ವೃತ್ತಿ ಜೀವನ, ಆರ್ಥಿಕ ಸಮಸ್ಯೆಗಳಾದರೆ ಜ್ಯೋತಿಷ್ಯ ಶಾಸ್ತ್ರ ಉಲ್ಲೇಖಿಸಿರುವಂತೆ ಈ ರೀತಿ ಪರಿಹಾರ ಮಾಡಿ!

ಸಮಸ್ಯೆಗಳು ಯಾರಿಗೆ ಇರೋದಿಲ್ಲ ಹೇಳಿ. ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ರೀತಿ ಸಮಸ್ಯೆ ಇದ್ದೇ ಇರುತ್ತದೆ. ಕೆಲವೊಬ್ಬರಿಗೆ ಆರ್ಥಿಕ ಸಮಸ್ಯೆಯಾದರೆ, ಇನ್ನೂ ಕೆಲವರಿಗೆ ವೃತ್ತಿ ಜೀವನದಲ್ಲಿ, ವೈವಾಹಿಕ ಜೀವನ, ಆರೋಗ್ಯ ಹೀಗೆ ಒಂದಾ? ಎರಡಾ? ಹತ್ತು ಹಲವಾರು ಸಮಸ್ಯೆಗಳು ಜನರನ್ನು ಕಾಡುತ್ತಿರುತ್ತದೆ.

ಆದರೆ ಇವುಗಳಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳೋದು ಎಂಬುವುದು ಹೆಚ್ಚಿನವರಿಗೆ ಗೊತ್ತಿರೋದಿಲ್ಲ. ಆದರೆ ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವಿದೆ. ಹಾಗಾದ್ರೆ ನಿಮ್ಮ ಜೀವನದಲ್ಲಿರುವ ಎಲ್ಲಾ ರೀತಿಯ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳೋದು ಅನ್ನೋದನ್ನು ತಿಳಿಯೋಣ.

DIY Astology Remedies For Various problem in your life in Kannada

1. ವೃತ್ತಿ ಜೀವನದ ಸಮಸ್ಯೆಗಳಿಗೆ ಪರಿಹಾರ

ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಕೈಲಾದಷ್ಟು ಪ್ರಯತ್ನ ಪಟ್ಟು, ಅತ್ಯತ್ತಮವಾಗಿ ಕೆಲಸ ಮಾಡುತ್ತಿರುತ್ತೀರಿ ಎಂದುಕೊಳ್ಳಿ. ಆದರೆ ಅದನ್ನು ಯಾರೂ ಗುರುತಿಸೋದಿಲ್ಲ. ಹಾಗೂ ಅದಕ್ಕೆ ತಕ್ಕ ಪ್ರತಿಫಲ ಸಿಗೋದಿಲ್ಲ. ಇಂತಹ ಸಂದರ್ಭದಲ್ಲಿ ಇದಕ್ಕೆ ಪರಿಹಾರವಾಗಿ ಬುಧವಾರದ ದಿನ ಬಡವರಿಗೆ ಹಾಗೂ ನಿರ್ಗತಿಕರಿಗೆ ಅನ್ನದಾನ ಮಾಡಿ. ಇದರಿಂದ ನೀವು ಇದುವರೆಗೂ ಪೂರ್ಣ ಮಾಡಲು ಸಾಧ್ಯವಾಗದ ಕೆಲಸಗಳು ಪೂರ್ಣಗೊಳ್ಳುತ್ತದೆ. ಹಾಗೂ ನಿಮಗೆ ಯಶಸ್ಸು ಸಿಗುತ್ತದೆ.

2. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ

ನಿಮಗೆ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಆಗುತ್ತಿರಬಹುದು. ಪ್ರತಿ ಬಾರಿ ಒಂದಲ್ಲ ಒಂದು ರೀತಿ ದುಡ್ಡಿನ ಸಮಸ್ಯೆ ಆಗುತ್ತಿರಬಹುದು. ಕೆಲವೊಂದು ಬಾರಿ ಮನೆಯಲ್ಲಿ ಒಂದು ಪೈಸವನ್ನು ಉಳಿಸೋದಕ್ಕೆ ಸಾಧ್ಯವಾಗುತ್ತಿಲ್ವಾ? ಇಂತಹ ಸಂದರ್ಭದಲ್ಲಿ ರಕ್ತ ಚಂದನ, ಗುಲಾಬಿ ಹೂವಿನ ದಳಗಳು ಹಾಗೂ ಕೆಂಪು ದಾರವನ್ನು ಒಂದು ಕೆಂಪು ಬಟ್ಟೆಯಲ್ಲಿ ಸುತ್ತಿ, ಅದನ್ನು ಕಟ್ಟಿಡಿ. ಅದನ್ನು ನಿಮ್ಮ ಆಫಿಸ್ ಲಾಕರ್ ನಲ್ಲಿಡಿ. ಇದರರಿಂದ ನಿಮ್ಮ ಆರ್ಥಿಕ ಸಮಸ್ಯೆಗಳೆಲ್ಲಾ ಪರಿಹಾರವಾಗಿ ಕೈಯಲ್ಲಿ ದುಡ್ಡು ನಿಲ್ಲುವಂತಾಗುತ್ತದೆ.

