Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಪಂದಳ ರಾಜನ ಜನ್ಮ ರಹಸ್ಯವೇನು ಗೊತ್ತಾ? ಇಲ್ಲಿದೆ ಪೂರ್ಣ ಕಥೆ..!
ಶಬರಿಮಲೆ...ಹಿಂದೂಗಳಿಗೆ ಅತ್ಯಂತ ಪವಿತ್ರ ಸ್ಥಳ. ಜನವರಿ ತಿಂಗಳಲ್ಲಿ ಲಕ್ಷ ಲಕ್ಷ ಭಕ್ತರು ಅಯ್ಯಪ್ಪನ ದರ್ಶನ ಪಡೆಯಲು ಬರುತ್ತಾರೆ. ಆದರೆ ಇಲ್ಲಿಗೆ ಬರುವ ಮುನ್ನ ಅವರು ಅತ್ಯಂತ ಕಠಿಣ ವ್ರತ ಪಾಲಿಸಿರುತ್ತಾರೆ. ಅಯ್ಯಪ್ಪನ ಸನ್ನಿದಾನದಲ್ಲಿರುವ 18 ಮೆಟ್ಟಿಲುಗಳ ಏರಬೇಕೆಂಬುದು ಭಕ್ತಾಧಿಗಳ ಮಹದಾಸೆಯಾಗಿರುತ್ತೆ. ಇದಕ್ಕಾಗಿ ವರ್ಷವೆಲ್ಲಾ ಭಕ್ತರು ಕಾಯುತ್ತಾರೆ.
ಇಂತಹ ಲಕ್ಷಾಂತರ ಭಕ್ತಾಧಿಗಳ ಸಂಪಾದಿಸಿರುವ ಈ ಅಯ್ಯಪ್ಪಸ್ವಾಮಿ ಯಾರು? ಹೇಗೆ ಈ ದೇವಾಲಯ ಹುಟ್ಟಿಕೊಂಡಿತು. ಏನಿದು ಅಯ್ಯಪ್ಪನ ಸ್ವಾಮಿಯ ಕಥೆ? ಈ ಎಲ್ಲಾ ಪ್ರಶ್ನೆಗಳಿಗೂ ನಾವಿಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದೇವೆ.
ಶಬರಿಮಲೆಯಲ್ಲಿರುವ ಪ್ರಧಾನ ದೇವರಾದ ಅಯ್ಯಪ್ಪನ ಕಥೆಯು ಪಾಂಡ್ಯ ರಾಜವಂಶದಿಂದ ಬೇರ್ಪಟ್ಟ ನಂತರ ಪತ್ತನಂತಿಟ್ಟದ ಇಂದಿನ ಭಾಗಗಳಲ್ಲಿ ನೆಲೆಸಿದ್ದ ಪಂದಳಂ ರಾಜವಂಶಕ್ಕೆ ಸಂಬಂಧಿಸಿದೆ. ಪಂದಳಂನ ರಾಜ ಮತ್ತು ರಾಣಿಗೆ ಮಕ್ಕಳಿರಲಿಲ್ಲವಂತೆ. ರಾಜನು ಒಂದು ದಿನ ಬೇಟೆಯಾಡಲು ಹೋದಾಗ, ಕಾಡಿನಲ್ಲಿ ನದಿಯ ಪಕ್ಕದಲ್ಲಿ ಅಳುತ್ತಿರುವ ಮಗುವನ್ನು ಕಂಡು ಅದನ್ನು ಎತ್ತಿಕೊಳ್ಳುತ್ತಾನೆ.

ಬಳಿಕ ನದಿ ಸುತ್ತಲೂ ಮಗುವಿನ ಪೋಷಕರಿಗಾಗಿ ಅಲೆದಾಡುತ್ತಾನೆ. ಈ ಅಲೆದಾಟದ ವೇಳೆ ರಾಜನ ಕಣ್ಣಿಗೆ ಓರ್ವ ಮುನಿ ಸಿಗುತ್ತಾನೆ. ಆತ ಈ ಮಗುವನ್ನೂ ನೀನೇ ಸಾಕಿ ಸಲಹುವಂತೆ ಸೂಚಿಸುತ್ತಾನೆ. ಋಷಿ ಮುನಿಯ ಮಾತಿನಂತೆ ರಾಜ ಸಿಕ್ಕ ಮಗುವನ್ನು ಅರಮನೆಗೆ ತಂದು ಸಾಕುತ್ತಾನೆ. ಬಳಿಕ ಆ ಮಗು ಮಣಿಕಂಠ ಆಗಿ ಪಂದಳಂನ ರಾಜಕುಮಾರನಾಗುತ್ತಾನೆ.
ಮಣಿಕಂಠ 12 ವರ್ಷದವನಾಗಿದ್ದಾಗ, ಪಂದಳಂನ ರಾಣಿ ಹಠಾತ್ ಅನಾರೋಗ್ಯಕ್ಕೆ ಒಳಗಾದಳು. ಆದರೆ ಆಕೆಯ ಚಿಕಿತ್ಸೆಗೆ ಹುಲಿ ಹಾಲಿನ ಅಗತ್ಯವಿದೆ ಎಂದು ವೈದ್ಯರು ತಿಳಿಸಿದಾಗ ಒಂದು ಕ್ಷಣವೂ ಯೋಚಿಸದೆ ಮಠಿಕಂಠ ಹುಲಿ ಹಾಲು ತರಲೆಂದು ಕಾಡಿಗೆ ತೆರಳುತ್ತಾನೆ. ಆದರೆ ವಾಪಾಸು ಬರುವಾಗ ಹುಲಿ ಮೇಲೆ ಸವಾರಿ ಮಾಡುವುದು ಮಾತ್ರವಲ್ಲ ಹತ್ತಾರು ಹುಲಿ ಮರಿಗಳನ್ನು ತನ್ನೊಡನೆ ಕರೆತರುತ್ತಾನೆ.
