Latest Updates
-
10 ನಿಮಿಷದ ಸಬ್ಜಿ.. ಕ್ಯಾಪ್ಸಿಕಂ ಇಷ್ಟಪಡದವರೂ ಫಿದಾ ಆಗ್ತಾರೆ! ಬೆರಳು ಚೀಪುವಷ್ಟು ರುಚಿ.. ಮಾಡೋದು ಹೇಗೆ? -
ಪ್ರೀತಿಯ, ಪಯಣ, ಆನಂದ.. ಸಿಂಗಲ್ಸ್ಗೆ ಸ್ನೇಹವು ಪ್ರೀತಿಯಾಗಿ ಬದಲು! ಪ್ರೇಮ ಜೀವನ ಅದ್ಭುತ -
March 05 Horoscope: ಮನೆಯ ಕುರಿತಾಗಿದ್ದ ಚಿಂತೆ ದೂರಾಗಲಿದೆ! -
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು
ಕನ್ನಡ ಬಾವುಟ ಹುಟ್ಟಿದ್ದೇಗೆ? ಹಳದಿ-ಕೆಂಪು ಬಣ್ಣ ನೀಡಿದ್ದು ಇತಿಹಾಸ ಮರೆಯದ ಕನ್ನಡದ ವೀರ ಸೇನಾನಿ!
ನವೆಂಬರ್‌ನಲ್ಲಿ ನೀವು ರಾಜ್ಯದ ಯಾವುದೇ ಬೀದಿಗೆ ಹೋದರು ಅಲ್ಲಿ ಕೆಂಪು, ಹಳದಿಯ ಬಾವುಟ ನೋಡಲು ಸಿಗುತ್ತೆ. ನವೆಂಬರ್ ತಿಂಗಳು ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವದ ಕಂಪು ಎಲ್ಲೆಡೆ ಹರಡಿರಲಿದೆ. ನೀವು ಹೋದಲ್ಲಿ ಬಂದಲ್ಲಿ ಎಲ್ಲಾ ಕಡೆಯೂ ಕನ್ನಡದ ಗೀತೆಗಳು, ಕನ್ನಡ ನಾಯಕರ ಭಾವ ಚಿತ್ರಗಳು, ಅವರ ಹೋರಾಟದ ಹಾದಿ, ಕನ್ನಡದ ಹೆಸರನ್ನು ವಿಶ್ವದ ಉದ್ದಗಲಕ್ಕೂ ಹರಡಿದಂತಹ ಮಹಾನಿಯರ ಕುರಿತು ನೋಡಬಹುದು.
ಹಾಗೆ ಎಲ್ಲೆಡೆಯೂ ಕನ್ನಡದ ಧ್ವಜ ಹಾರಾಡುವುದು ನಿಮ್ಮ ಕಣ್ಣಿಗೆ ಬೀಳುವುದು ಸಹಜ. ಹಾಗೆ ಕನ್ನಡದ ಏಕೀಕರಣದ ಸವಿ ನೆನಪಿನ ಅಂಗವಾಗಿ ಆ ಸಮಯದಲ್ಲಿ ಕನ್ನಡವನ್ನು ಒಗ್ಗೂಡಿಸಿದವರನ್ನು ನೆನೆಯುವ ವಿಶೇಷ ದಿನವೂ ಹೌದು. ಕನ್ನಡ ದಿನ ಎಂದರೆ ಕೇವಲ ಕನ್ನಡದ ಹಾಡುಗಳು, ಸಿನಿಮಾ ನಟರನ್ನು ನೆನೆಯುವುದು ಮಾತ್ರವಲ್ಲ. ಕನ್ನಡ ಭಾಷೆಗಾಗಿ ಇಡೀ ಜೀವನ ಮುಡಿಪಿಟ್ಟ ನಾಯಕರನ್ನು ಕೂಡ ನೆನೆಯುವುದು ಅವರಿಗೆ ನೀಡುವ ಗೌರವ.

ಕೆಂಪು-ಹಳದಿ ಬಣ್ಣದ ಕನ್ನಡ ಧ್ವಜಕ್ಕೆ ಅಧಿಕೃತ ಸ್ಥಾನಮಾನ ನೀಡುವ ಕುರಿಯಾಗಿ ಬಹಳ ಕಾಲದಿಂದಲೂ ಚರ್ಚೆಗಳು, ಬೇಡಿಕೆಗಳು ಹೋರಾಟದ ಹಾದಿಯನ್ನು ತುಳಿದಿದೆ. ಹಾಗೆ ಕನ್ನಡ ಧ್ವಜ ಕೂಡ ರೂಪಾಂತರವಾಗಿ ಇಂದು ಕೈ ಸೇರಿದೆ. ಆದ್ರೆ ಈ ಬಾವುಟವನ್ನು ಮೊದಲು ಹುಟ್ಟುಹಾಕಿದ್ದು ಯಾರು. ಈ ನಾಡಿಗೆ ಬಾವುಟವೊಂದು ಇರಬೇಕೆಂದು ಮೊದಲು ಯೋಜನೆ ರೂಪಿಸಿದ್ದು ಯಾರು ಅನ್ನೋದು ನಿಮಗೆ ತಿಳಿದಿದ್ಯಾ?