3. ವ್ಯಾಪಾರದಲ್ಲಿ ಯಶಸ್ಸು

ನೀವು ವ್ಯಾಪಾರದಲ್ಲಿ ಯಶಸ್ಸು ಕಾಣಬೇಕೆಂದರೆ ಐದು ಲಿಂಬೆಹಣ್ಣಿನ ಜೊತೆಗೆ ಸಾಸಿವೆ ಹಾಗೂ ಕರಿಮೆಣಸನ್ನು ಒಟ್ಟಾಗಿ ನೀವು ಅಂಗಡಿ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಇರಿಸಿ. ಮಾರನೇ ದಿನ ಈ ವಸ್ತುಗಳನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಮಾರ್ಗ ಮಧ್ಯೆ ಇಟ್ಟು ಬನ್ನಿ. ಆದರೆ ಯಾವುದೇ ಕಾರಣಕ್ಕೂ ಅಲ್ಲಿಂದ ಬರುವಾಗ ಹಿಂತಿರುಗಿ ನೋಡಬೇಡಿ. ಈ ರೀತಿ ಮಾಡಿದರೆ ವ್ಯಾಪಾದಲ್ಲಿ ಎದುರಾಗುತ್ತಿರೋ ಸಮಸ್ಯೆಗಳು ಬಗೆ ಹರಿಯುತ್ತದೆ.

4. ಪ್ರೇಮ ಸಂಬಂಧ ವೃದ್ಧಿ ಪಡಿಸಲು

ದಂಪತಿಗಳ ನಡುವೆ ಯಾವಾಗಲೂ ಜಗಳ ಹಾಗೂ ಮನಸ್ಥಾಪ ಹೆಚ್ಚಾಗ್ತಿದ್ಯಾ? ಹಾಗಾದ್ರೆ ಈ ಪರಿಹಾರೋಪಾಯಗಳನ್ನು ಮಾಡಿ. ಆಲದ ಮರದ ಎಲೆಯನ್ನು ತೆಗೆದುಕೊಳ್ಳಿ. ಅದರ ಮೇಲೆ ಶ್ರೀಗಂಧದ ಮರದ ಕೋಲಿನಿಂದ ದಂಪತಿಗಳ ಹೆಸರನ್ನು ಅಂದರೆ ಗಂಡ ಮತ್ತು ಹೆಂಡತಿಯ ಹೆಸರನ್ನು ಬರೆಯಿರಿ.

ಈ ಎಲೆಯನ್ನು ಗಂಗಾಜಲದಲ್ಲಿ ಅದ್ದಿ ದಂಪತಿಗಳು ಮಲಗುವ ಕೋಣೆಯಲ್ಲಿ ಇಡಿ. ಇದರಿಂದ ದಾಂಪತ್ಯ ಸಮಸ್ಯೆಗಳು ಬಗೆಹರಿಯುತ್ತದೆ. ಒಂದು ವೇಳೆ ನಿಮ್ಮ ಸಂಬಂಧ ವಿಚ್ಛೇದನದವರೆಗೂ ಬಂದಿದ್ದರೂ ಕೂಡ ಸರಿ ಹೋಗುತ್ತದೆ. ಇಬ್ಬರೂ ಸುಂದರ ದಾಂಪತ್ಯ ನಡೆಸಬಹುದು.

5. ಬಾಸ್ ಜೊತೆಗಿನ ಸಂಬಂಧ ಸರಿ ಹೋಗುತ್ತದೆ

ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಬಾಸ್ ಒಳ್ಳೆಯವರಾಗಿದ್ದರೆ ಕೆಲಸವೂ ಉತ್ತಮವಾಗಿ ನಡೆಯುತ್ತದೆ. ಹಾಗೂ ನಿಮ್ಮ ಮನಸ್ಸಿಗೂ ನೆಮ್ಮದಿ ಸಿಗುತ್ತದೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಕೆಲಸದ ಸ್ಥಳದಲ್ಲಿ ಬಾಸ್ ನ ಕಿರಿಕಿರಿ ಹೆಚ್ಚಾಗಿರುತ್ತದೆ.

