲ್ಲಿ ಸುಧೀಂದ್ರತೀರ್ಥರ ಜೊತೆ ವಿದ್ಯಾಭ್ಯಾಸಕ್ಕೆ ತೆರಳಿದ್ದರು. ಅಲ್ಲಿ ಅಲ್ಲಾ ವಿದ್ಯೆಗಳ ಕಲಿಯುವಾಗ ಮಧ್ವ ಮಠದ ಪೀಠಾಧಿಕಾರಿಯಾಗುವಂತೆ ಗುರುಗಳಿಗೆ ಸುಧೀಂದ್ರತೀರ್ಥರು ಅವಕಾಶ ನೀಡಿದರು. ಆದರೆ ಈಗಾಗಲೇ ಸರಸ್ವತಿ ಎಂಬಾಕೆಯ ಜೊತೆ ವಿವಾಹವಾಗಿದ್ದ ರಾಯರು ಇದನ್ನು ತಿರಸ್ಕರಿಸಿದರು. ನಾನು ಬ್ರಹ್ಮಚಾರಿಯಲ್ಲ ಹೀಗಾಗಿ ಪೀಠ ಏರುವುದಿಲ್ಲ ಎಂದು ಕಡಾ ಖಂಡಿತವಾಗಿ ನುಡಿದಿದ್ದರಂತೆ.
ಆದರೆ ಪೀಠ ಏರದ ರಾಯರ ಕನಸಲ್ಲಿ ದುರ್ಗಮಾತೆ ಆಗಮಿಸಿ ಆ ಪೀಠಕ್ಕೆ ನೀವೇ ಸರಿಯಾದ ವ್ಯಕ್ತಿ ಎಂದು ಪೀಠ ಅಲಂಕರಿಸುವಂತೆಯೂ ಸನ್ಯಾಸತ್ವ ಸ್ವೀಕರಿಸಿ ಲೋಕಕಲ್ಯಾಣಕ್ಕೆ ಹೊರಡಲು ಸೂಚಿಸಿದಳಂತೆ. ಹೀಗಾಗಿ ರಾಯರು ಸನ್ಯಾಸತ್ವ ಸ್ವೀಕರಿಸಿದರು.
ಮಾಂಸವನ್ನು ಹಣ್ಣಾಗಿಸಿದ್ದ ರಾಯರು
ಹೀಗೆ ಸನ್ಯಾಸತ್ವ ಸ್ವೀಕರಿಸಿ ಲೋಕಕಲ್ಯಾಣಕ್ಕೆ ಹೊರಟ ರಾಯರು ಹೋದ ಕಡೆಯಲೆಲ್ಲ ಜನರ ಕಷ್ಟ ನಿವಾರಿಸಿದರು. ಎಲ್ಲಿ ಜನರು ಕಷ್ಟಗಳ ಎದುರಿಸುತ್ತಿದ್ದರೋ ಅಲ್ಲೇಲ್ಲಾ ಅವರ ಪವಾಡ ನಡೆದಿತ್ತು. ಹೀಗಾಗಿ ರಾಯರು ಹೋದಲ್ಲಿ ಭಕ್ತರು ತುಂಬಿರುತ್ತಿದ್ದರು. ಹೀಗೊಮ್ಮೆ ಅವರು ಹೈದರಾಬಾದಿನ ನಿಜಾಮರ ರಾಜ್ಯಕ್ಕೆ ಬಂದರಂತೆ. ನಿಜಾಮನು ಗುರುಗಳನ್ನು ಪರೀಕ್ಷಿಸುವ ಸಲುವಾಗಿ ಆಸ್ಥಾನಕ್ಕೆ ಕರೆಸುತ್ತಾನೆ. ರಾಯರನ್ನು ಸತ್ಕರಿಸುವ ನೆಪದಲ್ಲಿ ದೊಡ್ಡ ತಟ್ಟೆಯ ತುಂಬಾ ಮಾಂಸವನ್ನು ತಂದಿರಿಸುತ್ತಾನೆ. ಆದರೆ ರಾಯರು ಆ ಮಾಂಸವನ್ನು ಹಣ್ಣುಗಳಾಗಿ ಪರಿವರ್ತಿಸುತ್ತಾರಂತೆ. ಈ ಮಹಿಮೆಯನ್ನು ಕಂಡ ನಿಜಾಮನು ಕ್ಷಮೆ ಯಾಚಿಸುತ್ತಾನೆ ಎಂದು ಹೇಳಲಾಗಿದೆ.
ಲೋಕಕಲ್ಯಾಣ ಹೊರಟ ರಾಯರು ಸೇರಿದ್ದು ಬೃಂದಾವನ
ಹೀಗೆ ಲೋಕವೆಲ್ಲಾ ಸುತ್ತಾಡಿದ ಅವರು ಕೊನೆಗೆ ಈಗಿರುವ ಆಂಧ್ರದ ತುಂಗಾನದಿ ತೀರದ ಬೃಂದಾವನಕ್ಕೆ ಬಂದರಂತೆ. ತಾವು ಸಂಪಾದಿಸಿದ ಅಪಾರ ಪುಣ್ಯವನ್ನು ಹಂಚಿ ಜನರ ಬವಣೆಯನ್ನು ನೀಗಿಸಲೆಂದು ರಾಯರು ತಮ್ಮ 76ನೇ ವರ್ಷದಲ್ಲಿ ಕ್ರಿ.ಶ. 1671ರಂದು ಮಂತ್ರಾಲಯದ ಮಂಚಾಲಮ್ಮನ ಸನ್ನಿಧಿಯಲ್ಲಿ ಸಶರೀರ ವಾಗಿ ಬೃಂದಾವನ ಪ್ರವೇಶಿಸಿದರು ಎಂದು ನಂಬಲಾಗಿದೆ.



Click it and Unblock the Notifications