Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪೆಟ್ರೋಲಿಯಂ ಉತ್ಪನ್ನಗಳನ್ನು ಈ ಆಹಾರ, ಮಾತ್ರೆಗಳನ್ನು ಬಳಸಲಾಗುವುದೆಂದು ಗೊತ್ತೇ?
ಕಚ್ಚಾ ತೈಲ ಪೆಟ್ರೋಲಿಯಂನಿಂದ ಪೆಟ್ರೋಲ್, ಡೀಸೆಲ್ ಉತ್ಪನ್ನಗಳು ಮಾತ್ರವಲ್ಲ ಮಾತ್ರವಲ್ಲ ಮೇಕಪ್, ಆಹಾರ ವಸ್ತುಗಳನ್ನ ತಯಾರಿಸುತ್ತಾರೆ ಎಂಬುವುದೇ ಗೊತ್ತೇ?
ಹೌದು ಇದನ್ನು ಕೇಳಿದರೆ ನಿಮಗೆ ತುಂಬಾನೇ ಅಚ್ಚರಿ ಉಂಟಾಗುವುದು. ಪೆಟ್ರೋಲಿಯಂ ನೀವು ಬಳಸುವ ಈ 10 ವಸ್ತುಗಳನ್ನು ಕೂಡ ತಯಾರಿಸಲಾಗುವುದು.

ಚಾಕೋಲೆಟ್: ಚಾಕೋಲೆಟ್ ಕೋಟಿಂಗ್‌ನಲ್ಲಿ ಫರ್ಫಿನ್ ವ್ಯಾಕ್ಸ್ ಇರುತ್ತದೆ, ಇದನ್ನು ಪೆಟ್ರೋಲಿಯಂನಿಂದ ತೆಗೆಯಲಾಗಿರುತ್ತದೆ, ಇದನ್ನು ಚಾಕೋಲೆಟ್‌ಗೆ ಶೈನಿಂಗ್‌ಗೆ ಲುಕ್‌ಗೆ ಬಳಸುತ್ತಾರೆ. ಆದರೆ ಇದರಿಂದ ಯಾವುದೇ ಹಾನಿಯುಂಟಾಗುವುದಿಲ್ಲ 2023ರಲ್ಲ ಅಧ್ಯಯನ ನಡೆಸಿದೆ ಫುಡ್ ಸೇಫ್ಟಿ ನಿಯಂತ್ರಣ ಸಂಸ್ಥೆ ಹೇಳಿದೆ.
ಚಾಕೋಲೆಟ್‌ನಲ್ಲಿ ಫೆಟ್ರೋಲಿಯಂ ಉತ್ಪನ್ನ ಬಳಸುವುದರಿಂದ ಚಾಕೋಲೆಟ್ ತುಂಬಾ ತಾಜಾವಾಗಿರುತ್ತದೆ, ಅಲ್ಲದೆ ಚಾಕೋಲೆಟ್ ಹೊಳಪಿನಿಂದ ಕೂಡಿರುತ್ತದೆ.
ಚಾಕೋಲೆಟ್ ಲೇಬಲ್‌ನಲ್ಲಿ paraffin wax ಎಂದು ಬರೆದಿರುತ್ತದೆ, ಇದು ನಿಮಗೆ ಚಾಲೋಲೆಟ್‌ನಲ್ಲಿ ಮಾತ್ರವಲ್ಲ ನಗೆಟ್ಸ್, ಪಿಜ್ಜಾ , ಕುಕ್ಕೀಸ್ ಅನೇಕ ಆಹಾರ ವಸ್ತುಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸಲಾಗುವುದು.
ಮಾತ್ರೆ
ಹಲವಾರು ಮಾತ್ರೆಗಳಲ್ಲಿ ಇದನ್ನು ಬಳಸಲಾಗಿದೆ. ಇದರಿಂದ ಮಾತ್ರೆಗಳು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ, ಮಾತ್ರೆ ಬೇಗನೆ ಎಕ್ಸ್‌ಪೈರ್ ಆಗುವುದನ್ನು ತಡೆಗಟ್ಟುತ್ತದೆ.