ಇದಕ್ಕೆ ಪರಿಹಾರವಾಗಿ ಒಂದು ಬಿಳಿ ಬಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ ನಿಮ್ಮ ಬಾಸ್ ನ ಹೆಸರನ್ನು ಕಪ್ಪು ಬಣ್ಣದ ಕಾಜಲ್ ನಲ್ಲಿ ಬರೆಯಿರಿ. ಹಾಗೂ ಇದನ್ನು ನೀವು ಆಫಿಸ್ ನಲ್ಲಿ ಇಟ್ಟುಕೊಳ್ಳಿ. ಕೆಲವೇ ದಿನಗಳಲ್ಲಿ ನೀವು ಬದಲಾವಣೆಯನ್ನು ಗಮನಿಸುತ್ತೀರಿ. ನಿಮ್ಮಿಬ್ಬರ ಸಂಬಂಧ ಖಂಡಿತ ವೃದ್ಧಿಯಾಗುತ್ತದೆ.

6. ದುಡ್ಡಿನ ಸಮಸ್ಯೆ

ದುಡ್ಡು ಯಾರಿಗೆ ಬೇಡ ಹೇಳಿ? ಈ ಇಡೀ ಜಗತ್ತು ದುಡ್ಡಿನ ಹಿಂದೆ ಬಿದ್ದಿದೆ. ಆದರೆ ಕೆಲವೊಂದು ಸಲ ಎಷ್ಟೇ ದುಡಿದರೂ ಕೂಡ ನಮ್ಮ ಆರ್ಥಿಕ ಸಮಸ್ಯೆಗೆ ಪರಿಹಾರ ಅನ್ನೋದೇ ಸಿಗೋದಿಲ್ಲ. ಇದಕ್ಕೆ ಪರಿಹಾರವಾಗಿ ಪೂರ್ವ ದಿಕ್ಕಿನಲ್ಲಿ ಕುಳಿತು ಅಶ್ವಥ ಮರದ ಇಪ್ಪತ್ತೆರಡು ಎಲೆಗಳ ಮೇಲೆ ರಾಮ ರಾಮ ಎಂದು ಬರೆಯಿರಿ. ಮತ್ತು ಇದನ್ನು ಭಗವಾನ್ ಹನುಮನ ಪಾದಕ್ಕೆ ಅರ್ಪಿಸಿ. ಕೆಲವೇ ದಿನಗಳಲ್ಲಿ ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಹೊರ ಬರುತ್ತೀರಿ. ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಿರುತ್ತದೆ.

7. ಸಾಲದ ಸಮಸ್ಯೆಯಿಂದ ಹೊರ ಬರಲು

ನೀವು ಸಾಲದ ಹೊರೆಯಲ್ಲಿ ಮುಳುಗಿ ಹೋಗಿದ್ದೀರಾ? ಇದರಿಂದ ಹೊರ ಬರೋದಕ್ಕೆ ಯತ್ನಿಸುತ್ತಿದ್ದೀರಾ? ಹಾಗಾದ್ರೆ ಇದಕ್ಕೆ ಪರಿಹಾರವಾಗಿ ಕಡ್ಲೆ ಹಿಟ್ಟಿನೊಂದಿಗೆ ಬೆಲ್ಲವನ್ನು ಸೇರಿಸಿ ಶುಕ್ಲ ಪಕ್ಷದ ದಿನ ಹನುಂತನಿಗೆ ಅರ್ಪಿಸಿ. ಕೆಲವೇ ದಿನಗಳಲ್ಲಿ ನಿಮ್ಮ ಬದುಕಿನಲ್ಲಿ ಬದಲಾವಣೆ ಆಗುತ್ತದೆ. ನೀವು ಸಾಲ ತೀರಿಸಲು ಸಮರ್ಥರಾಗುತ್ತೀರಿ.

ಜೀವನದಲ್ಲಿ ಸಮಸ್ಯೆ ಬಂದಾಗ ಸುಮ್ಮನೆ ಕೂರ ಬಾರದು. ಗ್ರಹಗಳ ಸಂಚಾರ ಅಥವಾ ಇನ್ಯಾವುದೋ ಕಾರಣಕ್ಕೆ ನೀವು ಸಮಸ್ಯೆಯನ್ನು ಎದುರಿಸುತ್ತಿರಬಹುದು. ಹೀಗಾಗಿ ಅವುಗಳಿಗೆ ಮೊದಲು ಪರಿಹಾರವನ್ನು ಕಂಡುಕೊಂಡರೆ ಉತ್ತಮ.

English summary

DIY Astology Remedies For Various problem in your life in Kannada

DIY Astrology Remedies For Various problem in your life.
Story first published: Monday, June 12, 2023, 15:08 [IST]
X
Desktop Bottom Promotion