Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಒಲಿಂಪಿಕ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಎಷ್ಟು ಹಣ ಸಿಗುತ್ತೆ ಗೊತ್ತಾ?
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಪದಕ ಬೇಟೆಯಲ್ಲಿದ್ದಾರೆ. ಈವೆರೆಗ ಮೂರು ಕಂಚಿನ ಪದಕ ಗೆದ್ದು ಹೆಮ್ಮೆ ತಂದಿದ್ದಾರೆ. ಮೂರು ಶೂಟಿಂಗ್ ವಿಭಾಗದಲ್ಲಿ ಪದಕ ಗೆದ್ದಿದ್ದು, ಮತ್ತಷ್ಟು ಪದಕಗಳು ಭಾರತದಕ್ಕೆ ಬರುವ ನಿರೀಕ್ಷೆ ಇದೆ.
ಈ ವರ್ಷ ಒಟ್ಟು 117 ಭಾರತೀಯ ಅಥ್ಲೀಟ್‌ಗಳು ಪದಕಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಜುಲೈ 26 ರಂದು ಆರಂಭವಾದ ಪಂದ್ಯಗಳು ಆಗಸ್ಟ್ 11 ರಂದು ಮುಕ್ತಾಯಗೊಳ್ಳಲಿವೆ. ಭಾರತಕ್ಕೆ ಮಹಿಳಾ ಶೂಟರ್ ಮನು ಭಾಕರ್ ಮೂಲಕ ಈ ಪದಕ ಬೇಟೆ ಆರಂಭವಾಗಿದೆ. ಈಗ ಶೂಟಿಂಗ್‌ನಲ್ಲಿ ಮೂರು ಪದಕ ಬಂದಿವೆ.

ಈ ಮೂಲಕ ಮನು ಭಾಕರ್ ಹೊಸ ಇರಿಹಾಸ ಬರೆದರು. ಭಾರತಕ್ಕೆ ಮಹಿಳಾ ಶೂಟಿಂಗ್ ವಿಭಾಗದಲ್ಲಿ ಬಂದ ಮೊಟ್ಟ ಮೊದಲ ಪದಕ ಇದಾಗಿದೆ. ಆದ್ರೆ ಈ ರೀತಿ ಒಲಿಂಪಿಕ್ಸ್ ಪದಕ ಗೆದ್ದ ಕ್ರೀಡಾಪಟುಗಳಿಗೆ ಎಷ್ಟು ಹಣ ನೀಡುತ್ತಾರೆ ಎಂಬುದು ನಿಮಗೆ ಗೊತ್ತಾ? ಭಾರತಕ್ಕೆ ಟೋಕಿಯೋ ಒಲಿಂಪಿಕ್‌ನಲ್ಲಿ ದಾಖಲೆಯ ಪದಕ ಬಂದಿತ್ತು.
ಆದ್ರ ಕ್ರೀಡಾ ಹಬ್ಬದಲ್ಲಿ ಪದಕ ಗೆಲ್ಲುವ ಈ ಸ್ಪರ್ಧಾಳುಗಳಿಗೆ ಎಷ್ಟು ಹಣ ನೀಡುತ್ತಾರೆ? ಯಾವುದೇ ಕ್ರೀಡಾಪಟು ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಗೆದ್ದರೆ ಅವರಿಗೆ ಯಾವುದೇ ರೀತಿಯ ಹಣ ನೀಡಲಾಗುವುದಿಲ್ಲ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಹಣದ ಬಹುಮಾನಗಳನ್ನು ಒದಗಿಸುವುದಿಲ್ಲ, ಆ ಕ್ರೀಡಾಪಟು ತನ್ನ ದೇಶದಲ್ಲಿ ಘೋಷಣೆ ಮಾಡುವ ಹಣ ಹಾಗೂ ಸೌಲಭ್ಯಗಳನ್ನಷ್ಟೇ ಅವಲಂಭಿಸಿರುತ್ತಾನೆ.
ಅಂತಾರಾಷ್ಟ್ರೀಯ ಒಲಿಂಪಿಕಗ್ ಕಮಿಟಿಯು ಬಹುಮಾನದ ಹಣದ ಬದಲಿಗೆ ತನ್ನ ಒಟ್ಟಾರೆ ಆದಾಯದ ಶೇ.90ರಷ್ಟು ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳು ಮತ್ತು ಅಂತರರಾಷ್ಟ್ರೀಯ ಒಕ್ಕೂಟಗಳಿಗೆ ಹಂಚುತ್ತದೆ. ಇದನ್ನೇ ಒಲಿಂಪಿಕ್‌ನಲ್ಲಿ ಭಾಗಿಯಾದ ಕ್ರೀಡಾಪಟುಗಳಿಗೂ ನೀಡಲಾಗುತ್ತದೆ.