ಐಸ್‌ಕ್ರೀಮ್
ಪೆಟ್ರೋಲಿಯಂ ಸಂಸ್ಕರಣೆ ವೇಳೆ ಸಿಗುವ ಸಿಂಥೆಟಿಕ್ ಎಣ್ಣೆಯನ್ನು ವೆನಿಲ್ಲಾ, ಆಲ್ಮೋಂಡ್ ಈ ಬಗೆಯ ಐಸ್‌ಕ್ರೀಮ್‌ನಲ್ಲಿಯೂ ಬಳಸಲಾಗುವುದು, ಹಲವು ಬಗೆಯ ಐಸ್‌ಕ್ರೀಮ್‌ಗಳಲ್ಲಿ ಇದನ್ನು ಬಳಸಲಾಗುವುದು. ಐಸ್‌ಕ್ರೀಮ್‌ನ ಟೇಸ್ಟ್ ಹೆಚ್ಚಿಸುತ್ತದೆ, ಐಸ್‌ಕ್ರೀಂ ಆಕರ್ಷಕವಾಗಿ ಕಾಣಲು ಕೂಡ ಇದನ್ನು ಬಳಸಲಾಗುವುದು.
ಟೂತ್‌ಪೇಸ್ಟ್
ಟೂತ್‌ಪೇಸ್ಟ್‌ನಲ್ಲಿ polyethylene glycol ಎಂಬ ಅಂಶವಿರುತ್ತದೆ, ಇದು ಕೂಡ ಪೆಟ್ರೋಲಿಯಂನಿಂದ ತೆಗೆಯಲಾಗುವುದು, ಇದರಿಂದಾಗಿ ಟೂತ್‌ಪೇಸ್ಟ್ ನೀರಿನಲ್ಲಿ ಸುಲಭವಾಗಿ ಕರಗುತ್ತದೆ.
ಲ್ಯಾಕ್ಸಿಟಿವ್ ಮಾತ್ರೆ
ಇದನ್ನು polyethylene glycolನಿಂದ ಮಾಡಲಾಗುವುದು, ಇದು ಕೂಡ ಪೆಟ್ರೋಲಿಯಂ ಉತ್ಪನ್ನವಾಗಿದೆ, ಇದನ್ನು ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಬಳಸಲಾಗುವುದು.
ಶೇವಿಂಗ್ ಕ್ರೀಮ್
ಪೆಟ್ರೋಲಿಯಂ ಉತ್ಪನ್ನವಾದ isopentane ಅನ್ನು ಶೇವಿಂಗ್ ಕ್ರೀಮ್‌ನಲ್ಲಿ ಬಳಸಲಾಗುವುದು, ತ್ವಚೆಯನ್ನು ಮೃದುವಾಗಿ ಇಡಲು, ಶೇವಿಂಗ್ ಬಳಿಕ ಉರಿ ಕಡಿಮೆ ಮಾಡಲು ಇದನ್ನು ಇಡಲಾಗುವುದು.
ಪರ್ಫ್ಯೂಮ್
ಪರ್ಫ್ಯೂಮ್‌ನಲ್ಲಿಯೂ ಪೆಟ್ರೋಲಿಯಂನಿಂದ ತೆಗೆಯಲಾಗಿರುವ ಅಂಶ ಬಳಸಲಾಗುವುದು, ಇದರಿಂದಾಗಿ ಸುಗಂಧದ್ರವ್ಯದ ವಾಸನೆ ತುಂಬಾ ಹೊತ್ತು ಇರುತ್ತದೆ.
ಪೇಯಿಂಟ್
ಪೇಯಿಂಟ್‌ಗೆ ಕೂಡ ಈ ಪೆಟ್ರೋಲಿಯಂ ಉತ್ಪನ್ನದಿಂದ ಮಾಡಿದ ವಸ್ತುವನ್ನು ಪೇಯಿಂಟ್‌ಗೆ ಬಳಸಲಾಗುವುದು ಇದರಿಂದಾಗಿ ಪೇಯಿಂಟ್ ದೀರ್ಘಕಾಲ ಬಾಳಿಕೆ ಬರುತ್ತದೆ.
ಏರ್ ಫ್ರೆಷ್ನರ್
ಏರ್‌ಫ್ರೆಷ್ನರ್ ತುಂಬಾ ಹೊತ್ತು ಇರಲು ಪೆಟ್ರೋಲಿಯಂ ಉತ್ಪನ್ನ ಬಳಸಲಾಗುವುದು.
ತ್ವಚೆ ಆರೈಕೆಗೆ
ತ್ವಚೆ ಆರೈಕೆ ಕ್ರೀಮ್, ಲೋಷನ್‌ಗಳಲ್ಲಿಯೂ ಇದನ್ನು ಬಳಸಲಾಗುವುದು, ಇವು ತ್ವಚೆ ಆರೈಕೆಗೆ ಸಹಕಾರಿಯಾಗಿದೆ.



Click it and Unblock the Notifications