ಕನ್ನಡ ಬಾವುಟ ಹುಟ್ಟಿಕೊಂಡಿದ್ದು 1966ರಲ್ಲಿ
ದಶಕದ ಹಿಂದೆ ಈ ಕನ್ನಡ ಬಾವುಟ್ ಹುಟ್ಟಿಗೆ ಕಾರಣವಾಗಿತ್ತು. ನಿಮಗಿದು ಅಚ್ಚರಿ ಎನಿಸಬಹುದು. 1956ರಲ್ಲಿ ರಾಜ್ಯದ ಏಕೀಕರಣವಾಗಿದ್ದರೂ ಬಾವುಟ ಮಾತ್ರ 10 ವರ್ಷಗಳ ಬಳಿಕ ಸಿಕ್ಕಿತ್ತು ಎಂಬುದೇ ಕುತೂಹಲಕಾರಿ ಸಂಗತಿ. ಹಾಗೆ ಈ ಕೆಂಪು ಹಾಗೂ ಹಳದಿ ಬಾವುಟ ಕೊಟ್ಟಿದ್ದು ಬರಹಗಾರ ಮಾ. ರಾಮಮೂರ್ತಿ ಅವರು. 1918ರ ಮಾರ್ಚ್ 11ರಂದು ಜನಿಸಿದ ಅವರನ್ನು ಕನ್ನಡದ ವೀರ ಸೇನಾನಿ ಎಂದು ಕರೆಯಲಾಗಿದೆ.
ಕರ್ನಾಟಕ ಏಕೀಕರಣ ಸಮಯದಲ್ಲಿ ಕನ್ನಡ ಚಳವಳಿಯನ್ನು ಮುನ್ನಡೆಸಿದವರು. ಅವರಿಂದಲೇ ಇಂದು ನಾವು ಕೆಂಪು ಹಳದಿಯ ಬಾವುಟ ನೋಡುತ್ತಿದ್ದೇವೆ. 50 ಮತ್ತು 60 ರ ದಶಕಗಳಲ್ಲಿ ಖ್ಯಾತ ಬರಹಗಾರ ಆ. ನಾ. ಕೃಷ್ಣರಾಯ ಮತ್ತು ಇತರರ ನೇತೃತ್ವದಲ್ಲಿ ಕನ್ನಡ ಚಳವಳಿಯನ್ನು ಮುನ್ನಡೆಸಿದರು. 1956 ರಲ್ಲಿ ರಾಜ್ಯ ಏಕೀಕರಣದ ನಂತರವೂ ಸರ್ಕಾರ ನವೆಂಬರ್ 1 ಅನ್ನು ಆಚರಿಸದಿದ್ದಾಗ ಕನ್ನಡ ರಾಜ್ಯೋತ್ಸವ ದಿನವನ್ನು ಆಯೋಜಿಸುವಲ್ಲಿ ಅವರು ಉಪಕ್ರಮ ಕೈಗೊಂಡವರಲ್ಲಿ ಒಬ್ಬರು.
ರಾಮಮೂರ್ತಿಯವರ ಸಾವಿಗೆ ಒಂದು ವರ್ಷದ ಮೊದಲು 1966ರಲ್ಲಿ ಧ್ವಜವನ್ನು ವಿನ್ಯಾಸಗೊಳಿಸಲಾಯಿತು. ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ತಮಿಳುನಾಡಿನ ವಲಸೆ ಕಾರ್ಮಿಕರು ಹಾರಿಸುತ್ತಿದ್ದ ದ್ರಾವಿಡ ಪಕ್ಷದ ದ್ವಿವರ್ಣ ಧ್ವಜಕ್ಕೆ ಪ್ರತಿಕ್ರಿಯೆಯಾಗಿ ಕನ್ನಡ ಧ್ವಜ ಬಂದಿತು ಎಂದು ಇತಿಹಾಸಕಾರರು ಹೇಳುತ್ತಾರೆ.