ಇದನ್ನು ಕಂಡ ರಾಜ ದಂಗಾಗುತ್ತಾನೆ. ಆತ ಸಮಾನ್ಯ ವ್ಯಕ್ತಿಯಲ್ಲ ಎಂದು ಭಾವಿಸುತ್ತಾನೆ. ಹೀಗಾಗಿ ರಾಜ ತನ್ನೆಲ್ಲಾ ಸಂಪತ್ತನ್ನು ಆತನಿಗೆ ಅರ್ಪಿಸಲು ಮುಂದಾಗುತ್ತಾನೆ. ಅಲ್ಲದೆ ಅರಮನೆಯಿಂದ 30 ಕಿ.ಮೀ ದೂರದಲ್ಲಿರುವ ಕಾಡಿನ ಬೆಟ್ಟದಲ್ಲಿ ಮಣಿಕಂಠನಿಗಾಗಿ ದೇವಾಲಯ ನಿರ್ಮಿಸುತ್ತಾನೆ. ಈ ದೇವಾಲಯ ಶಬರಿಮಲೆಯಾಗಿ ಕರೆಯಲ್ಪಟ್ಟಿತ್ತು. ಮಣಿಕಂಠ ದೈವಿ ಸ್ವರೂಪನಾಗಿ ಅಯ್ಯಪ್ಪ ಎಂಬ ಹೆಸರಿನಿಂದ ಕರೆಯಲ್ಪಡುತ್ತಾನೆ.
ಶಬರಿಮಲೆ ಹುಟ್ಟಿನ ಮತ್ತೊಂದು ಕಥೆ
ರಾಣಿಗೆ ಮಣಿಕಂಠ ಮುಂದಿನ ರಾಜನಾಗುವುದನ್ನು ನೋಡಲು ಇಷ್ಟವಿರಲಿಲ್ಲವಂತೆ ಹೀಗಾಗಿ ಆಕೆ ಸುಳ್ಳು ಕಾಯಿಲೆಯ ನೆಪ ಹೇಳಿ ಅಯ್ಯಪ್ಪನನ್ನು ಕಾಡಿಗೆ ಹುಲಿಯ ಹಾಲು ತರಲು ಕಳುಹಿಸಿಲು ಮುಂದಾಗುತ್ತಾಳೆ. ಆತ ಕಾಡಿಗೆ ಹೋದರೆ ಹುಲಿ ಆತನ ಸಾಯಿಸಲಿದೆ ಎಂದು ಆಕೆ ಭಾವಿಸಿದ್ದಳಂತೆ. ಆದರೆ ಅಯ್ಯಪ್ಪನು ಹುಲಿಯ ಹಾಲಿನೊಂದಿಗೆ ರಾಜ್ಯಕ್ಕೆ ಮರಳುವಾಗ ಹುಲಿಯ ಮೇಲೆ ಕೂತು ಒಂದಿಷ್ಟು ಹುಲಿಗಳ ಗುಂಪಿನೊಂದಿಗೆ ಬರುತ್ತಾನೆ.
ಬಳಿಕ ಈ ಪಟ್ಟದ ಆಸೆ ಬೇಡವೆಂದು ಅಯ್ಯಪ್ಪನೇ ತಿರಸ್ಕರಿಸುತ್ತಾನೆ. ಆದರೆ ಆತನ ಕೋರಿಕೆಯಂತೆ ತಾನು ಬಿಟ್ಟ ಬಾಣ ಎಲ್ಲಿಗೆ ತಲುಪುತ್ತದೆಯೋ ಅಲ್ಲಿ ನೆಲೆಸುವುದಾಗಿ ಆತ ಹೇಳುತ್ತಾನೆ. ಹೀಗೆ ಮಣಿಕಂಠ ಬಿಟ್ಟ ಬಾಣ ಬೆಟ್ಟದಲ್ಲಿ ನೆಲೆಗೊಂಡು ಮುಂದೆ ಅದು ಶಬರಿಮಲೆಯಾಗುತ್ತದೆ ಎಂಬ ಪುರಾಣ ಕಥೆಯೂ ಇದೆ.
ಶಬರಿಮಲೆ ಇರುವುದೆಲ್ಲಿ?
ಕೇರಳದ ಇಂದಿನ ಪಥನಂತಿಟ್ಟ ಜಿಲ್ಲೆಯಲ್ಲಿ ಶಬರಿಮಲೆ ಅಯ್ಯಪ್ಪ ದೇಗುಲವಿದೆ. ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದ ಬೆಟ್ಟದಲ್ಲಿ ಅಯ್ಯಪ್ಪ ಸ್ವಾಮಿಯ ದೇವಾಲಯವಿದೆ. ದೇವಸ್ಥಾನ ತಲುಪಲು ಬೆಟ್ಟದ ಕಳೆಭಾಗವಾದ ಪಂಬಾದಿಂದ ಚಾರಣ ಮಾಡಬೇಕಿದೆ. ಈ ದಾರಿ ಅತ್ಯಂತ ಕಠಿಣ ಸವಾಲಾಗಿದ್ದು, ಕಲ್ಲು, ಮುಳ್ಳು ದಾಟಿ ಬೆಟ್ಟವನ್ನು ಹತ್ತಬೇಕಾಗುತ್ತದೆ.



Click it and Unblock the Notifications