2021 ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದಿಂದ ನೂರಕ್ಕೂ ಹೆಚ್ಚು ಕ್ರೀಡಾ ಪಟುಗಳು ಸ್ಪರ್ಧಿಸಿದ್ದರು. ಇವರಲ್ಲಿ ಹಲವರು ಚಿನ್ನ ಸೇರಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದಿದ್ದರು. ಅವರಿಗೆ ಆಯಾ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಬಹುಮಾನ ಘೋಷಿಸಿತ್ತು.
ಜಾವಲಿನ್ ಥ್ರೋನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಚೋಪ್ರಾಗೆ 6 ಕೋಟಿ ರೂಪಾಯಿಯನ್ನ ಹರಿಯಾಣ ಸರ್ಕಾರ ಘೋಷಿಸಿತ್ತು. ಜೊತೆಗೆ ವೇಟ್ ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಮೀರಾಬಾಯಿ ಚಾನು ಅವರಿಗೆ ಮಣಿಪುರ ಸರ್ಕಾರವು 1 ಕೋಟಿ ರೂಪಾಯಿ ನೀಡಿತ್ತು. ಇನ್ನು ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿ ಕುಮಾರ್ ದಹಿಯಾಗೆ ಹರಿಯಾಣ ಸರ್ಕಾರವು 4 ಕೋಟಿ ರೂಪಾಯಿ ನೀಡಿತ್ತು. ಇದಿಷ್ಟೆ ಅಲ್ಲ ಇನ್ನೂ ಕೆಲವು ಕ್ರೀಡಾಪಟುಗಳಿಗೆ ಲಕ್ಷದ ರೀತಿ ಬಹುಮಾನ ಮೊತ್ತ ಘೋಷಿಸಿದ್ದವು.
ಅಷ್ಟೆ ಅಲ್ಲ! ಭಾರತ ಸರ್ಕಾರ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ 75 ಲಕ್ಷ, ಬೆಳ್ಳಿ ಪದಕ ವಿಜೇತ ರವಿಕುಮಾರ್ ದಹಿಯಾ ಮತ್ತು ಮೀರಾಬಾಯಿ ಚಾನುಗೆ ತಲಾ 50 ಲಕ್ಷ ಮತ್ತು ಕಂಚಿನ ಪದಕ ವಿಜೇತರಾದ ಲೊವ್ಲಿನಾ ಬೊರ್ಗೊಹೈನ್, ಪಿವಿ ಸಿಂಧು, ಬಜರಂಗ್ ಪುನಿಯಾ ಮತ್ತು ಭಾರತ ಹಾಕಿ ತಂಡಕ್ಕೆ ತಲಾ 30 ಲಕ್ಷ ರೂ. ನೀಡಿತ್ತು. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಿಗೆ ಈ ರೀತಿಯ ಬಹುಮಾನ ಮೊತ್ತ ನಿಗದಿ ಮಾಡಿತ್ತು.
ಚಿನ್ನ ಗೆದ್ದವರಿಗೆ 75 ಲಕ್ಷ ರೂ. ಬೆಳ್ಳಿ ಗೆದ್ದವರಿಗೆ 40 ಲಕ್ಷ ರೂ, ಹಾಗೂ ಕಂಚು ಗೆದ್ದವರಿಗೆ 25 ಲಕ್ಷ ನಿಗದಿ ಮಾಡಿತ್ತು.
ಈಗ ಪ್ಯಾರಿಸ್ ಒಲಿಂಪಿಕ್ಸ್ 2024ನಲ್ಲಿ ಕಂಚು ಗೆದ್ದಿರುವ ಕ್ರೀಡಾಪಟುಗಳಿಗೆ 25 ಲಕ್ಷ ರೂಪಾಯಿಗೆ ಬದಲು ಈ ಬಹುಮಾನದ ಮೊತ್ತ ಹೆಚ್ಚಳವಾಗಿದೆ ಎನ್ನಲಾಗಿದೆ. ಆದರೆ ಈ ಕುರಿತ ಅಧಿಕೃತ ಮಾಹಿತಿಗಳು ಲಭ್ಯವಿಲ್ಲ. ಮೂಲಗಳ ಪ್ರಕಾರ ಚಿನ್ನ ಗೆದ್ದರೆ 1 ಕೋಟಿ ರೂ. ಬೆಳ್ಳಿ ಗೆದ್ದರೆ 75 ಲಕ್ಷ ರೂ ಹಾಗೂ ಕಂಚಿಗೆ 50 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.



Click it and Unblock the Notifications