ಎಲ್ಲಾ ಕನ್ನಡ ಸಂಘಟನೆಗಳನ್ನು ಒಟ್ಟುಗೂಡಿಸಲು ಕರ್ನಾಟಕ ಸಂಯುಕ್ತ ರಂಗ (ಕರ್ನಾಟಕ ಯುನೈಟೆಡ್ ಫ್ರಂಟ್) ರಚನೆಯಾದ ವರ್ಷ ಅದು. ಕೃಷ್ಣರಾಯರನ್ನು ಅದರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಮತ್ತು ರಾಮಮೂರ್ತಿ ಅದರ ಕಾರ್ಯದರ್ಶಿಯಾದರು. ಇಲ್ಲಿಂದಲೇ ಕನ್ನಡದ ಹೋರಾಟಗಳ ರೂಪುರೇಷೆಗಳು ಹುಟ್ಟಿಕೊಳ್ಳಲು ಆರಂಭಿಸಿದ್ದವು. ಬೆಂಗಳೂರಿನ ಮೈಸೂರು ವಾಣಿಜ್ಯ ಮಂಡಳಿಯಲ್ಲಿ ಅಖಿಲ ಕರ್ನಾಟಕ ಕನ್ನಡಿಗರ ಬೃಹತ್ ಸಮಾವೇಶ (ಅಖಿಲ ಕರ್ನಾಟಕ ಕನ್ನಡಿಗ ಸಮಾವೇಶ)ವನ್ನು ಆಯೋಜಿಸಿತ್ತು. ಇದೇ ಸಮಯದಲ್ಲಿ ಮೊದಲ ಬಾರಿಗೆ ಕನ್ನಡಕ್ಕೆ ಒಂದು ಬಾವುಟ ಬೇಕು ಎಂಬ ಕೂಡು ಕೇಳಿಬಂದಿತ್ತು.
ಇದೇ ಸಮಾವೇಶದಲ್ಲಿ ಇಂದಿನ ವಾಟಾಳ್ ನಾಗರಾಜ್ ಸಹ ಇದ್ದರೂ ಅವರೇ ಈ ಸಮಾವೇಶ ಉದ್ಘಾಟಿಸಿದ್ದರು. ಆದ್ರೆ ರಾಮಮೂರ್ತಿ ಹಾಗೂ ವಾಟಾಳ್ ನಾಗರಾಜ್ ಅವರು ಎರಡು ಭಿನ್ನ ಬಾವುಟಗಳೊಂದಿಗೆ ಎರಡು ರಾಜಕೀಯ ಪಕ್ಷವನ್ನು ಹುಟ್ಟುಹಾಕಿದರು. ಕನ್ನಡ ಪಕ್ಷ ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷ ಎಂಬ ಎರಡು ಹೊಸ ಪಕ್ಷದ ಉದಯವಾಗಿತ್ತು.
ಆದ್ರೆ ಈ ಪಕ್ಷದ ಬಾವುಟವಾಗಿ ಎರಡು ವಿಭಿನ್ನ ಬಾವುಟಗಳಿದ್ದವು ಆದ್ರೆ ಪಕ್ಷಗಳು ಮರೆಯಾದರು ಈಗ ಕೆಂಪು ಮತ್ತು ಹಳದಿಯ ಕನ್ನಡ ಬಾವುಟ್ ಉಳಿದುಬಂದಿದೆ. ಈ ಬಾವುಟ ರಾಮಮೂರ್ತಿ ಅವರ ಪಕ್ಷದ ಗುರುತು. ಆದ್ರೆ ಅವರ ಮರಣದ ನಂತರದಲ್ಲಿ ಈ ಬಾವುಟ ಕನ್ನಡದ ಬಾವುಟವಾಗಿಯೂ ಗುರುತಿಸಲಾಯಿತು.
1973 ರಲ್ಲಿ ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡುವ ಬಹಳ ಹಿಂದೆಯೇ ಡಿಸೆಂಬರ್ 25, 1967 ರಂದು ತಲಘಟ್ಟಪುರದಲ್ಲಿರುವ ತಮ್ಮ ಜಮೀನಿನಲ್ಲಿ ರಾಮಮೂರ್ತಿ ನಿಧನರಾದರು. ನಗರದ ಕಾಟನ್‌ಪೇಟ್‌ನಲ್ಲಿ ಅವರ ಪ್ರತಿಮೆಯನ್ನು ಕಾಣಬಹುದು. ಆದ್ರೆ ಹಲವರಿಗೆ ಅವರ ಇತಿಹಾಸ ಗೊತ್ತಿಲ್ಲ. ಹಾಗೆ ಕನ್ನಡ ಬಾವುಟ ಹುಟ್ಟಿಕೊಂಡಿದ್ದು ಹೇಗೆ ಅನ್ನೋದು ಕೂಡ ಇವರಿಗೆ ಗೊತ್ತಿಲ್ಲ.



Click it and Unblock the Notifications












