Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಭೂಮಿಗೆ ಎಷ್ಟು ವರ್ಷ ಆಯಸ್ಸು ಗೊತ್ತಾ? ಸೂರ್ಯ-ಚಂದ್ರ ಕೂಡ ನಾಶವಾಗೋದು ಖಚಿತ!!
ನಾವು ಭೂಮಿಯ ಮೇಲೆ ಬಂದು ಶತಮಾನಗಳು ಉರುಳಿವೆ. ಅದೆಷ್ಟೋ ಜೀವಿಗಳು ಈಗಾಗಲೇ ಭೂಮಿ ಮೇಲೆ ಬಂದು ಭೂಮಿಯನ್ನಾಳಿ ನಶಿಸಿ ಹೋಗಿವೆ. ಭೂಮಿ ಮೊದಲು ಈಗಿನಂತೆ ಇರಲಿಲ್ಲ, ಬೆಂಕಿಯ ಉಂಡೆಯಾಗಿ ಆರಂಭಗೊಂಡ ಭೂಮಿ ಶತಮಾನಗಳ ಬಳಿಕ ಜೀವಿಗಳು ಉದಯಿಸಬಹುದಾದ ನೆಲೆಯಾಯಿತು.
ಮೊದಲು ಸಾಗರದ ಆಳದಲ್ಲಿ ಜೀವಿಗಳ ಹುಟ್ಟು ಆರಂಭಗೊಂಡು ಈಗ ಭೂಮಿ ಈ ಮಟ್ಟಕ್ಕೆ ಬಂದು ನಿಂತಿದೆ. ಆದ್ರೆ ಈಗ ಮಾನವ ಮತ್ತೊಂದು ಭೂಮಿ ಹುಡುಕಲು ಮುಂದಾಗಿದ್ದಾನೆ. ಅಂದರೆ ಈ ಭೂಮಿಯ ಆಯಸ್ಸು ಮುಗಿಯಲಿದೆ, ಮಾನವನಿಗೆ ಮತ್ತೊಂದು ನೆಲೆ ಹುಡುಕುವುದು ಅನಿವಾರ್ಯ ಎಂಬುದು ಅರಿವಾಗಿದೆ.

ಭೂಮಿ ಇನ್ನೇನು ಕೆಲವೇ ಮಿಲಿಯನ್ ವರ್ಷಗಳಲ್ಲಿ ಮತ್ತೆ ಬೆಂಕಿಯ ಉಂಡೆಯಾಗಿ ಬದಲಾಗಬಹುದು ಎಂಬುದು ವಿಜ್ಞಾನಿಗಳ ವಾದವಾಗಿದೆ. ಆದ್ರೆ ಅದಕ್ಕೂ ಮೊದಲೆ ಸೂರ್ಯ ನಮ್ಮಿಂದ ದೂರಾಗುತ್ತಾನೆ ಎಂಬ ವಾದವೂ ಇದೆ. ಸೂರ್ಯ ಈಗಿನಂತೆ ಬೆಳಗುವುದಿಲ್ಲ ಬೆಂಕಿಯ ಉಂಡೆಯಾದ ಸೂರ್ಯ ಒಂದು ದಿನ ಸ್ಪೋಟವಾಗುತ್ತಾನೆ ಎಂದು ವಿಜ್ಞಾನಿಗಳ ವಾದ. ಹೀಗೇನಾದರು ಸಂಭವಿಸಿದರೆ ಭೂಮಿಯು ಅದರೊಂದಿಗೆ ನಾಶವಾಗುತ್ತದೆ.
ಇಂದಿನಿಂದ ಬರೋಬ್ಬರಿ 5 ಶತಕೋಟಿ ವರ್ಷಗಳಲ್ಲಿ ಇದು ಸಂಭವಿಸಬಹುದಂತೆ. ಇಡೀ ಸೌರಮಂಡಲದ ಕೇಂದ್ರ ಬಿಂದು ಸೂರ್ಯ ಒಮ್ಮೆ ನಾಶ ವಾದರೆ ಭೂಮಿಯ ಕಥೆ ಏನು? ಸೂರ್ಯ ಇಲ್ಲವೆಂದರೆ ಭೂಮಿಗೆ ಎನಾಗಲಿದೆ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ಆದ್ರೆ ಸೂರ್ಯ ಇರದಿದ್ದರೆ ಭೂಮಿ ಕೂಡ ನಾಶವಾಗೋದು ಪಕ್ಕಾ.
ಆದರೆ ನಾಳೆಯೇ ಕಣ್ಣು ಮಿಟುಕಿಸುವುದರೊಳಗೆ ಚಂದ್ರ ಮರೆಯಾದರೆ ಏನಾಗುತ್ತದೆ.? ಭೂಮಿಯ ಗುರುತ್ವಾಕರ್ಷಣೆಯ ಬಲಕ್ಕೂ ಚಂದ್ರನಿಗೂ ಸಂಬಂಧವಿದೆ ಹೀಗಾಗಿ ಚಂದ್ರ ಮರೆಯಾದರೆ ಭೂಮಿಯ ಗುರುತ್ವಾಕರ್ಷಣೆ ಏರು ಪೇರಾಗಲಿದೆ. ಈಗ ಇರುವ ಕಕ್ಷೆಗಿಂತಲೂ ಭೂಮಿ ಸ್ವಲ್ಪ ಮೇಲೆ ಬರಲಿದೆ. ಅಲ್ಲದೆ ಸಾಗರಗಳು ಉಕ್ಕುತ್ತವೆ. ಅಂದರೆ ಹತ್ತಾರು ನಗರಗಳು ನೀರಿನೊಳಗೆ ಮುಳುಗುತ್ತವೆ.
ಆದಾಗ್ಯೂ, ಪ್ರಾಣಿಗಳ ಮೇಲೆ ಪರಿಣಾಮವು ತುಂಬಾ ಹೆಚ್ಚಾಗಿರುತ್ತದೆ. ಕರಾವಳಿ ಪರಿಸರ ವ್ಯವಸ್ಥೆಗಳು ಸಮುದ್ರದ ತಳದಿಂದ ವಸ್ತುಗಳನ್ನು ಹೊರಹಾಕಲು ಉಬ್ಬರವಿಳಿತಗಳನ್ನು ಅವಲಂಬಿಸಿವೆ. ಹೀಗಾಗಿ ಅವುಗಳು ಚಂದ್ರನಿಲ್ಲದೆ ರಾತ್ರಿಯಲ್ಲಿ ಹೊರಬರಲು ಸಾಧ್ಯವಾಗುವುದಿಲ್ಲ. ಅಲ್ಲದೆ ಆಹಾರವಿಲ್ಲದೆ ಅವು ಸಾಯುತ್ತವೆ.
ಚಂದ್ರನಿಲ್ಲದ ಕೇವಲ 2 ಗಂಟೆಯಲ್ಲಿ ಭೂಮಿಯ ಮೇಲೆ ವ್ಯತಿರಿಕ್ತ ಪರಿಣಾಮ ನೋಡಬಹುದು. ಅಲ್ಲದೆ ಭೂಮಿ ತಿರುಗುವ ವೇಗದಲ್ಲಿ ಏರಿಳಿತವಾಗುತ್ತದೆ. ದಿನಕ್ಕೆ 24 ಗಂಟೆಯ ಬದಲಾಗಿ 18 ಗಂಟೆಗೆ ಒಂದು ದಿನವಾಗಿ ಬದಲಾಗುತ್ತದೆ.
ಕುಗ್ಗುತ್ತಿದ್ದಾನೆ ಚಂದ್ರ..!
ಭೂಮಿಯಂತೆ ಚಂದ್ರನ ಮೇಲ್ಮೈ ಕೂಡ ಗಡಸಾಗಿದೆ. ಆದರೆ ಚಂದ್ರನ ಕುಗ್ಗುವಿಕೆಯಿಂದ ಚಂದ್ರನ ತ್ರಿಜ್ಯದಲ್ಲಿ ಕುಗ್ಗುತ್ತಿದ್ದಾನೆ. ಇದರಿಂದ ಆತ ಭೂಮಿಯಂದ ದೂರ ಸರಿಯುತ್ತಿದ್ದಾನೆ. ಕಳೆದ ನೂರಾರು ಮಿಲಿಯನ್ ವರ್ಷಗಳಿಂದ ಚಂದ್ರನು ತ್ರಿಜ್ಯದಲ್ಲಿ ಕುಗ್ಗುತ್ತಿದ್ದಾನೆ. ಪ್ರಸ್ತುತ, ಅದರ ಮಧ್ಯಭಾಗವು ಸುಮಾರು 50 ಮೀಟರ್ ನಷ್ಟು ಗಾತ್ರದಲ್ಲಿ ಕುಗ್ಗಿದೆಯಂತೆ. ಅಂದರೆ ಬರೋಬ್ಬರಿ 164 ಅಡಿಗಳಷ್ಟು ಗಾತ್ರದಲ್ಲಿ ಚಿಕ್ಕದಾಗಿದ್ದಾನೆ.
ಈ ಕುರಿತು ನಾಸಾ ಇತ್ತೀಚಿಗೆ ಬಿಡುಗಡೆ ಮಾಡಿದ್ದ ಫೋಟೋಗಳು ಸಹ ಸಾಕ್ಷಿಯಾಗಿದ್ದವು, ಚಂದ್ರನ ಮೇಲ್ಮೈಯಲ್ಲಿ ದೊಡ್ಡ ಕುಳಿಗಳು, ಬರುಕು ಮೂಡಿದ್ದ ಫೋಟೋಗಳವು. ಚಂದ್ರನ ಕ್ರಸ್ಟ್ ಪಾಯಿಂಟ್ ಅಂದರೆ ಹೊರ ಮೇಲ್ಮೈ ಸಹ ಅತ್ಯಂತ ದುರ್ಬಲವಾಗಿದೆ. ಇವು ನೂರಾರು ಬಿರುಕುಗಳಿಂದ ಕೂಡಿದೆ. ಅಲ್ಲದೆ ಆಗಾಗ ಸಂಭವಿಸುವ ಕಂಪನಗಳು ಈ ಬಿರುಕುಗಳ ಗಾತ್ರ ಹೆಚ್ಚಾಗಲು ಮತ್ತಷ್ಟು ಬಿರುಕು ಮೂಡಲು ಕಾರಣವಾಗಿದೆ. ಇದರಿಂದ ಚಂದ್ರ ಚಿಕ್ಕದಾಗುತ್ತಾ ಭೂಮಿಯಿಂದ ದೂರ ಸರಿಯುತ್ತಿದ್ದಾನೆ. ಒಂದು ವೇಳೆ ಚಂದ್ರ ಮರೆಯಾದರೆ ಭೂಮಿಯ ಆಯಸ್ಸು ಕೂಡ ಕೆಲವೇ ವರ್ಷದಲ್ಲಿ ಅಂತ್ಯವಾಗಲಿದೆ.



Click it and Unblock the Notifications
